‘ಜನ್ಮದಿನಕ್ಕೆ ಹಾಲಿಡೇ ಹೋಗೋಣ’; ಜೈಲಿನಿಂದಲೇ ಜಾಕ್ವೆಲಿನ್​ಗೆ ಭರವಸೆ ನೀಡಿದ ಸುಕೇಶ್ ಚಂದ್ರಶೇಖರ್  

ಜಾಕ್ವೆಲಿನ್ ಫರ್ನಾಂಡಿಸ್ ಅವರು ಸದ್ಯ ಸಂಕಷ್ಟದಲ್ಲಿದ್ದಾರೆ. ವಂಚಕ ಸುಕೇಶ್ ಸಹವಾಸ ಮಾಡಿದ್ದಕ್ಕೆ ಜಾರಿ ನಿರ್ದೇಶನಾಲಯದಿಂದ ವಿಚಾರಣೆ ಎದುರಿಸುತ್ತಿದ್ದಾರೆ. ಈಗ ಸುಕೇಶ್ ಅವರು ಜೈಲಿನಿಂದಲೇ ಪತ್ರ ಬರೆದಿದ್ದಾನೆ. ‘ಜನ್ಮದಿನಕ್ಕೆ ಹಾಲಿಡೇ ಹೋಗೋಣ’ ಎಂದು ಭರವಸೆ ನೀಡಿದ್ದಾನೆ. ಜಾಕ್ವೆಲಿನ್​ಗೆ ನಿರಂತರವಾಗಿ ತೊಂದರೆಗಳು ಎದುರಾಗುತ್ತಲೇ ಇವೆ.

‘ಜನ್ಮದಿನಕ್ಕೆ ಹಾಲಿಡೇ ಹೋಗೋಣ’; ಜೈಲಿನಿಂದಲೇ ಜಾಕ್ವೆಲಿನ್​ಗೆ ಭರವಸೆ ನೀಡಿದ ಸುಕೇಶ್ ಚಂದ್ರಶೇಖರ್  
ಸುಕೇಶ್-ಜಾಕ್ವೆಲಿನ್
Follow us
ರಾಜೇಶ್ ದುಗ್ಗುಮನೆ
|

Updated on: Jul 11, 2024 | 7:33 AM

ಸುಕೇಶ್ ಚಂದ್ರಶೇಖರ್ ಮಾಡಿದ ಹಗರಣಗಳು ಒಂದೆರಡಲ್ಲ. ಉದ್ಯಮಿಗಳಿಗೆ ಈತ 200 ಕೋಟಿ ರೂಪಾಯಿ ವಂಚನೆ ಮಾಡಿದ್ದಾನೆ. ಶಾಕಿಂಗ್ ವಿಚಾರ ಎಂದರೆ ಈ ವಂಚನೆಯಿಂದ ಬಂದ ಹಣವನ್ನು ಆತ ವಿವಿಧ ರೀತಿಯಲ್ಲಿ ಬಳಕೆ ಮಾಡಿಕೊಂಡಿದ್ದ. ಸದ್ಯ ಈತ ಜೈಲಿನಲ್ಲಿ ಇದ್ದಾನೆ. ನಟಿ ಜಾಕ್ವೆಲಿನ್ ಫರ್ನಾಂಡಿಸ್ ಜೊತೆ ಸುಕೇಶ್ ರಿಲೇಶನ್​ಶಿಪ್​ನಲ್ಲಿ ಇದ್ದ ಎನ್ನಲಾಗಿದೆ. ಈ ಕಾರಣದಿಂದಲೇ ಜಾಕ್ವೆಲಿನ್ ಅವರು ವಿಚಾರಣೆ ಎದುರಿಸುತ್ತಿದ್ದಾರೆ. ಹೀಗಿರುವಾಗಲೇ ಜಾಕ್ವೆಲಿನ್​ಗೆ ಸುಕೇಶ್ ಪತ್ರ ಬರೆದಿದ್ದಾನೆ. ಅವರನ್ನು ಹಾಲಿಡೇಗೆ ಕರೆದುಕೊಂಡು ಹೋಗುವ ಭರವಸೆ ನೀಡಿದ್ದಾನೆ.

ಆಗಸ್ಟ್ 11 ಜಾಕ್ವಲಿನ್ ಫರ್ನಾಂಡಿಸ್ ಬರ್ತ್​ಡೇ. ಅವರ ಜನ್ಮದಿನಕ್ಕೆ ಒಂದು ತಿಂಗಳು ಇರುವಾಗಲೇ ಸುಕೇಶ್ ಪತ್ರ ಬರೆಯೋಕೆ ಆರಂಭಿಸಿದ್ದಾನೆ. ನಟಿಗೆ ಬರೆದ ಪತ್ರದಲ್ಲಿ ‘ಪ್ರೈವೆಟ್ ಜೆಟ್​ನಲ್ಲಿ ಹಾಲಿಡೇಗೆ ಕರೆದುಕೊಂಡು ಹೋಗುತ್ತೇನೆ, 100 ಅಭಿಮಾನಿಗಳಿಗೆ ಐಫೋನ್ 15 ಮ್ಯಾಕ್ಸ್ ಪ್ರೋ ನೀಡುತ್ತೇನೆ. ಸದಾ ನಿಮ್ಮ ಆಲೋಚನೆಯಲ್ಲಿ ಇರುತ್ತೇನೆ’ ಎಂದು ಬರೆದಿದ್ದಾನೆ.

ಈ ಪತ್ರದಲ್ಲಿ ಜಾಕ್ವೆಲಿನ್ ಅವರನ್ನು ಬೊಮ್ಮ, ಬೇಬಿ ಗರ್ಲ್ ಎಂಬಿತ್ಯಾದಿ ಶಬ್ದಗಳಿಂದ ಕರೆದಿದ್ದಾನೆ ಸುಕೇಶ್. ‘ನಿಮ್ಮ ನಗು ನನ್ನ ಹೃದಯವನ್ನು ಕರಗಿಸುತ್ತದೆ. ನಾನು ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಿಮ್ಮನ್ನು ನೋಡಬೇಕು. ನೀವು ನನ್ನ ನಿಜವಾದ ಸೋಲ್​ಮೇಟ್’ ಎಂದು ಕೂಡ ಸುಕೇಶ್ ಹೇಳಿದ್ದಾನೆ.

ಇದನ್ನೂ ಓದಿ: ಸುಕೇಶ್​ ಚಂದ್ರಶೇಖರ್​ ವಿರುದ್ಧವೇ ತಿರುಗಿಬಿದ್ದ ಜಾಕ್ವೆಲಿನ್​ ಫರ್ನಾಂಡಿಸ್​; ದೂರು ದಾಖಲು

ಸುಕೇಶ್ ಈ ರೀತಿ ವ್ಯಕ್ತಿ ಎಂಬ ವಿಚಾರ ಗೊತ್ತಿಲ್ಲದೆ ಅವರ ಜೊತೆ ಜಾಕ್ವೆಲಿನ್ ಸುತ್ತಾಟ ನಡೆಸಿದ್ದರು. ಇದರಿಂದ ಅವರು ಸಾಕಷ್ಟು ತೊಂದರ ಅನುಭವಿಸಬೇಕಾಯಿತು. ಜಾಕ್ವೆಲಿನ್​ಗೆ ದುಬಾರಿ ಕುದುರೆ, ಬೆಕ್ಕುಗಳನ್ನು ಸುಕೇಶ್ ಉಡುಗೊರೆಯಾಗಿ ನೀಡಿದ್ದ. ಇದರಿಂದ ಅವರಿಗೆ ಸಾಕಷ್ಟು ಸಮಸ್ಯೆ ಆಗಿದೆ. ಈಗಾಗಲೇ ಅವರು ಸಾಕಷ್ಟು ಬಾರಿ ಜಾರಿ ನಿರ್ದೇಶನಾಲಯ ಅಧಿಕಾರಿಗಳಿಂದ ವಿಚಾರಣೆ ಎದುರಿಸಿದ್ದಾರೆ. ಈಗ ಮತ್ತೊಮ್ಮೆ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಬಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.