‘ಬಿಗ್ ಬಾಸ್ ಒಟಿಟಿ’ ವಿನ್ನರ್ ಘೋಷಣೆ; ಇಡೀ ಮನೆಗೆ ವಿಲನ್ ಆಗಿದ್ದ ನಟಿಗೆ ಕಪ್
ಅರ್ಮಾನ್ ಮಲ್ಲಿಕ್, ಪಾಯಲ್ ಮಲ್ಲಿಕ್, ರಣವೀರ್ ಶೋರೆ ಸೇರಿ ಅನೇಕರು ‘ಬಿಗ್ ಬಾಸ್’ ರೇಸ್ನಲ್ಲಿ ಇದ್ದರು. ಸನಾ ಅವರು ವಿನ್ನರ್ ಎಂದು ಅನಿಲ್ ಕಪೂರ್ ಘೋಷಣೆ ಮಾಡುತ್ತಿದ್ದಂತೆ ಅವರ ಫ್ಯಾನ್ಸ್ ಅಭಿನಂದನೆ ತಿಳಿಸಿದರು. ಅನಿಲ್ ಕಪೂರ್ ಅವರು ಈ ಬಾರಿಯ ಬಿಗ್ ಬಾಸ್ ಶೋ ನಡೆಸಿಕೊಟ್ಟಿದ್ದಾರೆ.
‘ಹಿಂದಿ ಬಿಗ್ ಬಾಸ್ ಒಟಿಟಿ ಸೀಸನ್ 3’ ಫಿನಾಲೆ ಪೂರ್ಣಗೊಂಡಿದೆ. ಆಗಸ್ಟ್ 2ರ ರಾತ್ರಿ ಗ್ರ್ಯಾಂಡ್ ಫಿನಾಲೆ ನಡೆದಿದೆ. ಸನಾ ಮಕ್ಬುಲ್ ಹಾಗೂ ರ‍್ಯಾಪರ್ ನವೇದ್ ಶೇಖ್ ಮಧ್ಯೆ ಕೊನೆಯ ಹಂತದ ಸ್ಪರ್ಧೆ ಇತ್ತು. ಅನಿಲ್ ಕಪೂರ್ ಅವರು ಕೊನೆಯಲ್ಲಿ ಸನಾ ಮಕ್ಬುಲ್ ವಿನ್ನರ್ ಎಂದು ಘೋಷಣೆ ಮಾಡಿದರು. ನಟಿ ಟ್ರೋಫಿ ಹಾಗೂ 25 ಲಕ್ಷ ರೂಪಾಯಿ ಬಹುಮಾನ ಮೊತ್ತದ ಜೊತೆ ಮನೆಗೆ ತೆರಳಿದ್ದಾರೆ.
ಅರ್ಮಾನ್ ಮಲ್ಲಿಕ್, ಪಾಯಲ್ ಮಲ್ಲಿಕ್, ರಣವೀರ್ ಶೋರೆ ಸೇರಿ ಅನೇಕರು ‘ಬಿಗ್ ಬಾಸ್’ ರೇಸ್ನಲ್ಲಿ ಇದ್ದರು. ಅನಿಲ್ ಕಪೂರ್ ಅವರು ಈ ಬಾರಿಯ ಬಿಗ್ ಬಾಸ್ ಶೋ ನಡೆಸಿಕೊಟ್ಟಿದ್ದಾರೆ. ಸನಾ ಅವರು ವಿನ್ನರ್ ಎಂದು ಅನಿಲ್ ಕಪೂರ್ ಘೋಷಣೆ ಮಾಡುತ್ತಿದ್ದಂತೆ ಅವರ ಫ್ಯಾನ್ಸ್ ಅಭಿನಂದನೆ ತಿಳಿಸಿದರು.
ಸನಾ ಅವರ ವಿರುದ್ಧ ಈ ಮೊದಲಿನಿಂದಲೂ ಸಾಕಷ್ಟು ಟೀಕೆಗಳು ಬರುತ್ತಿದ್ದವು. ಅವರು ಸ್ವಾರ್ಥಿ, ಅವರಿಗೆ ಅಹಂ ಎಂದು ಅನೇಕರು ಆರೋಪಿಸುತ್ತಾ ಬಂದಿದ್ದರು. ಅವರು ಪ್ರತಿ ವಾರವೂ ನಾಮಿನೇಟ್ ಆಗುತ್ತಾ ಬಂದಿದ್ದರು. ಅವರು ಬಿಗ್ ಬಾಸ್ ಮನೆಯ ವಿಲನ್ ಆಗಿ ಕಾಣಿಸಿಕೊಂಡಿದ್ದರು. ಈಗ ಬಿಗ್ ಬಾಸ್ ಕಪ್ ಗೆಲ್ಲುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.
#SanaMakbul first interview after winning #BiggBossOTT3#SanaMakbul – Ranvir ji ko Maine hamesha ji karke bola hai but unko bat karne ki tamiz nahi hai”
I don’t know why pura ghar mere khilaf tha don’t know why they didn’t like me but mere 4dost is imp,pic.twitter.com/tGQOyaABkb
— SatyavadiLadki (@SatyavadiLadki) August 2, 2024
ರಣವೀರ್ ಶೋರೆ ಅವರ ವೈಯಕ್ತಿ ಜೀವನದ ಬಗ್ಗೆ ಕಮೆಂಟ್ ಮಾಡಿ ವಿವಾದಸೃಷ್ಟಿ ಮಾಡಿದ್ದರು. ‘ನಿನ್ನ ಮಗ ಎಷ್ಟು ದೊಡ್ಡವನು? 13 ವರ್ಷ ಅಲ್ಲವೇ? ಅಮೆರಿಕದಲ್ಲಿ ಶಿಕ್ಷಣ ಪಡೆಯುತ್ತಿದ್ದಾನೆ. 25 ಲಕ್ಷ ಗೆದ್ದು ಆ ಹಣವನ್ನು ಮಗನ ಶಿಕ್ಷಣಕ್ಕೆ ಬಳಸಬೇಕು ಎನ್ನುವ ಆಲೋಚನೆಯಲ್ಲಿ ಇದ್ದೀಯಾ ಅಲ್ಲವೇ? ಆದರೆ, ಈ ಹಣ ಸಾಕಾಗುವುದಿಲ್ಲವಲ್ಲ’ ಎಂದು ಸನಾ ರಣವೀರ್ಗೆ ಹೇಳಿದ್ದರು.
ಇದನ್ನೂ ಓದಿ: ‘ಕೋಟಿ’ ಸಿನಿಮಾ ಮೊದಲ ಹಾಡು ಬಿಡುಗಡೆ, ದಿಗ್ಗಜರ ಸಮಾಗಮ
ಚಂದ್ರಿಕಾ ದೀಕ್ಷಿತ್, ಸಾಯಿ ಕೇತನ್ ರಾವ್, ಅರ್ಮಾನ್ ಮಲಿಕ್, ಕೃತಿಕಾ ಮಲಿಕ್, ಪಾಯಲ್ ಮಲಿಕ್., ದೀಪಾ ಚೌರಾಸಿಯಾ, ಸನಾ ಸುಲ್ತಾನ್. ವಿಶಾಲ್ ಪಾಂಡೆ, ಶಿವಾನಿ ಕುಮಾರಿ ಸೇರಿ ಅನೇಕರು ಈ ಸೀಸನ್ನಲ್ಲಿ ಇದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.