Urvashi Rautela: ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಪಡೆದ ಊರ್ವಶಿ ರೌಟೇಲಾ
ಎಲೆಕ್ಷನ್ ಬಂದಾಗ ರಾಜಕೀಯ ನಾಯಕರು ಸೆಲೆಬ್ರಿಟಿಗಳನ್ನು ಆಮಂತ್ರಿಸಿ ಅವರಿಗೆ ಟಿಕೆಟ್ ನೀಡುವ ಕ್ರಮ ಮೊದಲಿನಿಂದಲೂ ನಡೆದು ಬಂದಿದೆ. ಈಗ ಊರ್ವಶಿಗೂ ರಾಜಕೀಯ ನಾಯಕರು ಟೀಕೆಟ್ ನೀಡುವ ಪ್ರಯತ್ನ ಮಾಡಿದರೇ ಎನ್ನುವ ಪ್ರಶ್ನೆ ಮೂಡಿದೆ.
ಲೋಕಸಭೆ ಚುನಾವಣೆ ಸಮೀಪಿಸಿದೆ. ಈ ಸಂದರ್ಭದಲ್ಲಿ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ರಾಜಕೀಯಕ್ಕೆ ಧುಮುಕುತ್ತಾರೆ. ಈಗ ನಟಿ ಊರ್ವಶಿ ರೌಟೇಲಾ ಈ ಬಗ್ಗೆ ಮಹತ್ವದ ಘೋಷಣೆ ಮಾಡಿದ್ದಾರೆ. ‘ಟಿಕೆಟ್ ಸಿಕ್ಕಿದೆ’ ಎಂದು ಊರ್ವಶಿ (Urvashi Rautela) ಹೇಳಿದ್ದಾರೆ. ಆದರೆ ತಮಗೆ ಯಾವ ಕ್ಷೇತ್ರದಿಂದ, ಯಾವ ಪಕ್ಷದಿಂದ ಈ ಟಿಕೆಟ್ ಸಿಕ್ಕಿದೆ ಎಂಬ ಬಗ್ಗೆ ಅವರು ಏನನ್ನೂ ವಿವರಿಸಿಲ್ಲ. ಇದರ ಜೊತೆ ತಾವು ಚುನಾವಣೆಗೆ ಸ್ಪರ್ಧಿಸುತ್ತೇನೋ ಅಥವಾ ಇಲ್ಲವೋ ಎಂಬುದನ್ನು ಅವರು ಖಚಿತಪಡಿಸಿಲ್ಲ. ಊರ್ವಶಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಎಲೆಕ್ಷನ್ ಬಂದಾಗ ರಾಜಕೀಯ ನಾಯಕರು ಸೆಲೆಬ್ರಿಟಿಗಳನ್ನು ಆಮಂತ್ರಿಸಿ ಅವರಿಗೆ ಟಿಕೆಟ್ ನೀಡುವ ಕ್ರಮ ಮೊದಲಿನಿಂದಲೂ ನಡೆದು ಬಂದಿದೆ. ಈಗ ಊರ್ವಶಿಗೂ ರಾಜಕೀಯ ನಾಯಕರು ಟೀಕೆಟ್ ನೀಡುವ ಪ್ರಯತ್ನ ಮಾಡಿದರೇ ಎನ್ನುವ ಪ್ರಶ್ನೆ ಮೂಡಿದೆ. ಚುನಾವಣಾ ಟಿಕೆಟ್ ಬಗ್ಗೆ ಮಾತನಾಡಿರುವ ಅವರು, ‘ನನಗೆ ಟಿಕೆಟ್ ಸಿಕ್ಕಿದೆ. ಆದರೆ ನಾನು ಸ್ಪರ್ಧಿಸಬೇಕೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಬೇಕಿದೆ. ನಾನು ಸ್ಪರ್ಧಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸ್‌ನಲ್ಲಿ ಹೇಳಿ’ ಎಂದು ಅವರು ಈ ವಿಡಿಯೋದಲ್ಲಿ ಕೋರಿದ್ದಾರೆ.
ಈ ವಿಡಿಯೋದಲ್ಲಿ ಊರ್ವಶಿಗೆ ರಾಜಕೀಯದ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ನೀವು ರಾಜಕೀಯದಲ್ಲಿ ಆಸಕ್ತಿ ಹೊಂದಿದ್ದೀರಾ ಎಂದು ಕೇಳಿದಾಗ ನೇರವಾಗಿ ಚುನಾವಣೆಗೆ ಟಿಕೆಟ್ ಸಿಕ್ಕಿದೆ ಎಂದು ಊರ್ವಶಿ ಬಹಿರಂಗಪಡಿಸಿದ್ದಾರೆ. ಈ ಹೇಳಿಕೆಗೆ ಫ್ಯಾನ್ಸ್ ವಿವಿಧ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ. ರಾಜಕೀಯಕ್ಕೆ ಬರುವಂತೆ ಕೆಲವರು ಸಲಹೆ ನೀಡಿದ್ದಾರೆ. ನಟನೆಯತ್ತ ಗಮನ ಹರಿಸುವಂತೆ ಕೆಲವರು ಕೇಳಿಕೊಂಡಿದ್ದಾರೆ. ಕೆಲವರು ಊರ್ವಶಿಯನ್ನು ಲೇವಡಿ ಮಾಡಿದ್ದಾರೆ. ಇನ್ನೂ ಕೆಲವರು ಇದನ್ನು ಪ್ರಚಾರದ ಸ್ಟಂಟ್ ಎಂದು ಕರೆದಿದ್ದಾರೆ.
ಊರ್ವಶಿ ಮಾತು..
View this post on Instagram
ಊರ್ವಶಿ ರೌಟೇಲಾ ಅವರು ತಮ್ಮ ಸಿನಿಮಾಗಳಿಗಿಂತ ಹೆಚ್ಚಾಗಿ ತಮ್ಮ ವೈಯಕ್ತಿಕ ಜೀವನದ ಕಾರಣಕ್ಕೆ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಕ್ರಿಕೆಟಿಗ ರಿಷಬ್ ಪಂತ್ ಬಗ್ಗೆ ಅವರು ನೀಡಿದ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆ ಆಗಿತ್ತು. ಆ ಸಂದರ್ಭದಲ್ಲಿ ಅವರು ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಪೋಸ್ಟ್ ಮಾಡಿದರೂ ಅದು ರಿಷಬ್ ಪಂತ್‌ಗೆ ಲಿಂಕ್ ಆಗುತ್ತಿತ್ತು. ಊರ್ವಶಿ ಮತ್ತು ರಿಷಬ್ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಹಬ್ಬಿತ್ತು. ನಂತರ ಇಬ್ಬರೂ ಸಾಮಾಜಿಕ ಜಾಲತಾಣಗಳಲ್ಲಿ ಪರೋಕ್ಷವಾಗಿ ಪರಸ್ಪರ ತೆಗಳಿಕೊಂಡಿದ್ದರು. ಸಂದರ್ಶನವೊಂದರಲ್ಲಿ ಊರ್ವಶಿ ‘ಆರ್‌ಪಿ’ ಎಂದು ಪ್ರಸ್ತಾಪಿಸಿದ್ದರು. ಆರ್‌ಪಿ ರಿಷಬ್ ಪಂತ್ ಆಗಿರಬೇಕು ಎಂದು ಭವಿಷ್ಯ ನುಡಿದಿದ್ದರು. ಆ ನಂತರ ರಿಷಬ್ ಮತ್ತು ಊರ್ವಶಿ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಪರೋಕ್ಷ ವಾಗ್ವಾದ ನಡೆದಿತ್ತು.
ಇದನ್ನೂ ಓದಿ: ಭಾರತ-ಪಾಕ್ ಪಂದ್ಯದ ವೇಳೆ ಚಿನ್ನದ ಫೋನ್ ಕಳೆದುಕೊಂಡ ಊರ್ವಶಿ: ಟ್ರೋಲ್ ಮಾಡಿದ ನೆಟ್ಟಿಗರು
ಊರ್ವಶಿ ಕೂಡ ತನ್ನ ಐಷಾರಾಮಿ ಜೀವನಶೈಲಿಯಿಂದ ಆಗಾಗ ಸುದ್ದಿ ಆಗುತ್ತಾರೆ. ಕಳೆದ ವರ್ಷ ಅವರು ತಮ್ಮ 24 ಕ್ಯಾರೆಟ್ ಚಿನ್ನದ ಐಫೋನ್ ಕಳೆದುಕೊಂಡಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:55 pm, Fri, 22 March 24