Updated on:Mar 05, 2024 | 4:31 PM
ಐಶ್ವರ್ಯಾ ರೈ-ಅಭಿಷೇಕ್ ಬಚ್ಚನ್ ಪುತ್ರಿ ಆರಾಧ್ಯಾ ಬಚ್ಚನ್ ಈಗಿನ್ನೂ ಶಾಲೆ ಕಲಿಯುತ್ತಿರುವ ಬಾಲಕಿ.
ಕೆಲವು ದಿನಗಳ ಹಿಂದಷ್ಟೆ ಶಾಲಾ ವಾರ್ಷಿಕೋತ್ಸವದಲ್ಲಿ ಬಾಪ್ಕಟ್ ಹುಡುಗಿಯಾಗಿ ಆರಾಧ್ಯಾ ಬಚ್ಚನ್ ಕಾಣಿಸಿಕೊಂಡಿದ್ದರು.
ಆದರೆ ಕೆಲವೇ ದಿನಗಳಲ್ಲಿ ಆರಾಧ್ಯಾ ಬಚ್ಚನ್ರ ಸ್ಟೈಲ್ ಸಂಪೂರ್ಣ ಬದಲಾಗಿಬಿಟ್ಟಿದೆ. ಅನಂತ್-ರಾಧಿಕಾರ ಪ್ರೀ ವೆಡ್ಡಿಂಗ್ನಲ್ಲಿ ಭಾಗಿಯಾಗಿದ್ದ ಆರಾಧ್ಯಾ ಸಖತ್ ಭಿನ್ನವಾಗಿ ಕಾಣುತ್ತಿದ್ದಾರೆ.
ಲಾಂಗ್ ಹೇರ್ಸ್ ಬಿಟ್ಟುಕೊಂಡು ಮೊದಲಿಗಿಂತಲೂ ಸುಂದರವಾಗಿ ಆರಾಧ್ಯಾ ಬಚ್ಚನ್ ಕಾಣುತ್ತಿದ್ದಾರೆ. ಚಿತ್ರಗಳನ್ನು ನೋಡಿದ ನೆಟ್ಟಿಗರು ಐಶ್ವರ್ಯಾ ರೈಗಿಂತಲೂ ಸುಂದರ ಎಂದಿದ್ದಾರೆ.
ಅಭಿಷೇಕ್ ಬಚ್ಚನ್-ಐಶ್ವರ್ಯಾ ರೈ ಹಾಗೂ ಆರಾಧ್ಯಾ ಬಚ್ಚನ್ ಒಟ್ಟಿಗೆ ಅನಂತ್ ಹಾಗೂ ರಾಧಿಕಾರ ಪ್ರೀ ವೆಡ್ಡಿಂಗ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ಅಂದಹಾಗೆ ಆರಾಧ್ಯ ಬಚ್ಚನ್ ಗೆ ಈಗಿನ್ನೂ 12 ವರ್ಷ ವಯಸ್ಸು. ಆದರೆ ಈಗಲೇ ಸುಂದರ ಯುವತಿಯಂತೆ ಆರಾಧ್ಯಾ ಬಚ್ಚನ್ ಕಾಣುತ್ತಿದ್ದಾರೆ.
ಆರಾಧ್ಯಾ ಬಚ್ಚನ್ ಪ್ರಸ್ತುತ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್, ಮುಂಬೈನಲ್ಲಿ ಶಾಲೆ ಕಲಿಯುತ್ತಿದ್ದಾರೆ. ಇತ್ತೀಚೆಗಷ್ಟೆ ಶಾರುಖ್ ಖಾನ್ ಪುತ್ರ ಅಬ್ರಾಮ್ ಜೊತೆ ನಾಟಕವೊಂದರಲ್ಲಿ ನಟಿಸಿದ್ದರು.
Published On - 4:30 pm, Tue, 5 March 24