ಕೂದಲು ಕಸಿ ಮಾಡಿಸಿಕೊಂಡ ಬಾಲಿವುಡ್ ಸೆಲೆಬ್ರಿಟಿಗಳಿವರು..
2007ರ ಸಂದರ್ಭದಲ್ಲಿ ಬಾಲಿವುಡ್ ಸಲ್ಲು ತಲೆಯಲ್ಲಿ ಕೂದಲೇ ಇರಲಿಲ್ಲ ಎಂದರೆ ನಂಬ್ತೀರಾ? ಹೌದು. ಸಲ್ಲು 2007ರಲ್ಲಿ ಹೇರ್ಪ್ಲಾಂಟ್ ಮಾಡಿಸಿಕೊಂಡಿದ್ದರು. 2012ರಲ್ಲಿ ಮತ್ತೊಮ್ಮೆ ಅವರು ಕೂದಲು ನಾಟಿ ಮಾಡಿಸಿಕೊಂಡಿದ್ದರು. ಈ ರೀತಿ ಅನೇಕ ಹೀರೋಗಳು ಕೂದಲಿ ಕಸಿ ಮಾಡಿಸಿಕೊಂಡಿದ್ದಾರೆ.

ಯಾವುದೇ ಸೆಲೆಬ್ರಿಟಿಗಳಿಗೆ ಲುಕ್ ಅನ್ನೋದು ತುಂಬಾನೇ ಮುಖ್ಯವಾಗುತ್ತದೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಈ ಕಾರಣಕ್ಕೆ ಅನೇಕ ಸೆಲೆಬ್ರಿಟಿಗಳು ಲುಕ್ ಬಗ್ಗೆ ಸಾಕಷ್ಟು ಪ್ರಾಮುಖ್ಯತೆ ಕೊಡೋದು. ಪಬ್ಲಿಕ್ನಲ್ಲಿ ತಲೆಮೇಲೆ ಕೂದಲು ಇಲ್ಲದೆ ಕಾಣಿಸಿಕೊಂಡ ಅನೇಕ ಹೀರೋಗಳ ತಲೆಯಲ್ಲಿ ಈಗ ಭರ್ಜರಿ ಕೂದಲು ಇದೆ. ಇದು ನಿಜ. ಬಾಲಿವುಡ್ನ ಅನೇಕ ಸೆಲೆಬ್ರಿಟಿಗಳು ಈ ಮೊದಲು ಕೂದಲು ಕಳೆದುಕೊಂಡಿದ್ದರು. ಈಗ ಅವರ ತಲೆಯ ತುಂಬ ಕೂದಲು ಇದೆ. ಅದಕ್ಕೆ ಕಾರಣ ಕೂದಲು ಕಸಿ. ಆ ರೀತಿಯ ಸೆಲೆಬ್ರಿಟಿಗಳ ಬಗ್ಗೆ ಇಲ್ಲಿದೆ ವಿವರ.
ಸಲ್ಮಾನ್ ಖಾನ್
2007ರ ಸಂದರ್ಭದಲ್ಲಿ ಬಾಲಿವುಡ್ ಸಲ್ಲು ತಲೆಯಲ್ಲಿ ಕೂದಲೇ ಇರಲಿಲ್ಲ ಎಂದರೆ ನಂಬ್ತೀರಾ? ಹೌದು. ಸಲ್ಲು 2007ರಲ್ಲಿ ಹೇರ್ಪ್ಲಾಂಟ್ ಮಾಡಿಸಿಕೊಂಡಿದ್ದರು. 2012ರಲ್ಲಿ ಮತ್ತೊಮ್ಮೆ ಅವರು ಕೂದಲು ನಾಟಿ ಮಾಡಿಸಿಕೊಂಡಿದ್ದರು.
ಅಮಿತಾಭ್ ಬಚ್ಚನ್
ಅಮಿತಾಭ್ ಬಚ್ಚನ್ ಅವರಿಗೆ ಈಗ 83 ವರ್ಷ ವಯಸ್ಸು. ಆದಾಗ್ಯೂ ಅವರ ತಲೆಯಲ್ಲಿ ಇಷ್ಟೊಂದು ಕೂದಲು ಇರೋಕೆ ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಬಹುದು. 2000ನೇ ಇಸ್ವಿಯಲ್ಲಿ ಅವರ ತಲೆಯ ಕೂದಲು ಉದುರಿ ಹೋಗಿತ್ತು. ಆಗ ಅವರು ಹೇರ್ಪ್ಲಾಂಟ್ ಮಾಡಿಸಿಕೊಂಡರು.
ಅಕ್ಷಯ್ ಕುಮಾರ್
ಅಕ್ಷಯ್ ಕುಮಾರ್ ಅವರು ಹೇರ್ ಟ್ರಾನ್ಸ್ಪ್ಲಾಂಟ್ ಸರ್ಜರಿ ಮಾಡಿಸಿಕೊಂಡಿದ್ದಾರೆ. ಅವರಿಗೆ ಈ ಮೊದಲು ಕೂದಲು ಉದುರಿ ಹೋಗಿತ್ತು. ಅವರಿಗೆ ಈಗ ತಲೆತುಂಬ ಕೂದಲು ಇದೆ.
ಅಕ್ಷಯ್ ಖನ್ನಾ
ಅಕ್ಷಯ್ ಖನ್ನಾ ಅವರು ಇತ್ತೀಚೆಗೆ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಅವರ ತಲೆಯ ಮುಂಭಾಗದಲ್ಲಿ ಕೂದಲು ಉದುರಿ ಹೋಗಿತ್ತು. ಅವರು ಹೇರ್ ಟ್ರಾನ್ಸ್ಪ್ಲಾಂಟ್ ಮಾಡಿಸಿಕೊಂಡರು.
ಸನ್ನಿ ಡಿಯೋಲ್
‘ಗದರ್ 2’ ನಟ ಸನ್ನಿ ಡಿಯೋಲ್ ಒಮ್ಮೆ ಬಾಲ್ಡ್ ಆಗಿ ಕಾಣಿಸಿಕೊಂಡಿದ್ದರು. ಈಗ ಅವರು ಟೋಪನ್ ಹಾಕುತ್ತಾರೆ ಎನ್ನುವ ಮಾತು ಇದೆ.
ಸಂಜಯ್ ದತ್
ಸಂಜಯ್ ದತ್ ಅವರು ಕ್ಯಾನ್ಸತ್ ಗೆದ್ದು ಬಂದವರು. ಅವರು ಜೈಲಿನಲ್ಲಿ ಇದ್ದ ಕಾರಣ ಕೂದಲಿನ ಕಾಳಜಿ ಮಾಡಲು ಸಾಧ್ಯ ಆಗಿರಲಿಲ್ಲ. 2013ರಲ್ಲಿ ಅವರು ಅಮೆರಿಕ ತೆರಳಿ ಕೂದಲಿನ ನಾಟಿ ಮಾಡಿಸಿಕೊಂಡಿದ್ದರು. ಈಗಲೂ ಅವರ ತಲೆಯ ತುಂಬ ಕೂದಲು ಇದೆ.
ಇದನ್ನೂ ಓದಿ: ಸಂಜಯ್ ದತ್, ತಾಯಿಯ ಬಗ್ಗೆ ಹಂಚಿಕೊಂಡ ಭಯಾನಕ ಕತೆ
ಗೋವಿಂದ
ನಟ ಗೋವಿಂದ ಅವರು ಚಿತ್ರರಂಗದಲ್ಲಿ ಅಷ್ಟಾಗಿ ಆ್ಯಕ್ಟೀವ್ ಆಗಿಲ್ಲ. ಅವರಿಗೆ ಕೂದಲು ಉದುರಿ ಹೋದಾಗ ಗೆಳೆಯ ಸಲ್ಮಾನ್ ಖಾನ್ ಅವರೇ ಹೇರ್ಪ್ಲಾಂಟ್ ಮಾಡಿಸಿಕೊಳ್ಳಲು ಸೂಚನೆ ಕೊಟ್ಟಿದ್ದರು.
ಮನೋಜ್ ಬಾಜ್ಪಾಯೀ
‘ಗ್ಯಾಂಗ್ ಆಫ್ ವಸೇಪುರ್’ ಸಂದರ್ಭದಲ್ಲಿ ಮನೋಜ್ ಬಾಜ್ಪಾಯಿ ಅವರ ತಲೆಯ ಮುಂಭಾಗದಲ್ಲಿರುವ ಕೂದಲು ಉದುರಿ ಹೋಗಿತ್ತು. ಈಗ ಅವರ ತಲೆಯಲ್ಲಿ ಈಗ ಕೂದಲು ಬಂದಿದೆ. ಇದಕ್ಕೆ ಕಾರಣ ಆಗಿರೋದು ಹೇರ್ಪ್ಲಾಂಟ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.