Friendship Day 2024: ಜತೆಗೆ UPSC ಪರೀಕ್ಷೆ ಬರೆದು ಐಎಎಸ್-ಐಪಿಎಸ್‌ ಅಧಿಕಾರಿಗಳಾದ ಮೂವರು ಪ್ರಾಣ ಸ್ನೇಹಿತರು

Friends success story: ಸ್ನೇಹ ಎಂಬುದು ಅದ್ಭುತ ಸಂಪತ್ತು, ಬದುಕಿಗೊಂದು ಧೈರ್ಯ ಮತ್ತು ಶಕ್ತಿ ಅಂತಾನೇ ಹೇಳಬಹುದು. ನಮ್ಮ ಜೊತೆ ಉತ್ತಮ ಸ್ನೇಹಿತರಿದ್ದರೆ ಖಂಡಿತವಾಗಿಯೂ ಜೀವನದಲ್ಲಿ ಏನನ್ನೂ ಬೇಕಾದರೂ ಜಯಿಸಬಹುದು. ಈ ಮಾತನ್ನು ನಿಜವೆಂದು ಸಾಬೀತು ಮಾಡಿದವರು ಈ ಮೂವರು ಸ್ನೇಹಿತರು. ಕಾಲೇಜು ದಿನಗಳಿಂದಲೂ ಜೊತೆಯಾಗಿದ್ದ ಈ ಸ್ನೇಹಿತರು 2017 ರಲ್ಲಿ UPSC ಪರೀಕ್ಷೆ ಬರೆದು, ಈ ಪರೀಕ್ಷೆಯನ್ನು ರ್ಯಾಂಕ್‌ ಪಡೆದು, ಇದೀಗ ಒಬ್ಬ ಸ್ನೇಹಿತ ಐಪಿಎಸ್‌ ಮತ್ತು ಇನ್ನಿಬ್ಬರು ಐಎಎಸ್‌ ಅಧಿಕಾರಿಗಳಾಗಿದ್ದಾರೆ. ಇವರ ಈ ಸ್ನೇಹ ನಮಗೆಲ್ಲರಿಗೂ ಪ್ರೇರಣೆ.

Friendship Day 2024: ಜತೆಗೆ UPSC ಪರೀಕ್ಷೆ ಬರೆದು ಐಎಎಸ್-ಐಪಿಎಸ್‌ ಅಧಿಕಾರಿಗಳಾದ ಮೂವರು ಪ್ರಾಣ ಸ್ನೇಹಿತರು
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Aug 02, 2024 | 6:30 PM

ಸ್ನೇಹ ಎಂಬುದು ಒಂದು ಅಮೂಲ್ಯ ಸಂಪತ್ತು. ಪ್ರತಿಯೊಬ್ಬರ ಬದುಕಿನಲ್ಲೂ ಒಂದೊಳ್ಳೆ ಸ್ನೇಹಿತ ಬಹು ದೊಡ್ಡ ಪಾತ್ರವನ್ನು ಹೊಂದಿರುತ್ತಾನೆ. ಇಂತಹ ಸ್ನೇಹಿತ ಬದುಕಿಗೊಂದು ಧೈರ್ಯ ಮತ್ತು ಶಕ್ತಿ ಮತ್ತು ಸಾಧನೆಗೆ ಬೆನ್ನೆಲುಬು ಅಂತಾನೇ ಹೇಳಬಹುದು. ಹೀಗೆ ನಮ್ಮ ಜೊತೆ ಉತ್ತಮ ಸ್ನೇಹಿತರಿದ್ದರೆ ಖಂಡಿತವಾಗಿಯೂ ನಾವು ಜೀವನದಲ್ಲಿ ಏನೂ ಬೇಕಾದರೂ ಸಾಧಿಸಬಹುದು. ಇದಕ್ಕೆ ಉತ್ತಮ ನಿದರ್ಶನ ಈ ಮೂವರು ಸ್ನೇಹಿತರು. ಜೀವನದಲ್ಲಿ ಏನಾದರೂ ಸಾಧಿಸಲೇಬೇಕು ಎಂದು ಪಣ ತೊಟ್ಟ ಈ ಸ್ನೇಹಿತರು ಬಂದಂತಹ ಕಷ್ಟಗಳನ್ನೆಲ್ಲಾ ಎದುರಿಸಿ, ಜೊತೆಯಾಗಿ UPSC ಪರೀಕ್ಷೆ ಬರೆದು, ಅದರಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿ ಇಂದು ಐಎಎಸ್‌-ಐಪಿಎಸ್‌ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮೂವರು ಸ್ನೇಹಿತರ ಈ ಯಶಸ್ಸಿನ ಕಥೆ ನಿಜಕ್ಕೂ ನಮಗೆಲ್ಲರಿಗೂ ಪ್ರೇರಣೆ.

ಮೂವರು ಸ್ನೇಹಿತರ ಯಶಸ್ಸಿನ ಯಶೋಗಾಥೆ:

ಈ ಯಶೋಗಾಥೆಯು ಮೂವರು ಗೆಳೆಯರಾದ ಐಎಎಸ್‌ ವಿಶಾಲ್‌ ಮಿಶ್ರಾ, ಐಎಎಸ್‌ ಗೌರವ್‌ ವಿಜಯರಾಮ್‌ ಕುಮಾರ್‌ ಮತ್ತು ಐಪಿಎಸ್‌ ಸಾದ್‌ ಮಿಯಾನ್‌ ಖಾನ್‌ ಅವರದು. ಈ ಮೂವರು ಸ್ನೇಹಿತರು 2017 ರಲ್ಲಿ UPSC ಸಿವಿಲ್‌ ಸರ್ವೀಸ್‌ ಪರೀಕ್ಷೆ ಬರೆದು ಐಎಎಸ್-ಐಪಿಎಸ್‌ ಅಧಿಕಾರಿಗಳಾಗುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪರೀಕ್ಷೆಯಲ್ಲಿ ಸಾದ್‌ ಖಾನ್‌ 25 ನೇ ರ್ಯಾಂಕ್‌, ಗೌರವ್‌ 34 ನೇ ರ್ಯಾಂಕ್‌ ಮತ್ತು ವಿಶಾಲ್‌ 49 ನೇ ರ್ಯಾಂಕ್‌ ಪಡೆದಿದ್ದಾರೆ.

ಇವರ ಸ್ನೇಹ ಆರಂಭವಾದದ್ದು ಹೇಗೆ:

ಉತ್ತರ ಪ್ರದೇಶದ ಬಿಜ್ನೋರ್‌ ನಿವಾಸಿಯಾದ ಸಾದ್‌ ಮಿಯಾ ಖಾನ್‌ ಅವರು ತಾವು ಬಿ.ಟೆಕ್‌ ಓದುವ ಸಮಯದಲ್ಲಿ ವಿಶಾಲ್ ಮಿಶ್ರಾ ಅವರನ್ನು ಕಾನ್ಪುರದ ಹಾರ್ಕೋರ್ಟ್‌ ಬಟ್ಲರ್‌ ಟೆಕ್ನಾಲಜಿಕಲ್‌ ಯೂನಿವರ್ಸಿಟಿಯಲ್ಲಿ ಭೇಟಿಯಾದರು. ಹೀಗೆ ಪರಿಚಯವಾಗಿ ಈ ಇಬ್ಬರು ಬೆಸ್ಟ್‌ ಫ್ರೆಂಡ್ಸ್‌ ಆದ್ರು. ಬಿ.ಟೆಕ್‌ ಪದವಿ ಮುಗಿಸಿ ಈ ಇಬ್ಬರೂ ಕಾನ್ಪುರದ ಐಐಟಿಯಲ್ಲಿ ಎಂ.ಟೆಕ್‌ ಪದವಿಯನ್ನು ಪಡೆಯುತ್ತಾರೆ. ಈ ಸಮಯದಲ್ಲಿ ವಿಶಾಲ್‌ ಮತ್ತು ಸಾದ್‌ ಇಬ್ಬರೂ ಯುಪಿಎಸ್‌ಸಿ ಪರೀಕ್ಷೆಯನ್ನು ಬರೆಯಬೇಕೆಂದು ನಿರ್ಧರಿಸಿದರು ಮತ್ತು ಪರೀಕ್ಷೆಯ ತಯಾರಿಗಾಗಿ ದೆಹಲಿಗೆ ತೆರಳಿದರು.

ಇದನ್ನೂ ಓದಿ: ಇಬ್ಬರೂ ಸ್ನೇಹಿತರ ಪರಿಶ್ರಮದ ಫಲವೇ ಭಾರತದ ನಂಬರ್ ಒನ್ ಇಂಡಿಗೋ ಏರ್ ಲೈನ್ಸ್

ಇಲ್ಲಿ ಇವರಿಗೆ ಚಂಡೀಘಡದ ಪಿಇಸಿ ಯೂನಿರ್ವಸಿಟಿ ಆಫ್‌ ಟೆಕ್ನಾಲಜಿ ಕಾಲೇಜ್‌ನಲ್ಲಿ ಬಿ.ಇ ಪದವಿಯನ್ನು ಮುಗಿಸಿ ಬಂದ ಗೌರವ್‌ ಅವರ ಪರಿಚಯವಾಗುತ್ತದೆ. ನಂತರ ಈ ಮೂವರು ಸ್ನೇಹಿತರು ಜೊತೆಯಾಗಿ UPSC ಪರೀಕ್ಷೆಗೆ ತಯಾರಿಯನ್ನು ನಡೆಸುತ್ತಾರೆ. ಹೀಗೆ ಸತತ ಪ್ರಯತ್ನಗಳ ಬಳಿಕ ಈ ಮೂವರು ಸ್ನೇಹಿತರು 2017 ರಲ್ಲಿ ಯುಪಿಎಸ್‌ಸಿ ಪರೀಕ್ಷೆಯನ್ನು ಬರೆಯುತ್ತಾರೆ. ಈ ಪರೀಕ್ಷೆಯಲ್ಲಿ ಸಾದ್‌ ಖಾನ್‌ 25 ನೇ ರ್ಯಾಂಕ್‌, ಗೌರವ್‌ 34 ನೇ ರ್ಯಾಂಕ್‌ ಮತ್ತು ವಿಶಾಲ್‌ 49 ನೇ ರ್ಯಾಂಕ್‌ ಪಡೆಯುತ್ತಾರೆ. ಪ್ರಸ್ತುತ ಈ ಮೂವರು ಸ್ನೇಹಿತರು ವಿವಿಧ ಸ್ಥಳಗಳಲ್ಲಿ ಸೇವೆಯಲ್ಲಿದ್ದಾರೆ. ಈ ಸ್ನೇಹಿತರ ಯಶಸ್ಸಿನನ ಕಥೆ ನಿಜಕ್ಕೂ ನಮಗೆಲ್ಲರಿಗೂ ಸ್ಫೂರ್ತಿ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

‘ಕನ್ನಡ ಚಿತ್ರರಂಗಕ್ಕೆ ಸಮಿತಿ ಬೇಡ, ಇದರಿಂದ ಚಿತ್ರರಂಗಕ್ಕೆ ನಷ್ಟ’; ಗೋವಿಂದು
‘ಕನ್ನಡ ಚಿತ್ರರಂಗಕ್ಕೆ ಸಮಿತಿ ಬೇಡ, ಇದರಿಂದ ಚಿತ್ರರಂಗಕ್ಕೆ ನಷ್ಟ’; ಗೋವಿಂದು
ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
‘ನನಗೂ ಕೆಟ್ಟ ಅನುಭವ ಆಗಿದೆ’; ನೀತು ಶೆಟ್ಟಿ ನೇರ ಮಾತು
‘ನನಗೂ ಕೆಟ್ಟ ಅನುಭವ ಆಗಿದೆ’; ನೀತು ಶೆಟ್ಟಿ ನೇರ ಮಾತು
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ