‘ನಮ್ಮಿಬ್ಬರ ಕೆಮಿಸ್ಟ್ರಿ ಅಣ್ಣ-ತಂಗಿ ರೀತಿ’ ತನುಶ್ರೀ ಹೇಳಿಕೆಗೆ ಇಮ್ರಾನ್​ ಹಷ್ಮಿ ಶಾಕ್​

ಬಾಲಿವುಡ್​ನ ಖ್ಯಾತ ನಟಿ ತನುಶ್ರೀ ದತ್ತ ಅವರು ‘ಆಶಿಕ್​ ಬನಾಯಾ ಆಪ್ನೆ’ ಸಿನಿಮಾದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು ನೋಡಿ ಎಲ್ಲರಿಗೂ ಅಚ್ಚರಿ ಆಗಿತ್ತು. ಇಮ್ರಾನ್​ ಹಷ್ಮಿ ಜೊತೆ ಅವರು ಇಂಟಿಮೇಟ್​ ದೃಶ್ಯಗಳಲ್ಲಿ ಅಭಿನಯಿಸಿದ್ದರು. ಆದರೆ ತಮ್ಮಿಬ್ಬರ ಕೆಮಿಸ್ಟ್ರಿ ಅಣ್ಣ-ತಂಗಿಯ ರೀತಿ ಇತ್ತು ಎಂದು ಅವರು ಹೇಳಿರುವುದು ಎಲ್ಲರಿಗೂ ಅಚ್ಚರಿ ಎನಿಸಿದೆ.

‘ನಮ್ಮಿಬ್ಬರ ಕೆಮಿಸ್ಟ್ರಿ ಅಣ್ಣ-ತಂಗಿ ರೀತಿ’ ತನುಶ್ರೀ ಹೇಳಿಕೆಗೆ ಇಮ್ರಾನ್​ ಹಷ್ಮಿ ಶಾಕ್​
ಇಮ್ರಾನ್​ ಹಷ್ಮಿ, ತನುಶ್ರೀ ದತ್ತ
Follow us
ಮದನ್​ ಕುಮಾರ್​
|

Updated on: Jul 28, 2024 | 8:04 PM

ನಟ ಇಮ್ರಾನ್​ ಹಷ್ಮಿ ಅವರು ಒಂದು ಕಾಲದಲ್ಲಿ ಬೋಲ್ಡ್​ ಸೀನ್​ಗಳನ್ನು ಮಾಡಿಯೇ ಫೇಮಸ್​ ಆಗಿದ್ದರು. ‘ಮರ್ಡರ್​’, ‘ಆಶಿಕ್​ ಬನಾಯಾ ಆಪ್ನೆ’, ‘ಆಕ್ಸರ್​’ ಮುಂತಾದ ಸಿನಿಮಾಗಳಲ್ಲಿ ಅವರು ಲವರ್ ಬಾಯ್​ ಆಗಿ ಕಾಣಿಸಿಕೊಂಡು ಹುಡುಗಿಯರ ಮನಸ್ಸು ಗೆದ್ದಿದ್ದರು. ಆ ಪೈಕಿ ‘ಆಶಿಕ್​ ಬನಾಯಾ ಆಪ್ನೆ’ ಸಿನಿಮಾದ ಟೈಟಲ್​ ಟ್ರ್ಯಾಕ್​ ಸಿಕ್ಕಾಪಟ್ಟೆ ಸೆನ್ಸೇಷನ್​ ಸೃಷ್ಟಿ ಮಾಡಿತ್ತು. ಆ ಹಾಡಿನ ಬಗ್ಗೆ ಮಾತನಾಡುವಾಗ ನಟಿ ತನುಶ್ರೀ ದತ್ತಾ ಅವರು ನೀಡಿದ ಹೇಳಿಕೆಗೆ ಈಗ ಇಮ್ರಾನ್​ ಹಷ್ಮಿ ಅವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

2005ರಲ್ಲಿ ‘ಆಶಿಕ್​ ಬನಾಯಾ ಆಪ್ನೆ’ ಸಿನಿಮಾ ಬಿಡುಗಡೆ ಆಗಿತ್ತು. ಅದರಲ್ಲಿ ತನುಶ್ರೀ ದತ್ತ ಮತ್ತು ಇಮ್ರಾನ್​ ಹಷ್ಮಿ ಅವರು ಸಖತ್​ ಬೋಲ್ಡ್​ ಆಗಿ ನಟಿಸಿದ್ದರು. ಅದರ ಬಗ್ಗೆ ತನುಶ್ರೀ ಇತ್ತೀಚೆಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ‘ಟಾಪ್​ ನಟಿಯರು ಕಿಸ್ಸಿಂಗ್​ ದೃಶ್ಯದಲ್ಲಿ ನಟಿಸಿದ್ದಾರೆ. ಅಂಥವರಿಗೆ ಯಾರೂ ಏನೂ ಹೇಳುವುದಿಲ್ಲ. ನಾನು ಮಾಡಿದರೆ ಎಲ್ಲರಿಗೂ ಸಮಸ್ಯೆ ಆಗುತ್ತೆ. ನಾನು ಶಾರ್ಟ್​ ಡ್ರೆಸ್​ ಧರಿಸಲಿ ಅಥವಾ ಯಾವುದೇ ಸೀನ್​ ಮಾಡಲಿ. ಅದು ನಟನೆ ಆಗಿರುತ್ತದೆ. ನನ್ನ ಮತ್ತು ಇಮ್ರಾನ್​ ಹಷ್ಮಿ ನಡುವೆ ಯಾವುದೇ ಪರ್ಸನಲ್​ ಇರಲಿಲ್ಲ. ನನ್ನ ಮತ್ತು ಇಮ್ರಾನ್​ ನಡುವಿನ ಕೆಮಿಸ್ಟ್ರಿ ಅಣ್ಣ-ತಂಗಿ ರೀತಿಯದ್ದು’ ಎಂದು ತನುಶ್ರೀ ದತ್ತ ಹೇಳಿದ್ದಾರೆ.

‘ನಿರ್ದೇಶಕರು ಸೀನ್​ ವಿವರಿಸಿದಾಗ ತನುಶ್ರೀ ಯಾವ ರೀತಿ ಅರ್ಥ ಮಾಡಿಕೊಂಡಿದ್ದರೋ ನನಗೆ ಗೊತ್ತಿಲ್ಲ. ನನ್ನ ತಲೆಯಲ್ಲಿ ಬೇರೆ ಕಥೆ ಓಡುತ್ತಿತ್ತು. ಅವರ ತಲೆಯಲ್ಲಿ ಬೇರೆ ಕಥೆ ಓಡುತ್ತಿತ್ತು’ ಎಂದು ಇಮ್ರಾನ್​ ಹಷ್ಮಿ ಅವರು ಹೇಳಿದ್ದಾರೆ. ಒಂದಲ್ಲಾ ಒಂದು ಕಾರಣಗಳಿಂದ ತನುಶ್ರೀ ದತ್ತ ಅವರು ನ್ಯೂಸ್​ ಆಗುತ್ತಲೇ ಇರುತ್ತಾರೆ. ಮೀಟೂ ಅಭಿಯಾನದ ಮೂಲಕವೂ ಅವರು ಸಖತ್​ ಸದ್ದು ಮಾಡಿದ್ದರು.

ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ಆರೋಪಕ್ಕೆ ಕೊನೆಗೂ ಪ್ರತಿಕ್ರಿಯಿಸಿದ ನಟ ನಾನಾ ಪಾಟೇಕರ್

ಆರಂಭದ ದಿನಗಳಲ್ಲಿ ತನುಶ್ರೀ ದತ್ತ ಅವರಿಗೆ ಸಖತ್​ ಬೇಡಿಕೆ ಇತ್ತು. ‘ಆಶಿಕ್​ ಬನಾಯಾ ಆಪ್ನೆ’ ಬಳಿಕ ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳಲ್ಲಿ ಅವರು ಬೋಲ್ಡ್ ಆಗಿ ಕಾಣಿಸಿಕೊಂಡರು. ನಂತರದ ದಿನಗಳಲ್ಲಿ ಅವರು ಸೈಲೆಂಟ್​ ಆದರು. ಕಡೆಕಡೆಗೆ ನಟನೆಯಿಂದಲೇ ದೂರ ಉಳಿದರು. ಆಮೇಲೆ ಅವರು ಮತ್ತೆ ಸುದ್ದಿ ಆಗಿದ್ದೇ ಮೀಟೂ ಅಭಿಯಾನದ ಕಾರಣದಿಂದ. ತನುಶ್ರೀ ಅವರು ‘ಆಶಿಕ್​ ಬನಾಯಾ ಆಪ್ನೆ’ ಸಿನಿಮಾದಲ್ಲಿ ಬೋಲ್ಡ್​ ಆಗಿ ಕಾಣಿಸಿಕೊಂಡು ಎರಡು ದಶಕ ಕಳೆಯುತ್ತಿದೆ. ಹಾಗಿದ್ದರೂ ಕೂಡ ಆ ಸಿನಿಮಾದ ಬಗೆಗಿನ ಚರ್ಚೆ ನಿಂತಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ