AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಜಯ್ ದತ್, ತಾಯಿಯ ಬಗ್ಗೆ ಹಂಚಿಕೊಂಡ ಭಯಾನಕ ಕತೆ

ಸಂಜಯ್ ದತ್ ಬಾಲಿವುಡ್​ನ ಬ್ಯಾಡ್​ ಬಾಯ್. ಅಪರಾಧಿಯಾಗಿ ಜೈಲು ಶಿಕ್ಷೆ ಸಹ ಅನುಭವಿಸಿ ಬಂದಿದ್ದಾರೆ. ಆದರೆ ಅವರಿಗೆ ತಾಯಿ ನರ್ಗಿಸ್ ಮೇಲೆ ವಿಪರೀತಿ ಪ್ರೀತಿ ಇತ್ತು. ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಬಳಿ ತಾಯಿಯ ಬಗ್ಗೆ ಭಯಾನಕ ಕತೆಯೊಂದನ್ನು ವರ್ಮಾ ಹಂಚಿಕೊಂಡಿದ್ದರು.

ಸಂಜಯ್ ದತ್, ತಾಯಿಯ ಬಗ್ಗೆ ಹಂಚಿಕೊಂಡ ಭಯಾನಕ ಕತೆ
Follow us
ಮಂಜುನಾಥ ಸಿ.
|

Updated on: Jul 31, 2024 | 4:16 PM

ಬಾಲಿವುಡ್​ನ ಸ್ಟಾರ್ ಸಂಜಯ್ ದತ್ ಈಗ ದಕ್ಷಿಣ ಭಾರತದವರಿಗೂ ಬಹಳ ಪರಿಚಯ. ಕನ್ನಡದ ‘ಕೆಜಿಎಫ್’ ಸಿನಿಮಾದ ಅಧೀರ ಪಾತ್ರ ಸಂಜಯ್ ದತ್​ಗೆ ಮರುಜನ್ಮವನ್ನೇ ನೀಡಿದೆ. ಅದಾದ ಬಳಿಕ ಸಾಲು-ಸಾಲು ದಕ್ಷಿಣ ಭಾರತದ ಸಿನಿಮಾಗಳಲ್ಲಿ ಸಂಜಯ್ ನಟಿಸಿದರು. ಈಗ ಪ್ರೇಮ್ ನಿರ್ದೇಶಿಸುತ್ತಿರುವ ‘ಕೆಡಿ’ ಕನ್ನಡ ಸಿನಿಮಾದಲ್ಲಿಯೂ ಸಂಜಯ್ ನಟಿಸುತ್ತಿದ್ದಾರೆ. ನಟನಾಗಿರುವ ಹೊರತಾಗಿ ಸಂಜಯ್ ದತ್ ತಮ್ಮ ವಿಕ್ಷಿಪ್ತ ವ್ಯಕ್ತಿತ್ವದಿಂದಲೂ ಜನಪ್ರಿಯರು. ಎಕೆ 47 ಇರಿಸಿಕೊಂಡಿದ್ದ ಪ್ರಕರಣದಲ್ಲಿ ಜೈಲು ಸೇರಿ ಶಿಕ್ಷೆ ಅನುಭವಿಸಿದ್ದ ಸಂಜಯ್, ಒಂದು ಸಮಯದಲ್ಲಿ ಬಾಲಿವುಡ್​ನ ಅತ್ಯಂತ ಬಾಡ್​ಬಾಯ್ ಆಗಿದ್ದವರು. ಅವರು ತಮ್ಮ ತಾಯಿ, ಖ್ಯಾತ ನಟಿ ನರ್ಗಿಸ್ ಬಗ್ಗೆ ರಾಮ್ ಗೋಪಾಲ್ ವರ್ಮಾ ಬಳಿ ಹಂಚಿಕೊಂಡಿದ್ದ ಕತೆಯನ್ನು ವರ್ಮಾ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಸಂಜಯ್ ದತ್ ಎಷ್ಟೇ ಕೆಟ್ಟ ವ್ಯಕ್ತಿತ್ವದವರಾಗಿದ್ದರೂ ಸಹ ಅವರಿಗೆ ತಮ್ಮ ತಾಯಿ ನರ್ಗಿಸ್​ ಮೇಲಿ ಇದ್ದ ಪ್ರೀತಿಗೆ ಸಾಟಿ ಇರಲಿಲ್ಲ. ತಮ್ಮ ತಾಯಿ ನರ್ಗಿಸ್ ಹಾಗೂ ತಂದೆ ಸುನಿಲ್ ದತ್ ಅವರನ್ನು ಸಂಜಯ್ ಬಹಳ ಪ್ರೀತಿಸುತ್ತಿದ್ದರು. ಸಂಜಯ್ ದತ್​ರ ಜೀವನ ಆಧರಿಸಿದ ‘ಸಂಜು’ ಸಿನಿಮಾದಲ್ಲಿಯೂ ಇದನ್ನು ತೋರಿಸಲಾಗಿದೆ. ಆದರೆ ಸಂಜಯ್ ದತ್ ತಾಯಿ ನರ್ಗಸಿ ಬಹಳ ಬೇಗನೆ ಕ್ಯಾನ್ಸರ್ ರೋಗಕ್ಕೆ ಗುರಿಯಾಗಿ ನಿಧನ ಹೊಂದಿದರು. ಇದು ಸಂಜಯ್ ದತ್ ಮೇಲೆ ಅತೀವ ಪರಿಣಾಮ ಬೀರಿತ್ತು.

ತಾಯಿಯನ್ನು ಅತಿಯಾಗಿ ಹಚ್ಚಿಕೊಂಡಿದ್ದ ಸಂಜು ಬಾಬಾಗೆ ಇದರಿಂದ ಹೊರಬರಲು ತುಸು ಸಮಯ ಬೇಕಾಯ್ತು. ತಾಯಿಯ ನಿಧನದ ಎರಡು ವರ್ಷಗಳ ಬಳಿಕ ಸಂಜಯ್ ದತ್ ಒಮ್ಮೆ ಶೂಟಿಂಗ್ ನಿಂದ ತುಸು ತಡವಾಗಿ ಮನೆಗೆ ಬಂದರಂತೆ. ಮನೆಗೆ ಬಂದವರೆ ತಮ್ಮ ರೂಂಗೆ ಹೋಗಿ ಬಟ್ಟೆ ಬದಲಿಸಿದರಂತೆ. ಅದಾದ ಬಳಿಕ ಹಾಗೆಯೇ ಕಿಟಕಿಯಾಚೆ ನೋಡಿದರೆ ಅವರ ತಾಯಿ ನರ್ಗಿಸ್ ನಿಂತಿದ್ದರಂತೆ! ಸಂಜಯ್ ದತ್​ಗೆ ಆಗ ಖುಷಿಯಾಗಲಿಲ್ಲವಂತೆ ಬದಲಿಗೆ ಅತೀವ ಭಯವಾಯ್ತಂತೆ. ಅದೆಷ್ಟು ಭಯವಾಯ್ತೆಂದರೆ ಅವರ ಇಡೀ ದೇಹ ತಣ್ಣಗೆ ಆಗಿಬಿಟ್ಟಿತಂತೆ.

ಇದನ್ನೂ ಓದಿ:ಬರ್ತ್​ಡೇ ಸಂಭ್ರಮಕ್ಕಾಗಿ ಬಹುಕೋಟಿ ಬೆಲೆಯ ಐಷಾರಾಮಿ ಕಾರು ಖರೀದಿಸಿದ ನಟ ಸಂಜಯ್ ದತ್

ಈ ಘಟನೆಯನ್ನು ಸಂದರ್ಶನವೊಂದರಲ್ಲಿ ನೆನಪು ಮಾಡಿಕೊಂಡಿರುವ ವರ್ಮಾ, ‘ಸಂಜಯ್ ನಿಜವಾಗಿಯೂ ತನ್ನ ತಾಯಿಯನ್ನು ನೋಡಿದರೋ ಅಥವಾ ಅದು ಅವರ ಭ್ರಮೆಯೋ ತಿಳಿಯದು. ಆದರೆ ಇಲ್ಲಿ ಗಮನಿಸ ಬೇಕಾದ ಅಂಶವೆಂದರೆ ಸಂಜಯ್​, ತಾವು ಅತಿಯಾಗಿ ಪ್ರೀತಿಸುವ ತಾಯಿಯನ್ನು ಕಂಡಾಗ ಅವರಿಗೆ ಖುಷಿ ಆಗಲಿಲ್ಲ ಬದಲಿಗೆ ಅತೀವ ಭಯವಾಯ್ತು ಏಕೆಂದರೆ ಅವರು ತೀರಿ ಹೋಗಿದ್ದರು. ಮನುಷ್ಯ ಇನ್ನೊಬ್ಬ ಮನುಷ್ಯನ ಮೇಲೆ ಕಟ್ಟಿಕೊಳ್ಳುವ ಪ್ರೀತಿಯ ಗೋಪುರ ಎಷ್ಟು ಪೊಳ್ಳು ಎಂಬುದಕ್ಕೆ ಇದು ಉದಾಹರಣೆ. ಸಂಜಯ್ ತನ್ನ ತಾಯಿಯನ್ನು ಅಷ್ಟು ಪ್ರೀತಿಸಿದ ಮೇಲೆ ತಾಯಿ ಯಾವುದೇ ರೂಪದಲ್ಲಿ ಬಂದಿದ್ದರೂ ಆಕೆಯನ್ನು ಅಪ್ಪಿಕೊಳ್ಳಬೇಕಿತ್ತು, ಖುಷಿ ಪಡಬೇಕಿತ್ತು ತಾನೆ? ಆದರೆ ಏಕೆ ಹಾಗೆ ಮಾಡಲಿಲ್ಲ’ ಎಂದು ವರ್ಮಾ ಪ್ರಶ್ನೆ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ