AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜನ ಬಹು ಬೇಗನೆ ಕೆಟ್ಟ ಚಟಗಳಿಗೆ ದಾಸರಾಗುವುದು ಏಕೆ ಗೊತ್ತಾ?

ಕೆಟ್ಟ ವಿಷಯಗಳತ್ತ ಜನರು ಬಹು ಬೇಗನೆ ಆಕರ್ಷಿತರಾಗುತ್ತಾರೆ ಎಂಬ ಮಾತಿದೆ. ಇದಕ್ಕೆ ಉದಾಹರಣೆಯೆಂಬಂತೆ, ಮದ್ಯಪಾನ, ಧೂಮಪಾನದಂತಹ ಚಟಗಳು ಆರೋಗ್ಯಕ್ಕೆ ಹಾನಿಕಾರಕ ಎಂದು ಗೊತ್ತಿದ್ದರೂ ಹೆಚ್ಚಿನವರು ಈ ಚಟಗಳಿಗೆ ಹೆಚ್ಚು ಆಕರ್ಷಿತರಾಗುತ್ತಾರೆ. ಹೀಗೆ ಜನ ಇಂತಹ ಕೆಟ್ಟ ಚಟಗಳಿಗೆ ದಾಸರಾಗುವುದು ಏಕೆ ಗೊತ್ತಾ? ಈ ಕುರಿತ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.

ಜನ ಬಹು ಬೇಗನೆ ಕೆಟ್ಟ ಚಟಗಳಿಗೆ ದಾಸರಾಗುವುದು ಏಕೆ ಗೊತ್ತಾ?
ಸಾಂದರ್ಭಿಕ ಚಿತ್ರ Image Credit source: Getty Images
ಮಾಲಾಶ್ರೀ ಅಂಚನ್​
|

Updated on: Jul 18, 2025 | 3:58 PM

Share

ಮದ್ಯಪಾನ, ಧೂಮಪಾನದಂತಹ ಕೆಟ್ಟ ಚಟಗಳು (bad habits) ಆರೋಗ್ಯಕ್ಕೆ ಹಾನಿಕಾರಕ ಎಂದು ಗೊತ್ತಿದ್ದರೂ ಕೂಡ ಜನ ಇವುಗಳನ್ನು ಸೇವನೆ ಮಾಡುವುದನ್ನು ಮಾತ್ರ ನಿಲ್ಲಿಸುವುದಿಲ್ಲ. ಜನ ತಮಗೆ ದುಃಖ ಆದರೂ, ಸಂತೋಷ ಆದರೂ ಮದ್ಯವನ್ನು ಸೇವನೆ ಮಾಡುತ್ತಾರೆ. ಕೆಲವರು ಮೋಜಿಗಾಗಿ ಸಿಗರೇಟ್‌ ಸೇದುವುದು, ಮದ್ಯ (Alcohol) ಸೇವಿಸುವುದು ಮಾಡಿದ್ರೆ, ಇನ್ನೂ ಕೆಲವರು ನೋವನ್ನು ಕಮ್ಮಿ ಮಾಡಲು, ತಾನು ಒತ್ತಡಕ್ಕೆ ಒಳಗಾಗಿದ್ದೇನೆ ನನಗೆ ನೆಮ್ಮದಿ ಬೇಕೆಂದು ಹೇಳಿ ಕಂಠಪೂರ್ತಿ ಕುಡಿಯುತ್ತಾರೆ. ಇಂತಹ ಮಾದಕ ದ್ರವ್ಯಗಳು ಆರೋಗ್ಯಕ್ಕೆ ಹಾನಿಕಾರಕ ಎಂದು ಗೊತ್ತಿದ್ದರೂ ಜನ ಇವುಗಳ ಹಿಂದೆಯೇ ಓಡುವುದೇಕೆ, ಇವುಗಳ ಆಕರ್ಷಣೆಗೊಳಗಾಗಿ ಸಂಪೂರ್ಣವಾಗಿ ಈ ಕೆಟ್ಟ ಚಟಗಳಿಗೆ ದಾಸರಾಗುವುದೇಕೆ ಗೊತ್ತಾ? ಈ ಕುರಿತ ಇಂಟರೆಸ್ಟಿಂಗ್‌ ಸಂಗತಿಯನ್ನು ತಿಳಿಯಿರಿ.

ಜನ ಬಹು ಬೇಗನೆ ಕೆಟ್ಟ ಚಟಗಳಿಗೆ ದಾಸರಾಗುವುದು ಏಕೆ ಗೊತ್ತಾ?

ಧೂಮಪಾನ, ಮದ್ಯಪಾನ ಸೇರಿದಂತೆ ಮಾದಕ ವಸ್ತುಗಳ ಸೇವನೆ ಆರೋಗ್ಯಕ್ಕೆ ಎಷ್ಟು ಹಾನಿಕಾರಕ ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೂ ಕೆಲವರು ಮೋಜಿಗಾಗಿ ಇವುಗಳ ಸೇವನೆ ಮಾಡಲು ಪ್ರಾರಂಭಿಸಿ, ಅದಕ್ಕೆ ಸಂಪೂರ್ಣವಾಗಿ ಅಡಿಕ್ಟ್‌ ಆಗುತ್ತಾರೆ. ಆದರೆ ಒಮ್ಮೆ ಈ ದುಶ್ಚಟಗಳಿಗೆ ಅಡಿಕ್ಟ್‌ ಆದ್ರೆ ಅದರಿಂದ ಹೊರ ಬರುವುದು ತುಂಬಾನೇ ಕಷ್ಟ. ಹೀಗೆ ಮಾದಕ ವಸ್ತುಗಳ ವ್ಯಸನಕ್ಕೊಳಗಾಗಿ ತಮ್ಮ ಜೀವನವನ್ನೇ ಹಾಳು ಮಾಡಿಕೊಂಡ ಅದೆಷ್ಟೋ ಜನರಿದ್ದಾರೆ.

ಇಂತಹ ಕೆಟ್ಟಕ್ಕೆ ಹೆಚ್ಚಾಗಿ ಆಕರ್ಷಿತರಾಗಲು, ಇವುಗಳಿಗೆ ದಾಸರಾಗಲು ಮುಖ್ಯ ಕಾರಣವೆಂದರೆ, ನಮ್ಮ ದೇಹದಲ್ಲಿ ಇರುವ RASGRF-2 ಜೀನ್‌ ಅಂಶ. ಯಾವುದೇ ರೀತಿಯ ವಸ್ತುಗಳನ್ನು ಸೇವನೆ ಮಾಡಿದಾಗ ಪಡೆದ ಸಂತೋಷವನ್ನು ಆನಂದಿಸುವಲ್ಲಿ ಈ ಜೀನ್ ಪ್ರಮುಖ ಪಾತ್ರ ವಹಿಸುತ್ತದೆ. ಮದ್ಯ ಸೇವನೆ ಮಾಡಿದಾಗ, ಧೂಮಪಾನ ಅಥವಾ ಯಾವುದೇ ಮಾದಕ ದ್ರವ್ಯವನ್ನು ಸೇವನೆ ಮಾಡಿದಾಗ RASGRF-2 ಆನಂದದ ಹಾರ್ಮೋನ್‌ ಆಗಿರುವಂತ ಡೋಪಮೈನ್‌ ಹಾರ್ಮೋನನ್ನು ಹೆಚ್ಚು ಬಿಡುಗಡೆ ಮಾಡುತ್ತದೆ. ಇದೇ ಕಾರಣಕ್ಕೆ ಜನ ಮಾದಕ ವಸ್ತುಗಳನ್ನು ಸೇವನೆ ಮಾಡಿದಾಗ  ನೋವನ್ನೆಲ್ಲಾ ಮರೆತು ಹೆಚ್ಚು  ಸಂತೋಷವಾಗಿರುವುದು.

ಇದನ್ನೂ ಓದಿ
Image
ಅತ್ತೆಯೊಂದಿಗೆ ಜಗಳ ಆಗಬಾರದೆಂದರೆ ಸೊಸೆಯಾದವಳು ಹೀಗಿರಬೇಕು
Image
ಬೆಳಿಗ್ಗೆ ನೀವು ಮಾಡುವ ಈ ತಪ್ಪುಗಳಿಂದ ಇಡೀ ದಿನವೇ ಹಾಳಾಗುತ್ತದೆ
Image
ಈ ಅಭ್ಯಾಸಗಳಿದ್ದರೆ ಶ್ರೀಮಂತಿಕೆ ನಿಮ್ಮ ಹತ್ತಿರಕ್ಕೂ ಸುಳಿಯುವುದಿಲ್ಲ
Image
ತಪ್ಪಿಯೂ ಇಂತಹ ಜನರಿಗೆ ಸಹಾಯ ಮಾಡಬೇಡಿ

ಇದನ್ನೂ ಓದಿ: ಬೆಳಿಗ್ಗೆ ನೀವು ಮಾಡುವ ಈ ತಪ್ಪುಗಳಿಂದ ಇಡೀ ದಿನವೇ ಹಾಳಾಗುತ್ತದೆ

ಮಾದಕ ವಸ್ತುಗಳನ್ನು ಸೇವಿಸಿದಾಗ ಈ ಡೋಪಮೈನ್‌ ರಾಸಾಯನಿಕವು ತಾತ್ಕಾಲಿಕವಾಗಿ ಸಂತೋಷ ಮತ್ತು ಮನಸ್ಸಿಗೆ ವಿಶ್ರಾಂತಿಯನ್ನು ನೀಡುತ್ತದೆ. ಈ ಸಂತೋಷವನ್ನು ಮತ್ತೆ ಮತ್ತೆ ಅನುಭವಿಸುವ ಬಯಕೆಯಿಂದಾಗಿ ಒಮ್ಮೆ ಮಾದಕ ವಸ್ತುಗಳನ್ನು ಸೇವನೆ ಮಾಡಿದವರು ಮತ್ತೆ ಮತ್ತೆ ಅದರ ಹಿಂದೆಯೇ ಓಡುವುದು.  ಅಭ್ಯಾಸವು ಕ್ರಮೇಣ ವ್ಯಸನವಾಗಿ ಬದಲಾಗುತ್ತದೆ.

ಇವುಗಳನ್ನು ಸೇವಿಸುವುದರಿಂದ ಸಿಗುವ ಕ್ಷಣಿಕ ಸಂತೋಷಕ್ಕಾಗಿ ತಮ್ಮ ಜೀವನವನ್ನೇ ಹಾಳು ಮಾಡಿಕೊಂಡವರು ಹಲವರಿದ್ದಾರೆ. ಒಮ್ಮೆ ಈ ದುಶ್ಚಟಗಳಿಗೆ ಬಲಿಯಾದರೆ ಇವುಗಳಿಂದ ಹೊರ ಬರುವುದು ತುಂಬಾನೇ ಕಷ್ಟ. ಅದಕ್ಕಾಗಿ ಜೀವನವನ್ನು ಹಾಳು ಮಾಡುವ ಈ ಅಭ್ಯಾಸದಿಂದ ದೂರವಿರುವುದು ತುಂಬಾನೇ ಮುಖ್ಯ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ