Friendship Day

Friendship Day

ಈ ಜಗತ್ತಿನಲ್ಲಿ ಎಲ್ಲ ಬಂಧ ಮೀರಿದ ಸಂಬಂಧವೆಂದರೆ ಅದುವೇ ಸ್ನೇಹ. ಪ್ರಪಂಚದಲ್ಲಿ ಸ್ನೇಹಿತರಿಲ್ಲದ ವ್ಯಕ್ತಿಯಿರಲು ಸಾಧ್ಯವೇ ಇಲ್ಲ. ಈ ಸುಂದರವಾದ ಬಂಧಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನಮ್ಮ ಜೀವನದಲ್ಲಿ ಹಲವರು ಪರಿಚಯವಾಗುತ್ತಾರೆ ಆದರೆ ಎಲ್ಲರೂ ಕೂಡ ಗೆಳೆಯರಾಗಿ ಕೊನೆ ತನಕ ಇರಲು ಸಾಧ್ಯವಿಲ್ಲ. ನಿಜವಾದ ಸ್ನೇಹಿತನು ಯಾವತ್ತೂ ಸಂಬಂಧವನ್ನು ಕೊನೆವರೆಗೂ ಪೋಷಿಸುತ್ತಾನೆ. ಆತ್ಮೀಯ ಸ್ನೇಹಿತನು ಕಷ್ಟಕಾಲದಲ್ಲಿ ತನ್ನ ಗೆಳೆಯನಿಗೆ ಧೈರ್ಯವಾಗಿ ಜೊತೆಗೆ ನಿಲ್ಲುತ್ತಾನೆ. ಈ ನಿಷ್ಕಲ್ಮಶವಾದ ಸ್ನೇಹವನ್ನು ಸಂಭ್ರಮಿಸುವ ದಿನವೇ ಸ್ನೇಹಿತರ ದಿನಾಚರಣೆ. ಈ ಬಾರಿಯ ಸ್ನೇಹಿತರ ದಿನದ ವಿಶೇಷ ಸ್ಟೋರಿಗಳನ್ನು ಇಲ್ಲಿದ ಓದಿ.

ಇನ್ನೂ ಹೆಚ್ಚು ಓದಿ

ವದಂತಿ ನಂಬಿ ವಿಷ್ಣುವರ್ಧನ್ ಜೊತೆಗಿನ ಗೆಳೆತನ ಹಾಳು ಮಾಡಿಕೊಂಡಿದ್ದ ದ್ವಾರಕೀಶ್

ಇವರ ಗೆಳೆತನದಲ್ಲಿ ಬಿರುಕು ಬರಲು ಕಾರಣ ಆಗಿದ್ದು ಪತ್ರಿಕೆ ಮಾಡಿದ್ದ ವರದಿ. ‘ನೀ ತಂದ ಕಾಣಿಕೆ’ ಸಿನಿಮಾ ಆಗತಾನೇ ಸೋತಿತ್ತು. ಈ ನೋವು ದ್ವಾರಕೀಶ್ ಅವರಲ್ಲಿ ಇತ್ತು. ಹೀಗಿರುವಾಗಲೇ ಪೇಪರ್ ಒಂದರಲ್ಲಿ ‘ದ್ವಾರಕೀಶ್ ನಂಬಿಕೆಗೆ ಅರ್ಹನಲ್ಲ’ ಎಂದು ವಿಷ್ಣು ಹೇಳಿದ್ದಾಗಿ ವರದಿ ಆಗಿತ್ತು. ಇದನ್ನು ನಂಬಿಯೇ ಬಿಟ್ಟರು ದ್ವಾರಕೀಶ್.

Friendship Day 2024: 70ರ ವಯಸ್ಸಿನಲ್ಲಿ ಕನ್ನಡದಲ್ಲಿ ಎಂಎ ಮಾಡಿದ ಬಾಂಬೆ ಸ್ನೇಹಿತರು

ವಯಸ್ಸು ಎನ್ನುವುದು ನಿಜವಾಗಿಯೂ ಸಂಖ್ಯೆ ಅಷ್ಟೇ ಬೇರೇನಿಲ್ಲ ಎಂಬ ಮಾತು, ಈ ಇಬ್ಬರು ಸ್ನೇಹಿತರ ಬಗ್ಗೆ ಓದುವಾಗ ನಿಮ್ಮ ಅರಿವಿಗೆ ಬರಬಹುದು, ಇದು ಇಬ್ಬರು ಸ್ನೇಹಿತರು ಅವರ 70 ರ ದಶಕದಲ್ಲಿ ಎಂಎ (ಕನ್ನಡ) ಕೋರ್ಸ್ ಮಾಡಿದ ಕಥೆ. ಸ್ನೇಹ ಎಂಬುದು ಯಾರನ್ನು ಬೇಕಾದರೂ ಹತ್ತಿರ ಮಾಡಬಹುದು. ಅದಕ್ಕೆ ವಯಸ್ಸಿನ ಮಿತಿಯಿಲ್ಲ. ಇದು ಅಕ್ಷರಶಃ ಸತ್ಯ. ಒಂದೇ ಮನಸ್ಥಿತಿಯವರು ಒಟ್ಟಾದಾಗ ಸ್ನೇಹಿತರಾಗಲು ಹೆಚ್ಚು ಸಮಯ ಬೇಕಾಗುವುದಿಲ್ಲ. ಮುಂಬೈನ ಪಥ್ಕಿ ಮತ್ತು ಪಡಕಿ ಅವರ ದೋಸ್ತಿಯಲ್ಲೂ ಇದೆ ರೀತಿ ಆದದ್ದು. ಹಾಗಾದರೆ ಇವರ ಸ್ನೇಹ ಬೆಳೆದಿದ್ದು ಹೇಗೆ? 70 ರಲ್ಲಿಯೂ ಓದುವ ಉತ್ಸಾಹ ಹೇಗಿತ್ತು? ಅವರ ಮಾತುಗಳಲ್ಲಿಯೇ ಓದಿ.

Friendship Day 2024: ಜತೆಗೆ UPSC ಪರೀಕ್ಷೆ ಬರೆದು ಐಎಎಸ್-ಐಪಿಎಸ್‌ ಅಧಿಕಾರಿಗಳಾದ ಮೂವರು ಪ್ರಾಣ ಸ್ನೇಹಿತರು

Friends success story: ಸ್ನೇಹ ಎಂಬುದು ಅದ್ಭುತ ಸಂಪತ್ತು, ಬದುಕಿಗೊಂದು ಧೈರ್ಯ ಮತ್ತು ಶಕ್ತಿ ಅಂತಾನೇ ಹೇಳಬಹುದು. ನಮ್ಮ ಜೊತೆ ಉತ್ತಮ ಸ್ನೇಹಿತರಿದ್ದರೆ ಖಂಡಿತವಾಗಿಯೂ ಜೀವನದಲ್ಲಿ ಏನನ್ನೂ ಬೇಕಾದರೂ ಜಯಿಸಬಹುದು. ಈ ಮಾತನ್ನು ನಿಜವೆಂದು ಸಾಬೀತು ಮಾಡಿದವರು ಈ ಮೂವರು ಸ್ನೇಹಿತರು. ಕಾಲೇಜು ದಿನಗಳಿಂದಲೂ ಜೊತೆಯಾಗಿದ್ದ ಈ ಸ್ನೇಹಿತರು 2017 ರಲ್ಲಿ UPSC ಪರೀಕ್ಷೆ ಬರೆದು, ಈ ಪರೀಕ್ಷೆಯನ್ನು ರ್ಯಾಂಕ್‌ ಪಡೆದು, ಇದೀಗ ಒಬ್ಬ ಸ್ನೇಹಿತ ಐಪಿಎಸ್‌ ಮತ್ತು ಇನ್ನಿಬ್ಬರು ಐಎಎಸ್‌ ಅಧಿಕಾರಿಗಳಾಗಿದ್ದಾರೆ. ಇವರ ಈ ಸ್ನೇಹ ನಮಗೆಲ್ಲರಿಗೂ ಪ್ರೇರಣೆ.

Friendship Day 2024: ಇಬ್ಬರೂ ಸ್ನೇಹಿತರ ಪರಿಶ್ರಮದ ಫಲವೇ ಭಾರತದ ನಂಬರ್ ಒನ್ ಇಂಡಿಗೋ ಏರ್ ಲೈನ್ಸ್

ಭಾರತದ ವಾಯುಯಾನ ಕ್ಷೇತ್ರವು ವಿಶ್ವವೇ ತಿರುಗಿ ನೋಡುವಂತೆ ಬೆಳೆಯುತ್ತಿದೆ. ಈಗಾಗಲೇ ವಿವಿಧ ವಿಮಾನಯಾನ ಸಂಸ್ಥೆಗಳು ಪ್ರಾರಂಭವಾಗಿದ್ದರೂ ಅದರಲ್ಲಿ ಕೆಲವೇ ಕೆಲವು ಸಂಸ್ಥೆಗಳು ಯಶಸ್ಸಿನ ಉತ್ತುಂಗಕ್ಕೆ ತಲುಪಿದೆ. ಅಂತಹ ಸಂಸ್ಥೆಯಲ್ಲಿ ಇಂಡಿಗೋ ಏರ್‌ಲೈನ್ಸ್‌ ಕೂಡ ಒಂದು. ಇದು ಇಬ್ಬರೂ ಸ್ನೇಹಿತರ ಪರಿಶ್ರಮದಿಂದ ಪ್ರಾರಂಭವಾಗಿ, ಇಂದು ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದೆ. ಹಾಗಾದ್ರೆ ಈ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಆ ಇಬ್ಬರೂ ಸ್ನೇಹಿತರು ಯಾರು, ಆರಂಭದ ದಿನಗಳು ಹೇಗಿದ್ದವು ಎನ್ನುವುದರ ಸಂಪೂರ್ಣ ಮಾಹಿತಿಯೂ ಇಲ್ಲಿದೆ.

‘ಅಂಬರೀಷ್ ಅನ್ನೋದೇ ಒಂದು ಭಾವನೆ’; ಪ್ರೀತಿಯ ಗೆಳೆಯನ ಬಗ್ಗೆ ವಿಷ್ಣು ಹೇಳಿದ್ದ ಮಾತಿದು

ಫ್ರೆಂಡ್​ಶಿಪ್​ಡೇ ಬಂದೇ ಬಿಟ್ಟಿದೆ. ಸ್ಯಾಂಡಲ್​ವುಡ್​ನಲ್ಲೂ ಅನೇಕ ಗೆಳೆತನ ಮಾದರಿ. 1972ರಲ್ಲಿ ‘ನಾಗರಹಾವು’ ಸಿನಿಮಾ ರಿಲೀಸ್ ಆಯಿತು. ಈ ಚಿತ್ರದಲ್ಲಿ ವಿಷ್ಣುವರ್ಧನ್ ಹಾಗೂ ಅಂಬರೀಷ್ ಇಬ್ಬರೂ ನಟಿಸಿದ್ದರು. ಅಲ್ಲಿಂದ ಇವರ ಗೆಳೆತನ ಆರಂಭ ಆಯಿತು. ಆ ಬಳಿಕ ಅನೇಕ ಸಿನಿಮಾಗಳಲ್ಲಿ ಇವರು ಒಟ್ಟಾಗಿ ನಟಿಸಿದರು.

ಕಿಚ್ಚ-ದಚ್ಚು ಸ್ನೇಹದ ನೆನಪು, ವಿರಸದಲ್ಲೂ ಇಣುಕುವ ಘನತೆ

ಸ್ನೇಹಿತರ ದಿನ ಹತ್ತಿರದಲ್ಲಿದೆ. ಈ ಸಮಯದಲ್ಲಿ ಗಾಢ ಸ್ನೇಹಿತರಾಗಿದ್ದು ಆ ಬಳಿಕ ಸಣ್ಣ ಮುನಿಸಿನಿಂದ ದೂರಾದ ಕಿಚ್ಚ ಸುದೀಪ್ ಹಾಗೂ ದರ್ಶನ್ ತೂಗುದೀಪ ಅವರ ಗೆಳೆತನದ ಬಗ್ಗೆ ವಿಶ್ಲೇಷಣೆ ಇಲ್ಲಿದೆ.

Friendship Day 2024 : ಹುಡುಗರು, ಹುಡುಗಿಯ ಫ್ರೆಂಡ್ ಶಿಪ್ ಮಾಡಿಕೊಳ್ಳೋದು ಹೇಗೆ? ಇಲ್ಲಿದೆ ಟಿಪ್ಸ್

ಎಲ್ಲರೂ ಕೂಡ ತಮ್ಮ ಗುಣಕ್ಕೆ ತಕ್ಕ ವ್ಯಕ್ತಿಗಳನ್ನು ಸ್ನೇಹಿತರಾಗಿ ಮಾಡಿಕೊಳ್ಳಲು ಬಯಸುವುದು ಸಹಜ. ಆದರೆ ಕೆಲ ಹುಡುಗರು ಸುಂದರವಾದ ಹುಡುಗಿಯನ್ನು ಕಂಡೊಡನೆ ಆಕೆಯೊಂದಿಗೆ ಫ್ರೆಂಡ್ ಶಿಪ್ ಮಾಡಿಕೊಳ್ಳಲು ಬಯಸುತ್ತಾರೆ. ಆಕೆಯ ಮುಂದೆ ನಾನಾ ರೀತಿಯ ಸರ್ಕಸ್ ಮಾಡುತ್ತಾರೆ. ಆದರೆ ಆ ಹುಡುಗಿಯೂ ಆತನನ್ನು ತಿರುಗಿಯೂ ನೋಡದೆ ಇರಬಹುದು. ಹೀಗಾಗಿ ಹುಡುಗರು ಹುಡುಗಿಯ ಸ್ನೇಹ ಸಂಪಾದಿಸಿಕೊಳ್ಳಲು ಈ ಕೆಲವು ಸಲಹೆಗಳನ್ನು ಅನುಸರಿಸಿದರೆ ಒಳ್ಳೆಯದು.

Friendship Day 2024: ಭಾರತದಲ್ಲಿ ಆಗಸ್ಟ್ ಮೊದಲ ಭಾನುವಾರದಂದು ಸ್ನೇಹಿತರ ದಿನವನ್ನು ಆಚರಿಸುವುದು ಏಕೆ? ಏನಿದರ ಮಹತ್ವ?

ನಮ್ಮ ಜೀವನದಲ್ಲಿ ಕಷ್ಟ-ಸುಖ ಎಂದರೆ ಮೊದಲು ನೆನಪಾಗುವುದೇ ಸ್ನೇಹಿತರು. ಬದುಕಿನಲ್ಲಿ ಏನೇ ನಡೆದ್ರು ಅದನ್ನು ಮೊದಲು ತಿಳಿಸುವುದೇ ಆತ್ಮೀಯ ಸ್ನೇಹಿತ ಅಥವಾ ಸ್ನೇಹಿತೆಗೆ. ಹೀಗಾಗಿ ಜೀವನದ ಪ್ರತಿ ಹಂತದಲ್ಲಿಯೂ ಸ್ನೇಹಿತರು ಪ್ರಮುಖ ಪಾತ್ರವಹಿಸುತ್ತಾರೆ. ಜೀವನದ ಪ್ರಮುಖ ವ್ಯಕ್ತಿಗಳಾಗಿ ನೋವು ನಲಿವಿನಲ್ಲಿ ಜೊತೆ ನಿಲ್ಲುವ ಸ್ನೇಹಿತರಿಗೆ ಗೌರವ ಸಲ್ಲಿಸುವ ಸಲುವಾಗಿ ಪ್ರತಿ ವರ್ಷ ಜುಲೈ 30 ರಂದು ಅಂತಾರಾಷ್ಟ್ರೀಯ ದಿನವನ್ನು ಆಚರಿಸಲಾಗುತ್ತದೆ. ಹಾಗಾದ್ರೆ ಈ ದಿನದ ಇತಿಹಾಸ ಹಾಗೂ ಮಹತ್ವದ ಕುರಿತಾದ ಸಂಪೂರ್ಣ ಮಾಹಿತಿಯು ಇಲ್ಲಿದೆ.

ಭಾರತ-ಆಸ್ಟ್ರಿಯಾ ಸ್ನೇಹವು ಪ್ರಗತಿಯ ಹೊಸ ಉತ್ತುಂಗಕ್ಕೇರಲಿ: ನರೇಂದ್ರ ಮೋದಿ

ಭಾರತ ಹಾಗೂ ಆಸ್ಟ್ರಿಯಾ ಸ್ನೇಹವು ಹೊಸ ಉತ್ತುಂಗಕ್ಕೇರಲಿ ಎಂದು ಪ್ರಧಾನಿ ಮೋದಿ ಹಾರೈಸಿದ್ದಾರೆ. ಭಾರತ ಮತ್ತು ಆಸ್ಟ್ರಿಯಾ ನಡುವೆ ಬೆಳೆಯುತ್ತಿರುವ ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, ಭಾರತ-ಆಸ್ಟ್ರಿಯಾ ಸ್ಟಾರ್ಟ್-ಅಪ್ ಸೇತುವೆಯನ್ನು ಫೆಬ್ರವರಿ 2024 ರಲ್ಲಿ ಪ್ರಾರಂಭಿಸಲಾಗಿದೆ.

‘ಕನ್ನಡ ಚಿತ್ರರಂಗಕ್ಕೆ ಸಮಿತಿ ಬೇಡ, ಇದರಿಂದ ಚಿತ್ರರಂಗಕ್ಕೆ ನಷ್ಟ’; ಗೋವಿಂದು
‘ಕನ್ನಡ ಚಿತ್ರರಂಗಕ್ಕೆ ಸಮಿತಿ ಬೇಡ, ಇದರಿಂದ ಚಿತ್ರರಂಗಕ್ಕೆ ನಷ್ಟ’; ಗೋವಿಂದು
ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
‘ನನಗೂ ಕೆಟ್ಟ ಅನುಭವ ಆಗಿದೆ’; ನೀತು ಶೆಟ್ಟಿ ನೇರ ಮಾತು
‘ನನಗೂ ಕೆಟ್ಟ ಅನುಭವ ಆಗಿದೆ’; ನೀತು ಶೆಟ್ಟಿ ನೇರ ಮಾತು
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ