ಕಿಮ್ ಕರ್ದಾಶಿಯಾನ್ ಮೈಮಾಟ ನೋಡಿ ಕಣ್ಣರಳಿಸಿದ ಸಲ್ಮಾನ್ ಖಾನ್; ವಿಡಿಯೋ ವೈರಲ್
ಮುಕೇಶ್ ಅಂಬಾನಿಯ ಪುತ್ರ ಅನಂತ್ ಅಂಬಾನಿಯ ವಿವಾಹಕ್ಕೆ ಬಹುತೇಕ ಅತಿಥಿಗಳು ಜೋಡಿಯಾಗಿ ಬಂದಿದ್ದರು. ಆದರೆ ಸಲ್ಮಾನ್ ಖಾನ್ ಅವರು ಸಿಂಗಲ್ ಆಗಿ ಆಗಮಿಸಿದ್ದರು. ಈ ವೇಳೆ ಅವರು ಕಿಮ್ ಕರ್ದಾಶಿಯಾನ್ ಅವರನ್ನು ಕಣ್ಣರಳಿಸಿ ನೋಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋವನ್ನು ಹಂಚಿಕೊಂಡು ಚರ್ಚೆ ಮಾಡುತ್ತಿದ್ದಾರೆ.
ಮುಂಬೈನಲ್ಲಿ ಇತ್ತೀಚೆಗೆ ಅನಂತ್ ಅಂಬಾನಿಯ ಮದುವೆ ಬಹಳ ವೈಭವದಿಂದ ನಡೆಯಿತು. ಮದುವೆ ಮುಗಿದರೂ ಅದರ ಬಗೆಗಿನ ಸುದ್ದಿಗಳು ನಿಂತಿಲ್ಲ. ಅನೇಕ ವಿಡಿಯೋಗಳು ವೈರಲ್ ಆಗುತ್ತಲೇ ಇವೆ. ನಟ ಸಲ್ಮಾನ್ ಖಾನ್ ಅವರು ಈ ಮದುವೆಗೆ ಹಾಜರಿ ಹಾಕಿದ್ದರು. ಅವರ ಒಂದು ವಿಡಿಯೋ ಈಗ ವೈರಲ್ ಆಗಿದೆ. ಇದರಲ್ಲಿ ಅವರು ವಿದೇಶಿ ಬೆಡಗಿ ಕಿಮ್ ಕರ್ದಾಶಿಯಾನ್ ಅವರನ್ನು ಕಣ್ಣರಳಿಸಿ ನೋಡುತ್ತಿರುವ ದೃಶ್ಯ ಸೆರೆಯಾಗಿದೆ. ಅದನ್ನು ನೋಡಿ ನೆಟ್ಟಿಗರು ಹಲವು ಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ಅಮೆರಿಕದಲ್ಲಿ ಕಿಮ್ ಕರ್ದಾಶಿಯಾನ್ ಅವರು ಸಿಕ್ಕಾಪಟ್ಟೆ ಜನಪ್ರಿಯತೆ ಹೊಂದಿದ್ದಾರೆ. ವಿಶ್ವಾದ್ಯಂತ ಅವರಿಗೆ ಅಭಿಮಾನಿಗಳು ಇದ್ದಾರೆ. ಹಾಟ್ ಆದಂತಹ ಅವತಾರದಲ್ಲಿ ಬಟ್ಟೆ ಧರಿಸುವ ಮೂಲಕ ಅವರು ಆಗಾಗ ಸುದ್ದಿ ಆಗುತ್ತಾರೆ. ಅನಂತ್ ಅಂಬಾನಿಯ ಮದುವೆಗೂ ಅವರು ಬೋಲ್ಡ್ ಆಗಿ ಡ್ರೆಸ್ ಮಾಡಿಕೊಂಡು ಬಂದಿದ್ದರು. ಈ ವೇಳೆ ಅವರನ್ನು ಸಲ್ಮಾನ್ ಖಾನ್ ದಿಟ್ಟಿಸಿ ನೋಡಿದ್ದಾರೆ.
ಇದನ್ನೂ ಓದಿ: ಯೂಟ್ಯೂಬ್ನಲ್ಲಿ ಸಲ್ಮಾನ್ ಖಾನ್ಗೆ ಕೊಲೆ ಬೆದರಿಕೆ ಹಾಕಿದ 25ರ ಯುವಕನ ಬಂಧನ
ರಾಧಿಕಾ ಮರ್ಚೆಂಟ್ ಹಾಗೂ ಅನಂತ್ ಅಂಬಾನಿ ಮದುವೆಗೆ ವಿದೇಶದ ಅನೇಕ ಸೆಲೆಬ್ರಿಟಿಗಳು ಬಂದಿದ್ದರು. ಈ ಸಮಾರಂಭದಲ್ಲಿ ಕಿಮ್ ಕರ್ದಾಶಿಯಾನ್ ಅವರು ಖುಷಿ ಖುಷಿಯಿಂದ ಓಡಾಡಿಕೊಂಡಿದ್ದರು. ಐಶ್ವರ್ಯಾ ರೈ ಬಚ್ಚನ್ ಸೇರಿದಂತೆ ಅನೇಕರ ಜೊತೆ ಅವರು ಫೋಟೋ ತೆಗೆದುಕೊಂಡರು. ಅದೇ ಮದುವೆಗೆ ಅತಿಥಿಯಾಗಿ ಬಂದಿದ್ದ ಸಲ್ಮಾನ್ ಖಾನ್ ಅವರು ಭಾರಿ ಅಚ್ಚರಿಯಿಂದ ಕಿಮ್ ಕರ್ದಾಶಿಯಾನ್ ಅವರನ್ನು ಕಣ್ತುಂಬಿಕೊಂಡಿದ್ದಾರೆ.
Salman Bhai caught in 4k . byu/DressWonderful5396 inBollyBlindsNGossip
ಈ ವಿಡಿಯೋ ನೋಡಿದ ಅನೇಕರು ಬೇರೆ ಬೇರೆ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ಒಂದು ಸೆಕೆಂಡ್ನ ವಿಡಿಯೋವನ್ನು ಈ ರೀತಿ ಸ್ಲೋ ಮೋಷನ್ನಲ್ಲಿ ತೋರಿಸಿದರೆ ಖಂಡಿತವಾಗಿ ಅಪಾರ್ಥ ಆಗುತ್ತದೆ ಎಂದು ಸಲ್ಮಾನ್ ಖಾನ್ ಪರವಾಗಿ ಅಭಿಮಾನಿಗಳು ಬ್ಯಾಟ್ ಬೀಸಿದ್ದಾರೆ. ಕಿಮ್ ಮತ್ತು ಸಲ್ಲು ಜೋಡಿ ಚೆನ್ನಾಗಿರುತ್ತದೆ ಎಂದು ಕೂಡ ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಸಿನಿಮಾ ವಿಚಾರಕ್ಕೆ ಬರುವುದಾದರೆ ಸಲ್ಮಾನ್ ಖಾನ್ ಅವರು ‘ಸಿಕಂದರ್’ ಚಿತ್ರದಲ್ಲಿ ಬ್ಯುಸಿ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.