Kareena Kapoor: ಕ್ರೈಸ್ತ ಧರ್ಮವನ್ನು ಅನುಸರಿಸುತ್ತಿದ್ದರು ನಟಿ ಕರೀನಾ ಕಪೂರ್
ಸೈಫ್ ಅಲಿ ಖಾನ್ ಪತ್ನಿ, ನಟಿ ಕರೀನಾ ಕಪೂರ್ ಮನೆಯಲ್ಲಿ ಕ್ರೈಸ್ತ ಧರ್ಮವನ್ನು ಪಾಲಿಸುತ್ತಾರೆ ಎಂದು ಸೆಲೆಬ್ರಿಟಿ ನರ್ಸ್ ಲಲಿತಾ ಡಿಸಿಲ್ವ ಹೇಳಿದ್ದಾರೆ. ಕರೀನಾ ಕಪೂರ್ ತಾಯಿಯೂ ಸಹ ಕ್ರೈಸ್ತ ಧರ್ಮವನ್ನೇ ಪಾಲಿಸುತ್ತಿದ್ದರು.
ಸೈಫ್ ಅಲಿ ಖಾನ್ರ ಪತ್ನಿ, ಬಾಲಿವುಡ್ ನಟಿ ಕರೀನಾ ಕಪೂರ್ ಕ್ರೈಸ್ತ ಧರ್ಮವನ್ನು ಅನುಸರಿಸುತ್ತಿದ್ದರು ಎಂದು ಅವರ ಮಕ್ಕಳ ಪಾಲನೆ-ಪೋಷಣೆ ಮಾಡುತ್ತಿದ್ದ ಸೆಲೆಬ್ರಿಟಿ ನರ್ಸ್ ಲಲಿತಾ ಡಿಸಿಲ್ವ ಹೇಳಿದ್ದಾರೆ. ಇತ್ತೀಚೆಗೆ ಯೂಟ್ಯೂಬ್ ಸಂದರ್ಶನವೊಂದರಲ್ಲಿ ಮಾತನಾಡಿದ ಲಲಿತಾ ಡಿಸಿಲ್ವ, ಕರೀನಾ ಕಪೂರ್ ಅವರ ಇಬ್ಬರು ಮಕ್ಕಳಿಗೆ ಖಾಸಗಿ ಬೇಬಿ ಸಿಟರ್ ಆಗಿದ್ದ ಬಗ್ಗೆ ಹಾಗೂ ಇತ್ತೀಚೆಗೆ ಮದುವೆಯಾದ ಅನಂತ್ ಅಂಬಾನಿಯ ಲಾಲನೆ ಪೋಷಣೆ ಮಾಡಿದ್ದರ ಬಗ್ಗೆಯೂ ಮಾತನಾಡಿದ್ದಾರೆ. ವಿಶೇಷವಾಗಿ ಕರೀನಾ ಕಪೂರ್-ಸೈಫ್ ಅಲಿ ಖಾನ್ ಅವರೊಟ್ಟಿಗೆ ಕೆಲಸ ಮಾಡಿದ ಅನುಭವ ಹೇಳಿಕೊಂಡಿದ್ದಾರೆ.
ಕರೀನಾ ಕಪೂರ್-ಸೈಫ್ ಅಲಿ ಖಾನ್ರ ಇಬ್ಬರು ಮಕ್ಕಳಾದ ತೈಮೂರ್ ಹಾಗೂ ಜೇಹ್ ಇಬ್ಬರಿಗೂ ಲಲಿತಾ ಡಿಸಿಲ್ವ ಬೇಬಿ ಸಿಟರ್ ಆಗಿದ್ದರು. ಎರಡೂ ಮಕ್ಕಳ ಲಾಲನೆ ಪೋಷಣೆಯನ್ನು ಲಲಿತಾ ಡಿಸಿಲ್ವ ಮಾಡಿದ್ದಾರೆ. ಕರೀನಾ ಬಗ್ಗೆ ಮಾತನಾಡಿರುವ ಲಲಿತಾ ಡಿಸಿಲ್ವ, ‘ಕರೀನಾ ಬಹಳ ಶಿಸ್ತಿನ ಮಹಿಳೆ, ಶಿಸ್ತನ್ನು ಅವರ ತಾಯಿಯಿಂದ ಕರೀನಾ ಕಲಿತಿದ್ದಾಳೆ ಎನಿಸುತ್ತದೆ. ಕರೀನಾ ಕಪೂರ್ ಮನೆಯಲ್ಲಿ ಕ್ರೈಸ್ತ ಧರ್ಮ ಪಾಲಿಸುತ್ತಾರೆ. ಅವರ ತಾಯಿಯೂ ಕ್ರೈಸ್ತ ಧರ್ಮ ಪಾಲಿಸುತ್ತಿದ್ದರು. ಕರೀನಾ ನನಗೆ ಯಾವಾಗಲೂ ಹೇಳುತ್ತಿದ್ದರು ಪ್ರಾರ್ಥನೆಗಳನ್ನು ಹಾಡು, ಮಕ್ಕಳಿಗಾಗಿ ಪ್ರಾರ್ಥನೆಗಳನ್ನು ನುಡಿಸುವಂತೆ ಅಥವಾ ಪ್ಲೇ ಮಾಡುವಂತೆ ಹೇಳುತ್ತಿದ್ದರು. ಆಗಾಗ್ಗೆ ‘ಇಕುಂಕಾರ್ ಸತ್ರ’ ಪಂಜಾಬಿ ಪ್ರಾರ್ಥನೆಯನ್ನೂ ಪ್ಲೇ ಮಾಡಿಸುತ್ತಿದ್ದರು’ ಎಂದಿದ್ದಾರೆ.
ಸೈಫ್ ಮತ್ತು ಕರೀನಾ ಬಹಳ ಸರಳವಾದ ವ್ಯಕ್ತಿತ್ವ ಉಳ್ಳವರು. ಮನೆಯಲ್ಲಿಯೂ ಸಹ ಬಹಳ ಸರಳವಾಗಿ ಇರುತ್ತಿದ್ದರು. ಮನೆಯವರಿಗೆ ಹಾಗೂ ಕೆಲಸದವರಿಗೆ ಎಲ್ಲರಿಗೂ ಒಂದೇ ರೀತಿಯ ಅಡುಗೆಯನ್ನೇ ಮಾಡಲಾಗುತ್ತಿತ್ತು. ಮನೆಯವರಿಗೆ ಬೇರೆ, ಕೆಲಸದವರಿಗೆ ಬೇರೆ ಎಂದೆಲ್ಲ ಇರಲಿಲ್ಲ. ಕೆಲಸದವರ ಜೊತೆಗೆ ಕುಳಿತುಕೊಂಡೆ ಅವರು ಊಟ ಮಾಡುತ್ತಿದ್ದರು. ಕೆಲಸದವು ಬೇರೆಯವರು ಎಂಬೆಲ್ಲ ಭೇದ-ಭಾವ ಅವರು ಮಾಡುತ್ತಿರಲಿಲ್ಲ ಎಂದಿದ್ದಾರೆ ಲಲಿತಾ ಡಿಸಿಲ್ವ.
ಇದನ್ನೂ ಓದಿ:ಕರೀನಾ ಕಪೂರ್ ಮಕ್ಕಳನ್ನು ನೋಡಿಕೊಳ್ಳುವ ಈ ದಾದಿಗೆ ತಿಂಗಳಿಗೆ 2.5 ಲಕ್ಷ ರೂಪಾಯಿ ಸಂಬಳ?
ಮುಖೇಶ್ ಅಂಬಾನಿಯ ಪುತ್ರ ಅನಂತ್ ಅಂಬಾನಿಯ ಲಾಲನೆ ಪೋಷಣೆಯನ್ನೂ ಸಹ ಲಲಿತಾ ಡಿಸಿಲ್ವ ಮಾಡಿದ್ದಾರೆ. ಅಂಬಾನಿ ಕುಟುಂಬದೊಟ್ಟಿಗಿನ ನಂಟಿನ ಬಗ್ಗೆ ಮಾತನಾಡಿರುವ ಲಲಿತಾ, ‘ಅಂಬಾನಿ ಕುಟುಂಬದೊಟ್ಟಿಗೆ ನಾನು ಬಹಳ ಒಳ್ಳೆಯ ಕ್ಷಣಗಳನ್ನು ಕಳೆದಿದ್ದೇನೆ. ಅನಂತ್ ಬಾಬ (ಅನಂತ್ ಅಂಬಾನಿ) ಮತ್ತು ಅಂಬಾನಿ ಕುಟುಂಬ ನನ್ನ ಬದುಕಿಗೆ ನೀಡಿರುವ ಅಮೂಲ್ಯ ಕ್ಷಣಗಳಿಗೆ ನಾನು ಧನ್ಯನಾಗಿದ್ದೇನೆ. ಅನಂತ್ ಜೊತೆಗೆ ಹಾಗೂ ಅಂಬಾನಿ ಕುಟುಂಬದ ಜೊತೆಗೆ ಬಹಳ ಹತ್ತಿರವಾದ ಸಂಬಂಧ ನನಗೆ ಇದೆ. ಹಲವು ಒಳ್ಳೆಯ ನೆನಪುಗಳು ಅವರೊಟ್ಟಿಗಿದೆ’ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ