ಪ್ರತಿ ವರ್ಷ ಕೋಟ್ಯಂತರ ರೂಪಾಯಿ ದಾನ ಮಾಡೋ ಸೋನು ಸೂದ್ ಆಸ್ತಿ ಎಷ್ಟು?

ಸೋನು ಸೂದ್ ಅವರು ಮುಂಬೈನಲ್ಲಿ ದೊಡ್ಡ ಮನೆ ಹೊಂದಿದ್ದಾರೆ. ಸ್ವಂತ ರೆಸ್ಟೋರೆಂಟ್ ಕೂಡ ಇದೆ.  ಮುಂಬೈನಲ್ಲಿ ಅವರು ಲಕ್ಷುರಿ ಅಪಾರ್ಟ್​ಮೆಂಟ್ ಹೊಂದಿದ್ದಾರೆ. ಕೊವಿಡ್ ಸಂದರ್ಭದಲ್ಲಿ ಅವರು ಅನೇಕರಿಗೆ ಆಸರೆ ಆದರು. ತಮ್ಮ ಚ್ಯಾರಿಟಿ ಮೂಲಕ ಸೋನು ಸೂದ್ ಅವರು ಅನೇಕರ ಸಹಾಯಕ್ಕೆ ನಿಂತರು.

ಪ್ರತಿ ವರ್ಷ ಕೋಟ್ಯಂತರ ರೂಪಾಯಿ ದಾನ ಮಾಡೋ ಸೋನು ಸೂದ್ ಆಸ್ತಿ ಎಷ್ಟು?
ಸೋನು ಸೂದ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Jul 30, 2024 | 7:44 AM

ಬಾಲಿವುಡ್ ನಟ ಸೋದು ಸೂದ್ ಅವರಿಗೆ ಇಂದು (ಜುಲೈ 30) ಜನ್ಮದಿನ. ಅವರಿಗೆ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ. ಸೋನು ಸೂದ್ ಅವರಿಗೆ ದೊಡ್ಡ ಮಟ್ಟದಲ್ಲಿ ಖ್ಯಾತಿ ಸಿಕ್ಕಿದೆ. ಕೊವಿಡ್ ಕಾಣಿಸಿಕೊಂಡ ಬಳಿಕ ಸೋನು ಸೂದ್ ಅವರು ಸಾಮಾಜಿಕ ಕೆಲಸಗಳ ಮೂಲಕ ಹೆಚ್ಚು ಗುರುತಿಸಿಕೊಂಡಿದ್ದಾರೆ. ಅವರು ವರ್ಷಕ್ಕೆ ಕೋಟಿ ಗಟ್ಟಲೆ ಹಣವನ್ನು ಸಾಮಾಜಿಕ ಕೆಲಸಕ್ಕೆ ಬಳಸುತ್ತಾರೆ. ಅವರ ಬಗ್ಗೆ, ಅವರ ಆಸ್ತಿ ಬಗ್ಗೆ ಈ ಸ್ಟೋರಿಯಲ್ಲಿ ಉತ್ತರ ಇದೆ.

1999ರಲ್ಲಿ ರಿಲೀಸ್ ಆದ ‘ಕಲ್ಲಳಗರ್’ ಚಿತ್ರದ ಮೂಲಕ ಸೋನು ಸೂದ್ ಬಣ್ಣದ ಬದುಕು ಆರಂಭಿಸಿದರು. ಆ ಬಳಿಕ ಅವರು ಹಲವು ಸಿನಿಮಾಗಳಲ್ಲಿ ನಟಿಸಿದರು. 2009ರಲ್ಲಿ ರಿಲೀಸ್ ಆದ ‘ಅರುಂಧತಿ’ ಅವರ ಖ್ಯಾತಿಯನ್ನು ಹೆಚ್ಚಿಸಿತು. ಈ ಸಿನಿಮಾದಲ್ಲಿ ವಿಲನ್ ಪಾತ್ರ ಮಾಡಿದ್ದರು. ಆ ಬಳಿಕ ಅವರು ‘ದಬಾಂಗ್’, ‘ಜೋಧಾ ಅಕ್ಬರ್’ ಸೇರಿ ಅನೇಕ ಚಿತ್ರಗಳನ್ನು ಮಾಡಿದರು. ಕನ್ನಡಕ್ಕೆ ಅವರ ಎಂಟ್ರಿ ಆಗಿದ್ದು 2011ರಲ್ಲಿ. ಸುದೀಪ್ ನಟನೆಯ ‘ವಿಷ್ಣುವರ್ಧನ’ ಚಿತ್ರದಲ್ಲಿ ವಿಲನ್ ಆಗಿ ಅವರು ಗಮನ ಸೆಳೆದರು. ಅವರು ಮಾಡಿದ ಆದಿಶೇಷ ಪಾತ್ರ ಸಾಕಷ್ಟು ಗಮನ ಸೆಳೆಯಿತು. ಕನ್ನಡದ ‘ಕುರುಕ್ಷೇತ್ರ’ ಸಿನಿಮಾದಲ್ಲೂ ನಟಿಸಿದ್ದಾರೆ.

ಕೊವಿಡ್ ಸಂದರ್ಭದಲ್ಲಿ ಅವರು ಅನೇಕರಿಗೆ ಆಸರೆ ಆದರು. ತಮ್ಮ ಚ್ಯಾರಿಟಿ ಮೂಲಕ ಸೋನು ಸೂದ್ ಅವರು ಅನೇಕರ ಸಹಾಯಕ್ಕೆ ನಿಂತರು. ಅಲ್ಲಿಂದ ಇಲ್ಲಿಯವರೆಗೆ ಸಾಕಷ್ಟು ಒಳ್ಳೆಯ ಕೆಲಸಗಳನ್ನು ಅವರು ಮಾಡಿದ್ದಾರೆ. ಈ ಕಾರಣಕ್ಕೆ ಅವರು ಅನೇಕರಿಗೆ ಇಷ್ಟ ಆಗಿದ್ದಾರೆ. ಈಗಲೂ ಅವರು ಸಾಮಾಜಿಕ ಕೆಲಸ ಮುಂದುವರಿಸಿದ್ದಾರೆ.

ಸೋನು ಸೂದ್ ಅವರ ಒಟ್ಟೂ ಆಸ್ತಿ 140 ಕೋಟಿ ರೂಪಾಯಿ. ಸಿನಿಮಾಗಳಿಂದ, ಬ್ರ್ಯಾಂಡ್​ಗಳ ಪ್ರಚಾರದಿಂದ ಹಾಗೂ ತಾವು ನಡೆಸುತ್ತಿರುವ ಹೋಟೆಲ್​ಗಳಿಂದ ಸೋನು ಸೂದ್ ಅವರಿಗೆ ಹಣ ಬರುತ್ತಿದೆ. ಅವರ ವರಮಾನದಲ್ಲಿ ಅವರು ಒಂದಷ್ಟು ಹಣವನ್ನು ಒಳ್ಳೆಯ ಕೆಲಸಕ್ಕೆ ಬಳಕೆ ಮಾಡುತ್ತಾರೆ.

ಸೋನು ಸೂದ್​ಗೆ ಕಾರಿನ ಬಗ್ಗೆ ಹೆಚ್ಚಿನ ವ್ಯಾಮೋಹ ಇಲ್ಲ. ಪೋರ್ಷಾ ಪನಾಮೆರಾ, ಬೆಂಜ್ ಎಂಎಲ್​ ಕ್ಲಾಸ್ ಕಾರುಗಳು ಇವೆ. ಉಳಿದಂತೆ ಸಣ್ಣ-ಪುಟ್ಟ ಕಾರುಗಳು ಇವೆ. ಅವರಿಗೆ ಕಾರಿನ ಬಗ್ಗೆ ಅಂತಹ ಪ್ರೀತಿ ಏನಿಲ್ಲ. ಸೋನು ಸೂದ್ ಅವರು ತಮ್ಮದೇ ಆದ ನಿರ್ಮಾಣ ಸಂಸ್ಥೆ ಹೊಂದಿದ್ದು, ಅದರ ಮೂಲಕ ಗಳಿಕೆ ಮಾಡುತ್ತಾರೆ.

ಇದನ್ನೂ ಓದಿ: ‘ಅವರೇ ನನಗೆ ದೇವರು’; ಯುವತಿಯ ಕರಗಿದ ಕನಸಿಗೆ ಮತ್ತೆ ಜೀವ ತುಂಬಿದ ಸೋನು ಸೂದ್

ಸೋನು ಸೂದ್ ಅವರು ಮುಂಬೈನಲ್ಲಿ ದೊಡ್ಡ ಮನೆ ಹೊಂದಿದ್ದಾರೆ. ಸ್ವಂತ ರೆಸ್ಟೋರೆಂಟ್ ಕೂಡ ಇದೆ.  ಮುಂಬೈನಲ್ಲಿ ಅವರು ಲಕ್ಷುರಿ ಅಪಾರ್ಟ್​ಮೆಂಟ್ ಹೊಂದಿದ್ದಾರೆ. ಇದು ಮುಂಬೈ ಅಂಧೇರಿಯಲ್ಲಿ ಇದೆ.  ಸೋನು ಸೂದ್ ಅವರು ಪ್ರತಿ ಚಿತ್ರಕ್ಕೆ 2-5 ಕೋಟಿ ರೂಪಾಯಿ ಪಡೆಯುತ್ತಾರೆ. ಇತ್ತೀಚೆಗೆ ಅವರು ವಿಲನ್ ಪಾತ್ರ ಒಪ್ಪಿಕೊಳ್ಳುತ್ತಿಲ್ಲ. ಹೀಗಾಗಿ, ಅವರಿಗೆ ಹೆಚ್ಚಿನ ಸಿನಿಮಾ ಆಫರ್ ಬರುತ್ತಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.