- Kannada News Photo gallery Anant Ambani Pre Wedding: Radhika Merchant Drape Artist Dolly Jain Fees Reveal aks
ಅಂಬಾನಿಯ ಭಾವಿ ಸೊಸೆಗೆ ಸೀರೆ ಉಡಿಸಿ ಬರೋಬ್ಬರಿ 2ಲಕ್ಷ ರೂ ಸಂಭಾವಣೆ ಪಡೆದ ಬೆಂಗಳೂರಿನ ಮಹಿಳೆ
ಡಾಲಿ ಜೈನ್ ಬೆಂಗಳೂರಿನಲ್ಲಿ ಜನಿಸಿ, ಮದುವೆಯ ಬಳಿಕ ಕೋಲ್ಕತ್ತಾದಲ್ಲಿ ನೆಲೆಸಿದ್ದಾರೆ. ಸಾಮಾನ್ಯ ಗೃಹಿಣಿಯಾಗಿದ್ದ ಡಾಲಿ ಜೈನ್ ಈಗ ಸೆಲೆಬ್ರಿಟಿಗಳಿಗೆ ಸೀರೆ ಉಡಿಸುವ ಮೂಲಕ ಲಕ್ಷ ಲಕ್ಷ ಸಂಪಾದಿಸುತ್ತಾರೆ.
Updated on:Mar 05, 2024 | 12:14 PM

ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ಸ್ ಅವರ ವಿವಾಹ ಪೂರ್ವ ಸಮಾರಂಭ ಮಾರ್ಚ್ 1 ರಿಂದ 3ರ ವರೆಗೆ ಅದ್ಧೂರಿಯಾಗಿ ನಡೆದಿದೆ.

ಅಂಬಾನಿಯ ಭಾವಿ ಸೊಸೆ ಸೀರೆಯಲ್ಲಿ ಮಿಂಚಿದ್ದು,ರಾಧಿಕಾಗೆ ಸೀರೆ ಉಡಿಸಿದ ಸ್ಟೈಲಿಸ್ಟ್ಗೆ ಬರೋಬ್ಬರಿ 2 ಲಕ್ಷ ರೂ ಸಂಭಾವಣೆ ನೀಡಲಾಗಿದೆ. ವಿಶೇಷತೆ ಏನೆಂದರೆ ಈ ಖ್ಯಾತ ಸೆಲೆಬ್ರೆಟಿ ಸ್ಟೈಲಿಸ್ಟ್ ಡಾಲಿ ಜೈನ್ ಮೂಲತಃ ಬೆಂಗಳೂರಿನವರು.

ಡಾಲಿ ಜೈನ್ ಬೆಂಗಳೂರಿನಲ್ಲಿ ಜನಿಸಿ, ಮದುವೆಯ ಬಳಿಕ ಕೋಲ್ಕತ್ತಾದಲ್ಲಿ ನೆಲೆಸಿದ್ದಾರೆ. ಸಾಮಾನ್ಯ ಗೃಹಿಣಿಯಾಗಿದ್ದ ಡಾಲಿ ಜೈನ್ ಈಗ ಸೆಲೆಬ್ರಿಟಿ ಸೀರೆ ಉಡಿಸುವ ಮೂಲಕ ಲಕ್ಷ ಲಕ್ಷ ಸಂಪಾದಿಸುತ್ತಾರೆ.

2011 ರಲ್ಲಿ, ಡಾಲಿ ಜೈನ್ ಅವರು ಅತ್ಯಂತ ವೇಗವಾಗಿ ಸೀರೆ ಉಡಿಸುವ ಮೂಲಕ ಅಂದರೆ 18.5 ಸೆಕೆಂಡುಗಳಲ್ಲಿ ಸೀರೆ ಉಡಿಸಿ ಗಿನ್ನೆಸ್ ವಿಶ್ವ ದಾಖಲೆಯನ್ನು ಬರೆದಿದ್ದಾರೆ.

ಡಾಲಿ ಜೈನ್ ಸೀರೆ ಉಡಿಸಲು 35,000 ರಿಂದ 2 ಲಕ್ಷ ರೂ. ಪಡೆಯುತ್ತಿದ್ದು, ಆಲಿಯಾ ಭಟ್ ನಿಂದ ಕತ್ರಿನಾ ಕೈಫ್ ಅವರ ವರೆಗೂ ಅದೆಷ್ಟು ಸೆಲೆಬ್ರಿಟಿ ಮದುವೆಗಳಲ್ಲಿ ವಧುವಿಗೆ ಸೀರೆ ಉಡಿಸಿದ್ದಾರೆ.

ಇದಲ್ಲದೇ ನೀತಾ ಅಂಬಾನಿ, ಇಶಾ ಅಂಬಾನಿ, ಶ್ಲೋಕಾ ಮೆಹ್ತಾ, ಸೋನಮ್ ಕಪೂರ್, ಪ್ರಿಯಾಂಕಾ ಚೋಪ್ರಾ,ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ ಜಯಲಲಿತಾ ಮತ್ತು ದಿ ಶ್ರೀದೇವಿಯವರಿಗೆ ಸೀರೆ ಉಡಿಸಿದ್ದಾರೆ.
Published On - 12:05 pm, Tue, 5 March 24




