ಪತ್ನಿ ಮನೆಯಲ್ಲಿ ಇಲ್ಲದ ಸಮಯದಲ್ಲಿ ಗಂಡಂದಿರು ಈ ರೀತಿಯೂ ಇರ್ತಾರಂತೆ
ಸದಾ ವಟ ವಟ ಎನ್ನುವ ಹೆಂಡತಿಯೂ ಮನೆಯಲ್ಲಿದ್ದರೆ ಗಂಡಂದಿರ ಪಾಡು ದೇವರಿಗೆ ಪ್ರೀತಿ. ಈ ಮದುವೆಯಾದ ಗಂಡಂದಿರಲ್ಲಿ ಹೆಚ್ಚಿನವರು ಯಾವಾಗ ತಮ್ಮ ಮಡದಿ ತವರಿಗೆ ಹೋಗುತ್ತಾಳೆ ಎಂದು ಕಾಯುತ್ತಿರುತ್ತಾರೆ. ಪತ್ನಿಯೂ ಮನೆಯಲ್ಲಿದ್ದಾಗ ಈ ಗಂಡಸರು ಈ ಕೆಲಸಗಳನ್ನು ಮಾತ್ರ ತಪ್ಪದೇ ಮಾಡುತ್ತಾರಂತೆ. ಆದರೆ ಗಂಡ್ಮಕ್ಕಳು ಹೆಂಡತಿಯಿಲ್ಲದಾಗ ಹೀಗೂ ಇರ್ತಾರಾ ಎಂದೇನಿಸಬಹುದು. ಹಾಗಾದ್ರೆ ಗಂಡಂದಿರು ಮಾಡುವ ಕೆಲಸವೇನು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.
ಮದುವೆಯಾದ ಬಳಿಕ ಗಂಡು ಮಕ್ಕಳ ಎಲ್ಲಾ ಕೆಲಸಕ್ಕೂ ಬ್ರೇಕ್ ಬೀಳುತ್ತದೆ. ಸ್ನೇಹಿತರ ಜೊತೆ ಸುತ್ತೋದು, ಪಾರ್ಟಿ ಮಾಡೋದು, ಫೋನ್‌ನಲ್ಲಿ ಗಂಟೆಗಟ್ಟಲೆ ಮಾತಾಡೋದು ಈ ಎಲ್ಲವನ್ನು ನಿಲ್ಲಿಸಬೇಕಾಗುತ್ತದೆ. ಆಮೇಲೆ ಹೆಂಡತಿ, ಮಕ್ಕಳು ಸಂಸಾರವೆಂದು ಬ್ಯುಸಿಯಾಗಿ ಬಿಡುತ್ತಾರೆ. ಆದರೆ ಹೆಂಡತಿ ತಾಯಿ ಮನೆಗೆ ಹೋದರೆ, ಪಂಜರದಿಂದ ಹೊರ ಬಂದ ಹಕ್ಕಿಯಂತೆ ಹೆಚ್ಚಿನ ಗಂಡಂದಿರ ಪಾಡಾಗುತ್ತದೆ. ಹೀಗಾಗಿ ಈ ಸಣ್ಣ ಗ್ಯಾಪ್ ನಲ್ಲಿ ಮತ್ತೆ ತಮ್ಮ ಹಳೆಯ ಸಂತೋಷವನ್ನು ಮರುಸೃಷ್ಟಿಸಿಕೊಂಡು ಬಿಡುವವರು ಇದ್ದಾರೆ.
- ಪತ್ನಿಯೂ ತವರಿಗೆ ಹೋದ ಕೂಡಲೇ ಮೊದಲು ಮಾಡುವ ಕೆಲಸವೇ ಸ್ನೇಹಿತರ ಜೊತೆಗೆ ಗಂಟೆಗಟ್ಟಲೇ ಮಾತನಾಡುವುದು. ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕವಂತೂ ಅನಗತ್ಯವಾಗಿ ಫೋನ್‌ನಲ್ಲಿ ಮಾತನಾಡುವುದು ಕಡಿಮೆಯಾಗುತ್ತದೆ. ಅದ್ರಲ್ಲೂ ಸ್ನೇಹಿತರ ಜೊತೆ ಮಾತನಾಡುವುದಂತೂ ಅಪರೂಪವೇ ಆಗಿ ಬಿಡುತ್ತದೆ. ಹೆಂಡತಿ ಮನೆಯಲ್ಲಿದ್ದಾಗ ತನ್ನ ಹಳೆಯ ಸ್ನೇಹಿತರಿಗೆ ಫೋನ್ ಮಾಡಿ ಗಂಟೆಗಟ್ಟಲೇ ಮಾತನಾಡುತ್ತಾರೆ. ಇಲ್ಲವಾದರೆ ಒಟ್ಟಿಗೆ ಸೇರಿ ಸಣ್ಣ ಪಾರ್ಟಿ ಮಾಡುತ್ತಾರೆ.
- ಮನೆಯಲ್ಲಿ ಹೆಂಡತಿ ಮಕ್ಕಳು ಇದ್ದರೆ ಸಮಯ ಕಳೆದದ್ದೇ ತಿಳಿಯುವುದಿಲ್ಲ. ಆದರೆ ಹೆಂಡತಿ ತವರಿಗೆ ಹೋದಾಗ ಕೆಲವರಿಗೆ ಮನೆಯಲ್ಲಿರುವುದೇ ಬೋರ್ ಎನಿಸಬಹುದು. ಹೀಗಾದಾಗ ತಮ್ಮ ಹೆಚ್ಚಿನ ಸಮಯ ಟ್ಯಾಬ್ಲೆಟ್‌ಗಳು ಮತ್ತು ಲ್ಯಾಪ್‌ಟಾಪ್‌ಗಳಲ್ಲಿ ಕಾಲ ಕಳೆಯುತ್ತಾರೆ. ವೆಬ್ ಸೀರೀಸ್, ಸಿನಿಮಾ ಹಾಗೂ ವಿಡಿಯೋಗಳನ್ನು ನೋಡುತ್ತಾ ಸಮಯ ಕಳೆಯುತ್ತಾರೆ.
- ಕೆಲವರಂತೂ ಸಿಕ್ಕಿದ್ದೇ ಚಾನ್ಸ್ ಎಂದುಕೊಂಡು ಸ್ನೇಹಿತರನ್ನು ಬರ ಹೇಳಿ ಮನೆಯಲ್ಲಿ ಎಣ್ಣೆ ಪಾರ್ಟಿ ಮಾಡುತ್ತಾರೆ. ಡ್ರಿಂಕ್ಸ್ ಮಾಡುವರಾಗಿದ್ದು ಬಿಟ್ಟರಂತೂ ಹೆಂಡತಿ ಮನೆಯಲ್ಲಿ ಇಲ್ಲದೇ ಇರುವುದೇ ಅವರಿಗೆ ಹಬ್ಬದಂತಾಗಿರುತ್ತದೆ. ಹೀಗಾಗಿ ದಿನಾಲೂ ಪಾರ್ಟಿ ಎಂದು ಸಮಯ ಕಳೆಯುವುದು ಇದೆ.
- ಈ ಹುಡುಗರು ನಾನ್ ವೆಜ್ ಪ್ರಿಯರಾಗಿದ್ದು ಬಿಟ್ಟರೆ, ಮನೆಯಲ್ಲಿ ಅಡುಗೆ ಮಾಡಿ ತಿನ್ನುವ ಬದಲು ಹೊರಗಿನ ಊಟಕ್ಕೆ ಹೆಚ್ಚು ಅವಲಂಬಿತರಾಗಿ ಬಿಡುತ್ತಾರೆ. ಹೌದು, ಹೆಂಡತಿ ಮನೆಯಲ್ಲಿದ್ದಾಗ, ಅವಳು ಮಾಡಿದ ಅಡುಗೆಯನ್ನು ಮಾತ್ರ ತಿನ್ನಬೇಕಾಗಿರುತ್ತದೆ. ಆದರೆ ಅವಳಿದ್ದಾಗ ಹೋಟೆಲಿನಲ್ಲಿ ದಿನಾಲೂ ನಾನ್ ವೆಜ್ ಊಟವನ್ನೇ ಸವಿಯುತ್ತಾರೆ.
ಹೆಚ್ಚಿನ ಜೀವನಶೈಲಿ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ