AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಜಕ್ಕೂ ಐಶ್ವರ್ಯಾ ರೈ ವಿರುದ್ಧ ದ್ವೇಷ ಸಾಧಿಸಿದ್ದರಾ ಸಲ್ಲು? ತಮ್ಮ ಕೊಟ್ಟಿದ್ದ ಸ್ಪಷ್ಟನೆಯಲ್ಲಿ ಏನಿತ್ತು?

ಐಶ್ವರ್ಯಾ ರೈ ಮತ್ತು ಸಲ್ಮಾನ್ ಖಾನ್ ಪ್ರೇಮಕತೆ ತಿಳಿಯದ ಬಾಲಿವುಡ್ ಸಿನಿಮಾ ಪ್ರೇಮಿಯಿಲ್ಲ. ಆದರೆ ಸಲ್ಮಾನ್ ಹಾಗೂ ಐಶ್ವರ್ಯಾ ನಡುವೆ ಬಹಳ ದೊಡ್ಡ ಜಗಳವೇ ಆಗಿತ್ತು. ಅಷ್ಟಕ್ಕೂ ಸಲ್ಮಾನ್, ನಿಜಕ್ಕೂ ಐಶ್ವರ್ಯಾರನ್ನು ದ್ವೇಷಿಸುತ್ತಿದ್ದರಾ?

ನಿಜಕ್ಕೂ ಐಶ್ವರ್ಯಾ ರೈ ವಿರುದ್ಧ ದ್ವೇಷ ಸಾಧಿಸಿದ್ದರಾ ಸಲ್ಲು? ತಮ್ಮ ಕೊಟ್ಟಿದ್ದ ಸ್ಪಷ್ಟನೆಯಲ್ಲಿ ಏನಿತ್ತು?
 ಶ್ರೀಲಕ್ಷ್ಮೀ ಎಚ್
| Edited By: |

Updated on:Jul 30, 2024 | 9:59 PM

Share

ನಟ ಸಲ್ಮಾನ್ ಖಾನ್ ಮತ್ತು ನಟಿ ಐಶ್ವರ್ಯಾ ರೈ 90ರ ದಶಕದಲ್ಲಿ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು. ಅಭಿಮಾನಿಗಳು ಕೂಡ ಸಲ್ಮಾನ್-ಐಶ್ವರ್ಯ ಜೋಡಿಗೆ ಅಪಾರ ಪ್ರೀತಿ ಕೊಟ್ಟಿದ್ದಾರೆ. ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ‘ಹಮ್ ದಿಲ್ ದೇ ಚುಕೆ’ ಚಿತ್ರದ ಮೂಲಕ ಸಲ್ಮಾನ್-ಐಶ್ವರ್ಯಾ ಸಂಬಂಧ ಆರಂಭವಾಯಿತು. ಐಶ್ವರ್ಯಾ-ಸಲ್ಮಾನ್ ಸುಮಾರು 6 ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ್ದರು. ಇಬ್ಬರ ಮದುವೆಯ ಮಾತುಕತೆಯೂ ವೇಗ ಪಡೆದುಕೊಂಡಿತ್ತು. ಆದರೆ ಸಲ್ಮಾನ್ ಮತ್ತು ಐಶ್ವರ್ಯಾ ನಡುವಿನ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ. ಅವರು 2001ರಲ್ಲಿ ಬೇರ್ಪಟ್ಟರು. ಸಲ್ಮಾನ್-ಐಶ್ವರ್ಯ ಬ್ರೇಕಪ್ ಆದ ನಂತರ ಅಭಿಮಾನಿಗಳು ಕೂಡ ಶಾಕ್ ಆಗಿದ್ದು ಅವರ ಸಂಬಂಧದ ಬಗ್ಗೆ ಹಲವು ಚರ್ಚೆಗಳು ಶುರುವಾಗಿದ್ದವು.

ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ರೈ ಬ್ರೇಕ್ ಅಪ್ ವದಂತಿಗಳು ಅಭಿಮಾನಿಗಳಲ್ಲಿ ಹರಡಲು ಪ್ರಾರಂಭಿಸಿದಾಗ, ಸ್ವತಃ ಐಶ್ವರ್ಯಾ ರೈ ಈ ಘಟನೆಗಳ ಬಗ್ಗೆ ಅಭಿಮಾನಿಗಳಿಗೆ ತಿಳಿಸಿದ್ದರು. ಹಳೆಯ ಸಂದರ್ಶನವೊಂದರಲ್ಲಿ, ಸಲ್ಮಾನ್ ಖಾನ್ ಜೊತೆಗಿನ ಸಂಬಂಧದ ಬಗ್ಗೆ ಐಶ್ವರ್ಯಾ ರೈ ದೊಡ್ಡ ಹೇಳಿಕೆನೀಡಿ, ಹಲವು ಗಂಭೀರ ಆರೋಪಗಳನ್ನು ಮಾಡಿದ್ದರು.

‘ಕುಡಿತದ ಚಟದಿಂದ ಸಲ್ಮಾನ್ ಖಾನ್ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದಾರೆ’ ಎಂದು ಐಶ್ವರ್ಯಾ ರೈ ಹೇಳಿದ್ದರು. ‘ಸಲ್ಮಾನ್ ಖಾನ್ ಅವರಿಂದ ಮೌಖಿಕ, ದೈಹಿಕ ಮತ್ತು ಭಾವನಾತ್ಮಕ ನಿಂದನೆ, ವಂಚನೆ ಮತ್ತು ಅವಮಾನವನ್ನು ಎದುರಿಸಿದೆ’ ಎಂದು ಐಶ್ವರ್ಯಾ ಹೇಳಿದ್ದರು.

ಇದನ್ನೂ ಓದಿ:ಸಲ್ಮಾನ್ ಖಾನ್​ನ ಭೇಟಿಯಾದ್ರಾ ಯಶ್? ವೈರಲ್ ಫೋಟೋದ ಹಿಂದಿನ ಅಸಲಿಯತ್ತಿದು..

ಸಲ್ಮಾನ್ ಖಾನ್ ಬಗ್ಗೆ ಐಶ್ವರ್ಯಾ ರೈ ನೀಡಿದ ಹೇಳಿಕೆ ಸಲ್ಲು ಸಹೋದರ ಸೋಹೈಲ್ ಖಾನ್ ಕೆಂಗಣ್ಣಿಗೆ ಗುರಿಯಾಗಿತ್ತು. ‘ಐಶ್ವರ್ಯಾ ಅವರು ಸಲ್ಮಾನ್ ಜೊತೆಗಿನ ಸಂಬಂಧವನ್ನು ಎಂದಿಗೂ ಒಪ್ಪಿಕೊಳ್ಳಲಿಲ್ಲ. ಐಶ್ವರ್ಯಾ ಯಾವಾಗಲೂ ಮನೆಗೆ ಬರುತ್ತಿದ್ದರು. ನನ್ನ ಕುಟುಂಬದೊಂದಿಗೆ ಸಂತೋಷದಿಂದ ಇರುತ್ತಿದ್ದರು. ಆದರೆ ಆಕೆ ಸಲ್ಮಾನ್ ಜೊತೆಗಿನ ಸಂಬಂಧವನ್ನು ಒಪ್ಪಿಕೊಳ್ಳಲೇ ಇಲ್ಲ’ ಎಂದಿದ್ದರು.

‘ಈಗ ಐಶ್ವರ್ಯಾ ಎಲ್ಲರ ಮುಂದೆ ಅಳುತ್ತಾರೆ. ಸಲ್ಮಾನ್ ಜೊತೆ ಇದ್ದಾಗ ಯಾವಾಗಲೂ ನಮ್ಮ ಮನೆಗೆ ಬರುತ್ತಿದ್ದರು. ಕುಟುಂಬದ ಸದಸ್ಯರಂತೆ ಇರುತ್ತಿದ್ದರು. ಆದರೆ ಸಲ್ಮಾನ್ ಜೊತೆಗಿನ ಸಂಬಂಧವನ್ನು ಒಪ್ಪಿಕೊಳ್ಳಲೇ ಇಲ್ಲ. ಹೀಗಾಗಿ ಸಲ್ಮಾನ್‌ಗೆ ಅಭದ್ರತೆ ಕಾಡುತ್ತಿತ್ತು. ಅವರು ಐಶ್ವರ್ಯಾ ಅವರ ಮನಸ್ಸಿನಲ್ಲಿ ನಿಖರವಾಗಿ ಏನೆಂದು ತಿಳಿಯಲು ಬಯಸಿದ್ದರು’ ಎಂದಿದ್ದರು ಸೋಹೈಲ್ ಖಾನ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:52 pm, Tue, 30 July 24

ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ