Friendship Day 2024: ಭಾರತದಲ್ಲಿ ಆಗಸ್ಟ್ ಮೊದಲ ಭಾನುವಾರದಂದು ಸ್ನೇಹಿತರ ದಿನವನ್ನು ಆಚರಿಸುವುದು ಏಕೆ? ಏನಿದರ ಮಹತ್ವ?

ನಮ್ಮ ಜೀವನದಲ್ಲಿ ಕಷ್ಟ-ಸುಖ ಎಂದರೆ ಮೊದಲು ನೆನಪಾಗುವುದೇ ಸ್ನೇಹಿತರು. ಬದುಕಿನಲ್ಲಿ ಏನೇ ನಡೆದ್ರು ಅದನ್ನು ಮೊದಲು ತಿಳಿಸುವುದೇ ಆತ್ಮೀಯ ಸ್ನೇಹಿತ ಅಥವಾ ಸ್ನೇಹಿತೆಗೆ. ಹೀಗಾಗಿ ಜೀವನದ ಪ್ರತಿ ಹಂತದಲ್ಲಿಯೂ ಸ್ನೇಹಿತರು ಪ್ರಮುಖ ಪಾತ್ರವಹಿಸುತ್ತಾರೆ. ಜೀವನದ ಪ್ರಮುಖ ವ್ಯಕ್ತಿಗಳಾಗಿ ನೋವು ನಲಿವಿನಲ್ಲಿ ಜೊತೆ ನಿಲ್ಲುವ ಸ್ನೇಹಿತರಿಗೆ ಗೌರವ ಸಲ್ಲಿಸುವ ಸಲುವಾಗಿ ಪ್ರತಿ ವರ್ಷ ಜುಲೈ 30 ರಂದು ಅಂತಾರಾಷ್ಟ್ರೀಯ ದಿನವನ್ನು ಆಚರಿಸಲಾಗುತ್ತದೆ. ಹಾಗಾದ್ರೆ ಈ ದಿನದ ಇತಿಹಾಸ ಹಾಗೂ ಮಹತ್ವದ ಕುರಿತಾದ ಸಂಪೂರ್ಣ ಮಾಹಿತಿಯು ಇಲ್ಲಿದೆ.

Friendship Day 2024: ಭಾರತದಲ್ಲಿ ಆಗಸ್ಟ್ ಮೊದಲ ಭಾನುವಾರದಂದು ಸ್ನೇಹಿತರ ದಿನವನ್ನು ಆಚರಿಸುವುದು ಏಕೆ? ಏನಿದರ ಮಹತ್ವ?
ಸ್ನೇಹಿತರ ದಿನ
Follow us
| Updated By: Digi Tech Desk

Updated on:Aug 02, 2024 | 3:10 PM

ರಕ್ತ ಸಂಬಂಧಗಳನ್ನು ಮೀರಿದ ಬಂಧವಿದು, ಯಾವ ಬಿಂದುವಿನಲ್ಲಿಯೂ ಸಂಧಿಸುವುದು, ಹೌದು ಈ ಪ್ರಪಂಚದಲ್ಲಿ ನಿಷ್ಕಲ್ಮಶ ಸಂಬಂಧವಿದ್ದರೆ ಅದು ಸ್ನೇಹ ಮಾತ್ರ. ಪ್ರತಿಯೊಬ್ಬರ ಜೀವನದಲ್ಲಿ ಒಬ್ಬರಾದರೂ ಆತ್ಮೀಯ ಸ್ನೇಹಿತರು ಇರುತ್ತಾರೆ. ಹೀಗಾಗಿ ಈ ಜಗತ್ತಿನಲ್ಲಿ ಸ್ನೇಹಿತರಿಲ್ಲ ಎಂದು ಹೇಳುವವರು ಇರುವುದು ಕಡಿಮೆಯೇ. ಈ ಸಂಬಂಧಿಕರು ಬೇಕಾದರೆ ಕಷ್ಟದ ಸಮಯದಲ್ಲಿ ದೂರವಾಗಬಹುದು. ಆದರೆ ಒಬ್ಬ ನಿಜವಾದ ಸ್ನೇಹಿತನು ಕಷ್ಟದ ಸಮಯದಲ್ಲಿ ಕೈ ಬಿಡುವುದಿಲ್ಲ. ಹೀಗಾಗಿ ಈ ಸ್ನೇಹ ಸಂಬಂಧಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಈ ಸುಂದರ ಸಂಬಂಧದ ಮಹತ್ವವನ್ನು ಸಾರಲು ಪ್ರತಿವರ್ಷ ಜುಲೈ 30 ರಂದು ಸ್ನೇಹಿತರ ದಿನವನ್ನು ಆಚರಿಸಲಾಗುತ್ತದೆ.

ಅಂತಾರಾಷ್ಟ್ರೀಯ ಸ್ನೇಹಿತರ ದಿನದ ಇತಿಹಾಸ

ಅಂತಾರಾಷ್ಟ್ರೀಯ ಸ್ನೇಹಿತರ ದಿನವನ್ನು 1958ರಲ್ಲಿ ಮೊದಲ ಬಾರಿಗೆ ಆಚರಿಸಲಾಯಿತು. ಮೊದಲು ಪರಾಗ್ವೆಯಲ್ಲಿ 1958ರಲ್ಲಿ ಅಂತಾರಾಷ್ಟ್ರೀಯ ಸ್ನೇಹ ದಿನವನ್ನು ಪ್ರಸ್ತಾಪಿಸಲಾಯಿತು. ಆ ಬಳಿಕ ವಿಶ್ವಸಂಸ್ಥೆಯು ಜುಲೈ 30ನ್ನು ಅಧಿಕೃತ ಅಂತಾರಾಷ್ಟ್ರೀಯ ಸ್ನೇಹ ದಿನವೆಂದು ಘೋಷಿಸಿತು. ಅಂದಿನಿಂದ ಪ್ರತಿ ವರ್ಷ ಜುಲೈ 30 ರಂದು ಅಂತಾರಾಷ್ಟ್ರೀಯ ಸ್ನೇಹಿತರ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ಭಾರತದಲ್ಲಿ ಸ್ನೇಹಿತರ ದಿನ ಯಾವಾಗ?

ಭಾರತ, ಅಮೇರಿಕಾ, ಬಾಂಗ್ಲಾದೇಶ, ಮಲೇಷ್ಯಾ ಸೇರಿದಂತೆ ಇನ್ನೂ ಕೆಲವು ರಾಷ್ಟ್ರಗಳಲ್ಲಿ ಆಗಸ್ಟ್ ತಿಂಗಳ ಮೊದಲ ಭಾನುವಾರದಂದು ಸ್ನೇಹಿತರ ದಿನವನ್ನು ಆಚರಿಸಲಾಗುತ್ತದೆ. ಈ ಬಾರಿ ಆಗಸ್ಟ್ 4 ರಂದು ಪ್ರೆಂಡ್‍ಶಿಪ್ ಡೇ ಆಚರಿಸಲಾಗುತ್ತಿದೆ.

ಆಗಸ್ಟ್ ಮೊದಲ ಭಾನುವಾರದಂದು ಸ್ನೇಹಿತರ ದಿನ ಆಚರಿಸುವುದು ಏಕೆ?

ಭಾರತ, ಅಮೇರಿಕಾ ಸೇರಿದಂತೆ ಕೆಲ ರಾಷ್ಟ್ರಗಳಲ್ಲಿ ಸ್ನೇಹಿತರ ದಿನವನ್ನು ಆಗಸ್ಟ್ ತಿಂಗಳ ಮೊದಲ ಭಾನುವಾರದಂದು ಆಚರಿಸಲಾಗುತ್ತದೆ. ಈ ದಿನದಂದು ಆಚರಿಸುವುದು ಒಂದು ಕಾರಣವು ಇದೆ. 1935ರಲ್ಲಿ ಆಗಸ್ಟ್ ತಿಂಗಳ ಮೊದಲ ಭಾನುವಾರದಂದು ಅಮೇರಿಕಾ ಸರ್ಕಾರವು ಒಬ್ಬ ವ್ಯಕ್ತಿಯನ್ನು ಕೊಲ್ಲುತ್ತದೆ. ಈ ವ್ಯಕ್ತಿಯ ಸಾವಿನ ವಿಷಯ ತಿಳಿದ ಆತನ ಆತ್ಮೀಯ ಸ್ನೇಹಿತ ದುಃಖವನ್ನು ತಾಳಲಾರದೇ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಇವರ ಈ ಸ್ನೇಹಬಂಧವನ್ನು ಕಂಡು ಅಮೇರಿಕಾ ಸರ್ಕಾರವು ಆಗಸ್ಟ್ ತಿಂಗಳ ಮೊದಲ ಭಾನುವಾರದಂದು ಸ್ನೇಹಿತರ ದಿನವನ್ನು ಆಚರಿಸಲು ಘೋಷಣೆ ಮಾಡಿತು. ಕಾಲಕ್ರಮೇಣ ಇದು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಚಲಿತಕ್ಕೆ ಬಂದ ಕಾರಣ, ಅಂದೇ ಭಾರತದಲ್ಲಿಯೂ ಅದೇ ದಿನದಂದು ಸ್ನೇಹಿತರ ದಿನವನ್ನು ಆಚರಿಸಲಾಗುತ್ತಿದೆ.

ಇದನ್ನೂ ಓದಿ: ಏನಿದು ಹೆಪಟೈಟಿಸ್ ಕಾಯಿಲೆ? ಈ ರೋಗ ಲಕ್ಷಣಗಳೇನು? ತಡೆಗಟ್ಟುವುದು ಹೇಗೆ?

ಸ್ನೇಹಿತರ ದಿನದ ಮಹತ್ವ ಹಾಗೂ ಆಚರಣೆ

ಸ್ನೇಹ ಸಂಬಂಧಕ್ಕೆ ಯಾವುದೇ ಜಾತಿ, ಧರ್ಮವಿಲ್ಲ, ಪರಿಶುದ್ಧವಾದ ವ್ಯಕ್ತಿಗಳಿದ್ದರೆ ಸಾಕು. ಹೀಗಾಗಿ ಸ್ನೇಹ ಸಂಬಂಧದ ಮಹತ್ವವನ್ನು ತಿಳಿಸಲು ಹಾಗೂ ಸ್ನೇಹವನ್ನು ಗೌರವಿಸುವ ದಿನವಾಗಿದೆ. ಎಷ್ಟೋ ಸಲ ಮಾಡಿದ ಸಹಾಯಕ್ಕೆ ಧನ್ಯವಾದ ತಿಳಿಸಲು ಸಾಧ್ಯವಾಗಿರುವುದಿಲ್ಲ. ಈ ದಿನದಂದು ತಮ್ಮ ಸ್ನೇಹಿತರಿಗೆ ವಿಶೇಷವಾದ ರೀತಿಯಲ್ಲಿ ಧನ್ಯವಾದಗಳನ್ನು ತಿಳಿಸಬಹುದಾಗಿದೆ. ಈ ದಿನದಂದು ಸ್ನೇಹಿತರು ಜೊತೆಯಾಗಿ ಪಾರ್ಟಿ ಅಥವಾ ಪ್ರವಾಸ ಹೋಗಬಹುದು. ಅಲ್ಲದೇ, ತಮ್ಮ ಆತ್ಮೀಯ ಸ್ನೇಹಿತರಿಗೆ ಪರಸ್ಪರ ಶುಭಾಶಯಗಳನ್ನು ತಿಳಿಸುವುದು. ಉಡುಗೊರೆ ನೀಡುವುದು ಸೇರಿದಂತೆ ಸ್ನೇಹಿತರೊಂದಿಗೆ ಸಮಯ ಕಳೆಯುವ ಮೂಲಕ ಆಚರಿಸಬಹುದು.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 5:26 pm, Sat, 27 July 24