ಒಮ್ಮೆಲೇ ಎರಡು ಬಿಗ್ ಬಜೆಟ್ ಚಿತ್ರಗಳನ್ನು ಅರ್ಧಕ್ಕೆ ಕೈಬಿಟ್ಟ ಕರಣ್ ಜೋಹರ್

ಕರಣ್ ಜೋಹರ್ ಅವರು ಇತ್ತೀಚೆಗೆ ಬಿಗ್ ಬಜೆಟ್ ಚಿತ್ರಗಳನ್ನು ಮಾಡುವುದರಿಂದ ಹಿಂದೇಟು ಹಾಕುತ್ತಿದ್ದಾರೆ. ಅವರು ಸಾಕಷ್ಟು ಬಾರಿ ನಷ್ಟ ಅನುಭವಿಸಿರುವುದೇ ಇದಕ್ಕೆ ಕಾರಣ. ಈ ಕಾರಣಕ್ಕೆ ಅವರು ಕಾರ್ತಿಕ್ ಆರ್ಯನ್ ಹಾಗೂ ಸಲ್ಮಾನ್ ಖಾನ್ ಜೊತೆಗಿನ ಎರಡು ಸಿನಿಮಾಗಳನ್ನು ಅವರು ಹೋಲ್ಡ್ ಮಾಡಿದ್ದಾರೆ.

ಒಮ್ಮೆಲೇ ಎರಡು ಬಿಗ್ ಬಜೆಟ್ ಚಿತ್ರಗಳನ್ನು ಅರ್ಧಕ್ಕೆ ಕೈಬಿಟ್ಟ ಕರಣ್ ಜೋಹರ್
ಒಮ್ಮೆಲೇ ಎರಡು ಬಿಗ್ ಬಜೆಟ್ ಚಿತ್ರಗಳನ್ನು ಅರ್ಧಕ್ಕೆ ಕೈಬಿಟ್ಟ ಕರಣ್ ಜೋಹರ್
Follow us
ರಾಜೇಶ್ ದುಗ್ಗುಮನೆ
|

Updated on: Jul 29, 2024 | 7:03 AM

ಕರಣ್ ಜೋಹರ್ ಅವರು ದೊಡ್ಡ ಮಟ್ಟದ ಖ್ಯಾತಿ ಪಡೆದವರು. ಅವರು ನಿರ್ಮಾಣದಲ್ಲಿ ಎತ್ತಿದ ಕೈ. ಬಿಗ್ ಬಜೆಟ್ ಸಿನಿಮಾಗಳು, ಸ್ಟಾರ್ ಹೀರೋಗಳ ಸಿನಿಮಾಗಳಿಗೆ ಬಂಡವಾಳ ಹೂಡೋದು ಎಂದರೆ ಅವರಿಗೆ ಎಲ್ಲಿಲ್ಲದ ಪ್ರೀತಿ. ಆದರೆ, ಇತ್ತೀಚೆಗೆ ಅವರು ಕೈ ಸುಟ್ಟುಕೊಂಡಿದ್ದು ಹೆಚ್ಚು. ಈ ಕಾರಣಕ್ಕೆ ಅವರು ಕಾರ್ತಿಕ್ ಆರ್ಯನ್ ಹಾಗೂ ಸಲ್ಮಾನ್ ಖಾನ್ ಜೊತೆಗಿನ ಎರಡು ಸಿನಿಮಾಗಳನ್ನು ಅವರು ಹೋಲ್ಡ್ ಮಾಡಿದ್ದಾರೆ.

ಈ ಮೊದಲು ಕಾರ್ತಿಕ್ ಆರ್ಯನ್ ಹಾಗೂ ಕರಣ್ ಜೋಹರ್ ‘ದೋಸ್ತಾನ 2’ ಸಿನಿಮಾ ಮಾಡಬೇಕಿತ್ತು. ಆದರೆ, ಈ ಚಿತ್ರ ಸೆಟ್ಟೇರಲಿಲ್ಲ. ಇಬ್ಬರ ಮಧ್ಯೆ ಏನೋ ಕಿರಿಕ್ ಆಗಿದೆ ಎನ್ನಲಾಗಿತ್ತು. 2023ರಲ್ಲಿ ಕಾರ್ತಿಕ್ ಆರ್ಯನ್ ಅವರು ಕರಣ್ ಜೋಹರ್ ಜೊತೆ ಕೈ ಜೋಡಿಸೋದಾಗಿ ಘೋಷಿಸಿದರು. ಈ ಸಿನಿಮಾ ಯುದ್ಧದ ಹಿನ್ನೆಲೆಯಲ್ಲಿ ಸಾಗಲಿದೆ ಎನ್ನಲಾಗಿತ್ತು. ಆದರೆ, ಈ ಚಿತ್ರವನ್ನು ಕರಣ್ ಜೋಹರ್ ಕೈ ಬಿಡೋಕೆ ನಿರ್ಧರಿಸಿದ್ದಾರೆ.

ಇತ್ತೀಚೆಗೆ ದೇಶಭಕ್ತಿ ಸಿನಿಮಾಗಳು ಸಾಕಷ್ಟು ಬಂದಿವೆ. ಆದರೆ, ಅಂದುಕೊಂಡ ಮಟ್ಟದಲ್ಲಿ ಇವು ಗೆಲುವು ಕಾಣುತ್ತಿಲ್ಲ. ಸಿದ್ದಾರ್ಥ್ ಮಲ್ಹೋತ್ರ ನಟನೆಯ ‘ಯೋಧ’ ಸಿನಿಮಾ ಹೀನಾಯ ಸೋಲು ಕಂಡಿತ್ತು. ಹೃತಿಕ್ ರೋಷನ್ ನಟನೆಯ ‘ಫೈಟರ್’ ಕೂಡ ಸಾಧಾರಣ ಸಿನಿಮಾ ಎನಿಸಿಕೊಂಡಿತು. ಈ ಕಾರಣಕ್ಕೆ ಕರಣ್ ಜೋಹರ್ ಅವರು ಈ ಕಥೆಯನ್ನು ಹೋಲ್ಡ್ ಮಾಡಿದ್ದಾರೆ. ಈ ಚಿತ್ರವನ್ನು ಸಂದೀಪ್ ಮೋದಿ ಅವರು ನಿರ್ದೇಶನ ಮಾಡಬೇಕಿತ್ತು.

ಇದನ್ನೂ ಓದಿ: ಗರ್ಲ್​ಫ್ರೆಂಡ್ ಬರ್ತ್​ಡೇ ಪಾರ್ಟಿನ ಅದ್ದೂರಿಯಾಗಿ ಆಚರಿಸಿದ ಸಲ್ಮಾನ್ ಖಾನ್

ಇನ್ನು ಸಲ್ಮಾನ್ ಖಾನ್ ಜೊತೆ ಕರಣ್ ಜೋಹರ್ ‘ಬುಲ್’ ಹೆಸರಿನ ಸಿನಿಮಾ ಮಾಡಬೇಕಿತ್ತು. ವಿಷ್ಣುವರ್ಧನ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಬೇಕಿತ್ತು. ಇದಕ್ಕೆ ಸ್ಕ್ರಿಪ್ಟ್ ಕೂಡ ರೆಡಿ ಆಗಿತ್ತು. ಆದರೆ, ಈ ಚಿತ್ರವನ್ನು ಕೂಡ ಅರ್ಧಕ್ಕೆ ನಿಲ್ಲಿಸಲಾಗಿದೆ.

ಕರಣ್ ಜೋಹರ್ ಅವರು ಅನೇಕ ಬಿಗ್ ಬಜೆಟ್ ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ಇತ್ತೀಚೆಗೆ ಕೆಲ ಸಿನಿಮಾಗಳು ಅವರಿಗೆ ಕೈ ಕೊಟ್ಟಿದೆ. ಈ ಚಿತ್ರದಿಂದ ಅವರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ
ಈ ರಾಶಿಯವರಿಗೆ ಇಂದು ಹಣಕಾಸಿನ ವಿಷಯದಲ್ಲಿ ಒಳ್ಳೆಯದಾಗುತ್ತೆ
ಈ ರಾಶಿಯವರಿಗೆ ಇಂದು ಹಣಕಾಸಿನ ವಿಷಯದಲ್ಲಿ ಒಳ್ಳೆಯದಾಗುತ್ತೆ
ಚೈತ್ರಾ ಕುಂದಾಪುರ ವಿಚಾರದಲ್ಲಿ ಉಲ್ಟಾ ಹೊಡೆತ ರಜತ್; ಸುದೀಪ್​ಗೂ ಇದು ಶಾಕ್
ಚೈತ್ರಾ ಕುಂದಾಪುರ ವಿಚಾರದಲ್ಲಿ ಉಲ್ಟಾ ಹೊಡೆತ ರಜತ್; ಸುದೀಪ್​ಗೂ ಇದು ಶಾಕ್