AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kiara Advani: ಮದುವೆ ಬಳಿಕ ಐಷಾರಾಮಿ ಕಾರು ಖರೀದಿಸಿದ ನಟಿ ಕಿಯಾರಾ ಅಡ್ವಾಣಿ; ಇದರ ಬೆಲೆ ಇಷ್ಟೊಂದಾ?

Kiara Advani New Car: ಕಿಯಾರಾ ಅಡ್ವಾಣಿ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಹಲವು ಸೂಪರ್ ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ. 2022ರಲ್ಲಿ ಅವರು ಬ್ಯಾಕ್ ಟು ಬ್ಯಾಕ್ ಗೆಲುವು ಕಂಡಿದ್ದಾರೆ. ಈಗ ಅವರು ಹೊಸ ಕಾರು ಖರೀದಿಸಿದ್ದಾರೆ.

Kiara Advani: ಮದುವೆ ಬಳಿಕ ಐಷಾರಾಮಿ ಕಾರು ಖರೀದಿಸಿದ ನಟಿ ಕಿಯಾರಾ ಅಡ್ವಾಣಿ; ಇದರ ಬೆಲೆ ಇಷ್ಟೊಂದಾ?
ಕಿಯಾರಾ
ರಾಜೇಶ್ ದುಗ್ಗುಮನೆ
|

Updated on: May 31, 2023 | 9:45 AM

Share

ನಟಿ ಕಿಯಾರಾ ಅಡ್ವಾಣಿ (Kiara Advani) ಹಾಗೂ ನಟ ಸಿದ್ದಾರ್ಥ್ ಮಲ್ಹೋತ್ರಾ ಮದುವೆ ಆಗಿ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಈ ವರ್ಷ ವಿವಾಹ ಆದ ಈ ಜೋಡಿ ಸುತ್ತಾಟ ನಡೆಸುತ್ತಾ, ಸಿನಿಮಾ ಕೆಲಸಗಳಲ್ಲೂ ತೊಡಗಿಕೊಂಡಿದ್ದಾರೆ. ಈಗ ಕಿಯಾರಾ ಅಡ್ವಾಣಿ ಅವರ ಕಾರ್ ಕಲೆಕ್ಷನ್​ಗೆ ಹೊಸದೊಂದು ಕಾರು ಸೇರ್ಪಡೆ ಆಗಿದೆ. ಅವರು ಮರ್ಸೀಡಿಸ್ ಬೆಂಜ್ ಮೆಬ್ಯಾಕ್ (Mercedes-Benz Maybach)​ ಕಾರನ್ನು ಖರೀದಿ ಮಾಡಿದ್ದಾರೆ. ಇದರಲ್ಲೇ ಅವರು ಪ್ರಯಾಣ ಬೆಳೆಸಿದ್ದು, ಪಾಪರಾಜಿಗಳ ಕಣ್ಣಿಗೆ ಬಿದ್ದಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕಿಯಾರಾ ಅಡ್ವಾಣಿ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಹಲವು ಸೂಪರ್ ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ. 2022ರಲ್ಲಿ ಅವರು ಬ್ಯಾಕ್ ಟು ಬ್ಯಾಕ್ ಗೆಲುವು ಕಂಡಿದ್ದಾರೆ. ಇದರಿಂದ ಸಹಜವಾಗಿಯೇ ಕಿಯಾರಾ ಬೇಡಿಕೆ ಹೆಚ್ಚಿದ್ದು, ಬ್ಯಾಕ್ ಟು ಬ್ಯಾಕ್ ಆಫರ್​ಗಳು ಬರುತ್ತಿವೆ. ಹೀಗಾಗಿ ಅವರು ಮರ್ಸೀಡಿಸ್ ಬೆಂಜ್ ಮೆಬ್ಯಾಕ್ ಕಾರನ್ನು ಖರೀದಿಸಿದ್ದಾರೆ. ಹೈ ಎಂಡ್​ ಮಾಡೆಲ್​ಗೆ 3.40 ಕೋಟಿ ರೂಪಾಯಿ ಇದೆ.

ಮಂಗಳವಾರ (ಮೇ 30) ಕಿಯಾರಾ ಅವರು ಡಬ್ಬಿಂಗ್ ಸ್ಟುಡಿಯೋಗೆ ಆಗಮಿಸಿದ್ದಾರೆ. ಈ ವೇಳೆ ಅವರು ತಮ್ಮ ಹೊಸ ಕಾರಿನಲ್ಲೇ ಆಗಮಿಸಿದ್ದರು. ಅಲ್ಲಿದ್ದ ಪಾಪರಾಜಿಗಳ ಕ್ಯಾಮೆರಾದಲ್ಲಿ ಈ ಕಾರಿನ ಫೋಟೋ,  ವಿಡಿಯೋ ಸೆರೆಯಾಗಿದೆ. ಇದಕ್ಕೆ ಅಭಿಮಾನಿಗಳು ಅಭಿನಂದನೆ ತಿಳಿಸುತ್ತಿದ್ದಾರೆ.

ಇದನ್ನೂ ಓದಿ: ರಾಮ್​ ಚರಣ್​ ಜತೆಗಿನ ಸಿನಿಮಾ ಶೂಟಿಂಗ್​ ಸಲುವಾಗಿ ಹೈದರಾಬಾದ್​ಗೆ ಬಂದ ಕಿಯಾರಾ ಅಡ್ವಾಣಿ

ಕಿಯಾರಾ ಅಡ್ವಾಣಿ ಹಾಗೂ ಸಿದ್ದಾರ್ಥ್ ಮಲ್ಹೋತ್ರಾ ಅವರು ಪರಸ್ಪರ ಪ್ರೀತಿಸುತ್ತಿದ್ದರು. ಈ ವರ್ಷ ಫೆಬ್ರವರಿ ತಿಂಗಳಲ್ಲಿ ಈ ಜೋಡಿ ಮದುವೆ ಆಗಿದೆ. ರಾಜಸ್ಥಾನದಲ್ಲಿ ಸಾಕಷ್ಟು ಅದ್ದೂರಿಯಾಗಿ ಇವರ ಮದುವೆ ನಡೆಯಿತು. ಇತ್ತೀಚೆಗಷ್ಟೇ ಈ ದಂಪತಿ ಜಪಾನ್​ಗೆ ತೆರಳಿದ್ದರು. ಅಲ್ಲಿ ಹಾಯಾಗಿ ಸುತ್ತಾಟ ನಡೆಸಿ ಬಂದಿದ್ದಾರೆ. ಅವರು ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿರುವ ಫೋಟೋ ಹಾಗೂ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಸಿನಿಮಾ ವಿಚಾರಕ್ಕೆ ಬರೋದಾದರೆ ಕಿಯಾರಾ ಅಡ್ವಾಣಿ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ‘ಸತ್ಯಪ್ರೇಮ್​ ಕಿ ಕಥಾ’ ಚಿತ್ರದಲ್ಲಿ ಕಾರ್ತಿಕ್ ಆರ್ಯನ್​ಗೆ ಅವರು ಜೊತೆಯಾಗಿದ್ದಾರೆ. ಈ ಚಿತ್ರದಲ್ಲಿ ಬರೋ ಮದುವೆ ದೃಶ್ಯಕ್ಕೆ 7 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂದು ವರದಿ ಆಗಿತ್ತು. ‘ಭೂಲ್ ಭುಲಯ್ಯ 2’ ಹಿಟ್ ಆದ ಬಳಿಕ ಈ ಜೋಡಿ ಮತ್ತೆ ಒಂದಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ