ಗರ್ಲ್​ಫ್ರೆಂಡ್ ಬರ್ತ್​ಡೇ ಪಾರ್ಟಿನ ಅದ್ದೂರಿಯಾಗಿ ಆಚರಿಸಿದ ಸಲ್ಮಾನ್ ಖಾನ್

ಸಲ್ಮಾನ್ ಖಾನ್ ಈ ಮೊದಲು ಅನೇಕ ಹುಡುಗಿಯರ ಜೊತೆ ಸುತ್ತಾಟ ನಡೆಸಿದ್ದಾರೆ. ಆದರೆ, ಯಾರನ್ನೂ ಅವರು ಮದುವೆ ಆಗುವ ನಿರ್ಧಾರ ತೆಗೆದುಕೊಂಡಿಲ್ಲ. ಈ ವಿಚಾರ ಅನೇಕರಿಗೆ ಅಚ್ಚರಿ ತಂದಿದೆ. ಈಗ ಅವರು ಯೂಲಿಯಾ ಜೊತೆ ಸುತ್ತಾಟ ನಡೆಸುತ್ತಿದ್ದಾರೆಯೇ ಎನ್ನುವ ಪ್ರಶ್ನೆ ಮೂಡಿದೆ.

ಗರ್ಲ್​ಫ್ರೆಂಡ್ ಬರ್ತ್​ಡೇ ಪಾರ್ಟಿನ ಅದ್ದೂರಿಯಾಗಿ ಆಚರಿಸಿದ ಸಲ್ಮಾನ್ ಖಾನ್
ಬರ್ತ್​ಡೇ ಸೆಲೆಬ್ರೇಷನ್​ನಲ್ಲಿ ಸಲ್ಲು
Follow us
ರಾಜೇಶ್ ದುಗ್ಗುಮನೆ
|

Updated on: Jul 27, 2024 | 7:31 AM

ಸಲ್ಮಾನ್ ಖಾನ್ ಅವರು ಯೂಲಿಯಾ ವಂಟೂರ್ ಅವರ ಬರ್ತ್​ಡೇನ ಅದ್ದೂರಿಯಾಗಿ ಆಚರಿಸಿದ್ದಾರೆ. ಸಲ್ಲು ಸದ್ಯ ಇವರ ಜೊತೆ ಸುತ್ತಾಟ ನಡೆಸುತ್ತಿದ್ದಾರೆ ಎಂದು ಸುದ್ದಿ ಆಗಿತ್ತು. ಈಗ ಯೂಲಿಯಾ ಬರ್ತ್​ಡೇನ ಅದ್ದೂರಿಯಾಗಿ ಆಚರಿಸುವ ಮೂಲಕ ವದಂತಿ ಹೆಚ್ಚುವಂತೆ ಆಗಿದೆ. ಈ ಬರ್ತ್​ಡೇ ಪಾರ್ಟಿಗೆ ಸಾಜಿದ್ ಅಲಿ ಖಾನ್, ಹಿಮೇಶ್ ರೇಶಮಿಯಾ, ಮಿಕಾ ಸಿಂಗ್ ಸೇರಿ ಅನೇಕರು ಆಗಮಿಸಿದ್ದರು. ಸಲ್ಮಾನ್ ಖಾನ್ ಅವರು ಮಿಕಾ ಸಿಂಗ್ ಜೊತೆ ಹಗ್ ಮಾಡಿಕೊಂಡು ಫೋಟೋ ತೆಗೆಸಿಕೊಂಡಿದ್ದಾರೆ. ಇದರ ಜೊತೆಗೆ ಬರ್ತ್​ಡೇ ಗರ್ಲ್ ಯೂಲಿಯಾ ಜೊತೆಯೂ ಕಾಣಿಸಿಕೊಂಡಿದ್ದಾರೆ.

ಸಲ್ಮಾನ್ ಖಾನ್ ಈ ಮೊದಲು ಅನೇಕ ಹುಡುಗಿಯರ ಜೊತೆ ಸುತ್ತಾಟ ನಡೆಸಿದ್ದಾರೆ. ಆದರೆ, ಯಾರನ್ನೂ ಅವರು ಮದುವೆ ಆಗುವ ನಿರ್ಧಾರ ತೆಗೆದುಕೊಂಡಿಲ್ಲ. ಈ ವಿಚಾರ ಅನೇಕರಿಗೆ ಅಚ್ಚರಿ ತಂದಿದೆ. ಈಗ ಅವರು ಯೂಲಿಯಾ ಜೊತೆ ಸುತ್ತಾಟ ನಡೆಸುತ್ತಿದ್ದಾರೆಯೇ ಎನ್ನುವ ಪ್ರಶ್ನೆ ಮೂಡಿದೆ.

‘ಯೂಲಿಯಾ ವಂಟೂರ್ ಬರ್ತ್​ಡೇ ಸೆಲೆಬ್ರೇಷನ್ ಮಾಡಲು ಒಳ್ಳೆಯ ಗೆಟ್​ ಟುಗೇದರ್ ಆಯೋಜಿಸಲಾಗಿತ್ತು’ ಎಂದು ಮಿಕಾ ಸಿಂಗ್ ಬರೆದುಕೊಂಡಿದ್ದಾರೆ. ಅಲ್ಲದೆ ನಟಿ, ಗಾಯಕಿ ಯೂಲಿಯಾಗೆ ಅವರು ಬರ್ತ್​ಡೇ ವಿಶ್ ತಿಳಿಸಿದ್ದಾರೆ.

ಹಿಮೇಶ್ ರೇಶಮಿಯಾ ಅವರು ಸಲ್ಮಾನ್ ಖಾನ್ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ. ಈ ಫೋಟೋದಲ್ಲಿ ಹಿಮೇಶ್ ಕೆನ್ನೆಗೆ ಸಲ್ಲು ಕಿಸ್ ಮಾಡಿದ್ದಾರೆ. ಈ ಮೂಲಕ ಇಬ್ಬರ ಮಧ್ಯೆ ಇರುವ ಫ್ರೆಂಡ್​ಶಿಪ್ ಎಂಥದ್ದು ಎಂಬುದನ್ನು ತೋರಿಸಿದ್ದಾರೆ. ಈ ಬರ್ತ್​ಡೇ ಸೆಲೆಬ್ರೇಷನ್​ನಿಂದ ಸಲ್ಲು ಹಾಗೂ ಯೂಲಿಯಾ ಮಧ್ಯೆ ಏನೋ ನಡೆಯುತ್ತಿದೆ ಎನ್ನುವ ವಿಚಾರ ಅಧಿಕೃತ ಆದಂತೆ ಆಗಿದೆ.

ಇದನ್ನೂ ಓದಿ: ಕಿಮ್ ಕರ್ದಾಶಿಯಾನ್ ಮೈಮಾಟ ನೋಡಿ ಕಣ್ಣರಳಿಸಿದ ಸಲ್ಮಾನ್ ಖಾನ್; ವಿಡಿಯೋ ವೈರಲ್

2022ರಲ್ಲಿ ಶೆಹನಾಜ್ ಗಿಲ್ ಅವರು ಬಿಗ್ ಬಾಸ್ ವೇದಿಕೆ ಮೇಲೆ ಒಂದು ಮಾತನ್ನು ಹೇಳಿದ್ದರು. ‘ನೀವು ಸಿಂಗಲ್ ಆಗಿದ್ದರೆ ಚೆನ್ನಾಗಿ ಕಾಣುತ್ತೀರಿ’ ಎಂದಿದ್ದರು. ‘ನಾನು ಸಿಂಗಲ್ ಆದಾಗ ಇನ್ನೂ ಚೆನ್ನಾಗಿ ಕಾಣುತ್ತೇನೆ’ ಎಂದಿದ್ದರು ಸಲ್ಲು. ಈ ಮೂಲಕ ತಮಗೆ ಗರ್ಲ್​ಫ್ರೆಂಡ್ ಇದ್ದಾರೆ ಎಂದು ಪರೋಕ್ಷವಾಗಿ ಹೇಳಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ