Hair Transplant: ಕೂದಲು ಉದುರುವ ಸಮಸ್ಯೆಗೊಂದು ಶಾಶ್ವತ ಪರಿಹಾರ, ಕೂದಲು ಕಸಿ ವಿಧಾನ

ಏನಿದು ಕೂದಲು ಕಸಿ ವಿಧಾನ? ಯಾವ ವಯಸ್ಸಿನವರಿಗೆ ಇದು ಸೂಕ್ತ ಮತ್ತು ಹೇಗೆಲ್ಲಾ ಕಸಿ ವಿಧಾನ ಪರಿಣಾಮಕಾರಿ ಎಂಬೆಲ್ಲ ವಿಷಯದ ಕುರಿತು ಏಮ್ಸ್ ಚರ್ಮರೋಗ ತಜ್ಞ ಮತ್ತು ಜಾಗತಿಕ ಕೂದಲು ಕಸಿ ಮಂಡಳಿಯ ಶಸ್ತ್ರಚಿಕಿತ್ಸಕರಾಗಿರುವ ಡಾ. ಅಮರೇಂದ್ರ ಕುಮಾರ್ ನ್ಯೂಸ್ 9 ಲೈವ್‌ಗೆ ತಿಳಿಸಿದ ಮಾಹಿತಿ ಇಲ್ಲಿದೆ ನೋಡಿ.

Hair Transplant: ಕೂದಲು ಉದುರುವ ಸಮಸ್ಯೆಗೊಂದು ಶಾಶ್ವತ ಪರಿಹಾರ, ಕೂದಲು ಕಸಿ ವಿಧಾನ
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on:Jul 27, 2024 | 2:32 PM

ಕೂದಲು ಉದುರುವ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಹೊಸತೇನಲ್ಲ. ಹವಾಮಾನ, ಮಾಲಿನ್ಯ ಮತ್ತು ಜೀವನಶೈಲಿಯಲ್ಲಿನ ಬದಲಾವಣೆಗಳಿಂದಾಗಿ, ಎಲ್ಲಾ ವಯಸ್ಸಿನ ಪುರುಷರು ಮತ್ತು ಮಹಿಳೆಯರಲ್ಲಿ ಈ ಸಮಸ್ಯೆ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ಆಧುನಿಕತೆ ಮಾನವ ಇಂತಹ ಸಮಸ್ಯೆಗಳನ್ನು ಪರಿಹರಿಸುವ ಕ್ರಮಗಳನ್ನು ಸುಲಭಗೊಳಿಸಿವೆ. ಜೇಬಿನಲ್ಲಿ ಹಣವಿದ್ದರೆ ಈ ಕೂದಲು ಉದುರುವುದು ದೊಡ್ಡ ಸಮಸ್ಯೆಯೇ ಅಲ್ಲ. ಬಹಳಷ್ಟು ಜನರು ಕಳೆದುಹೋದ ಕೂದಲನ್ನು ‘ಕೂದಲು ಕಸಿ’ ವಿಧಾನದಲ್ಲಿ ಮರಳಿ ಪಡೆಯುತ್ತಿದ್ದಾರೆ.

ಹಾಗಾದ್ರೆ ಏನಿದು ಕೂದಲು ಕಸಿ ವಿಧಾನ? ಯಾವ ವಯಸ್ಸಿನವರಿಗೆ ಇದು ಸೂಕ್ತ ಮತ್ತು ಹೇಗೆಲ್ಲಾ ಕಸಿ ವಿಧಾನ ಪರಿಣಾಮಕಾರಿ ಎಂಬೆಲ್ಲ ವಿಷಯದ ಕುರಿತು ಏಮ್ಸ್ ಚರ್ಮರೋಗ ತಜ್ಞ ಮತ್ತು ಜಾಗತಿಕ ಕೂದಲು ಕಸಿ ಮಂಡಳಿಯ ಶಸ್ತ್ರಚಿಕಿತ್ಸಕರಾಗಿರುವ ಡಾ. ಅಮರೇಂದ್ರ ಕುಮಾರ್ ನ್ಯೂಸ್ 9 ಲೈವ್‌ಗೆ ತಿಳಿಸಿದ ಮಾಹಿತಿ ಇಲ್ಲಿದೆ ನೋಡಿ.

ಕೂದಲು ಕಸಿಗೆ ಸೂಕ್ತ ವಯಸ್ಸು ಯಾವುದು?

ವೈದ್ಯರ ಪ್ರಕಾರ, ಯಾವ ವಯಸ್ಸಿನಲ್ಲಿ ಕೂದಲು ಕಸಿ ಮಾಡಬೇಕು ಎಂಬುದಕ್ಕೆ ಕೆಲವು ನಿಯಮಗಳಿವೆ. ಸರಿಯಾದ ವಯಸ್ಸಿನಲ್ಲಿ ನಾಟಿ ಮಾಡುವುದರಿಂದ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ಸಾಮಾನ್ಯವಾಗಿ 25 ರಿಂದ 75 ವರ್ಷ ವಯಸ್ಸಿನವರಿಗೆ ಕೂದಲು ಕಸಿ ಮಾಡಬಹುದು. ವೈದ್ಯರು 25 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಕಸಿ ಮಾಡಬಾರದು ಎಂದು ಹೇಳುತ್ತಾರೆ. ಆ ಸಮಯದಲ್ಲಿ ‘ಕೂದಲು ಕಸಿ’ ಮಾಡುವುದರಿಂದ ಭವಿಷ್ಯದಲ್ಲಿ ಪ್ರತಿಕೂಲ ಪರಿಣಾಮಗಳು ಉಂಟಾಗುವ ಸಾಧ್ಯತೆಯಿದೆ, ಇದಲ್ಲದೆ ಕೂದಲು ಉದುರುವುದು ಹೆಚ್ಚಾಗುವ ಸಂಭವನೀಯತೆಯೂ ಇದೆ.

ಉತ್ತಮ ಫಲಿತಾಂಶಗಳನ್ನು ಯಾವಾಗ ಪಡೆಯಬಹುದು?

ಫಲಿತಾಂಶವು ಉತ್ತಮವಾಗಿದೆಯೇ ಅಥವಾ ಇಲ್ಲವೇ ಎಂಬುದು ಕೂದಲು ಕಸಿಗೆ ಒಳಗಾದ ವ್ಯಕ್ತಿಯ ಕೂದಲಿನ ಗುಣಮಟ್ಟದ ಮೇಲೆ ಅವಲಂಬಿತವಾಗಿರುತ್ತದೆ. 20 ವರ್ಷದ ನಂತರ ಕೂದಲನ್ನು ಕಳೆದುಕೊಳ್ಳಲು ಪ್ರಾರಂಭಿಸುವವರು ತಕ್ಷಣವೇ ‘ಕೂದಲು ಕಸಿ’ ಮಾಡಲು ನಿರ್ಧರಿಸುತ್ತಾರೆ. ಇದು ನೈಸರ್ಗಿಕವಾಗಿ ಬೆಳೆಯುವ ಕೂದಲಿನ ಮೇಲೆ ಪರಿಣಾಮ ಬೀರುತ್ತದೆಯೇ ವಿನಃ, ಕೂದಲು ಕಸಿಯ ಫಲಿತಾಂಶ ಪಡೆಯುವುದರಲ್ಲಿ ವಿಫಲತೆ ಕಾಣಸಿಗುತ್ತದೆ.

‘ಕೂದಲು ಕಸಿ’ಗೆ ಕನಿಷ್ಠ ವಯಸ್ಸು ಎಷ್ಟು?

25-36 ವರ್ಷದೊಳಗಿನ ವಯಸ್ಸಿನವರಿಗೆ ಕೂದಲು ಕಸಿ ಮಾಡಬಹುದು ಎಂದು ತಜ್ಞರು ಹೇಳುತ್ತಾರೆ. ಆ ಸಮಯದಲ್ಲಿ ಕೂದಲು ಉದುರುವಿಕೆ ಸ್ಪಷ್ಟವಾಗಿ ಗೋಚರಿಸುತ್ತದೆ.

ಕೂದಲು ಉದುರುವ ಸಮಸ್ಯೆ ಯಾವಾಗ ಕಾಣಿಸಿಕೊಳ್ಳುತ್ತದೆ?

ಪುರುಷರಲ್ಲಿ, ಕೂದಲು ಉದುರುವಿಕೆಯು 30 ರಿಂದ 45 ವರ್ಷಗಳ ನಡುವೆ ಪ್ರಾರಂಭವಾಗುತ್ತದೆ. ಮಹಿಳೆಯರಲ್ಲಿ ಈ ಪ್ರವೃತ್ತಿ ಹಾರ್ಮೋನುಗಳ ಮೇಲೆ ಅವಲಂಬಿತವಾಗಿರುತ್ತದೆ. ಈ ಸಮಸ್ಯೆಯು ಮುಖ್ಯವಾಗಿ ಋತುಬಂಧದ ನಂತರ ಅಂದರೆ 40, 50 ಅಥವಾ ಕೆಲವು ಸಂದರ್ಭಗಳಲ್ಲಿ 60 ವರ್ಷದ ನಂತರ ಪ್ರಾರಂಭವಾಗುತ್ತದೆ.

ಇದನ್ನೂ ಓದಿ: ಏನಿದು ಹೆಪಟೈಟಿಸ್ ಕಾಯಿಲೆ? ಈ ರೋಗ ಲಕ್ಷಣಗಳೇನು? ತಡೆಗಟ್ಟುವುದು ಹೇಗೆ?

‘ಕೂದಲು ಕಸಿ’ ಬಗ್ಗೆ ಇನ್ನೂ ಕೆಲವು ಪ್ರಮುಖ ಮಾಹಿತಿ;

ಅಧ್ಯಯನದ ಪ್ರಕಾರ, ಕೂದಲು ಕಸಿಯನ್ನು ಚಿಕ್ಕ ವಯಸ್ಸಿನಲ್ಲಿ ಅಥವಾ ಬಹಳ ವೃದ್ಧಾಪ್ಯದಲ್ಲಿ ಮಾಡಬಾರದು. ಸರಿಯಾದ ವಯಸ್ಸು 25 ರಿಂದ 50 ರ ನಡುವೆ ಇರುತ್ತದೆ. ಯುವಜನರ ವಿಷಯದಲ್ಲಿ ‘ಕೂದಲು ಕಸಿ’ ಭವಿಷ್ಯದಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು. 60 ವರ್ಷದ ನಂತರ, ಕೂದಲು ಕಸಿ ಮಾಡುವ ಸಾಧ್ಯತೆ ಬಹಳಷ್ಟು ಕಡಿಮೆ. ಅಂತಹ ಸಂದರ್ಭದಲ್ಲಿ ಇತರ ಆರೋಗ್ಯ ಸಂಬAಧಿತ ಸಮಸ್ಯೆಗಳ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ.

ಭಾರತದಲ್ಲಿ ‘ಕೂದಲು ಕಸಿ’ ಮಾರುಕಟ್ಟೆ ಸ್ಥಿರವಾಗಿ ಬೆಳೆಯುತ್ತಿದೆ ಎಂಬುದನ್ನು ಗಮನಿಸಬೇಕು. 2025 ರ ವೇಳೆಗೆ 140 ಮಿಲಿಯನ್ ಜನರನ್ನು ತಲುಪುವ ನಿರೀಕ್ಷೆಯಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಟೆಕ್‌ಸಿ ಸಂಶೋಧನೆಯ ಪ್ರಕಾರ, ಕೂದಲು ಕಸಿ ಭಾರತದಲ್ಲಿ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗುತ್ತಿದೆ. 2016 ಮತ್ತು 2020 ರ ನಡುವೆ, ವಿಶ್ವಾದ್ಯಂತ ಕೂದಲು ಕಸಿ ಶಸ್ತ್ರಚಿಕಿತ್ಸೆಗಳು ಶೇಕಡಾ 16 ರಷ್ಟು ಹೆಚ್ಚಾಗಿವೆ. ಅಮೆರಿಕ, ಟರ್ಕಿ, ದಕ್ಷಿಣ ಕೊರಿಯಾ ದೇಶಗಳು ಈ ಚಿಕಿತ್ಸೆಯಲ್ಲಿ ಮುಂಚೂಣಿಯಲ್ಲಿವೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:29 pm, Sat, 27 July 24

ಬಲಗೈಯಲ್ಲಿ 6 ಬೆರಳುಗಳಿದ್ದರೆ ಏನು ಅರ್ಥ? ವಿಡಿಯೋ ನೋಡಿ
ಬಲಗೈಯಲ್ಲಿ 6 ಬೆರಳುಗಳಿದ್ದರೆ ಏನು ಅರ್ಥ? ವಿಡಿಯೋ ನೋಡಿ
Nithya Bhavishya: ಈ ರಾಶಿಯವರಿಂದು ಹಣವನ್ನು ಕೊಟ್ಟು ಕಳೆದುಕೊಳ್ಳುವಿರಿ
Nithya Bhavishya: ಈ ರಾಶಿಯವರಿಂದು ಹಣವನ್ನು ಕೊಟ್ಟು ಕಳೆದುಕೊಳ್ಳುವಿರಿ
Weekly Horoscope: ಸೆಪ್ಟೆಂಬರ್​​ 9 ರಿಂದ 15ರ ವಾರ ಭವಿಷ್ಯ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 9 ರಿಂದ 15ರ ವಾರ ಭವಿಷ್ಯ ತಿಳಿಯಿರಿ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್