AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೀ ಕನ್ನಡದಲ್ಲಿ ‘ಹೊಸ ಕಥೆಗಳ ಪರ್ವ’: ಕಿರುತೆರೆಗೆ ಕಾಲಿಡಲು ಸಜ್ಜಾಗಿವೆ 5 ಹೊಸ ಧಾರಾವಾಹಿಗಳು

ಜೀ ಕನ್ನಡ ವಾಹಿನಿಯು 'ಹೊಸ ಕಥೆಗಳ ಪರ್ವ' ಶೀರ್ಷಿಕೆಯಡಿ ಶಿವ ಶಕ್ತಿ, ಅರಸಿ, ರಾಮ್ ಲೀಲಾ, ಮಿಲನ ಹಾಗೂ ಗೌರಿಪುತ್ರ ಎಂಬ 5 ಹೊಚ್ಚ ಹೊಸ ಧಾರಾವಾಹಿಗಳನ್ನು ಪ್ರಕಟಿಸಿದೆ. ಇದರ ಜೊತೆಗೆ ಜಗದ್ಧಾತ್ರಿ ಧಾರಾವಾಹಿ ಹಾಗೂ ಆಗಸ್ಟ್ 8ರಿಂದ ಅಕುಲ್ ಬಾಲಾಜಿ ನಿರೂಪಣೆಯ 'ಹಳ್ಳಿ ಪವರ್' ಶೋ ಪ್ರಸಾರವಾಗಲಿದೆ.

ಜೀ ಕನ್ನಡದಲ್ಲಿ 'ಹೊಸ ಕಥೆಗಳ ಪರ್ವ': ಕಿರುತೆರೆಗೆ ಕಾಲಿಡಲು ಸಜ್ಜಾಗಿವೆ 5 ಹೊಸ ಧಾರಾವಾಹಿಗಳು
ಜೀ ಕನ್ನಡ ಧಾರಾವಾಹಿಗಳುImage Credit source: Zee Kannada
 ಶ್ರೀಲಕ್ಷ್ಮೀ ಎಚ್
| Edited By: |

Updated on: Aug 04, 2026 | 7:55 AM

Share

ಮುಖ್ಯಾಂಶಗಳು

  • ಜೀ ಕನ್ನಡದಲ್ಲಿ 'ಹೊಸ ಕಥೆಗಳ ಪರ್ವ'
  • ಕಿರುತೆರೆ ಪ್ರಿಯರಿಗೆ ಸಾಲು ಸಾಲು ಸರ್ಪ್ರೈಸ್
  • ಮಧ್ಯಾಹ್ನದ ಸ್ಲಾಟ್‌ಗೆ ಲಗ್ಗೆ ಇಡಲಿವೆ ವಿಭಿನ್ನ 5 ಕಥೆಗಳು?

ಕನ್ನಡ ಕಿರುತೆರೆಯ ಜನಪ್ರಿಯ ವಾಹಿನಿ ‘ಜೀ ಕನ್ನಡ’ ತನ್ನ ವೀಕ್ಷಕರಿಗೆ ಸಾಲು ಸಾಲು ಹೊಸ ಮನರಂಜನೆಯ ಕೊಡುಗೆ ನೀಡಲು ಮುಂದಾಗಿದೆ. ‘ಹೊಸ ಕಥೆಗಳ ಪರ್ವ’ ಹೆಸರಿನಲ್ಲಿ ವಿಭಿನ್ನ ಕಥಾಹಂದರ ಹೊಂದಿರುವ 5 ಹೊಚ್ಚ ಹೊಸ ಧಾರಾವಾಹಿಗಳ ಪ್ರೋಮೋಗಳನ್ನು ಹಂಚಿಕೊಳ್ಳಲಾಗಿದ್ದು, ಕಿರುತೆರೆ ಪ್ರಿಯರಲ್ಲಿ ಭಾರೀ ಕುತೂಹಲ ಮೂಡಿಸಿದೆ.

ಜೀ ಕನ್ನಡಕ್ಕೆ ಬರಲಿರುವ ಆ 5 ಹೊಸ ಧಾರಾವಾಹಿಗಳು:

ಶಿವ ಶಕ್ತಿ: ಬಾಕ್ಸಿಂಗ್‌ ಕನಸು ಹೊತ್ತ ಶಕ್ತಿಗೆ ‘ಶಿವ’ನ ಬೆಂಬಲ ಮತ್ತು ಪ್ರೇರಣೆ ಸಿಕ್ಕರೆ ಏನಾಗಬಹುದು ಎಂಬ ರೋಚಕ ಕ್ರೀಡಾ-ಭಾವನಾತ್ಮಕ ಹಿನ್ನೆಲೆಯ ಕಥೆ ಇದು.

ಅರಸಿ: ಮನೇಲಿ ಕೆಲಸದವಳ ಮಗಳಾಗಿದ್ದರೂ, ತನ್ನ ಗುಣ ಹಾಗೂ ನಡೆಯಿಂದ ಇಡೀ ಊರೇ ಮೆಚ್ಚುವಂತೆ ಬೆಳೆಯುವ ಸ್ವಾಭಿಮಾನಿ ಹುಡುಗಿಯ ಕಥೆಯನ್ನು ‘ಅರಸಿ’ ತರಲಿದೆ.

ರಾಮ್ ಲೀಲಾ: ಒಬ್ಬ ಸೂಪರ್‌ಸ್ಟಾರ್ ಮತ್ತು ಆತನನ್ನೇ ಅಪಾರವಾಗಿ ಆರಾಧಿಸುವ ಅಭಿಮಾನಿ ಹುಡುಗಿಯ ನಡುವಿನ ಬಾಂಧವ್ಯ ಹಾಗೂ ಕಥಾಹಂದರ ‘ರಾಮ್ ಲೀಲಾ’.

ಮಿಲನ: ಜೀವನದ ತಿರುವುಗಳಲ್ಲಿ ಎದುರಾಗುವ ಹಾಗೂ ನವಜೋಡಿಗಳ ಕಥೆಯನ್ನು ಹೇಳುವ ಪಯಣವೇ ‘ಮಿಲನ’.

ಗೌರಿಪುತ್ರ: ‘ಅಮ್ಮನ ಆಸೆಯೇ ಉಸಿರು’ ಎಂದು ಬದುಕುವ ತಾಯಿ-ಮಗನ ಬಾಂಧವ್ಯವನ್ನು ಎತ್ತಿಹಿಡಿಯುವ ಭಾವನಾತ್ಮಕ ಧಾರಾವಾಹಿ ‘ಗೌರಿಪುತ್ರ’.

View this post on Instagram

A post shared by Zee Kannada (@zeekannada)

ಈ ಎಲ್ಲಾ 5 ಧಾರಾವಾಹಿಗಳು ವಿಭಿನ್ನ ಶೈಲಿಯಲ್ಲಿ ಮೂಡಿಬಂದಿದ್ದು, ಶೀಘ್ರದಲ್ಲೇ ಜೀ ಕನ್ನಡದಲ್ಲಿ ಪ್ರಸಾರ ಆರಂಭಿಸಲಿವೆ. ಇದರ ಜೊತೆಗೆ ಮೋಕ್ಷಿತಾ ಪೈ ನಟನೆಯ ‘ಜಗದ್ಧಾತ್ರಿ’ ಧಾರಾವಾಹಿ ಕೂಡ ತೆರೆಗೆ ಬರಲಿದೆ. ಹೊಸ ಐದು ಧಾರಾವಾಹಿಗಳು ಮಧ್ಯಾಹ್ನ ಪ್ರಸಾರ ಆಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಆ. 2ಕ್ಕೆ ಜೀ ಕನ್ನಡದ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೂಪರ್ ಮಾಮ್’ ಆಡಿಷನ್

ಆಗಸ್ಟ್ 8ರಿಂದ ‘ಹಳ್ಳಿ ಪವರ್’ ಆರಂಭ

ಧಾರಾವಾಹಿಗಳ ಹಬ್ಬದ ಜೊತೆಗೆ, ಗ್ರಾಮೀಣ ಸೊಗಡು ಹಾಗೂ ಕದನ ಕುತೂಹಲ ಮೂಡಿಸುವ ಜನಪ್ರಿಯ ರಿಯಾಲಿಟಿ ಶೋ ‘ಹಳ್ಳಿ ಪವರ್’ ಕೂಡ ಇದೇ ಆಗಸ್ಟ್ 8ರಿಂದ ಪ್ರಸಾರವಾಗಲಿದ್ದು, ವೀಕ್ಷಕರಿಗೆ ಪಕ್ಕಾ ಮನರಂಜನೆ ನೀಡಲಿದೆ. ಅಕುಲ್ ಬಾಲಾಜಿ ಈ ಶೋ ನಡೆಸಿಕೊಡಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
 ಶ್ರೀಲಕ್ಷ್ಮೀ ಎಚ್
ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್ ಫೋಟೋ!
ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್ ಫೋಟೋ!
ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ
ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ
ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು
ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು
ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲೇ ಕಿತ್ತಾಡಿಕೊಂಡ ಬಿಜೆಪಿ ಮುಖಂಡರು
ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲೇ ಕಿತ್ತಾಡಿಕೊಂಡ ಬಿಜೆಪಿ ಮುಖಂಡರು
ಗದಗ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಆವಿಷ್ಕಾರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ಗದಗ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಆವಿಷ್ಕಾರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ದಸರಾ ಸಮಿತಿಯಿಂದ ಕೊಪ್ಪಳ ಶ್ರೀಗಳಿಗೆ ಅಧಿಕೃತ ಆಹ್ವಾನ
ದಸರಾ ಸಮಿತಿಯಿಂದ ಕೊಪ್ಪಳ ಶ್ರೀಗಳಿಗೆ ಅಧಿಕೃತ ಆಹ್ವಾನ
SIR ಗೊಂದಲ: ಜೀವಂತ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿದ ಯತ್ನಾಳ್
SIR ಗೊಂದಲ: ಜೀವಂತ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿದ ಯತ್ನಾಳ್
ಗೋಕಳ್ಳರು ಕರುವನ್ನು ಎಳೆದೊಯ್ಯುವಾಗ ಹಿಂದೆ ಓಡಿದ ತಾಯಿ!
ಗೋಕಳ್ಳರು ಕರುವನ್ನು ಎಳೆದೊಯ್ಯುವಾಗ ಹಿಂದೆ ಓಡಿದ ತಾಯಿ!
ಬಿಗ್ ಬಾಸ್ ಎಲಿಮಿನೇಷನ್: ಅಪಾಯದಲ್ಲಿ ಕಿರಣ್ ಶಾಸ್ತ್ರಿ, ಸಂಗೀತಾ, ಲಿಖಿತ್
ಬಿಗ್ ಬಾಸ್ ಎಲಿಮಿನೇಷನ್: ಅಪಾಯದಲ್ಲಿ ಕಿರಣ್ ಶಾಸ್ತ್ರಿ, ಸಂಗೀತಾ, ಲಿಖಿತ್
ಫ್ಲೈದುಬೈ ಪ್ರಕರಣ: ಸಹ ಪೈಲಟ್ ಕೃತ್ಯವನ್ನು ಶ್ಲಾಘಿಸಿದ ಅಲ್-ಖೈದಾ
ಫ್ಲೈದುಬೈ ಪ್ರಕರಣ: ಸಹ ಪೈಲಟ್ ಕೃತ್ಯವನ್ನು ಶ್ಲಾಘಿಸಿದ ಅಲ್-ಖೈದಾ