ವದಂತಿ ನಂಬಿ ವಿಷ್ಣುವರ್ಧನ್ ಜೊತೆಗಿನ ಗೆಳೆತನ ಹಾಳು ಮಾಡಿಕೊಂಡಿದ್ದ ದ್ವಾರಕೀಶ್

ಇವರ ಗೆಳೆತನದಲ್ಲಿ ಬಿರುಕು ಬರಲು ಕಾರಣ ಆಗಿದ್ದು ಪತ್ರಿಕೆ ಮಾಡಿದ್ದ ವರದಿ. ‘ನೀ ತಂದ ಕಾಣಿಕೆ’ ಸಿನಿಮಾ ಆಗತಾನೇ ಸೋತಿತ್ತು. ಈ ನೋವು ದ್ವಾರಕೀಶ್ ಅವರಲ್ಲಿ ಇತ್ತು. ಹೀಗಿರುವಾಗಲೇ ಪೇಪರ್ ಒಂದರಲ್ಲಿ ‘ದ್ವಾರಕೀಶ್ ನಂಬಿಕೆಗೆ ಅರ್ಹನಲ್ಲ’ ಎಂದು ವಿಷ್ಣು ಹೇಳಿದ್ದಾಗಿ ವರದಿ ಆಗಿತ್ತು. ಇದನ್ನು ನಂಬಿಯೇ ಬಿಟ್ಟರು ದ್ವಾರಕೀಶ್.

ವದಂತಿ ನಂಬಿ ವಿಷ್ಣುವರ್ಧನ್ ಜೊತೆಗಿನ ಗೆಳೆತನ ಹಾಳು ಮಾಡಿಕೊಂಡಿದ್ದ ದ್ವಾರಕೀಶ್
ದ್ವಾರಕೀಶ್-ವಿಷ್ಣು
Follow us
|

Updated on:Aug 03, 2024 | 11:57 AM

ಚಿತ್ರರಂಗದಲ್ಲಿ ಒಳ್ಳೆಯ ಗೆಳೆಯರಾಗಿ ನಂತರ ದೂರ ದೂರ ಆದ ಗೆಳೆಯರಲ್ಲಿ ವಿಷ್ಣುವರ್ಧನ್ ಹಾಗೂ ದ್ವಾರಕೀಶ್ ಕೂಡ ಒಬ್ಬರು. ಇವರು ತುಂಬಾನೇ ಅನ್ಯೋನ್ಯವಾಗಿ ಇದ್ದರು. ಆದರೆ, ಇವರ ಗೆಳೆತನ ಹೆಚ್ಚು ವರ್ಷ ಬಾಳಲಿಲ್ಲ. ನಟನಾಗಿ, ನಿರ್ಮಾಪಕನಾಗಿ, ನಿರ್ದೇಶಕನಾಗಿ ಹೆಸರು ಮಾಡಿದ್ದ ದ್ವಾರಕೀಶ್ ಅವರು ಮಾಡಿದ ಒಂದು ತಪ್ಪಿನಿಂದ ಇವರ ಗೆಳೆತನ ಮುರಿದು ಬಿತ್ತು. ಇಬ್ಬರೂ ಬೇರೆ ಆಗಲು ಕಾರಣ ಆದ ಅಂಶದ ಬಗ್ಗೆ ಇಲ್ಲಿದೆ ಮಾಹಿತಿ.

ವಿಷ್ಣುವರ್ಧನ್ ಅವರ ‘ನಾಗರಹಾವು’ ಸಿನಿಮಾ ನೋಡಿ ದ್ವಾರಕೀಶ್ ಫಿದಾ ಆಗಿದ್ದರು. ಕನ್ನಡ ಚಿತ್ರರಂಗಕ್ಕೆ ಹೊಸ ಹೀರೋ ಸಿಕ್ಕ ಎಂದು ಖುಷಿಪಟ್ಟಿದ್ದರು. 1975ರಲ್ಲಿ ರಿಲೀಸ್ ಆದ ‘ಕಳ್ಳ ಕುಳ್ಳ’ ಸಿನಿಮಾದಲ್ಲಿ ಈ ಇಬ್ಬರು ಒಟ್ಟಾಗಿ ನಟಿಸಿದರು. ಆ ಬಳಿಕ ಇಬ್ಬರೂ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡಿದರು. ‘ಕಿಟ್ಟು ಪುಟ್ಟು’, ‘ಗುರು ಶಿಷ್ಯರು’ ಸೇರಿ ಅನೇಕ ಚಿತ್ರಗಳು ರಿಲೀಸ್ ಆದವು. ಈ ಮಧ್ಯೆ ಇವರ ಗೆಳೆತನದ ಮೇಲೆ ಕೆಟ್ಟ ದೃಷ್ಟಿ ಬಿತ್ತು.

ಇವರ ಗೆಳೆತನದಲ್ಲಿ ಬಿರುಕು ಬರಲು ಕಾರಣ ಆಗಿದ್ದು ಪತ್ರಿಕೆ ಮಾಡಿದ್ದ ವರದಿ. ‘ನೀ ತಂದ ಕಾಣಿಕೆ’ ಸಿನಿಮಾ ಆಗತಾನೇ ಸೋತಿತ್ತು. ಈ ನೋವು ದ್ವಾರಕೀಶ್ ಅವರಲ್ಲಿ ಇತ್ತು. ಹೀಗಿರುವಾಗಲೇ ಪೇಪರ್ ಒಂದರಲ್ಲಿ ‘ದ್ವಾರಕೀಶ್ ನಂಬಿಕೆಗೆ ಅರ್ಹನಲ್ಲ’ ಎಂದು ವಿಷ್ಣು ಹೇಳಿದ್ದಾಗಿ ವರದಿ ಆಗಿತ್ತು. ಇದನ್ನು ಮಾತನಾಡಿ ಬಗೆಹರಿಸಿಕೊಂಡರೆ ಎಲ್ಲವೂ ಸರಿ ಆಗುತ್ತಿತ್ತೇನೋ. ವಿಷ್ಣುವರ್ಧನ್ ಅವರನ್ನು ಬೆಳೆಸಿದ್ದು ನಾನು ಎನ್ನುವ ಭಾವನೆ ದ್ವಾರಕೀಶ್​ಗೆ ಇತ್ತು. ಈ ಕಾರಣದಿಂದಲೇ ವಿಷ್ಣುವರ್ಧನ್​ಗೆ ದ್ವಾರಕೀಶ್ ತಿರುಗೇಟು ಕೊಡುವ ಪ್ರಯತ್ನ ಮಾಡಿದರು.

ವಿಷ್ಣುವರ್ಧನ್ ಮೊದಲು ದ್ವಾರಕೀಶ್ ಅವರನ್ನು ಅಂಕಲ್ ಎನ್ನುತ್ತಿದ್ದರು. ಆ ಬಳಿಕ ಸರ್ ಎಂದರು. ನಂತರ ಇಬ್ಬರ ಮಧ್ಯೆ ಗೆಳೆತನ ಬೆಳೆದು ಏಕವಚನದಲ್ಲಿ ಮಾತನಾಡಿಕೊಳ್ಳುತ್ತಿದ್ದರು. ಆದರೆ, ಈ ಪತ್ರಿಕೆಯ ವರದಿ ನಂತರ ಎಲ್ಲವೂ ಬದಲಾಯಿತು. ‘ವಿಷ್ಣುವಿಗೆ ಸ್ವಲ್ಪವೂ ಕೃತಜ್ಞತೆ ಇಲ್ಲ’ ಎಂದು ದ್ವಾರಕೀಶ್ ಹೇಳಿದ್ದರು. ‘ನನ್ನಂತಹ ನಿರ್ಮಾಪಕನನ್ನು ಎದುರು ಹಾಕಿಕೊಂಡು ಇವನು ಇಂಡಸ್ಟ್ರಿಯಲ್ಲಿ ಹೇಗೆ ನಿಲ್ಲುತ್ತಾನೋ ನೋಡೋಣ’ ಎಂದು ಚಾಲೆಂಜ್ ಮಾಡಿದ್ದರು ದ್ವರಕೀಶ್.

ಇದನ್ನೂ ಓದಿ: ದ್ವಾರಕೀಶ್ ಕೊನೆಯ ಆಸೆ ಏನಾಗಿತ್ತು? ಅದನ್ನು ಈಡೇರಿಸಿದ ನಟಿ ಶ್ರುತಿ

ಇಷ್ಟಕ್ಕೆ ದ್ವಾರಕೀಶ್ ನೀಂತಿಲ್ಲ. ವಿಷ್ಣುವರ್ಧನ್ ಮಾಡಿದ ದ್ರೋಹದ ಕಥೆ ಇಟ್ಟುಕೊಂಡು ಸಿನಿಮಾ ಮಾಡಲು ದ್ವಾರಕೀಶ್ ಮುಂದಾಗಿದ್ದರು. ಅವರು ಪೋಸ್ಟರ್ ಕೂಡ ಬಿಡುಗಡೆ ಮಾಡಿದ್ದರು. ಆ ಬಳಿಕ ಇಬ್ಬರೂ ದೂರ ಆದರು. ‘ಆಪ್ತಮಿತ್ರ’ ಸಿನಿಮಾದಲ್ಲಿ ಇಬ್ಬರೂ ಒಟ್ಟಾಗಿ ನಟಿಸಿದರು. ಆದರೆ, ಇವರ ಗೆಳೆತನ ಒಡೆದ ಕನ್ನಡಿ ರೀತಿಯೇ ಇತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:50 am, Sat, 3 August 24

ದೀಪಾವಳಿ ಒಳಗೆ ಸಿದ್ದರಾಮಯ್ಯ ಸರ್ಕಾರ ಪತನ: ಸಿಟಿ ರವಿ
ದೀಪಾವಳಿ ಒಳಗೆ ಸಿದ್ದರಾಮಯ್ಯ ಸರ್ಕಾರ ಪತನ: ಸಿಟಿ ರವಿ
ಕೊನೆಯ ಓವರ್​ನಲ್ಲಿ 5 ಸಿಕ್ಸ್ ಸಿಡಿಸಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಮಯಾಂಕ್
ಕೊನೆಯ ಓವರ್​ನಲ್ಲಿ 5 ಸಿಕ್ಸ್ ಸಿಡಿಸಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಮಯಾಂಕ್
ಲಕ್ಷ್ಮಿಯ ಪುತ್ರ ಗಣಪನಿಗೆ ಭಾರೀ ಬಂದೋಬಸ್ತ್​: ಸಿಸಿಟಿವಿ ಕಣ್ಗಾವಲು, ವಿಡಿಯೋ
ಲಕ್ಷ್ಮಿಯ ಪುತ್ರ ಗಣಪನಿಗೆ ಭಾರೀ ಬಂದೋಬಸ್ತ್​: ಸಿಸಿಟಿವಿ ಕಣ್ಗಾವಲು, ವಿಡಿಯೋ
ಕೊಪ್ಪಳ: ಡ್ಯೂಟಿ ವೇಳೆ ಹಾಲು ಕದ್ದ ಹೆಡ್ ಕಾನ್ಸಟೇಬಲ್, ವಿಡಿಯೋ ವೈರಲ್
ಕೊಪ್ಪಳ: ಡ್ಯೂಟಿ ವೇಳೆ ಹಾಲು ಕದ್ದ ಹೆಡ್ ಕಾನ್ಸಟೇಬಲ್, ವಿಡಿಯೋ ವೈರಲ್
ಬೈಕ್​ಗೆ ಕಾರು ಡಿಕ್ಕಿ; 10 ಅಡಿ ಎತ್ತರಕ್ಕೆ ಹಾರಿ ಬಿದ್ದ ಸವಾರರು
ಬೈಕ್​ಗೆ ಕಾರು ಡಿಕ್ಕಿ; 10 ಅಡಿ ಎತ್ತರಕ್ಕೆ ಹಾರಿ ಬಿದ್ದ ಸವಾರರು
‘ಕಾಲಾಪತ್ಥರ್’ ಸಿನಿಮಾ ತಂಡದ ಕಡೆಯಿಂದ ಶಿವಣ್ಣಗೆ ಸಿಕ್ತು ಭರ್ಜರಿ ಗಿಫ್ಟ್
‘ಕಾಲಾಪತ್ಥರ್’ ಸಿನಿಮಾ ತಂಡದ ಕಡೆಯಿಂದ ಶಿವಣ್ಣಗೆ ಸಿಕ್ತು ಭರ್ಜರಿ ಗಿಫ್ಟ್
ಗಣೇಶ ವಿಸರ್ಜನೆ ಸಮಯ, ಹೇಗೆ ಮಾಡಬೇಕು? ವಿಡಿಯೋ ನೋಡಿ
ಗಣೇಶ ವಿಸರ್ಜನೆ ಸಮಯ, ಹೇಗೆ ಮಾಡಬೇಕು? ವಿಡಿಯೋ ನೋಡಿ
Nithya Bhavishya: ಭಾದ್ರಪದ ಮಾಸ ಎರಡನೇ ಸೋಮವಾರದ ದಿನಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಎರಡನೇ ಸೋಮವಾರದ ದಿನಭವಿಷ್ಯ ತಿಳಿಯಿರಿ
ಮೀನುಗಾರಿಕೆ ಏಳಿಗೆಗಾಗಿ ಬೋಟ್​ ಚಲಾಯಿಸಿಕೊಂಡು ಹೋಗಿ ಪೂಜೆ ಸಲ್ಲಿಸಿದ ಸಚಿವ
ಮೀನುಗಾರಿಕೆ ಏಳಿಗೆಗಾಗಿ ಬೋಟ್​ ಚಲಾಯಿಸಿಕೊಂಡು ಹೋಗಿ ಪೂಜೆ ಸಲ್ಲಿಸಿದ ಸಚಿವ
25 ವರ್ಷಗಳ ಹಿಂದೆ ‘ಉಪೇಂದ್ರ’ ಸಿನಿಮಾಗೆ ಉಪ್ಪಿ ಪಡೆದ ಸಂಭಾವನೆ ಎಷ್ಟು?
25 ವರ್ಷಗಳ ಹಿಂದೆ ‘ಉಪೇಂದ್ರ’ ಸಿನಿಮಾಗೆ ಉಪ್ಪಿ ಪಡೆದ ಸಂಭಾವನೆ ಎಷ್ಟು?