ಯಶ್ ರಾಜ್ ಫಿಲ್ಮ್ಸ್​ಗೆ ಸಾಲು ಸಾಲು ಸೋಲು; ವರ್ಷಗಳ ಹಿಂದಿನ ಪರಿಸ್ಥಿತಿ ಬಗ್ಗೆ ರಾಣಿ ಮುಖರ್ಜಿ ಮಾತು

‘ಬಂಟಿ ಔರ್ ಬಬ್ಲಿ 2’, ‘ಜಯೇಶ್​ಭಾಯ್ ಜೋರ್ದಾರ್’, ‘ಪೃಥ್ವಿರಾಜ್’, ‘ಶಂಶೇರಾ’ ಸಿನಿಮಾಗಳು 2021-2022ರ ಅವಧಿಯಲ್ಲಿ ರಿಲೀಸ್ ಆಗಿ ಸೋಲು ಕಂಡವು. ‘ಪಠಾಣ್’ ಸಿನಿಮಾದಿಂದ ನಿರ್ಮಾಣ ಸಂಸ್ಥೆಗೆ ದೊಡ್ಡ ಗೆಲುವು ಸಿಕ್ಕಿತು. ಈ ಬಗ್ಗೆ ರಾಣಿ ಮುಖರ್ಜಿ ಮಾತನಾಡಿದ್ದಾರೆ.

ಯಶ್ ರಾಜ್ ಫಿಲ್ಮ್ಸ್​ಗೆ ಸಾಲು ಸಾಲು ಸೋಲು; ವರ್ಷಗಳ ಹಿಂದಿನ ಪರಿಸ್ಥಿತಿ ಬಗ್ಗೆ ರಾಣಿ ಮುಖರ್ಜಿ ಮಾತು
ರಾಣಿ ಮುಖರ್ಜಿ
Follow us
ರಾಜೇಶ್ ದುಗ್ಗುಮನೆ
|

Updated on: Mar 06, 2024 | 9:00 AM

ಯಶ್ ರಾಜ್ ಫಿಲ್ಮ್ಸ್ (Yash Raj Films) ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದೆ. ಕೊವಿಡ್ ಬಳಿಕ ಈ ನಿರ್ಮಾಣ ಸಂಸ್ಥೆಯಿಂದ ಹಲವು ಸಿನಿಮಾಗಳು ರಿಲೀಸ್ ಆದವು. ಆದರೆ, ಅಂದುಕೊಂಡ ರೀತಿಯಲ್ಲಿ ಸಿನಿಮಾಗಳು ಮೂಡಿ ಬಂದಿರಲಿಲ್ಲ. ಹೀಗಾಗಿ ಸಿನಿಮಾಗಳು ಸೋಲು ಕಂಡವು. ಈ ಬಗ್ಗೆ ನಿರ್ಮಾಣ ಸಂಸ್ಥೆಯಲ್ಲಿ ಕೆಲಸ ಮಾಡುವ ಎಲ್ಲರಿಗೂ ಬೇಸರ ಇತ್ತಂತೆ. ‘ಪಠಾಣ್’ ಸಿನಿಮಾ ಸಾವಿರ ಕೋಟಿ ಕ್ಲಬ್ ಸೇರಿ ತಂಡದ ಖುಷಿ ಹೆಚ್ಚಿಸಿತ್ತು. ಈ ಬಗ್ಗೆ ಯಶ್ ರಾಜ್ ಫಿಲ್ಮ್ಸ್​ನ ಮುಖ್ಯಸ್ಥ ಆದಿತ್ಯ ಚೋಪ್ರಾ ಅವರ ಪತ್ನಿ ಹಾಗೂ ನಟಿ ರಾಣಿ ಮುಖರ್ಜಿ ಮಾತನಾಡಿದ್ದಾರೆ.

‘ಬಂಟಿ ಔರ್ ಬಬ್ಲಿ 2’, ‘ಜಯೇಶ್​ಭಾಯ್ ಜೋರ್ದಾರ್’, ‘ಪೃಥ್ವಿರಾಜ್’, ‘ಶಂಶೇರಾ’ ಸಿನಿಮಾಗಳು 2021-2022ರ ಅವಧಿಯಲ್ಲಿ ರಿಲೀಸ್ ಆಗಿ ಸೋಲು ಕಂಡವು. ‘ಪಠಾಣ್’ ಸಿನಿಮಾದಿಂದ ನಿರ್ಮಾಣ ಸಂಸ್ಥೆಗೆ ದೊಡ್ಡ ಗೆಲುವು ಸಿಕ್ಕಿತು. ಈ ಬಗ್ಗೆ ರಾಣಿ ಮುಖರ್ಜಿ ಮಾತನಾಡಿದ್ದಾರೆ.

‘ಖಿನ್ನತೆಗೆ ಒಳಗಾದ ರೀತಿಯ ಪರಿಸ್ಥಿತಿ ಇತ್ತು. ನಮ್ಮ ಸಂಸ್ಥೆಯ ಎಲ್ಲರೂ ಬೇಸರಗೊಂಡಿದ್ದರು. ಆದರೆ, ಪಠಾಣ್ ಸಿನಿಮಾ ಎಲ್ಲವನ್ನೂ ಬದಲಾಯಿಸಿತು. ಇದು ಅತ್ಯಧಿಕ ಗಳಿಕೆ ಮಾಡಿತು. ಮಾಡಿದ ಸಿನಿಮಾಗಳ ಬಗ್ಗೆ ನಿರ್ಮಾಪಕರಿಗೆ ನಿರ್ದೇಶಕರಿಗೆ ನಂಬಿಕೆ ಬೇಕು. ಏನು ಮಾಡುತ್ತಾರೋ ಅದರ ಮೇಲೆ ನಂಬಿಕೆ ಇಡಬೇಕು. ಪಠಾಣ್ ಚಿತ್ರದಿಂದ ಜನರು ಥಿಯೇಟರ್​ಗೆ ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದರು’ ಎಂದಿದ್ದಾರೆ ರಾಣಿ ಮುಖರ್ಜಿ.

‘ಕೊವಿಡ್ ಬಳಿಕ ಹಲವು ಸಿನಿಮಾಗಳಿಗೆ ಒಟಿಟಿ ಆಫರ್ ಬಂದಿತ್ತು. ಆದರೆ, ಪತಿ ಆದಿತ್ಯ ಅವರನ್ನು ಇದನ್ನು ತಿರಸ್ಕರಿಸಿದರು. ಯಾವುದೇ ಚಿತ್ರವನ್ನು ನೇರವಾಗಿ ಒಟಿಟಿಯಲ್ಲಿ ರಿಲೀಸ್ ಮಾಡಲ್ಲ ಎಂದು ಪಣ ತೊಟ್ಟಿದ್ದರು. ಅವರಿಗೆ ಭಾರತೀಯ ಚಿತ್ರರಂಗದ ಮೇಲೆ ನಂಬಿಕೆ ಇದೆ’ ಎಂದಿದ್ದಾರೆ ಅವರು.

ಇದನ್ನೂ ಓದಿ: ‘ಸಿನಿಮಾ ಸಕ್ಸಸ್ ಅಳೆಯಲು ಕಲೆಕ್ಷನ್ ಮಾತ್ರವಲ್ಲ ಬಜೆಟ್ ಕೂಡ ನೋಡಬೇಕು’; ಇದು ರಾಣಿ ಮುಖರ್ಜಿ ಲೆಕ್ಕಾಚಾರ

ರಾಣಿ ಮುಖರ್ಜಿ ಅವರು ಇತ್ತೀಚಿಗೆ ಸಿನಿಮಾ ಆಯ್ಕೆಯಲ್ಲಿ ಸಖತ್ ಚ್ಯೂಸಿ ಆಗಿದ್ದಾರೆ. ಅಲ್ಲೊಂದು ಇಲ್ಲೊಂದು ಸಿನಿಮಾ ಒಪ್ಪಿಕೊಂಡು ನಟಿಸುತ್ತಿದ್ದಾರೆ. ಆದಿತ್ಯ ಅವರನ್ನು ಮದುವೆ ಆದ ಬಳಿಕ ಕುಟುಂಬದ ಕಡೆ ಹೆಚ್ಚು ಗಮನ ಹರಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ