ಬಾಲಿವುಡ್ನಲ್ಲಿ ವಿದೇಶಿ ನಾಗರಿಕತ್ವ ಹೊಂದಿದವರ ದೊಡ್ಡ ಪಟ್ಟಿಯೇ ಇದೆ..
ಕತ್ರಿನಾ ಕೈಫ್ ಅವರ ಸಣ್ಣ ವಯಸ್ಸಿನಲ್ಲೇ ಮಾಡೆಲಿಂಗ್ ಆರಂಭಿಸಿದರು. ಅವರು ಮಾಡೆಲಿಂಗ್ ಮುಂದುವರಿಸಲು ಲಂಡನ್ಗೆ ತೆರಳಿದರು. ಅವರು ಲಂಡನ್ನಲ್ಲೇ ಕಾಲೇಜ್ ಓದಿದರು. ಅಲ್ಲಿ ಮೂರ್ನಾಲ್ಕು ವರ್ಷ ಸಮಯ ಕಳೆದರು. ಆ ಬಳಿಕ ಬಾಲಿವುಡ್ನಲ್ಲಿ ಸೆಟಲ್ ಆಗಬೇಕು ಎನ್ನುವ ಕಾರಣಕ್ಕೆ ಅವರು ಮರಳಿ ಭಾರತಕ್ಕೆ ಆಗಮಿಸಿದರು. ಕತ್ರಿನಾ ಬಳಿ ಭಾರತೀಯ ನಾಗರಿಕತ್ವ ಇಲ್ಲ. ಅವರು ಬ್ರಿಟನ್ ನಾಗರಿಕತ್ವ ಹೊಂದಿದ್ದಾರೆ.
ಬಾಲಿವುಡ್ನ ಅನೇಕ ಸೆಲೆಬ್ರಿಟಿಗಳು ವಿದೇಶಿ ನಾಗರಿಕತ್ವವನ್ನು ಹೊಂದಿದ್ದಾರೆ. ಈ ಮೊದಲು ಅಕ್ಷಯ್ ಕುಮಾರ್ ಅವರು ಕೆನಡಾದ ನಾಗರಿಕತ್ವ ಹೊಂದಿದ್ದರು. ಇದಕ್ಕೆ ಅವರು ಸಾಕಷ್ಟು ಟೀಕೆಗಳನ್ನು ಎದುರಿಸಬೇಕಾಗಿ ಬಂದಿತ್ತು. ಆದರೆ, ಈಗ ಅವರು ಭಾರತದ ನಾಗರಿಕತ್ವ ಪಡೆದಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಕೂಡ ಆಗಿತ್ತು. ಇದೇ ರೀತಿ ಅನೇಕ ಸೆಲೆಬ್ರಿಟಿಗಳು ವಿದೇಶಿ ನಾಗರಿಕತ್ವ ಹೊಂದಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
ಸನ್ನಿ ಲಿಯೋನ್
ಸನ್ನಿ ಲಿಯೋನ್ ಭಾರತದವರಲ್ಲ. ಅವರದ್ದು ಪಂಜಾಬಿ ಕುಟುಂಬ. ಅವರು ಹುಟ್ಟಿ ಬೆಳೆದಿದ್ದು ಕೆನಡಾದಲ್ಲಿ. ಅವರು ಅಲ್ಲಿ ಪಾರ್ನ್ ಸ್ಟಾರ್ ಆಗಿದ್ದರು. ಒಂದು ದಿನ ಎಲ್ಲವನ್ನೂ ತೊರೆಯುವ ನಿರ್ಧಾರಕ್ಕೆ ಬಂದರು. ಆ ಬಳಿಕ ಅವರಿಗೆ ಬಿಗ್ ಬಾಸ್ ಕಡೆಯಿಂದ ಆಫರ್ ಬಂತು. ನಂತರ ಅವರು ಬಾಲಿವುಡ್ನಲ್ಲಿ ಸೆಟಲ್ ಆದರು. ಅವರು ಕೆನಡಾ ನಾಗರಿಕತ್ವ ಹೊಂದಿದ್ದಾರೆ.
ಕತ್ರಿನಾ ಕೈಫ್
ಕತ್ರಿನಾ ಕೈಫ್ ಅವರು ಬಾಲಿವುಡ್ನಲ್ಲಿ ಹೆಸರು ಮಾಡಿದ್ದಾರೆ. ಅವರಿಗೆ ಇಲ್ಲಿ ಸಖತ್ ಬೇಡಿಕೆ ಇದೆ. ವಿಕ್ಕಿ ಕೌಶಲ್ ಅವರನ್ನು ಮದುವೆ ಆಗಿ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಅವರು ಬ್ರಿಟನ್ ನಾಗರಿಕತ್ವ ಹೊಂದಿದ್ದಾರೆ. ಅವರು ಆಗಾಗ ಬ್ರಿಟನ್ನಲ್ಲಿ ಕಾಣಿಸಿಕೊಳ್ಳುತ್ತಾರೆ. ಅವರ ತಾಯಿ ಬ್ರಿಟನ್ ಅವರು.
ಜಾಕ್ವೆಲಿನ್ ಫರ್ನಾಂಡಿಸ್
ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ಹುಟ್ಟಿದ್ದು ಬಹ್ರೇನ್ನಲ್ಲಿ. ಅವರ ಕುಟುಂಬ ಅಲ್ಲಿಯೇ ಸೆಟಲ್ ಆಗಿದೆ. ಅವರು ಶ್ರೀಲಂಕಾ ನಾಗರಿಕತ್ವ ಹೊಂದಿದ್ದಾರೆ. ಇತ್ತೀಚೆಗೆ ಅವರು ವಿವಾದಗಳ ಮೂಲಕ ಸುದ್ದಿ ಆಗುತ್ತಿದ್ದಾರೆ. 200 ಕೋಟಿ ರೂಪಾಯಿ ವಂಚನೆ ಎಸಗಿದವನ ಜೊತೆ ಜಾಕ್ವೆಲಿನ್ ಸುತ್ತಾಡಿದ್ದೇ ಇದಕ್ಕೆಲ್ಲ ಕಾರಣ.
ಇಮ್ರಾನ್ ಖಾನ್
ಇಮ್ರಾನ್ ಖಾನ್ ಅವರು ಬಾಲಿವುಡ್ನಲ್ಲಿ ಕೆಲ ವರ್ಷ ಬ್ಯುಸಿ ಇದ್ದರು. ಆ ಬಳಿಕ ಅವರು ಬಾಲಿವುಡ್ ತೊರೆದರು. ಈಗ ಅವರು ವಿದೇಶದಲ್ಲಿ ಸೆಟಲ್ ಆಗಿದ್ದಾರೆ. ಅವರ ಬಳಿ ಅಮೆರಿಕ ನಾಗರಿಕತ್ವ ಇದೆ. ಆಮಿರ್ ಖಾನ್ ಮಗಳು ಇರಾ ಖಾನ್ ಮದುವೆಯಲ್ಲಿ ಅವರು ಕಾಣಿಸಿಕೊಂಡಿದ್ದರು.
ನೋರಾ ಫತೇಹಿ
ನೋರಾ ಫತೇಹಿ ಬಾಲಿವುಡ್ನ ಖ್ಯಾತ ಡ್ಯಾನ್ಸರ್ ಹಾಗೂ ನಟಿ. ಅವರಿಗೆ ಸಖತ್ ಬೇಡಿಕೆ ಇದೆ. ಅವರಿಗೆ ಕೋಟ್ಯಾಂತರ ಮಂದಿ ಹಿಂಬಾಲಕರು ಇದ್ದಾರೆ. ಅವರು ಕೆನಡಾ ನಾಗರಿಕತ್ವ ಹೊಂದಿದ್ದಾರೆ ಅನ್ನೋದು ವಿಶೇಷ.
ಕಲ್ಕಿ
‘ಜಿಂದಗಿ ನಾ ಮಿಲೇಗಿ ದೊಬಾರಾ’ ಸಿನಿಮಾದಲ್ಲಿ ನಟಿಸಿ ಗಮನ ಸೆಳೆದರು ಕಲ್ಕಿ. ಇವರು ಇನ್ನೂ ಕೆಲವು ಸಿನಿಮಾಗಳಲ್ಲಿನಟಿಸಿದ್ದಾರೆ. ಅವರು ಫ್ರಾನ್ಸ್ ನಾಗರಿಕತ್ವ ಹೊಂದಿದ್ದಾರೆ.
ಇದನ್ನೂ ಓದಿ: ತುಂಬು ಗರ್ಭಿಣಿ ದೀಪಿಕಾ ಪಡುಕೋಣೆ ಹೊಟ್ಟೆ ಮೇಲೆ ಕೈ ಇಟ್ಟ ಒರಿ; ಫ್ಯಾನ್ಸ್‌ಗೆ ಕಿರಿಕಿರಿ
ದೀಪಿಕಾ
ನಟಿ ದೀಪಿಕಾ ಪಡುಕೋಣೆ ಅವರು ಹುಟ್ಟಿದ್ದು ಡೆನ್ಮಾರ್ಕ್ನಲ್ಲಿ. ಸದ್ಯ ಅವರು ಬಾಲಿವುಡ್ನಲ್ಲಿ ಸೆಟಲ್ ಆಗಿದ್ದಾರೆ. ಅವರು ಡೆನ್ಮಾರ್ಕ್ನ ನಾಗರಿಕತ್ವ ಹೊಂದಿದ್ದಾರೆ ಎನ್ನಲಾಗಿತ್ತು. ಆದರೆ, ಅವರು ಭಾರತದ ನಾಗರಿಕತ್ವ ಹೊಂದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.