‘ಸಿನಿಮಾ ಸಕ್ಸಸ್ ಅಳೆಯಲು ಕಲೆಕ್ಷನ್ ಮಾತ್ರವಲ್ಲ ಬಜೆಟ್ ಕೂಡ ನೋಡಬೇಕು’; ಇದು ರಾಣಿ ಮುಖರ್ಜಿ ಲೆಕ್ಕಾಚಾರ
ರಾಣಿ ಮುಖರ್ಜಿ ಮಹಿಳಾ ಪ್ರಧಾನ ಸಿನಿಮಾಗಳತ್ತ ಒಲವು ತೋರಿಸುತ್ತಿದ್ದಾರೆ. ಅವರ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಒಳ್ಳೆಯ ಪರ್ಫಾರ್ಮೆನ್ಸ್ ಮಾಡುತ್ತವೆ.
ನಟಿ ರಾಣಿ ಮುಖರ್ಜಿ ಅವರು ಇತ್ತೀಚೆಗೆ ಪಾತ್ರಗಳ ಆಯ್ಕೆಯಲ್ಲಿ ತಮ್ಮ ನಿಲುವನ್ನು ಬದಲಿಸಿಕೊಂಡಿದ್ದಾರೆ. ಮೊದಲೆಲ್ಲ ಪಕ್ಕದ ಮನೆ ಹುಡುಗಿ ಪಾತ್ರಕ್ಕೆ ಹೆಚ್ಚು ಒತ್ತು ನೀಡುತ್ತಿದ್ದ ಅವರು ಈಗ ಮಹಿಳಾ ಪ್ರಧಾನ ಸಿನಿಮಾಗಳತ್ತ ಒಲವು ತೋರಿಸುತ್ತಿದ್ದಾರೆ. ಈ ಕಾರಣಕ್ಕೆ ಅವರು ನಟಿಸುತ್ತಿರುವ ಸಿನಿಮಾಗಳ ಸಂಖ್ಯೆ ಕಡಿಮೆ ಆಗಿದೆ. ಅವರ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಒಳ್ಳೆಯ ಪರ್ಫಾರ್ಮೆನ್ಸ್ ಮಾಡುತ್ತವೆ. ಈಗ ಅವರು ಈ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಸಿನಿಮಾ ಚೆನ್ನಾಗಿದ್ದರೆ ಜನರು ನೋಡುತ್ತಾರೆ ಅನ್ನೋ ನಂಬಿಕೆ ರಾಣಿ ಮುಖರ್ಜಿ (Rani Mukerji) ಅವರದ್ದು.
‘ಮಿಸಸ್ ಚಟರ್ಜಿ vs ನಾರ್ವೇ’ ಸಿನಿಮಾ ಮಾರ್ಚ್ 17ರಂದು ಥಿಯೇಟರ್ನಲ್ಲಿ ರಿಲೀಸ್ ಆಯಿತು. ಈ ಸಿನಿಮಾ ಮೇ ತಿಂಗಳ ಆರಂಭದಲ್ಲಿ ಒಟಿಟಿಯಲ್ಲಿ ರಿಲೀಸ್ ಆಗಿದೆ. ಎರಡು ವರ್ಷಗಳ ಬಳಿಕ ಅವರು ದೊಡ್ಡ ಪರದೆಗೆ ಮರಳಿದ್ದರು. ಈ ಸಿನಿಮಾ ಭಾರತದ ಬಾಕ್ಸ್ ಆಫೀಸ್ನಲ್ಲಿ 21 ಕೋಟಿ ರೂಪಾಯಿ ಬಾಚಿಕೊಂಡಿತ್ತು.
‘ಮಿಸಸ್ ಚಟರ್ಜಿ vs ನಾರ್ವೇ’ ಸಿನಿಮಾ ನಿಜವಾದ ಘಟನೆ ಆಧರಿಸಿ ಸಿದ್ಧಗೊಂಡಿರೋ ಸಿನಿಮಾ. ನಾರ್ವೇನಲ್ಲಿ ವಾಸವಾಗಿದ್ದ ಭಾರತ ಮೂಲದ ಸಾಗರಿಕಾ ಚಕ್ರವರ್ತಿ ಜೀವನವನ್ನು ಆಧರಿಸಿ ಸಿನಿಮಾ ಸಿದ್ಧಗೊಂಡಿದೆ. ಸಾಗರಿಕಾ ಚಕ್ರವರ್ತಿ ತನ್ನ ಮಕ್ಕಳನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದಾರೆ ಎಂದು ಅಲ್ಲಿನ ಸರ್ಕಾರ ಭಾವಿಸಿತ್ತು. ಹೀಗಾಗಿ ಅವರ ಮಕ್ಕಳನ್ನು ತಮ್ಮ ವಶಕ್ಕೆ ಪಡೆದಿದ್ದರು. ಈ ಘಟನೆ ಆಧರಿಸಿ ಸಿನಿಮಾ ಮಾಡಲಾಗಿದೆ.
‘ಮಹಿಳಾ ಪ್ರಧಾನ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಗಳಿಕೆ ಮಾಡುತ್ತವೆಯೇ ಎನ್ನುವ ಪ್ರಶ್ನೆ ಅನೇಕರಲ್ಲಿದೆ. ಖಂಡಿತ, ಅವು ಗಳಿಕೆ ಮಾಡುತ್ತವೆ. ಕಲಾವಿದ ಪುರುಷನೋ ಅಥವಾ ಮಹಿಳೆಯೋ ಎಂಬುದು ಮುಖ್ಯವಾಗುವುದಿಲ್ಲ. ಒಳ್ಳೆಯ ಚಿತ್ರ ಯಾವಾಗಲೂ ಜನರನ್ನು ಥಿಯೇಟರ್‌ಗಳಿಗೆ ಕರೆತರುತ್ತದೆ’ ಎಂದಿದ್ದಾರೆ ಅವರು.
ಇದನ್ನೂ ಓದಿ: Rani Mukerji: ಒಟಿಟಿಗೆ ಬಂತು ರಾಣಿ ಮುಖರ್ಜಿ ನಟನೆಯ ಹೊಸ ಚಿತ್ರ; ಈ ಸಿನಿಮಾದಲ್ಲಿದೆ ವಿಶೇಷ ಕಹಾನಿ
‘ಹಿಟ್ ಎಂದರೆ ಏನು ಎಂಬುದರ ಬಗ್ಗೆ ತಪ್ಪು ಕಲ್ಪನೆಗಳಿವೆ. ನಿರ್ಮಾಪಕರು ಹಣ ಗಳಿಸಿದಾಗ ಚಿತ್ರ ಹಿಟ್ ಆಗುತ್ತದೆ. ಗಲ್ಲಾಪೆಟ್ಟಿಗೆಯಲ್ಲಿ ಎಷ್ಟು ಹಣ ಮಾಡಿದೆ ಎಂಬುದನ್ನು ಮಾತ್ರ ನೋಡಬಾರದು. ಚಿತ್ರದ ವೆಚ್ಚವನ್ನು ಸಹ ಪರಿಗಣಿಸಬೇಕು’ ಎಂದಿದ್ದಾರೆ ರಾಣಿ ಮುಖರ್ಜಿ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ