Friendship Day 2024: 70ರ ವಯಸ್ಸಿನಲ್ಲಿ ಕನ್ನಡದಲ್ಲಿ ಎಂಎ ಮಾಡಿದ ಬಾಂಬೆ ಸ್ನೇಹಿತರು
ವಯಸ್ಸು ಎನ್ನುವುದು ನಿಜವಾಗಿಯೂ ಸಂಖ್ಯೆ ಅಷ್ಟೇ ಬೇರೇನಿಲ್ಲ ಎಂಬ ಮಾತು, ಈ ಇಬ್ಬರು ಸ್ನೇಹಿತರ ಬಗ್ಗೆ ಓದುವಾಗ ನಿಮ್ಮ ಅರಿವಿಗೆ ಬರಬಹುದು, ಇದು ಇಬ್ಬರು ಸ್ನೇಹಿತರು ಅವರ 70 ರ ದಶಕದಲ್ಲಿ ಎಂಎ (ಕನ್ನಡ) ಕೋರ್ಸ್ ಮಾಡಿದ ಕಥೆ. ಸ್ನೇಹ ಎಂಬುದು ಯಾರನ್ನು ಬೇಕಾದರೂ ಹತ್ತಿರ ಮಾಡಬಹುದು. ಅದಕ್ಕೆ ವಯಸ್ಸಿನ ಮಿತಿಯಿಲ್ಲ. ಇದು ಅಕ್ಷರಶಃ ಸತ್ಯ. ಒಂದೇ ಮನಸ್ಥಿತಿಯವರು ಒಟ್ಟಾದಾಗ ಸ್ನೇಹಿತರಾಗಲು ಹೆಚ್ಚು ಸಮಯ ಬೇಕಾಗುವುದಿಲ್ಲ. ಮುಂಬೈನ ಪಥ್ಕಿ ಮತ್ತು ಪಡಕಿ ಅವರ ದೋಸ್ತಿಯಲ್ಲೂ ಇದೆ ರೀತಿ ಆದದ್ದು. ಹಾಗಾದರೆ ಇವರ ಸ್ನೇಹ ಬೆಳೆದಿದ್ದು ಹೇಗೆ? 70 ರಲ್ಲಿಯೂ ಓದುವ ಉತ್ಸಾಹ ಹೇಗಿತ್ತು? ಅವರ ಮಾತುಗಳಲ್ಲಿಯೇ ಓದಿ.
ಕೆಲವರಿಗೆ ವಯಸ್ಸು ಎನ್ನುವುದು ನಿಜವಾಗಿಯೂ ಸಂಖ್ಯೆ ಅಷ್ಟೇ ಬೇರೇನಿಲ್ಲ ಎಂಬ ಮಾತು, ಈ ಇಬ್ಬರು ಸ್ನೇಹಿತರ ಬಗ್ಗೆ ಓದುವಾಗ ನಿಮ್ಮ ಅರಿವಿಗೂ ಬರಬಹುದು, ಇದು ಇಬ್ಬರು ಸ್ನೇಹಿತರು ಅವರ 70 ರ ದಶಕದಲ್ಲಿ ಎಂಎ (ಕನ್ನಡ) ಕೋರ್ಸ್ ಮಾಡಿದವರ ಕಥೆ. ಸ್ನೇಹ ಎಂಬುದು ಯಾರನ್ನು ಬೇಕಾದರೂ ಹತ್ತಿರ ಮಾಡಬಹುದು. ಅದಕ್ಕೆ ವಯಸ್ಸಿನ ಮಿತಿಯಿಲ್ಲ. ಇದು ಅಕ್ಷರಶಃ ಸತ್ಯ. ಒಂದೇ ಮನಸ್ಥಿತಿಯವರು ಒಟ್ಟಾದಾಗ ಸ್ನೇಹಿತರಾಗಲು ಹೆಚ್ಚು ಸಮಯ ಬೇಕಾಗುವುದಿಲ್ಲ. ಮುಂಬೈನ ಪಥ್ಕಿ ಮತ್ತು ಪಡಕಿ ಅವರ ದೋಸ್ತಿಯಲ್ಲೂ ಇದೆ ರೀತಿ ಆದದ್ದು. ಹಾಗಾದರೆ ಇವರ ಸ್ನೇಹ ಬೆಳೆದಿದ್ದು ಹೇಗೆ? 70 ರಲ್ಲಿಯೂ ಓದುವ ಉತ್ಸಾಹ ಹೇಗಿತ್ತು? ಅವರ ಮಾತುಗಳಲ್ಲಿಯೇ ಓದಿ.
ಹ್ಯೂಮನ್ಸ್ ಆಫ್ ಬಾಂಬೆ ನಡೆಸಿದ ಸಂದರ್ಶನದಲ್ಲಿ ಪಥ್ಕಿ ಅವರು ತಮ್ಮ ಸ್ನೇಹಿತನ ಬಗ್ಗೆ ಮಾತನಾಡಿದ್ದು, “ನಾನು ನನ್ನ ಸ್ನೇಹಿತ ಪಡಕಿ ಅವರನ್ನು 5 ವರ್ಷಗಳ ಹಿಂದೆ ನಮ್ಮ ಎಂಎ ಕನ್ನಡ ತರಗತಿಯಲ್ಲಿ ಭೇಟಿಯಾದೆ. ನಾವು 70 ರ ದಶಕದಲ್ಲಿ ಎಂಎ ಮಾಡಲು ನಿರ್ಧರಿಸಿದೆವು. ನಮಗಿಬ್ಬರಿಗೂ ಜೀವನದಲ್ಲಿ ಹೊಸದನ್ನು ಕಲಿಯಬೇಕು ಎಂಬ ಆಸಕ್ತಿಯ ಜೊತೆಗೆ ಜ್ಞಾನದ ಹಸಿವಿತ್ತು. ಇದು ನಮ್ಮಿಬ್ಬರನ್ನು ಒಟ್ಟುಗೂಡಿಸಿತು. ಅದಲ್ಲದೆ ನಮ್ಮ ಹೆಸರು ಕೂಡ ಹೋಲಿಕೆಯಾಗುವುದರಿಂದ ಸ್ನೇಹವೂ ಆಯಿತು”. ಎಂದು ಅವರು ತಮ್ಮ ಸ್ನೇಹಿತನ ಭೇಟಿ ಬಗ್ಗೆ ಹೇಳಿದ್ದಾರೆ.
“70 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದ ನಾವು ನಮ್ಮ ಬ್ಯಾಚ್ ನ ಅತ್ಯಂತ ಹಳೆಯ ವಿದ್ಯಾರ್ಥಿಗಳು, ಈ ಬಗ್ಗೆ ನಮಗೆ ಹೆಮ್ಮೆಯೂ ಇತ್ತು. ನಾವಿಬ್ಬರೂ ಹಿಂದಿನ ಬೆಂಚಿನ ವಿದ್ಯಾರ್ಥಿಗಳು. ಜೊತೆಗೆ ತುಂಬಾ ಹರಟೆ ಹೊಡೆಯುತ್ತಿದ್ದೇವು. ನಮ್ಮ ತರಗತಿಗಳು ಆಫ್ ಲೈನ್ ನಲ್ಲಿದ್ದಾಗ, ಉಪನ್ಯಾಸಗಳ ಸಮಯದಲ್ಲಿ ನಾವು ಗಂಟೆಗಟ್ಟಲೆ ಬೇರೆ ಬೇರೆ ವಿಷಯಗಳನ್ನು ಚರ್ಚಿಸುತ್ತಿದ್ದೆವು. ಬಳಿಕ ಕಾಲೇಜಿನ ನಂತರ, ನಾವು ಕವನ ವಾಚನಕ್ಕೆ ಹಾಜರಾಗುತ್ತಿದ್ದೆವು. ಇದು ನಮಗಿಬ್ಬರಿಗೂ ತುಂಬಾ ಇಷ್ಟವಾದ ಕೆಲಸವಾಗಿತ್ತು”.
ಇದನ್ನೂ ಓದಿ: ಜತೆಗೆ UPSC ಪರೀಕ್ಷೆ ಬರೆದು ಐಎಎಸ್-ಐಪಿಎಸ್ ಅಧಿಕಾರಿಗಳಾದ ಮೂವರು ಪ್ರಾಣ ಸ್ನೇಹಿತರು
ಆದರೆ, ನಾವು ಕಾಲೇಜಿಗೆ ಸೇರಿ ಒಂದು ವರ್ಷದ ನಂತರ ಲಾಕ್ ಡೌನ್ ಆಯಿತು. ನಮ್ಮ ತರಗತಿಗಳು ಆನ್ಲೈನ್ ಮೂಲಕ ನಡೆಯಿತು. ಆಗ ನಾವಿಬ್ಬರೂ ಹೇಗೆ ಬದುಕುವುದು ಎಂದು ಬಹಳ ಯೋಚಿಸಿದೆವು. ಆದರೆ ನಮ್ಮ ಮಕ್ಕಳು ಲ್ಯಾಪ್ ಟಾಪ್ ಖರೀದಿಸಿ ಕೊಟ್ಟರು. ಇದು ನಮಗೆ ತುಂಬಾ ಸಹಾಯ ಮಾಡಿತು. ತರಗತಿಗಳು ಮುಗಿದ ನಂತರ ನಾವಿಬ್ಬರೂ ಕರೆ ಮಾಡಿ ಕನ್ನಡದ ಜೋಕ್ ಹೇಳುತ್ತಾ ಸಮಯ ಕಳೆಯುತ್ತಿದ್ದೆವು. ತದನಂತರ ಪರೀಕ್ಷೆಗಳ ಸಮಯದಲ್ಲಿ, ಪಡಕಿ ಪ್ರಶ್ನಾವಳಿಯನ್ನು ತಯಾರಿಸುತ್ತಿದ್ದರು ಆ ಬಗ್ಗೆ ನಾವು ಪ್ರತಿದಿನ ಒಂದು ಗಂಟೆ ಚರ್ಚಿಸುತ್ತಿದ್ದೆವು. ಇವೆಲ್ಲವೂ ನಮಗೆ ತುಂಬಾ ಸಂತೋಷ ನೀಡುತ್ತಿತ್ತು. ಲಾಕ್ ಡೌನ್ ಮುಗಿದ ಬಳಿಕ ನಮ್ಮ ಘಟಿಕೋತ್ಸವದಲ್ಲಿ ನಾವು ಬಹಳ ಸಮಯಗಳ ನಂತರ ಭೇಟಿಯಾದೆವು. ಆ ದಿನ, ನಾನು ಕೇವಲ ಸ್ನಾತಕೋತ್ತರ ಪದವಿ ಮಾತ್ರ ಪಡೆದಿರಲಿಲ್ಲ ಜೊತೆಗೆ ಒಬ್ಬ ಉತ್ತಮ ಸ್ನೇಹಿತನನ್ನು ಸಹ ಪಡೆದಿದ್ದೆ.”
ಇದು ಕೇವಲ ಪ್ರೇರಣೆಯ ಕಥೆಯಲ್ಲ ಬದಲಾಗಿ ಒಬ್ಬ ಒಳ್ಳೆಯ ಸ್ನೇಹಿತರು ಜೊತೆಯಿದ್ದಾಗ ಏನನ್ನೂ ಸಾಧಿಸಬಹುದು ಎಂಬುದನ್ನು ನಿರೂಪಿಸುವ ಇಬ್ಬರ ಸ್ನೇಹಿತರ ಕಥೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ