2ನೇ ಮಗು ಪಡೆಯಲು ಕಳೆದ 7 ವರ್ಷದಿಂದ ಪ್ರಯತ್ನಿಸುತ್ತಿರುವ ರಾಣಿ ಮುಖರ್ಜಿ
ನಟಿ ರಾಣಿ ಮುಖರ್ಜಿ ಅವರು ಲಾಕ್ಡೌನ್ಗೂ ಮುನ್ನ 2ನೇ ಬಾರಿ ಗರ್ಭಿಣಿಯಾಗಿದ್ದರು. ಇನ್ನೇನು ಎರಡನೇ ಮಗುವಿಗೆ ಜನ್ಮನೀಡುವ ಖುಷಿಯಲ್ಲಿ ಅವರಿದ್ದರು. ಆದರೆ ಆಗ ಅವರಿಗೆ ಗರ್ಭಪಾತವಾಯಿತು. ಇದರಿಂದ ಅವರಿಗೆ ಬಹಳ ನೋವಾಯಿತು. ಆ ಸಮಯವನ್ನು ತಮ್ಮ ಪರೀಕ್ಷೆಯ ಕಾಲ ಎಂದು ರಾಣಿ ಮುಖರ್ಜಿ ಅವರು ಕರೆದಿದ್ದಾರೆ.
ಬಾಲಿವುಡ್ (Bollywood) ನಟಿ ರಾಣಿ ಮುಖರ್ಜಿ ಅವರು ಇತ್ತೀಚಿನ ವರ್ಷಗಳಲ್ಲಿ ಬಹಳ ಚ್ಯೂಸಿ ಆಗಿದ್ದಾರೆ. ಅಳೆದು-ತೂಗಿ ಹೊಸ ಸಿನಿಮಾ ಒಪ್ಪಿಕೊಳ್ಳುತ್ತಿದ್ದಾರೆ. ಅದಕ್ಕೆ ಅವರು ವೈಯಕ್ತಿಕ ಜೀವನ ಕೂಡ ಕಾರಣ. ತಮ್ಮ ಬದುಕಿನ ತೀರಾ ಖಾಸಗಿ ವಿಚಾರಗಳನ್ನು ಅವರೀಗ ಬಹಿರಂಗಪಡಿಸಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಷಯ ಹೇಳಿದ್ದಾರೆ. ಕಳೆದ 7 ವರ್ಷಗಳಿಂದ ಅವರು 2ನೇ ಮಗು ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅದು ಸಾಧ್ಯವಾಗಿಲ್ಲ. ಈ ಬಗ್ಗೆ ಅವರಿಗೆ ಕೊರಗು ಇದೆ. ಮೊದಲ ಮಗುವಿಗೆ ಒಡಹುಟ್ಟಿದವರು ಇಲ್ಲ ಎಂಬ ಬೇಸರದಲ್ಲಿ ರಾಣಿ ಮುಖರ್ಜಿ (Rani Mukerji) ಮಾತನಾಡಿದ್ದಾರೆ.
2014ರಲ್ಲಿ ರಾಣಿ ಮುಖರ್ಜಿ ಅವರು ನಿರ್ಮಾಪಕ ಆದಿತ್ಯ ಚೋಪ್ರಾ ಜೊತೆ ಮದುವೆಯಾದರು. ಮರುವರ್ಷವೇ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದರು. ಆದರೆ ಇನ್ನೊಂದು ಮಗು ಪಡೆಯಬೇಕು ಎಂಬ ಅವರ ಆಸೆ ಈಡೇರಲಿಲ್ಲ. ಎರಡನೇ ಮಗುವಿಗಾಗಿ ಅವರು ಕಳೆದ 7 ವರ್ಷಗಳಿಂದ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಅವರ ಈ ಆಸೆ ಈಡೇರುತ್ತಿಲ್ಲ. ಇದಕ್ಕೆ ತಮ್ಮ ವಯಸ್ಸು (46) ಕೂಡ ಕಾರಣ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ರಾಣಿ ಮುಖರ್ಜಿ ಪತಿಯ ಬಳಿ ಇದೆ 7500 ಕೋಟಿ ರೂ. ಆಸ್ತಿ; ಎರಡನೇ ಪತ್ನಿ ಆಗಲು ನಟಿ ಒಪ್ಪಿದ್ದೇಕೆ?
ಲಾಕ್ಡೌನ್ಗೂ ಮುನ್ನ ರಾಣಿ ಮುಖರ್ಜಿ ಅವರು ಎರಡನೇ ಬಾರಿ ಗರ್ಭಿಣಿ ಆಗಿದ್ದರು. ಇನ್ನೇನು 2ನೇ ಮಗುವಿಗೆ ಜನ್ಮನೀಡುವ ಖುಷಿಯಲ್ಲಿ ಅವರಿದ್ದರು. ಆದರೆ ಆಗ ಅವರಿಗೆ ಗರ್ಭಪಾತ ಆಯಿತು. ಇದರಿಂದ ಅವರಿಗೆ ತುಂಬ ನೋವಾಯಿತು. ಅದನ್ನು ತಮ್ಮ ಪರೀಕ್ಷೆಯ ಕಾಲ ಎಂದು ಅವರು ಕರೆದಿದ್ದಾರೆ. ಗರ್ಭಪಾತದ ಬಳಿಕ ಅವರು ‘ಮಿಸಸ್ ಚಟರ್ಜಿ ವರ್ಸಸ್ ನಾರ್ವೇ’ ಸಿನಿಮಾ ಒಪ್ಪಿಕೊಂಡರು. ಆ ಸಿನಿಮಾದಲ್ಲಿ ತಾಯ್ತನದ ಕಥೆ ಇತ್ತು.
ಇದನ್ನೂ ಓದಿ: ಯಶ್ ರಾಜ್ ಫಿಲ್ಮ್ಸ್ಗೆ ಸಾಲು ಸಾಲು ಸೋಲು; ವರ್ಷಗಳ ಹಿಂದಿನ ಪರಿಸ್ಥಿತಿ ಬಗ್ಗೆ ರಾಣಿ ಮುಖರ್ಜಿ ಮಾತು
‘ಈಗ ಎರಡನೇ ಮಗು ಪಡೆಯುವ ವಯಸ್ಸು ನನ್ನದಲ್ಲ. ನಮ್ಮ ಬಳಿ ಏನು ಇದೆಯೋ ಅಷ್ಟರಲ್ಲೇ ನಾವು ತೃಪ್ತಿಪಟ್ಟುಕೊಳ್ಳಬೇಕು. ಮಗಳು ಅದಿರಾ ನನ್ನ ಪಾಲಿಗೆ ವಿಸ್ಮಯದ ಮಗು. ಒಂದು ಮಗುವನ್ನೂ ಪಡೆಯಲು ಕಷ್ಟಪಡುತ್ತಿರುವ ದಂಪತಿಯನ್ನು ನೋಡಿ ನಾನು ಸಮಾಧಾನಪಟ್ಟುಕೊಳ್ಳುತ್ತೇನೆ’ ಎಂದು ರಾಣಿ ಮುಖರ್ಜಿ ಅವರು ಹೇಳಿದ್ದಾರೆ. ತಮ್ಮ ಜೀವನದ ಬಗ್ಗೆ ಅವರು ಪುಸ್ತಕ ಬರೆಯುತ್ತಿದ್ದಾರೆ. ಅದರಲ್ಲಿ ಈ ರೀತಿಯ ಹೆಚ್ಚಿನ ವಿವರಗಳನ್ನು ಹೇಳಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.