ಆ್ಯಕ್ಷನ್ ದೃಶ್ಯ ಮಾಡಲು ಹೋಗಿ ಕಾಲು ಮುರಿದುಕೊಂಡ ನಟಿ ಊರ್ವಶಿ ರೌಟೇಲಾ

ನಟಿ ಊರ್ವಶಿ ರೌಟೇಲಾ ಅವರು ಆಗಾಗ ಸುದ್ದಿ ಆಗುತ್ತಾರೆ. ಅವರು ವಿವಾದಗಳ ಮೂಲಕ ಸುದ್ದಿ ಆಗುತ್ತಾರೆ. ಈಗ ಅವರು ಕಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ. ಇದರಿಂದ ಹೈದರಾಬಾದ್​ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಪ್ರಾಣಕ್ಕೆ ಯಾವುದೇ ತೊಂದರೆ ಆಗಿಲ್ಲ ಎಂದು ವರದಿ ಆಗಿದೆ.  

ಆ್ಯಕ್ಷನ್ ದೃಶ್ಯ ಮಾಡಲು ಹೋಗಿ ಕಾಲು ಮುರಿದುಕೊಂಡ ನಟಿ ಊರ್ವಶಿ ರೌಟೇಲಾ
ಊರ್ವಶಿ
Follow us
| Updated By: ರಾಜೇಶ್ ದುಗ್ಗುಮನೆ

Updated on: Jul 10, 2024 | 8:47 AM

ನಟಿ ಊರ್ವಶಿ ರೌಟೇಲಾ ಅವರು ಆಗಾಗ ಸುದ್ದಿ ಆಗುತ್ತಲೇ ಇರುತ್ತಾರೆ. ವಿವಾದಗಳು ಇದ್ದರೆ ಹೋಗಿ ಅದನ್ನು ಬಿಗಿದಪ್ಪುತ್ತಾರೆ. ಈಗ ಊರ್ವಶಿ ಅವರು ಬೇರೆ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಬಾಲಯ್ಯ ಅವರ 109ನೇ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಕಾಲಿಗೆ ಪೆಟ್ಟಾಗಿದೆ. ಹೀಗಾಗಿ, ಶೂಟಿಂಗ್​ನ ಅರ್ಧಕ್ಕೆ ಬಿಟ್ಟು ಅವರು ಆಸ್ಪತ್ರೆ ಸೇರಿದ್ದಾರೆ. ಅವರ ಪ್ರಾಣಕ್ಕೆ ಯಾವುದೇ ತೊಂದರೆ ಆಗಿಲ್ಲ ಎಂದು ವರದಿ ಆಗಿದೆ.

ಬಾಲಯ್ಯ ಅವರ ಸಿನಿಮಾದಲ್ಲಿ ಊರ್ವಶಿ ನಟಿಸುತ್ತಿದ್ದಾರೆ. ಆ್ಯಕ್ಷನ್ ದೃಶ್ಯ ಮಾಡುವಾಗ ಅವರ ಕಾಲಿಗೆ ಪೆಟ್ಟಾಗಿದೆ. ಕಾಲು ಮುರಿದಿರುವುದರಿಂದ ಅವರಿಗೆ ಹೈದರಾಬಾದ್​ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರು ಬೇಗ ಚೇತರಿಕೆ ಕಾಣಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ. ಅವರು ಕಾಲಿನ ಫೋಟೋ ಹಂಚಿಕೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಬಾಲಯ್ಯ ಅವರು ಇಷ್ಟು ದಿನ ಚುನಾವಣಾ ಪ್ರಚಾರದಲ್ಲಿ ಬ್ಯುಸಿ ಇದ್ದರು. ಅವರು ಶಾಸಕ ಕೂಡ ಆಗಿದ್ದಾರೆ. ಬಾಲಯ್ಯ ಅವರು ‘NBK 109’ ಚಿತ್ರದ ಶೂಟಿಂಗ್​ನ ಇನ್ನೂ ಆರಂಭ ಮಾಡಿಲ್ಲ ಎಂದು ಹೇಳಿದ್ದರು. ಚುನಾವಣೆ ಮುಗಿದು ಫಲಿತಾಂಶ ಬಂದ ಬಳಿಕ ಅವರು ಶೂಟಿಂಗ್ ಆರಂಭಿಸಿದ್ದಾರೆ. ಬಾಬಿ ಕೊಲ್ಲಿ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ನಂದಮೂರಿ ಬಾಲಕೃಷ್ಣ ಅವರು ಪ್ರಮುಖ ಪಾತ್ರ ಮಾಡಿದರೆ ಬಾಬಿ ಡಿಯೋಲ್, ಊರ್ವಶಿ ರೌಟೇಲಾ ಮೊದಲಾದವರು ನಟಿಸಿದ್ದಾರೆ. ಎಸ್​ ಥಮನ್ ಅವರು ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಸದ್ಯ ಸಿನಿಮಾದ ಟೈಟಲ್ ಹಾಗೂ ರಿಲೀಸ್ ಡೇಟ್ ಅನೌನ್ಸ್ ಆಗಿಲ್ಲ.

ಇದನ್ನೂ ಓದಿ:  ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಪಡೆದ ಊರ್ವಶಿ ರೌಟೇಲಾ

ಊರ್ವಶಿ ರೌಟೇಲಾ ಅವರು ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಆ್ಯಕ್ಷನ್ ಸಿನಿಮಾ ‘ಬಾಪ್’ ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಸನ್ನಿ ಡಿಯೋಲ್, ಮಿತುನ್ ಚಕ್ರವರ್ತಿ, ಸಂಜಯ್ ದತ್ ನಟಿಸುತ್ತಿದ್ದಾರೆ. ‘ಇನ್​ಸ್ಪೆಕ್ಟರ್ ಅವಿನಾಶ್ 2’ ಚಿತ್ರದಲ್ಲಿ ರಣದೀಪ್ ಹೂಡಾ ಜೊತೆ ತೆರೆ ಹಂಚಿಕೊಂಡಿದ್ದಾರೆ. ದುಲ್ಖರ್ ಸಲ್ಮಾನ್ ಜೊತೆಗೂ ಅವರು ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾಗೆ ಇನ್ನೂ ಟೈಟಲ್ ಫೈನಲ್ ಆಗಿಲ್ಲ. ಈ ಮೊದಲು ಅವರು ರಿಷಬ್ ಶೆಟ್ಟಿ ಜೊತೆ ಫೋಟೋ ಹಂಚಿಕೊಂಡು ‘ಕಾಂತಾರ 2’ ಎನ್ನುವ ಹ್ಯಾಶ್​ಟ್ಯಾಗ್ ನೀಡಿದ್ದರು. ಈ ಮೂಲಕ ಅವರು ಕೂಡ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಅವರನ್ನು ಆಯ್ಕೆ ಮಾಡಿಕೊಂಡಿಲ್ಲ ಎಂದು ರಿಷಬ್ ಅವರು ಸ್ಪಷ್ಟನೆ ನೀಡದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ
ಗಾಯಾಳು ನೆರವಿಗೆ ಧಾವಿಸದ ಪೊಲೀಸ್ರು, ಮಾನವೀಯತೆ ಮರೆತರಾ?
ಗಾಯಾಳು ನೆರವಿಗೆ ಧಾವಿಸದ ಪೊಲೀಸ್ರು, ಮಾನವೀಯತೆ ಮರೆತರಾ?
ಚುನಾವಣಾ ಸೋಲುಗಳಿಗೆ ಕುಮಾರಸ್ವಾಮಿ ಕುಟುಂಬ ಬೇರೆಯವರನ್ನು ದೂಷಿಸುತ್ತದೆ!
ಚುನಾವಣಾ ಸೋಲುಗಳಿಗೆ ಕುಮಾರಸ್ವಾಮಿ ಕುಟುಂಬ ಬೇರೆಯವರನ್ನು ದೂಷಿಸುತ್ತದೆ!
ಬೆಂಗಳೂರಲ್ಲಿ ಹೆಚ್ಚಿದ ಪುಂಡರ ಹುಚ್ಚಾಟ; ಕಾರಿನ ಹಿಂಭಾಗ ನೇತಾಡಿ ಪ್ರಯಾಣ
ಬೆಂಗಳೂರಲ್ಲಿ ಹೆಚ್ಚಿದ ಪುಂಡರ ಹುಚ್ಚಾಟ; ಕಾರಿನ ಹಿಂಭಾಗ ನೇತಾಡಿ ಪ್ರಯಾಣ
ಸದನದಲ್ಲಿ ‘ವಾಲ್ಮೀಕಿ' ಹಗರಣ ಗುದ್ದಾಟ: ಸಿದ್ದರಾಮಯ್ಯ ನೆಮ್ಮದಿಗೆ ಭಂಗವಿಲ್ಲ
ಸದನದಲ್ಲಿ ‘ವಾಲ್ಮೀಕಿ' ಹಗರಣ ಗುದ್ದಾಟ: ಸಿದ್ದರಾಮಯ್ಯ ನೆಮ್ಮದಿಗೆ ಭಂಗವಿಲ್ಲ
ಶೇಕಡ 58ರಷ್ಟು ಹೆಚ್ಚಲಿದೆ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ವೇತನ!
ಶೇಕಡ 58ರಷ್ಟು ಹೆಚ್ಚಲಿದೆ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ವೇತನ!
ಜೈಲಿನಲ್ಲಿರುವ ಪ್ರಜ್ವಲ್​ ರೇವಣ್ಣಗೆ ಎರಡು ಬ್ಯಾಗ್​ನಲ್ಲಿ ಬಂತು ಸ್ಪೆಷಲ್ ಊಟ
ಜೈಲಿನಲ್ಲಿರುವ ಪ್ರಜ್ವಲ್​ ರೇವಣ್ಣಗೆ ಎರಡು ಬ್ಯಾಗ್​ನಲ್ಲಿ ಬಂತು ಸ್ಪೆಷಲ್ ಊಟ
ಶಿವಕುಮಾರ್ ಸದನದಲ್ಲಿ ಮಾತಾಡುವ ಶೈಲಿ ಬದಲಿಸದಿದ್ದರೆ ವಿಪಕ್ಷ ಅನುಕರಿಸುತ್ತದೆ
ಶಿವಕುಮಾರ್ ಸದನದಲ್ಲಿ ಮಾತಾಡುವ ಶೈಲಿ ಬದಲಿಸದಿದ್ದರೆ ವಿಪಕ್ಷ ಅನುಕರಿಸುತ್ತದೆ
ಅಂಕೋಲಾ: ಹೆದ್ದಾರಿ ಮೇಲೆ ಗುಡ್ಡ ಕುಸಿದು 9 ಜನ ಮಣ್ಣಿನಡಿ ಸಿಲುಕಿರುವ ಶಂಕೆ
ಅಂಕೋಲಾ: ಹೆದ್ದಾರಿ ಮೇಲೆ ಗುಡ್ಡ ಕುಸಿದು 9 ಜನ ಮಣ್ಣಿನಡಿ ಸಿಲುಕಿರುವ ಶಂಕೆ
ಎಲ್​ಪಿಜಿ ಗ್ಯಾಸ್ ಕನೆಕ್ಷನ್ ಹೊಂದಿರುವವರು ಇಕೆವೈಸಿ ಅಪ್​ಡೇಟ್ ಮಾಡಬೇಕು!
ಎಲ್​ಪಿಜಿ ಗ್ಯಾಸ್ ಕನೆಕ್ಷನ್ ಹೊಂದಿರುವವರು ಇಕೆವೈಸಿ ಅಪ್​ಡೇಟ್ ಮಾಡಬೇಕು!
ಅಶ್ವಥ್ ನಾರಾಯಣ ಲಂಚಕೋರರ ಪಿತಾಮಹ ಎಂದ ಶಿವಕುಮಾರ್, ಸಿಡಿದ ಬಿಜೆಪಿ ಶಾಸಕರು
ಅಶ್ವಥ್ ನಾರಾಯಣ ಲಂಚಕೋರರ ಪಿತಾಮಹ ಎಂದ ಶಿವಕುಮಾರ್, ಸಿಡಿದ ಬಿಜೆಪಿ ಶಾಸಕರು