AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾಶ್ಲೆಟ್‌ ಟಾಯ್ಲೆಟ್;‌ ಟಾಯ್ಲೆಟ್‌ ಪೇಪರ್‌ ಬದಲಿಗೆ ಪರ್ಯಾಯವನ್ನು ಕಂಡು ಹಿಡಿದ ಜಪಾನ್

ತನ್ನ ಹೈಟೆಕ್‌ ಟೆಕ್ನಾಲಜಿಯ ಕಾರಣದಿಂದಲೇ ಹೆಸರುವಾಸಿಯಾಗಿರುವ ಜಪಾನ್ ಹೊಸ ಹೊಸ ತಂತ್ರಜ್ಞಾನಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಇದೀಗ ಜಪಾನ್‌ ಟಾಯ್ಲೆಟ್‌ ಪೇಪರ್‌ ಬದಲಿಗೆ ಪರ್ಯಾಯ ವ್ಯವಸ್ಥೆಯನ್ನು ಕಂಡು ಹಿಡಿದಿದೆ. ಹೌದು ಟಾಯ್ಲೆಟ್‌ ಪೇಪರ್‌ ನೈರ್ಮಲ್ಯಕ್ಕೆ ಮಾತ್ರವಲ್ಲದೆ ಪರಿಸರಕ್ಕೂ ಮಾರಕ. ಆದ ಕಾರಣ ಪರಿಸರ ಸ್ನೇಹಿಯಾಗಿರುವ ವಾಶ್ಲೆಟ್‌ ಟಾಯ್ಲೆಟ್‌ ವ್ಯವಸ್ಥೆಯನ್ನು ಜಪಾನ್ ಅಭಿವೃದ್ಧಿಪಡಿಸಿದೆ.

ವಾಶ್ಲೆಟ್‌ ಟಾಯ್ಲೆಟ್;‌ ಟಾಯ್ಲೆಟ್‌ ಪೇಪರ್‌ ಬದಲಿಗೆ ಪರ್ಯಾಯವನ್ನು ಕಂಡು ಹಿಡಿದ ಜಪಾನ್
ಸಾಂದರ್ಭಿಕ ಚಿತ್ರ Image Credit source: Getty Images
ಮಾಲಾಶ್ರೀ ಅಂಚನ್​
|

Updated on: Jul 31, 2025 | 5:43 PM

Share

ಪಾಶ್ಚಿಮಾತ್ಯ ದೇಶಗಳಲ್ಲಿ ಶೌಚಾಲಯಗಳಲ್ಲಿ ಟಾಯ್ಲೆಟ್‌ ಪೇಪರ್‌ಗಳನ್ನೇ (toilet paper) ಬಳಸಲಾಗುತ್ತದೆ. ಆದರೆ ಈ ಟಾಯ್ಲೆಟ್‌ ಪೇಪರ್‌ (ಮಲ ವಿಸರ್ಜನೆಯ ನಂತರ ವೈಯಕ್ತಿಕ ಸ್ವಚ್ಛತೆಗಾಗಿ ಬಳಸುವ ಕಾಗದ) ಬಳಕೆಯಿಂದ ಖಾಸಗಿ ಭಾಗ ಸಂಪೂರ್ಣವಾಗಿ ಸ್ವಚ್ಛಗೊಳ್ಳುವುದಿಲ್ಲ ಇದರಿಂದ ಸೋಂಕುಗಳು ಹರಡುವ ಸಾಧ್ಯತೆ ಇವೆ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ಇವುಗಳ ವ್ಯಾಪಕ ಬಳಕೆ ಪರಿಸರಕ್ಕೂ ಹಾನಿಯಾಗಿದೆ. ಪರಿಸರ ಮತ್ತು ಆರೋಗ್ಯ ಇವೆಡರನ್ನೂ ಗಮನದಲ್ಲಿಟ್ಟುಕೊಂಡು ತಂತ್ರಜ್ಞಾನ ವಲಯದಲ್ಲಿ ಸಾಕಷ್ಟು ಮುಂದುವರೆದಿರುವ ಜಪಾನ್‌ ಟಾಯ್ಲೆಟ್‌ ಪೇಪರ್‌ ಬದಲಿಗೆ ಪರ್ಯಾಯ ವ್ಯವಸ್ಥೆಯೊಂದನ್ನು ಕಂಡು ಹಿಡಿದಿದೆ. ಹೌದು  ಪರಿಸರ ಸ್ನೇಹಿ ವಾಶ್ಲೆಟ್‌ (washlet toilet) ಶೌಚಾಲಯ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ಈ ಹೈಟೆಕ್‌ ಪರ್ಯಾಯವು ಪರಿಸರ ಸ್ನೇಹಿ ಮಾತ್ರವಲ್ಲದೆ ಆರೋಗ್ಯಕರ ಪರ್ಯಾಯವಾಗಿದೆ.

ಹೇಗಿದೆ ಗೊತ್ತಾ ವಾಶ್ಲೆಟ್ ಟಾಯ್ಲೆಟ್‌ ವ್ಯವಸ್ಥೆ:

ನಮ್ಮಲ್ಲಿ ಟಾಯ್ಲೆಟ್‌ಗಳಲ್ಲಿ ಸ್ವಚ್ಛತೆಗೆ ನೀರನ್ನು ಬಳಕೆ ಮಾಡಿದರೆ, ಬಹುತೇಕ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಶೌಚಾಲಯಗಳಲ್ಲಿ ಟಾಯ್ಲೆಟ್‌ ಪೇಪರ್‌ಗಳನ್ನೇ ಬಳಸಲಾಗುತ್ತದೆ. ಅತಿಯಾದ ಟಾಯ್ಲೆಟ್‌ ಪೇಪರ್‌ ಬಳಕೆ ನೈರ್ಮಲ್ಯಕ್ಕೆ ಮಾತ್ರವಲ್ಲದೆ ಪರಿಸರಕ್ಕೂ ಮಾರಕ. ಈ ನಿಟ್ಟಿನಲ್ಲಿ ಜಪಾನ್‌ ವಾಶ್ಲೆಟ್‌ ಟಾಯ್ಲೆಟ್‌ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ಈ ಹೈಟೆಕ್ ಉಪಕ್ರಮವು ನೈರ್ಮಲ್ಯದ ಜೊತೆಗೆ ಪರಸರ ಸ್ನೇಹಿಯೂ ಆಗಿದೆ.

ಹೆಚ್ಚಿನ ರಾಷ್ಟ್ರಗಳಲ್ಲಿ ಟಾಯ್ಲೆಟ್‌ ಪೇಪರ್‌ಗಳನ್ನೇ ಹೆಚ್ಚಾಗಿ ಬಳಕೆ ಮಾಡುವುದರಿಂದ ಈ ಜಾಗತಿಕ ಬೇಡಿಕೆಯನ್ನು ಪೂರೈಸಲು ಪ್ರತಿವರ್ಷ ಲಕ್ಷಾಂತರ ಮರಗಳನ್ನು ಕಡಿಯಲಾಗುತ್ತದೆ. ಅಷ್ಟೇ ಅಲ್ಲದೆ ಇದರ ತಯಾರಿಕೆಗೆ ಸಾಕಷ್ಟು ನೀರು ಮತ್ತು ಶಕ್ತಿಯನ್ನು ಉಪಯೋಗಿಸಲಾಗುತ್ತದೆ. ಇದು ಅರಣ್ಯ ನಾಶ, ನೀರಿನ ಕೊರತೆ ಮಾತ್ರವಲ್ಲದೆ ಮಾಲಿನ್ಯಕ್ಕೂ ಕಾರಣವಾಗುತ್ತದೆ. ಈ ರೀತಿಯಾಗಿ ಟಾಯ್ಲೆಟ್‌ ಪೇಪರ್‌ ಪರಿಸರಕ್ಕೆ ಹಾನಿಯನ್ನು ಉಂಟು ಮಾಡಿದರೆ, ಇನ್ನೊಂದೆಡೆ ನೀರಿನ ಬಳಕೆಗೆ ಹೋಲಿಸಿದೆ ಈ ಟಾಯ್ಲೆಟ್‌ ಪೇಪರ್‌ನಿಂದ ಖಾಸಗಿ ಭಾಗಗಳು ಸಂಪೂರ್ಣವಾಗಿ ಸ್ವಚ್ಛಗೊಳ್ಳುವುದಿಲ್ಲ. ಇದರಿಂದ ಚರ್ಮದ ಕಿರಿಕಿರಿ, ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಹಾಗಾಗಿ ನೈರ್ಮಲ್ಯ ಮತ್ತು ಪರಿಸರ ಇವೆರಡಕ್ಕೂ ಅನುಕೂಲಕರವಾಗುವಂತೆ ವಾಶ್ಲೆಟ್‌ ಟಾಯ್ಲೆಟ್‌ ವ್ಯವಸ್ಥೆಯನ್ನು ಜಪಾನ್‌ ಅಭಿವೃದ್ಧಿಪಡಿಸಿದೆ.

ಇದನ್ನೂ ಓದಿ
Image
ಆರೋಗ್ಯಕರ ಜೀವನಕ್ಕಾಗಿ ಈ ಅಭ್ಯಾಸಗಳನ್ನು ಪಾಲಿಸಲು ಮರೆಯದಿರಿ
Image
ಸ್ನಾನ ಮಾಡುವಾಗ ದೇಹದ ಈ ಭಾಗಗಳನ್ನು ಸ್ವಚ್ಛಗೊಳಿಸಲು ಮರೆಯದಿರಿ
Image
ಹೆಲ್ಮೆಟ್ ಧರಿಸುವುದರಿಂದ ನಿಜಕ್ಕೂ ಕೂದಲು ಉದುರುತ್ತಾ?
Image
ಈ ವಸ್ತುಗಳನ್ನು ತಪ್ಪಿಯೂ ಬಾತ್‌ರೂಮ್‌ನಲ್ಲಿ ಇಡಬಾರದು

ವಾಶ್ಲೆಟ್‌ ಟಾಯ್ಲೆಟ್‌ ಹೇಗೆ ಕಾರ್ಯನಿರ್ವಹಿಸುತ್ತದೆ:

ನಾವು ಹೇಗೆ ಶೌಚಾಲಯದಲ್ಲಿ ನೀರನ್ನು ಬಳಕೆ ಮಾಡುತ್ತೇವೆಯೋ ಅದೇ ರೀತಿ ವಾಶ್ಲೆಟ್‌ ಟಾಯ್ಲೆಟ್‌ ವ್ಯವಸ್ಥೆಯಲ್ಲಿ ಟಾಯ್ಲೆಟ್‌ ಪೇಪರ್‌ ಬದಲಿಗೆ ನೀರನ್ನು ಬಳಕೆ ಮಾಡಲಾಗುತ್ತದೆ. ಇದರಲ್ಲಿ ಟಾಯ್ಲೆಟ್‌ ಬೇಸಿನ್‌ನಲ್ಲಿಯೇ ಶವರ್‌ನಂತಿರುವ ಪೈಪ್‌ ವ್ಯವಸ್ಥೆಯಿದ್ದು,ಇದು ಖಾಸಗಿ ಅಂಗವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುತ್ತದೆ.

ವಿಡಿಯೋ ಇಲ್ಲಿದೆ ನೋಡಿ:

ಈ ವಾಶ್ಲೆಟ್‌ ಟಾಯ್ಲೆಟ್‌ ಪರಿಸರ ಸ್ನೇಹಿ ಮಾತ್ರವಲ್ಲದೆ ಆರೋಗ್ಯಕ್ಕೂ ತುಂಬಾನೇ ಪ್ರಯೋಜನಕಾರಿಯಾಗಿದೆ. ನೀರಿನ ಮೂಲಕ ಸ್ವಚ್ಛಗೊಳಿಸುವ ಕಾರಣ, ಖಾಸಗಿ ಅಂಗಗಳು ಸಂಪೂರ್ಣವಾಗಿ ಸ್ವಚ್ಛಗೊಳ್ಳುತ್ತವೆ. ಮತ್ತು ಇದು ಚರ್ಮದ ಕಿರಿಕಿರಿ, ಸೋಂಕನ್ನು ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲದೆ ಇದು ಮೂತ್ರನಾಳದ ಸೋಂಕುಗಳು ಮತ್ತು ಮೂಲವ್ಯಾಧಿಯಂತಹ ಸಮಸ್ಯೆಗಳನ್ನು ತಡೆಗಟ್ಟಲು ಸಹಕಾರಿಯಾಗಿದೆ.

ಇದನ್ನೂ ಓದಿ: ಈ ವಸ್ತುಗಳನ್ನು ತಪ್ಪಿಯೂ ಬಾತ್‌ರೂಮ್‌ನಲ್ಲಿ ಇಡಬಾರದು; ಯಾಕೆ ಗೊತ್ತಾ?

ಪರಿಸರ ಸ್ನೇಹಿ ವ್ಯವಸ್ಥೆ:

ಬಿಡೆಟ್ ಅಥವಾ ವಾಶ್ಲೆಟ್‌ ಟಾಯ್ಲೆಟ್‌ ವ್ಯವಸ್ಥೆಯ ವೆಚ್ಚವು ದುಬಾರಿಯಾಗಿ ಕಂಡುಬಂದರೂ, ಕಾಲಾನಂತರದಲ್ಲಿ ಉಳಿತಾಯವು ಗಮನಾರ್ಹವಾಗಿರುತ್ತದೆ. ಅಂದರೆ ನೀವು ಪ್ರತಿ ಬಾರಿಯೂ ಟಾಯ್ಲೆಟ್‌ ಪೇಪರ್‌ಗೆ ಖರ್ಚು ಮಾಡುವಂತೆ ಇದಕ್ಕೆ ಹಣವನ್ನು ಖರ್ಚು ಮಾಡಬೇಕೆಂದಿಲ್ಲ. ಈ ಮೂಲಕ ಟಾಯ್ಲೆಟ್‌ ಪೇಪರ್‌ ಕೊಳ್ಳಲು ಖರ್ಚು ಮಾಡುವ ಹಣವನ್ನು ಉಳಿತಾಯ ಮಾಡಬಹುದು. ಜೊತೆಗೆ ಜಾಗತಿಕವಾಗಿ ಈ ವ್ಯವಸ್ಥೆಯನ್ನು ಅಳವಡಿಸುವ ಮೂಲಕ ಅರಣ್ಯ ನಾಶ ಮತ್ತು ಮಾಲಿನ್ಯವನ್ನು ಸಹ ಕಡಿಮೆ ಮಾಡಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ