Aaradhya Bachchan: 12ನೇ ವಯಸ್ಸಿಗೆ ಮುಖದ ಶಸ್ತ್ರಚಿಕತ್ಸೆಗೆ ಒಳಗಾದರಾ ಆರಾಧ್ಯಾ ಬಚ್ಚನ್?
ಅಂಬಾನಿ ಮನೆಯ ಕಾರ್ಯಕ್ರಮದಲ್ಲಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಅವರ ಪುತ್ರಿ ಆರಾಧ್ಯ ಬಚ್ಚನ್ ಕೂಡ ಭಾಗಿ ಆಗಿದ್ದರು. ಈ ಪಾರ್ಟಿಯ ಕೆಲವು ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಈ ಫೋಟೋದಲ್ಲಿ ಆರಾಧ್ಯ ಬಚ್ಚನ್ ಬೇರೆ ರೀತಿ ಕಾಣಿಸಿಕೊಂಡಿದ್ದಾರೆ.
ಮುಕೇಶ್ ಅಂಬಾನಿ (Mukesh Ambani) ಮತ್ತು ನೀತಾ ಅಂಬಾನಿ ಮಗ ಅನಂತ್ ಅಂಬಾನಿ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಕಾರ್ಯಕ್ರಮ ಗುಜರಾತ್‌ನ ಜಾಮ್‌ನಗರದಲ್ಲಿ ನಡೆಯಿತು. ಈ ವಿವಾಹ ಪೂರ್ವ ಕಾರ್ಯಕ್ರಮಕ್ಕೆ ವಿದೇಶದಿಂದಲೂ ಅತಿಥಿಗಳು ಆಗಮಿಸಿದ್ದರು. ಈಗ ಈ ವಿವಾಹ ಪೂರ್ವ ಸಮಾರಂಭದ ವಿವಿಧ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಬಹುತೇಕ ಎಲ್ಲಾ ಬಾಲಿವುಡ್ ನಟರು ಮತ್ತು ನಟಿಯರು ಈ ಪೂರ್ವ ವಿವಾಹ ಸಮಾರಂಭದಲ್ಲಿ ಭಾಗಿ ಆಗಿದ್ದಾರೆ. ಈ ವಿವಾಹಪೂರ್ವ ಕಾರ್ಯವು ಮೂರು ದಿನಗಳವರೆಗೆ ನಡೆದಿದೆ. ಅತಿಥಿಗಳಿಗೆ ವಿಶೇಷ ವಸತಿ ಮತ್ತು ಊಟದ ವ್ಯವಸ್ಥೆ ಕೂಡ ಮಾಡಲಾಗಿತ್ತು. ಮದುವೆಯ ಪೂರ್ವ ಕಾರ್ಯಕ್ರಮಕ್ಕೆ ಇಡೀ ಬಚ್ಚನ್ ಕುಟುಂಬ ಆಗಮಿಸಿತ್ತು. ಆರಾಧ್ಯಾ ಅವರ ಲುಕ್ ಈಗ ಗಮನ ಸೆಳೆಯುತ್ತಿದೆ.
ಅಂಬಾನಿ ಮನೆಯ ಕಾರ್ಯಕ್ರಮದಲ್ಲಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಅವರ ಪುತ್ರಿ ಆರಾಧ್ಯ ಬಚ್ಚನ್ ಕೂಡ ಭಾಗಿ ಆಗಿದ್ದರು. ಈ ಪಾರ್ಟಿಯ ಕೆಲವು ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಈ ಫೋಟೋದಲ್ಲಿ ಆರಾಧ್ಯ ಬಚ್ಚನ್ ಬೇರೆ ರೀತಿ ಕಾಣಿಸಿಕೊಂಡಿದ್ದಾರೆ. ಆರಾಧ್ಯಾ ಅವರನ್ನು ಈ ರೀತಿ ನೋಡಿದ್ದು ಮೊದಲ ಬಾರಿಗೆ ಎಂದು ಅನೇಕರು ಹೇಳಿದ್ದಾರೆ.
ಆರಾಧ್ಯಾ ಬಚ್ಚನ್ ಪ್ರತಿ ಬಾರಿಯೂ ಒಂದೇ ಹೇರ್ಸ್ಟೈಲ್ನಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಇದರಿಂದಾಗಿ ಐಶ್ವರ್ಯಾ ರೈ ಸದಾ ಟೀಕೆಗೆ ಒಳಗಾಗುತ್ತಿದ್ದಾರೆ. ಆದಾಗ್ಯೂ, ಆರಾಧ್ಯಾ ಬಚ್ಚನ್ ಅಂಬಾನಿ ಪಾರ್ಟಿಯಲ್ಲಿ ಬೇರೆ ರೀತಿಯಲ್ಲಿ ಕಾಣಿಸಿಕೊಂಡರು. ಅವರಲ್ಲಿ ಆಗಿರುವ ದಿಢೀರ್ ಬದಲಾವಣೆ ಕಂಡು ಹಲವರು ಆರಾಧ್ಯಾ ಬಚ್ಚನ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ಕೆಲವರು ನೇರವಾಗಿ ಆರೋಪ ಮಾಡಿದ್ದಾರೆ. ಇದರಿಂದಾಗಿ ನಾನಾ ರೀತಿಯ ಚರ್ಚೆಗಳು ನಡೆಯುತ್ತಿವೆ.
ಇದನ್ನೂ ಓದಿ: ಹೇಗಿದ್ರು ಹೇಗಾದ್ರು ಐಶ್ವರ್ಯಾ ರೈ ಪುತ್ರಿ ಆರಾಧ್ಯಾ ಬಚ್ಚನ್: ಇಲ್ಲಿವೆ ಚಿತ್ರಗಳು
ಆರಾಧ್ಯಾ ಬಚ್ಚನ್ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರೆ ಎಂದು ಅನುಮಾನ ಮೂಡೋದು ಸಹಜ. ಏಕೆಂದರೆ ಆರಾಧ್ಯಾ ಕೆಲವು ತಿಂಗಳ ಹಿಂದೆ ಇದ್ದಿದ್ದಕ್ಕೂ ಮತ್ತು ಈಗ ಕಾಣುವುದಕ್ಕೂ ಸಾಕಷ್ಟು ಬದಲಾವಣೆ ಇದೆ. ಇದೀಗ ಅಂಬಾನಿ ಪಾರ್ಟಿಯ ಆರಾಧ್ಯಾ ಅವರ ಹಲವು ಫೋಟೋಗಳು ಮತ್ತು ವಿಡಿಯೋಗಳು ವೈರಲ್ ಆಗುತ್ತಿವೆ.
ಆರಾಧ್ಯಗೆ ಕೇವಲ 12 ವರ್ಷ 3 ತಿಂಗಳು. ಇದರಿಂದಾಗಿ ಆಕೆ ಪ್ಲಾಸ್ಟಿಕ್ ಸರ್ಜರಿ ಮಾಡಬಾರದಿತ್ತು ಎಂದು ಹಲವರು ಹೇಳಿದ್ದಾರೆ. ಹೇರ್ ಸ್ಟೈಲ್ ಮತ್ತು ಮೇಕಪ್‌ನಿಂದ ಆರಾಧ್ಯ ಅವರ ಲುಕ್ ಬದಲಾಗಿದೆ ಎಂದು ಕೆಲವರು ಹೇಳಿದ್ದಾರೆ. ಕೆಲವು ದಿನಗಳ ಹಿಂದೆ ಆರಾಧ್ಯಾ ಬಚ್ಚನ್ ತನ್ನ ಪೋಷಕರೊಂದಿಗೆ ವಿದೇಶಕ್ಕೆ ಹೋಗಿದ್ದರು. ಆರಾಧ್ಯ ಬಚ್ಚನ್ ಯಾವಾಗಲೂ ಪಾಪರಾಜಿಗಳಿಗೆ ಪೋಸ್ ನೀಡುತ್ತಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ