AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ದೀಪಿಕಾ ಪಡುಕೋಣೆಗೆ ಗಂಡು ಮಗು ಜನಿಸಲಿದೆ’: ಭವಿಷ್ಯ ನುಡಿದ ಜ್ಯೋತಿಷಿ

ಬಾಲಿವುಡ್​ ನಟಿ ದೀಪಿಕಾ ಪಡುಕೋಣೆ ಅವರು ಸಿನಿಮಾ ಕೆಲಸಗಳಿಗೆ ಈಗ ಬ್ರೇಕ್​ ನೀಡಿದ್ದಾರೆ. ಪ್ರೆಗ್ನೆಂಟ್​ ಆಗಿರುವ ಅವರು ಸೆಪ್ಟೆಂಬರ್​ನಲ್ಲಿ ಮೊದಲ ಮಗುವಿಗೆ ಜನ್ಮ ನೀಡಲಿದ್ದಾರೆ. ಅವರಿಗೆ ಗಂಡು ಮಗು ಜನಿಸಲಿದೆ ಎಂದು ಪಂಡಿತ್​ ಜಗನ್ನಾಥ್​ ಗುರೂಜಿ ಭವಿಷ್ಯ ನುಡಿದಿದ್ದಾರೆ. ಅವರ ಮಾತು ನಿಜವಾಗತ್ತೋ ಇಲ್ಲವೋ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.

‘ದೀಪಿಕಾ ಪಡುಕೋಣೆಗೆ ಗಂಡು ಮಗು ಜನಿಸಲಿದೆ’: ಭವಿಷ್ಯ ನುಡಿದ ಜ್ಯೋತಿಷಿ
ದೀಪಿಕಾ ಪಡುಕೋಣೆ, ರಣವೀರ್​ ಸಿಂಗ್​
ಮದನ್​ ಕುಮಾರ್​
|

Updated on: Jul 05, 2024 | 8:35 PM

Share

ನಟಿ ದೀಪಿಕಾ ಪಡುಕೋಣೆ (Deepika Padukone) ಅವರ ಬದುಕಿನಲ್ಲಿ ಸದ್ಯದಲ್ಲೇ ಹೊಸ ಅಧ್ಯಾಯ ಆರಂಭ ಆಗಲಿದೆ. ಶೀಘ್ರವೇ ಅವರು ಮೊದಲ ಮಗುವಿಗೆ ಜನ್ಮ ನೀಡಲಿದ್ದಾರೆ. ರಣವೀರ್​ ಸಿಂಗ್​ ಮತ್ತು ದೀಪಿಕಾ ಪಡುಕೋಣೆ ದಂಪತಿಗೆ ಗಂಡು ಮಗು ಜನಿಸಲಿದೆಯೋ ಅಥವಾ ಹೆಣ್ಣು ಮಗು ಜನಿಸಲಿದೆಯೋ ಎಂಬ ಬಗ್ಗೆ ಈಗಲೇ ಚರ್ಚೆ ಶುರುವಾಗಿದೆ. ಸೋಶಿಯಲ್​ ಮೀಡಿಯಾದಲ್ಲಿ ಫೇಮಸ್​ ಆಗಿರುವ ಪಂಡಿತ್​ ಜಗನ್ನಾಥ್​ ಗುರೂಜಿ (Pandit Jagannath Guruji) ಅವರು ಈ ವಿಚಾರದಲ್ಲಿ ಭವಿಷ್ಯ ನುಡಿದಿರುವುದು ಸುದ್ದಿ ಆಗಿದೆ. ದೀಪಿಕಾ ಪಡುಕೋಣೆ ಅವರು ಗಂಡು ಮಗುವಿಗೆ (Baby Boy) ಜನ್ಮ ನೀಡಲಿದ್ದಾರೆ ಎಂದು ಜಗನ್ನಾಥ್​ ಗುರೂಜಿ ಹೇಳಿದ್ದಾರೆ.

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪಂಡಿತ್​ ಜಗನ್ನಾಥ್​ ಗುರೂಜಿ ಅವರು ಭವಿಷ್ಯ ನುಡಿದಿದ್ದಾರೆ. ದೀಪಿಕಾ ಪಡುಕೋಣೆ ಮತ್ತು ರಣವೀರ್​ ಸಿಂಗ್​ ಅವರಿಗೆ ಜನಿಸಲಿರುವ ಗಂಡು ಮಗು ಅದೃಷ್ಟವನ್ನು ತರಲಿದೆ ಎಂದು ಅವರು ಹೇಳಿದ್ದಾರೆ. ಗಂಡು ಮಗು ಜನಿಸಲಿದೆ ಎಂದು ಅವರು ಹೇಳಿರುವ ಭವಿಷ್ಯ ನಿಜವಾಗುತ್ತೋ ಇಲ್ಲವೋ ಎಂಬುದನ್ನು ತಿಳಿಯಲು ಫ್ಯಾನ್ಸ್​ ಕಾದಿದ್ದಾರೆ.

ಇದನ್ನೂ ಓದಿ: 1.2 ಲಕ್ಷ ರೂಪಾಯಿ ಬೆಲೆಯ ಡ್ರೆಸ್​ ಧರಿಸಿ ಬಂದ ಪ್ರೆಗ್ನೆಂಟ್​ ದೀಪಿಕಾ ಪಡುಕೋಣೆ

ಈ ವರ್ಷ ಫೆಬ್ರವರಿ 29ರಂದು ರಣವೀರ್​ ಸಿಂಗ್​ ಮತ್ತು ದೀಪಿಕಾ ಪಡುಕೋಣೆ ಅವರು ಪ್ರೆಗ್ನೆನ್ಸಿ ವಿಷಯವನ್ನು ತಿಳಿಸಿದರು. ಸೆಪ್ಟೆಂಬರ್​ನಲ್ಲಿ ದೀಪಿಕಾ ಪಡುಕೋಣೆ ಅವರು ತಾಯಿ ಆಗಲಿದ್ದಾರೆ. ತುಂಬು ಗರ್ಭಿಣಿ ಆಗಿರುವ ಅವರು ಇತ್ತೀಚೆಗೆ ‘ಕಲ್ಕಿ 2898 ಎಡಿ’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಭಾಗಿ ಆಗಿದ್ದರು. ಈ ಸಿನಿಮಾದಲ್ಲಿಯೂ ಅವರು ಗರ್ಭಿಣಿಯ ಪಾತ್ರ ಮಾಡಿ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ: ಸಂಭಾವನೆಯಲ್ಲಿ ದೀಪಿಕಾ ಪಡುಕೋಣೆ ನಂಬರ್​ 1; ಕಂಗನಾ, ಆಲಿಯಾಗೆ ಎಷ್ಟನೇ ಸ್ಥಾನ?

ದೀಪಿಕಾ ಪಡುಕೋಣೆ ಅವರಿಗೆ ಚಿತ್ರರಂಗದಲ್ಲಿ ತುಂಬ ಬೇಡಿಕೆ ಇದೆ. ಈ ನಡುವೆ ಅವರು ವೈಯಕ್ತಿಕ ಜೀವನದ ಕಡೆಗೆ ಗಮನ ಹರಿಸಿದ್ದಾರೆ. ಪ್ರೆಗ್ನೆಂಟ್​ ಆಗಿರುವುದರಿಂದ ಸದ್ಯಕ್ಕೆ ಸಿನಿಮಾ ಕೆಲಸಗಳಿಂದ ಅವರು ದೂರು ಉಳಿದುಕೊಂಡಿದ್ದಾರೆ. ಅವರು ನಟಿಸಿರುವ ‘ಸಿಂಗಂ ಅಗೇನ್​’ ಸಿನಿಮಾದ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆ ಇದೆ. ಇದೇ ಸಿನಿಮಾದಲ್ಲಿ ರಣವೀರ್​ ಸಿಂಗ್​ ಕೂಡ ನಟಿಸಿದ್ದಾರೆ. ರೋಹಿತ್​ ಶೆಟ್ಟಿ ನಿರ್ದೇಶನ ಮಾಡಿರುವ ಈ ಸಿನಿಮಾ ನವೆಂಬರ್​ 1ರಂದು ಬಿಡುಗಡೆ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಡಿಕೆ ಶಿವಕುಮಾರ್ ಸಿಎಂ ಆಗುವುದು ಗ್ಯಾರಂಟಿನಾ?ವಿಶ್ವಾಸದಲ್ಲಿ ಡಿಕೆಶಿ ಆಪ್ತರು
ಡಿಕೆ ಶಿವಕುಮಾರ್ ಸಿಎಂ ಆಗುವುದು ಗ್ಯಾರಂಟಿನಾ?ವಿಶ್ವಾಸದಲ್ಲಿ ಡಿಕೆಶಿ ಆಪ್ತರು
ಕಾರಿಗೆ ಗುದ್ದಿ ಪಾದಚಾರಿ ಮೇಲೆ ಕ್ಯಾಂಟರ್ ಪಲ್ಟಿ​​: ಎದೆ ಝಲ್ ಎನಿಸೋ ದೃಶ್ಯ!
ಕಾರಿಗೆ ಗುದ್ದಿ ಪಾದಚಾರಿ ಮೇಲೆ ಕ್ಯಾಂಟರ್ ಪಲ್ಟಿ​​: ಎದೆ ಝಲ್ ಎನಿಸೋ ದೃಶ್ಯ!
ಬಾರ್​ಗೆ ನುಗ್ಗಿದ ಕೊಬ್ಬರಿ ಹೋರಿ, ಮದ್ಯಪ್ರಿಯರು ಕಕ್ಕಾಬಿಕ್ಕಿ!
ಬಾರ್​ಗೆ ನುಗ್ಗಿದ ಕೊಬ್ಬರಿ ಹೋರಿ, ಮದ್ಯಪ್ರಿಯರು ಕಕ್ಕಾಬಿಕ್ಕಿ!
ರಾಯಚೂರಲ್ಲೂ ಘರ್ಜಿಸಿದ ಜೆಸಿಬಿಗಳು: 20ಕ್ಕೂ ಅಧಿಕ ಮನೆಗಳ ತೆರವು
ರಾಯಚೂರಲ್ಲೂ ಘರ್ಜಿಸಿದ ಜೆಸಿಬಿಗಳು: 20ಕ್ಕೂ ಅಧಿಕ ಮನೆಗಳ ತೆರವು
ಅಪಾರ್ಟ್ಮೆಂಟ್​​ನಲ್ಲಿ ಸಿಲುಕಿಕೊಂಡ ಬೆಕ್ಕನ್ನು ಕಾಪಾಡಿದ ಅಗ್ನಿಶಾಮಕ ದಳ
ಅಪಾರ್ಟ್ಮೆಂಟ್​​ನಲ್ಲಿ ಸಿಲುಕಿಕೊಂಡ ಬೆಕ್ಕನ್ನು ಕಾಪಾಡಿದ ಅಗ್ನಿಶಾಮಕ ದಳ
ಹುಟ್ಟೂರಿನಲ್ಲಿ ಮನೆ ದೇವರಿಗೆ ಪೂಜೆ ಸಲ್ಲಿಸಿದ ಹೆಚ್.ಡಿ.ದೇವೇಗೌಡ
ಹುಟ್ಟೂರಿನಲ್ಲಿ ಮನೆ ದೇವರಿಗೆ ಪೂಜೆ ಸಲ್ಲಿಸಿದ ಹೆಚ್.ಡಿ.ದೇವೇಗೌಡ
ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಿಲ್ಲದ ಹಿಂಸಾಚಾರ, ಹಿಂದೂಗಳ ಮನೆಗಳಿಗೆ ಬೆಂಕಿ
ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಿಲ್ಲದ ಹಿಂಸಾಚಾರ, ಹಿಂದೂಗಳ ಮನೆಗಳಿಗೆ ಬೆಂಕಿ
ಬಾರ್​​​ನಲ್ಲಿ ಸಿಗರೇಟ್ ವಿಚಾರಕ್ಕೆ ಜಗಳ:ಚಾಕು ಇರಿದು ಯುವಕನಿಗೆ ಹಲ್ಲೆ
ಬಾರ್​​​ನಲ್ಲಿ ಸಿಗರೇಟ್ ವಿಚಾರಕ್ಕೆ ಜಗಳ:ಚಾಕು ಇರಿದು ಯುವಕನಿಗೆ ಹಲ್ಲೆ
ಐದೇ ನಿಮಿಷ, ಪಕ್ಕಾ ಪ್ಲ್ಯಾನ್​​: ಕೆಜಿಗಟ್ಟಲೆ ಚಿನ್ನ ಕದ್ದು ಎಸ್ಕೇಪ್​
ಐದೇ ನಿಮಿಷ, ಪಕ್ಕಾ ಪ್ಲ್ಯಾನ್​​: ಕೆಜಿಗಟ್ಟಲೆ ಚಿನ್ನ ಕದ್ದು ಎಸ್ಕೇಪ್​
‘ಉತ್ತರ ಕರ್ನಾಟಕ ಅಳ್ತಿದೆ, ಯಾರನ್ನೂ ವಿನ್ನರ್ ಅಂತ ಒಪ್ಪಿಕೊಳ್ಳಲ್ಲ’; ಮಾಳು
‘ಉತ್ತರ ಕರ್ನಾಟಕ ಅಳ್ತಿದೆ, ಯಾರನ್ನೂ ವಿನ್ನರ್ ಅಂತ ಒಪ್ಪಿಕೊಳ್ಳಲ್ಲ’; ಮಾಳು