AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

​Sara Ali Khan: ಮಹಾಕಾಳೇಶ್ವರ ದೇವಸ್ಥಾನಕ್ಕೆ ಸಾರಾ ಅಲಿ ಖಾನ್​ ಭೇಟಿ; ಸೈಫ್​ ಪುತ್ರಿಯ ಟೆಂಪಲ್​ ರನ್​ ಬಗ್ಗೆ ಕೆಲವರ ತಕರಾರು

Zara Hatke Zara Bachke: ಸಾರಾ ಅಲಿ ಖಾನ್​ಗೆ ಕೆಲವರು ಮೆಚ್ಚುಗೆ ಸೂಚಿಸಿದ್ದಾರೆ. ಆದರೆ ಕೆಲವರು ತಕರಾರು ತೆಗೆದಿದ್ದಾರೆ. ಇದೆಲ್ಲ ಪ್ರಚಾರದ ಗಿಮಿಕ್​ ಎಂದು ವ್ಯಂಗ್ಯವಾಡಿದ್ದಾರೆ.

​Sara Ali Khan: ಮಹಾಕಾಳೇಶ್ವರ ದೇವಸ್ಥಾನಕ್ಕೆ ಸಾರಾ ಅಲಿ ಖಾನ್​ ಭೇಟಿ; ಸೈಫ್​ ಪುತ್ರಿಯ ಟೆಂಪಲ್​ ರನ್​ ಬಗ್ಗೆ ಕೆಲವರ ತಕರಾರು
ಸಾರಾ ಅಲಿ ಖಾನ್​
ಮದನ್​ ಕುಮಾರ್​
|

Updated on: May 31, 2023 | 11:04 AM

Share

ನಟಿ ಸಾರಾ ಅಲಿ ಖಾನ್​ (​Sara Ali Khan) ಅವರು ಆಗಾಗ ಹಿಂದೂ ದೇವಾಲಯಕ್ಕೆ ಭೇಟಿ ನೀಡಿ ಸುದ್ದಿ ಆಗುತ್ತಾರೆ. ಕೆಲವೇ ದಿನಗಳ ಹಿಂದೆ ಅವರು ಕೇದಾರನಾಥಕ್ಕೆ ಹೋಗಿದ್ದರು. ಈಗ ಅವರು ಉಜ್ಜಯಿನಿಯಲ್ಲಿನ ಮಹಾಕಾಳೇಶ್ವರ ದೇವಸ್ಥಾನಕ್ಕೆ (Mahakaleshwar Temple) ಭೇಟಿ ನೀಡಿದ್ದಾರೆ. ಅಲ್ಲಿ ಅವರು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಗುಲಾಬಿ ಬಣ್ಣದ ಸಾಂಪ್ರದಾಯಿಕ ಉಡುಗೆ ಧರಿಸಿ ಕಾಣಿಸಿಕೊಂಡ ಅವರು ಅಲ್ಲಿನ ಪುರೋಹಿತರ ಜೊತೆ ಮಾತನಾಡಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್​ ಆಗಿದೆ. ಅದನ್ನು ಕಂಡು ಅನೇಕರು ಕಮೆಂಟ್​ ಮಾಡಿದ್ದಾರೆ. ಸಾರಾ ಅಲಿ ಖಾನ್​ಗೆ ಕೆಲವರು ಮೆಚ್ಚುಗೆ ಸೂಚಿಸಿದ್ದಾರೆ. ಆದರೆ ಕೆಲವರು ತಕರಾರು ತೆಗೆದಿದ್ದಾರೆ. ಇದೆಲ್ಲ ಪ್ರಚಾರದ ಗಿಮಿಕ್​ ಎಂದು ವ್ಯಂಗ್ಯವಾಡಿದ್ದಾರೆ. ಸಿನಿಮಾದ ಗೆಲುವಿಗಾಗಿ ಸೆಲೆಬ್ರಿಟಿಗಳು ಇಂಥದ್ದನ್ನೆಲ್ಲ ಮಾಡ್ತಾರೆ ಎಂಬ ಕಮೆಂಟ್​ಗಳು ಬಂದಿವೆ.

‘ಸಾರಾ ಅಲಿ ಖಾನ್​ ಹಿಂದೂ ಧರ್ಮಕ್ಕೆ ಬಂದ್ರಾ? ಇದನ್ನು ಘರ್​ ವಾಪ್ಸಿ ಅಂತ ಕರೆಯಬಹುದಾ?’ ಎಂಬಿತ್ಯಾದಿ ಕಮೆಂಟ್​ಗಳು ಬಂದಿವೆ. ‘ಯಾವುದೋ ಸಿನಿಮಾ ರಿಲೀಸ್​ಗೆ ಹತ್ತಿರವಾಗಿರಬೇಕು. ಅದಕ್ಕೆ ಅವರು ದೇವಸ್ಥಾನಕ್ಕೆ ಬಂದು ಪೋಸ್​ ಕೊಟ್ಟಿದ್ದಾರೆ’ ಎಂಬ ಟೀಕೆ ಕೂಡ ವ್ಯಕ್ತವಾಗಿದೆ. ಈ ಟೀಕೆಗಳಿಗೆ ಸಾರಾ ಅಲಿ ಖಾನ್​ ಅವರು ತಲೆ ಕೆಡಿಸಿಕೊಂಡಿಲ್ಲ. ಅವರು ನಟಿಸಿರುವ ‘ಝರಾ ಹಟ್ಕೆ ಝರಾ ಬಚ್ಕೆ’ ಸಿನಿಮಾದ ಟ್ರೇಲರ್​ ಇತ್ತೀಚೆಗೆ ಬಿಡುಗಡೆಯಾಗಿ ಗಮನ ಸೆಳೆದಿದೆ. ಈ ಸಿನಿಮಾದಲ್ಲಿ ಸಾರಾ ಅಲಿ ಖಾನ್​ ಮತ್ತು ವಿಕ್ಕಿ ಕೌಶಲ್​ ಅವರು ಜೋಡಿಯಾಗಿ ನಟಿಸಿದ್ದಾರೆ. ಜೂನ್​ 2ರಂದು ಈ ಚಿತ್ರ ಬಿಡುಗಡೆ ಆಗಲಿದೆ.

ಇತ್ತೀಚೆಗೆ ಸಾರಾ ಅಲಿ ಖಾನ್​ ಅವರು ಕಾನ್​ ಚಿತ್ರೋತ್ಸವಕ್ಕೆ ಹಾಜರಿ ಹಾಕಿದ್ದರು. ಅಲ್ಲಿ ಅವರು ಟಸ್ಸೆಲ್ ಗೌನ್ ತೊಟ್ಟು ಮಿರಿ-ಮಿರಿ ಮಿಂಚಿದ್ದರು. ಟಸ್ಸೆಲ್ ಗೌನ್ ಪುರಾತನ ಈಜಿಪ್ಟ್ ಕಾಲದ ಉಡುಗೆ. ಅದನ್ನು ದುಷ್ಟ ಶಕ್ತಿಗಳಿಂದ ರಕ್ಷಣೆಗೆ ಧರಿಸಲಾಗುತ್ತಿತ್ತು ಎಂಬ ನಂಬಿಕೆ ಇತ್ತು. ಇಂಗ್ಲೆಂಡ್​ನ ಮಹಿಳೆಯರು ಈ ರೀತಿಯ ಉಡುಪುಗಳಿಗೆ ಮನಸೋತು ಧರಿಸಲಾರಂಭಿಸಿದ್ದರು. ಈ ಉಡುಗೆ ತುಂಬ ದುಬಾರಿ. 30 ಸಾವಿರದಿಂದ ಆರಂಭಿಸಿ ಕೋಟ್ಯಂತರ ಬೆಲೆಯ ಟಸ್ಸೆಲ್​ಗಳು ಇವೆ. ನಟಿ ಸಾರಾ ಅಲಿ ಖಾನ್ ಅವರು ಕಾನ್ ಚಿತ್ರೋತ್ಸವದಲ್ಲಿ ಭಾಗಿ ಆಗಿದ್ದು ಇದೇ ಮೊದಲು. ಅಲ್ಲಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿ ಎಲ್ಲರ ಗಮನ ಸೆಳೆದರು.

Sara Ali Khan: ಕೇದಾರನಾಥದಲ್ಲಿ ಸಾರಾ ಅಲಿ ಖಾನ್ ಜೈ ಭೋಲೆನಾಥ್ ಎಂದ ನಟಿ

ಸೈಫ್ ಅಲಿ ಖಾನ್​ ಅವರ ಮಗಳು ಎಂಬ ಕಾರಣಕ್ಕೆ ಸಾರಾ ಅಲಿ ಖಾನ್​ಗೆ ಸಾಕಷ್ಟು ಅವಕಾಶಗಳು ಸಿಗುತ್ತಿವೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಅವರು ಗೆಲುವು ಕಂಡಿಲ್ಲ. ಲವ್​, ರಿಲೇಷನ್​ಶಿಪ್​ ಕಾರಣಕ್ಕೂ ಅವರು ಆಗಾಗ ಸುದ್ದಿ ಆಗುತ್ತಾರೆ. ಈ ಹಿಂದೆ ನಟ ಕಾರ್ತಿಕ್​ ಆರ್ಯನ್​ ಜೊತೆ ಅವರ ಹೆಸರು ತಳುಕು ಹಾಕಿಕೊಂಡಿತ್ತು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.