‘ನಾನು ಎಂದಿಗೂ ಮದುವೆಯಲ್ಲಿ ಡ್ಯಾನ್ಸ್ ಮಾಡಿಲ್ಲ’; ಬಾಲಿವುಡ್ ಸೆಲೆಬ್ರಿಟಿಗಳನ್ನು ಟೀಕಿಸಿದ ಕಂಗನಾ
ಕಂಗನಾ ರಣಾವತ್ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಅವರು ಬಾಲಿವುಡ್ ತಾರೆಯರ ಬಗ್ಗೆ ಟೀಕೆ ಮಾಡಿದ್ದಾರೆ. ಕಂಗನಾ ರಣಾವತ್ ಅವರ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂಬಾನಿ ಪಾರ್ಟಿಯಲ್ಲಿ ಡ್ಯಾನ್ಸ್ ಮಾಡಿದ ಕಲಾವಿದರಿಗೆ ಕಂಗನಾ ರಣಾವತ್ ಕಿವಿಮಾತು ಹೇಳಿದ್ದಾರೆ.
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ (Radhika Merchant) ಅವರ ವಿವಾಹ ಪೂರ್ವ ಕಾರ್ಯಕ್ರಮ ಗುಜರಾತ್ನ ಜಾಮ್ ನಗರದಲ್ಲಿ ನಡೆದಿದೆ. ಈ ಕಾರ್ಯಕ್ರಮಕ್ಕೆ ದೇಶ ಮಾತ್ರವಲ್ಲದೆ ವಿದೇಶಗಳಿಂದಲೂ ಗಣ್ಯರು ಆಗಮಿಸಿದ್ದರು. ಈ ಪಾರ್ಟಿಯಲ್ಲಿ ಬಹುತೇಕ ಎಲ್ಲಾ ಬಾಲಿವುಡ್ ತಾರೆಯರು ಉಪಸ್ಥಿತರಿದ್ದರು. ಬಾಲಿವುಡ್ ತಾರೆಯರು ಕೇವಲ ಹಾಜರಿ ಹಾಕಿದ್ದಲ್ಲದೆ ಡ್ಯಾನ್ಸ್ ಕೂಡ ಮಾಡಿದ್ದಾರೆ. ಅಮಿತಾಭ್ ಬಚ್ಚನ್‌ನಿಂದ ಹಿಡಿದು ಶಾರುಖ್ ಖಾನ್ವರೆಗೆ ಬಹುತೇಕ ಎಲ್ಲರೂ ಈ ಪೂರ್ವ ವಿವಾಹ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಪಾರ್ಟಿಯಲ್ಲಿ ಅಮಿತಾಭ್ ಬಚ್ಚನ್ ಕೂಡ ಡ್ಯಾನ್ಸ್ ಮಾಡಿದ್ದು ಕಂಡುಬಂತು. ಆದರೆ, ಕಂಗನಾ ರಣಾವತ್ ಈ ಪಾರ್ಟಿಯಲ್ಲಿ ಎಲ್ಲಿಯೂ ಕಾಣಿಸಿಕೊಂಡಿಲ್ಲ.
ಕಂಗನಾ ರಣಾವತ್ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಅವರು ಬಾಲಿವುಡ್ ತಾರೆಯರ ಬಗ್ಗೆ ಟೀಕೆ ಮಾಡಿದ್ದಾರೆ. ಕಂಗನಾ ರಣಾವತ್ ಅವರ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂಬಾನಿ ಪಾರ್ಟಿಯಲ್ಲಿ ಡ್ಯಾನ್ಸ್ ಮಾಡಿದ ಕಲಾವಿದರಿಗೆ ಕಂಗನಾ ರಣಾವತ್ ಕಿವಿಮಾತು ಹೇಳಿದ್ದಾರೆ. ಕೆಲವರು ಅವರನ್ನು ಬೆಂಬಲಿಸಿದರೆ, ಇನ್ನೂ ಕೆಲವರು ಅವರನ್ನು ಟೀಕಿಸಿದ್ದಾರೆ.
ಲತಾ ಮಂಗೇಶ್ಕರ್ ಅವರು ಸಂದರ್ಶನ ಒಂದರಲ್ಲಿ ಹೇಳಿದ ವಿಚಾರವನ್ನು ಕಂಗನಾ ರಣಾವತ್ ಶೇರ್ ಮಾಡಿಕೊಂಡಿದ್ದಾರೆ. ಈ ಸಂದರ್ಶನದಲ್ಲಿ ಲತಾ ಮಂಗೇಶ್ಕರ್ ಅವರು ‘ನನಗೆ ಯಾರಾದರೂ ಐದು ಲಕ್ಷ ಡಾಲರ್ ಕೊಟ್ಟರೂ ನಾನು ಮದುವೆಯಲ್ಲಿ ಹಾಡುವುದಿಲ್ಲ’ ಎಂದು ಹೇಳಿದ್ದರು. ಅವರು ತಮ್ಮ ಮಾತಿಗೆ ಬದ್ಧರಾಗಿದ್ದರು. ಈ ಪೋಸ್ಟ್‌ನಲ್ಲಿ ಕಂಗನಾ ರಣಾವತ್ ತಮ್ಮನ್ನು ಲತಾ ಮಂಗೇಶ್ಕರ್ ಅವರನ್ನು ಹೋಲಿಸಿಕೊಂಡಿದ್ದಾರೆ. ಕೋಟ್ಯಂತರ ರೂಪಾಯಿ ಸಂಭಾವನೆ ಕೊಟ್ಟರೂ ನಾನು ಯಾರ ಮದುವೆಯಲ್ಲೂ ಡ್ಯಾನ್ಸ್ ಮಾಡುವುದಿಲ್ಲ ಎನ್ನುತ್ತಾರೆ ಕಂಗನಾ.
‘ನಾನು ನನ್ನ ಜೀವನದಲ್ಲಿ ಸಾಕಷ್ಟು ಆರ್ಥಿಕ ಬಿಕ್ಕಟ್ಟನ್ನು ಅನುಭವಿಸಿದ್ದೇನೆ. ಆದರೆ ನಾನು ಎಂದಿಗೂ ಮದುವೆಯಲ್ಲಿ ನೃತ್ಯ ಮಾಡಿಲ್ಲ. ಹಲವು ಫೇಮಸ್ ಐಟಂ ಸಾಂಗ್‌ಗಳಿಗೂ ಆಫರ್‌ಗಳು ಬಂದಿದ್ದವು. ಪ್ರಶಸ್ತಿ ಕಾರ್ಯಕ್ರದಿಂದಲೂ ಆಫರ್ ಬಂದಿತ್ತು. ಹಣ ಮತ್ತು ಜನಪ್ರಿಯತೆಗೆ ನೋ ಎಂದು ಹೇಳುವುದು ಸ್ಟ್ರಾಂಗ್ ಕ್ಯಾರೆಕ್ಟರ್ ತೋರಿಸುತ್ತದೆ. ಹೊಸ ಜನರೇಷನ್ ಈ ಬಗ್ಗೆ ತಿಳಿದುಕೊಳ್ಳಬೇಕು’ ಎಂಬರ್ಥದಲ್ಲಿ ಅವರು ಬರೆದುಕೊಂಡಿದ್ದಾರೆ. ಜೊತೆಗೆ ತಾವು ಹಾಗೂ ಲತಾ ಒಂದೇ ರೀತಿ ಆಲೋಚನೆ ಹೊಂದಿದ್ದೆವು ಎಂದಿದ್ದಾರೆ.
ಇದನ್ನೂ ಓದಿ: ‘ರಾಜಕೀಯಕ್ಕೆ ಬರಲು ನನಗೆ ಇದು ಸರಿಯಾದ ಕಾಲ’: ಕಂಗನಾ ರಣಾವತ್
ಇದೀಗ ಕಂಗನಾ ರಣಾವತ್ ಅವರ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಂಗನಾ ರಣಾವತ್ ಸರಿಯಾಗಿ ಮಾತನಾಡುತ್ತಿದ್ದಾರೆ ಎಂದು ಹಲವರು ಹೇಳಿದ್ದಾರೆ. ಬಹುತೇಕ ಎಲ್ಲಾ ಬಾಲಿವುಡ್ ನಟರು ಅಂಬಾನಿ ಪಾರ್ಟಿಯಲ್ಲಿ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ. ಇದರ ಹಲವು ವಿಡಿಯೋಗಳು ಮತ್ತು ಫೋಟೋಗಳು ವೈರಲ್ ಆಗುತ್ತಿರುವುದು ಕಂಡುಬಂದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ