ತುಂಬು ಗರ್ಭಿಣಿ ದೀಪಿಕಾ ಪಡುಕೋಣೆ ಹೊಟ್ಟೆ ಮೇಲೆ ಕೈ ಇಟ್ಟ ಒರಿ; ಫ್ಯಾನ್ಸ್​ಗೆ ಕಿರಿಕಿರಿ

ಸಿಕ್ಕಸಿಕ್ಕ ಸೆಲೆಬ್ರಿಟಿಗಳ ಮೈಮೇಲೆ ಕೈ ಇಟ್ಟು ಫೋಟೋಗೆ ಪೋಸ್​ ನೀಡುವುದು ಒರಿ ಅಭ್ಯಾಸ. ಈಗ ದೀಪಿಕಾ ಪಡುಕೋಣೆ ಬೇಬಿ ಬಂಪ್​ ಮೇಲೂ ಒರಿ ಕೈ ಇಟ್ಟು ಫೋಟೋ ತೆಗೆಸಿಕೊಂಡಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಈ ಫೋಟೋ ವೈರಲ್​ ಆಗಿದ್ದು, ನೆಟ್ಟಿಗರ ಗಮನ ಸೆಳೆದಿದೆ. ಅಂದಹಾಗೆ, ಈ ಫೋಟೋ ಕ್ಲಿಕ್ಕಿಸಿದ್ದು ಅನಂತ್​ ಅಂಬಾನಿಯ ಸಂಗೀತ್ ಕಾರ್ಯಕ್ರಮದಲ್ಲಿ.

ತುಂಬು ಗರ್ಭಿಣಿ ದೀಪಿಕಾ ಪಡುಕೋಣೆ ಹೊಟ್ಟೆ ಮೇಲೆ ಕೈ ಇಟ್ಟ ಒರಿ; ಫ್ಯಾನ್ಸ್​ಗೆ ಕಿರಿಕಿರಿ
ರಣವೀರ್​ ಸಿಂಗ್​, ಒರಿ, ದೀಪಿಕಾ ಪಡುಕೋಣೆ
Follow us
ಮದನ್​ ಕುಮಾರ್​
|

Updated on: Jul 11, 2024 | 5:53 PM

ಬಾಲಿವುಡ್​ ಸೆಲೆಬ್ರಿಟಿಗಳ ಆಪ್ತ ಎನಿಸಿಕೊಂಡಿರುವ ಒರಿ ಅಲಿಯಾಸ್​ ಒರ್ಹಾನ್​ ಅವತ್ರಮಣಿ ಫೋಟೋಗಳು ಆಗಾಗ ವೈರಲ್​ ಆಗುತ್ತವೆ. ಈಗ ಅವರು ಹಂಚಿಕೊಂಡ ಲೇಟೆಸ್ಟ್​ ಫೋಟೋ ಕೂಡ ಸಖತ್​ ವೈರಲ್​ ಆಗಿದೆ. ಅದಕ್ಕೆ ಕಾರಣ ಆಗಿರುವುದು ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್​ ನೀಡಿದ ಪೋಸ್​. ದೀಪಿಕಾ ಪಡುಕೋಣೆ ಅವರು ಈಗ ತುಂಬು ಗರ್ಭಿಣಿ. ಅವರ ಹೊಟ್ಟೆಯ ಮೇಲೆ ಒರಿ ಕೈ ಇಟ್ಟಿದ್ದಾರೆ. ಇದನ್ನು ನೋಡಿ ನೆಟ್ಟಿಗರು ಹಲವು ಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ಒರಿ ವರ್ತನೆ ಕಂಡು ದೀಪಿಕಾ ಪಡುಕೋಣೆ ಅವರ ಅಪ್ಪಟ ಅಭಿಮಾನಿಗಳಿಗೆ ಕಿರಿಕಿರಿ ಆಗಿದೆ.

ಬಿ-ಟೌನ್​ ಸೆಲೆಬ್ರಿಟಿಗಳು ಎಲ್ಲಿ ಪಾರ್ಟಿ ಮಾಡಿದರೂ ಅಲ್ಲಿ ಒರಿ ಹಾಜರಿ ಹಾಕುತ್ತಾರೆ. ಪಾರ್ಟಿಗೆ ಬರುವ ಎಲ್ಲ ಸೆಲೆಬ್ರಿಟಿಗಳ ಜೊತೆ ಒರಿ ಫೋಟೋ ತೆಗೆದುಕೊಳ್ಳುತ್ತಾರೆ. ಒಂದು ರೀತಿಯ ವಿಚಿತ್ರ ಭಂಗಿಯಲ್ಲಿ ಅವರು ಪೋಸ್​ ನೀಡುತ್ತಾರೆ. ಸೆಲೆಬ್ರಿಟಿಗಳು ಜೊತೆ ಹೆಚ್ಚು ಸಲುಗೆ ಇರುವ ಹಾಗೆ ಒರಿ ಪೋಸ್​ ಕೊಡುತ್ತಾರೆ. ಅದಕ್ಕೆ ಲೇಟೆಸ್ಟ್​ ಉದಾಹರಣೆಯೇ ಈ ಫೋಟೋ.

View this post on Instagram

A post shared by Orhan Awatramani (@orry)

ಅನಂತ್​ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್​ ಅವರ ಸಂಗೀತ್​ ಕಾರ್ಯಕ್ರಮದಲ್ಲಿ ಬಾಲಿವುಡ್​ ಮಂದಿ ಭಾಗವಹಿಸಿದ್ದಾರೆ. ರಣವೀರ್​ ಸಿಂಗ್​ ಮತ್ತು ದೀಪಿಕಾ ಪಡುಕೋಣೆ ಕೂಡ ಈ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಜೊತೆ ಫೋಟೋಗೆ ಪೋಸ್​ ನೀಡುವಾಗ ದೀಪಿಕಾ ಅವರ ಬೇಬಿ ಬಂಪ್​ ಮೇಲೆ ಒರಿ ಕೈ ಇಟ್ಟಿದ್ದಾರೆ. ಹೀಗೆಲ್ಲ ಮಾಡಲು ಒರಿಗೆ ಮಾತ್ರ ಸಾಧ್ಯ ಎಂದು ಅನೇಕರು ಕಮೆಂಟ್​ ಮಾಡಿದ್ದಾರೆ. ಈತನದ್ದು ಅತಿಯಾಯ್ತು ಎಂದು ಕೂಡ ಕೆಲವರು ಅಭಿಪ್ರಾಯಪಟ್ಟಿದ್ದಾರೆ. ‘ದೀಪಿಕಾ ಇದಕ್ಕೆ ಅವಕಾಶ ನೀಡಬಾರದಿತ್ತು’ ಎಂಬ ಕಮೆಂಟ್​ ಕೂಡ ಬಂದಿದೆ.

ಇದನ್ನೂ ಓದಿ: ‘ದೀಪಿಕಾ ಪಡುಕೋಣೆಗೆ ಗಂಡು ಮಗು ಜನಿಸಲಿದೆ’: ಭವಿಷ್ಯ ನುಡಿದ ಜ್ಯೋತಿಷಿ

ದೀಪಿಕಾ ಪಡುಕೋಣೆ ಅವರು ಬಾಲಿವುಡ್​ನಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಹೊಂದಿದ್ದಾರೆ. ಈಗ ಅವರು ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿ ಇದ್ದಾರೆ. ಸದ್ಯದಲ್ಲೇ ಅವರು ಮಗುವಿಗೆ ಜನ್ಮ ನೀಡಲಿದ್ದಾರೆ. ಪ್ರೆಗ್ನೆಂಟ್​ ಆಗಿರುವುದರಿಂದ ಅವರು ಸಿನಿಮಾ ಕೆಲಸಗಳಿಗೆ ಬ್ರೇಕ್​ ನೀಡಿದ್ದಾರೆ. ಒಂದಷ್ಟು ತಿಂಗಳ ಕಾಲ ಅವರು ಸಿನಿಮಾ ಚಟುವಟಿಕೆಗಳಿಂದ ದೂರ ಉಳಿಯಲಿದ್ದಾರೆ. ಕೆಲವು ವಾರಗಳ ಹಿಂದೆ ‘ಕಲ್ಕಿ 2989 ಎಡಿ’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ದೀಪಿಕಾ ಪಡುಕೋಣೆ ಪಾಲ್ಗೊಂಡಿದ್ದರು. ಈಗ ಅವರು ಅನಂತ್​ ಅಂಬಾನಿ-ರಾಧಿಕಾ ಮರ್ಚೆಂಟ್​ ಸಂಗೀತ್​ ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.