AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರೀನಾ ಕಪೂರ್ ಮಕ್ಕಳನ್ನು ನೋಡಿಕೊಳ್ಳುವ ಈ ದಾದಿಗೆ ತಿಂಗಳಿಗೆ 2.5 ಲಕ್ಷ ರೂಪಾಯಿ ಸಂಬಳ?

ಕರೀನಾ ಕಪೂರ್​​ಗೆ ಇಬ್ಬರು ಮಕ್ಕಳು. ಇವರಿಗೆ ಥೈಮೂರ್ ಹಾಗೂ ಜೆಹ್ ಹೆಸರಿನ ಮಕ್ಕಳಿದ್ದಾರೆ. ಇವರನ್ನು ನೋಡಿಕೊಳ್ಳಲು ದಾದಿಯರನ್ನು ನೇಮಿಸಿಕೊಳ್ಳಲಾಗಿದೆ. ಸಂದರ್ಶನವೊಂದರಲ್ಲಿ ಲಲಿತಾ ಡಿಸಿಲ್ವಾ ಮಾತನಾಡಿದ್ದಾರೆ. ಸೈಫ್ ಹಾಗೂ ಕರೀನಾ ತಮ್ಮನ್ನು ಹೇಗೆ ನೋಡಿಕೊಳ್ಳುತ್ತಾರೆ ಎಂಬುದನ್ನು ರಿವೀಲ್ ಮಾಡಿದ್ದಾರೆ.

ಕರೀನಾ ಕಪೂರ್ ಮಕ್ಕಳನ್ನು ನೋಡಿಕೊಳ್ಳುವ ಈ ದಾದಿಗೆ ತಿಂಗಳಿಗೆ 2.5 ಲಕ್ಷ ರೂಪಾಯಿ ಸಂಬಳ?
ಕರೀನಾ ಹಾಗೂ ದಾದಿ
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on: Jul 29, 2024 | 11:37 AM

Share

ನಟಿ ಕರೀನಾ ಕಪೂರ್ ಮತ್ತು ನಟ ಸೈಫ್ ಅಲಿ ಖಾನ್ ದಂಪತಿಗೆ ತೈಮೂರ್ ಜನಿಸಿದ ನಂತರ ಅಭಿಮಾನಿಗಳು ಮತ್ತು ಪಾಪರಾಜಿಗಳು ಆತನನ್ನು ನೋಡಲು ಮುಗಿಬಿದ್ದರು. ಈಗ ಆತನ ಬಗ್ಗೆ ಅಷ್ಟು ಕ್ರೇಜ್ ಉಳಿದಿಲ್ಲ. ಈತನನ್ನು ಬೆಳೆಸಿದ್ದು ಲಲಿತಾ ಡಿಸಿಲ್ವಾ ಹೆಸರಿನ ದಾದಿ. ಲಲಿತಾ ಡಿಸಿಲ್ವಾ ಈಗ ಈ ದಂಪತಿಯ ಎರಡನೇ ಮಗ ಜೆಹ್​ನ ನೋಡಿಕೊಳ್ಳುತ್ತಿದ್ದಾರೆ. ಲಲಿತಾ ಡಿಸಿಲ್ವಾ ಯಾವಾಗಲೂ ತೈಮೂರ್ ಮತ್ತು ಜೆಹ್ ಜೊತೆ ಕಾಣಿಸಿಕೊಳ್ಳುತ್ತಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಲಲಿತಾ ಡಿಸಿಲ್ವಾ ಕರೀನಾ ಕುಟುಂಬ ಮತ್ತು ತಾವು ಪಡೆಯುವ ಸಂಬಳದ ಬಗ್ಗೆ ದೊಡ್ಡ ಹೇಳಿಕೆಯನ್ನು ನೀಡಿದ್ದಾರೆ.

ಸಂದರ್ಶನವೊಂದರಲ್ಲಿ ಲಲಿತಾ ಡಿಸಿಲ್ವಾ ಮಾತನಾಡಿದ್ದಾರೆ. ಸೈಫ್ ಹಾಗೂ ಕರೀನಾ ತಮ್ಮನ್ನು ಹೇಗೆ ನೋಡಿಕೊಳ್ಳುತ್ತಾರೆ ಎಂಬುದನ್ನು ರಿವೀಲ್ ಮಾಡಿದ್ದಾರೆ. ‘ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ತುಂಬಾ ಸರಳ ವ್ಯಕ್ತಿಗಳು. ಕರೀನಾ-ಸೈಫ್ ಉಪಹಾರಕ್ಕಾಗಿ ಏನನ್ನು ತಿನ್ನುತ್ತಾರೋ ಅದನ್ನೇ ಸಿಬ್ಬಂದಿಗೂ ನೀಡುತ್ತಾರೆ. ಆಹಾರದಲ್ಲಿ ಏನೂ ವ್ಯತ್ಯಾಸವಿಲ್ಲ. ಕೆಲವೊಮ್ಮೆ ನಾವು ಒಟ್ಟಿಗೆ ಕುಳಿತು ಊಟ ಮಾಡುತ್ತೇವೆ. ನಾವು ಒಟ್ಟಿಗೆ ಗುಣಮಟ್ಟದ ಸಮಯವನ್ನು ಕಳೆಯುತ್ತೇವೆ’ ಎಂದಿದ್ದಾರೆ ಅವರು.

‘ಲಲಿತಾ ಡಿಸಿಲ್ವಾ ತಿಂಗಳಿಗೆ 2.5 ಲಕ್ಷ ಸಂಬಳ ಪಡೆಯುತ್ತಾರಾ?’ ಹೀಗೊಂದು ಪ್ರಶ್ನೆ ಕೇಳಲಾಯಿತು. ಈ ಬಗ್ಗೆ ಲಲಿತಾ ಡಿಸಿಲ್ವಾ ಅವರು ಸ್ಪಷ್ಟನೆ ನೀಡಿದ್ದಾರೆ. ‘2.5 ಲಕ್ಷ ರೂಪಾಯಿ? ಹಾಗೆ ಇದ್ದಿದ್ದರೆ ಚೆನ್ನಾಗಿರುತ್ತಿತ್ತು. ನಿಮ್ಮ ಬಾಯಲ್ಲಿ ಸಕ್ಕರೆ ಬೀಳಲಿ. ಇವೆಲ್ಲ ಕೇವಲ ವದಂತಿಗಳು’ ಎಂದಿದ್ದಾರೆ. ಲಲಿತಾ ಡಿಸಿಲ್ವಾ ಅವರು ಕಳೆದ ಹಲವಾರು ವರ್ಷಗಳಿಂದ ತೈಮೂರ್ ಮತ್ತು ಜೆಹ್ ಅವರನ್ನು ನೋಡಿಕೊಳ್ಳುತ್ತಿದ್ದಾರೆ. ಅವರ ಅನೇಕ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.

ಕರೀನಾ ಕಪೂರ್ ಕೂಡ ಸಂದರ್ಶನವೊಂದರಲ್ಲಿ ಲಲಿತಾ ಡಿಸಿಲ್ವಾ ಬಗ್ಗೆ ಹೇಳಿಕೆ ನೀಡಿದ್ದರು. ‘ನನ್ನ ಮಕ್ಕಳ ಜೊತೆ ದಾದಿಯರು ಊಟ ಮಾಡುತ್ತಾರೆ. ಇತ್ತೀಚೆಗೆ ಸೈಫ್ ಮತ್ತು ನಾನು ಊಟ ಮಾಡುತ್ತಿದ್ದೆವು. ಒಮ್ಮೆ ತೈಮೂರ್ ‘ನೀವು ಯಾಕೆ ಅಲ್ಲಿ ಕುಳಿತುಕೊಂಡಿದ್ದೀರಿ ಎಂದು’ ದಾದಿಯನ್ನು ಕೇಳಿದ. ಅಂದಿನಿಂದ ತೈಮೂರ್, ಜೆಹ್ ತಮ್ಮ ದಾದಿಯೊಂದಿಗೆ ಊಟ ಮಾಡುತ್ತಾರೆ’ ಎಂದಿದ್ದರು.

ಇದನ್ನೂ ಓದಿ: ಮಿತಿ ಮೀರಿತಾ ಕರೀನಾ ಕಪೂರ್​ ಖಾನ್​ ಗ್ಲಾಮರ್​? ಎಲ್ಲರಿಗೂ ಅಚ್ಚರಿ

ಕರೀನಾ ಕಪೂರ್ ಯಾವಾಗಲೂ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಅಭಿಮಾನಿಗಳಿಗೆ ಹೇಳುತ್ತಿರುತ್ತಾರೆ. ಇದಲ್ಲದೆ, ನಟಿ ತನ್ನ ಮಕ್ಕಳೊಂದಿಗಿನ ಫೋಟೋ ಮತ್ತು ವೀಡಿಯೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಾರೆ. ನಟಿಯ ಪೋಸ್ಟ್‌ಗಳಿಗೆ ಅಭಿಮಾನಿಗಳು ಲೈಕ್‌ಗಳು ಮತ್ತು ಕಾಮೆಂಟ್‌ಗಳ ಸುರಿಮಳೆ ಮಾಡುತ್ತಿದ್ದಾರೆ. ಕರೀನಾ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯ. ಸೋಷಿಯಲ್ ಮೀಡಿಯಾದಲ್ಲೂ ನಟಿಗೆ ಅಪಾರ ಅಭಿಮಾನಿಗಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ