ಶಾರುಖ್ ಕಣ್ಣಿಗೆ ಹಾನಿ? ಅಮೆರಿಕದಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ ಕಿಂಗ್ ಖಾನ್
ಶಾರುಖ್ ಖಾನ್ ಅವರು 2023ರಲ್ಲಿ ಹ್ಯಾಟ್ರಿಕ್ ಹಿಟ್ ಕೊಟ್ಟರು.ಸದ್ಯ ಅವರು ‘ಕಿಂಗ್’ ಹೆಸರಿನ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಮಧ್ಯೆ ಅವರ ಕಣ್ಣಿಗೆ ಹಾನಿ ಆಗಿದೆ ಎಂದು ವರದಿ ಆಗಿದೆ. ಈ ಕಾರಣಕ್ಕೆ ಅವರು ಅಮೆರಿಕದಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ.
ಶಾರುಖ್ ಖಾನ್ ಅವರು ಮೇ 21ರಂದು ಅನಾರೋಗ್ಯ ಸಮಸ್ಯೆಯಿಂದ ಬಳಲಿದ್ದರು. ಐಪಿಎಲ್ ವೀಕ್ಷಣೆ ಮಾಡುತ್ತಿದ್ದ ಅವರಿಗೆ ಹೀಟ್ ಸ್ಟ್ರೋಕ್ ಆಗಿತ್ತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ನಂತರ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದರು. ಕೆಕೆಆರ್ ತಂಡ ಕಪ್ ಎತ್ತುವುದನ್ನು ಕೂಡ ಅವರು ವೀಕ್ಷಿಸಿದರು. ಈಗ ಅವರು ಮತ್ತೊಮ್ಮೆ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಅದೂ ದೂರದ ಅಮೆರಿಕದಲ್ಲಿ. ಅಷ್ಟಕ್ಕೂ ಅವರಿಗೆ ಆಗಿದ್ದೇನು ಎನ್ನುವ ಬಗ್ಗೆ ಇಲ್ಲಿದೆ ವಿವರ.
ಶಾರುಖ್ ಖಾನ್ ಅವರಿಗೆ ಕಣ್ಣಿನ ಸಮಸ್ಯೆ ಉಂಟಾಗಿದೆ. ಈ ಕಾರಣಕ್ಕೆ ಅವರು ಮಂಗಳವಾರ (ಜುಲೈ 30) ಅವರು ಅಮೆರಿಕಕ್ಕೆ ತೆರಳಿದ್ದರು. ಅಲ್ಲಿ ಅವರು ಚಿಕಿತ್ಸೆ ಪಡೆದಿದ್ದಾರೆ. ಆದರೆ, ಯೋಜನೆ ಪ್ರಕಾರ ಟ್ರೀಟ್ಮೆಂಟ್ ನಡೆದಿಲ್ಲ. ಹೀಗಾಗಿ, ಶಾರುಖ್ ಅವರು ಅಮೆರಿಕಕ್ಕೆ ಹಾರುತ್ತಿದ್ದಾರೆ. ಅಲ್ಲಿರೋ ಕಣ್ಣಿನ ಸ್ಪೆಷಲಿಸ್ಟ್ಗಳ ಬಳಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎನ್ನಲಾಗಿದೆ. ಮುಂಬೈನಲ್ಲಿ ನಿಜಕ್ಕೂ ಶಾರುಖ್ಗೆ ಆಗಿದ್ದೇನು ಎನ್ನುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಅವರ ಕಣ್ಣಿಗೆ ಹಾನಿ ಆಗಿದೆ ಎನ್ನುವ ವರದಿಗಳೂ ಇವೆ.
ಕೋಲ್ಕತ್ತ ನೈಟ್ ರೈಡರ್ಸ್ನ ಸಹ ಮಾಲೀಕರಾಗಿದ್ದಾರೆ ಶಾರುಖ್. ಅಹ್ಮಾದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಅವರಿಗೆ ಹೀಟ್ ಸ್ಟ್ರೋಕ್ ಉಂಟಾಗಿತ್ತು. ಇದರಿಂದ ಅವರು ಚೇತರಿಕೆ ಕಂಡ ಬೆನ್ನಲ್ಲೇ ಕಣ್ಣಿನ ಸಮಸ್ಯೆ ಎದುರಿಸಿದ್ದಾರೆ. ಅವರು ಇಂದೇ (ಜುಲೈ 30) ಅಮೆರಿಕ ತೆರಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಶಾರುಖ್ ಖಾನ್ ಮಗಳು ಸುಹಾನಾ ತಲೆ ಕೂದಲಿಗೆ ಧರಿಸಿರುವ ಕ್ಲಿಪ್ಪಿನ ಬೆಲೆ ಎಷ್ಟು ಸಾವಿರ ಗೊತ್ತೆ?
ಶಾರುಖ್ ಖಾನ್ ಅವರು 2023ರಲ್ಲಿ ಹ್ಯಾಟ್ರಿಕ್ ಹಿಟ್ ಕೊಟ್ಟರು. ಶಾರುಖ್ ಖಾನ್ ನಟನೆಯ ‘ಜವಾನ್’ ಹಾಗೂ ‘ಪಠಾಣ್’ ಸಾವಿರ ಕೋಟಿ ರೂಪಾಯಿ ಕ್ಲಬ್ ಸೇರಿದರೆ, ‘ಡಂಕಿ’ 400+ ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು. ಇದರಿಂದ ಶಾರುಖ್ ಖುಷಿಯಾಗಿದ್ದಾರೆ. ಸದ್ಯ ಅವರು ‘ಕಿಂಗ್’ ಹೆಸರಿನ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದಲ್ಲಿ ಅವರ ಮಗಳು ಸುಹಾನಾ ಕೂಡ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ. ಈ ಚಿತ್ರದ ಕೆಲಸಗಳು ಭರದಿಂದ ಸಾಗುತ್ತಿವೆ. ಶೀಘ್ರವೇ ಈ ಚಿತ್ರದ ಬಗ್ಗೆ ಘೋಷಣೆ ಆಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ. ಈ ಸಿನಿಮಾದಲ್ಲಿ ಭರ್ಜರಿ ಆ್ಯಕ್ಷನ್ ಇರಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.