AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Akshay Kumar: ಸೋಲಿನ ನೋವು ಮರೆತು ಪೊಲೀಸರ ಜೊತೆ ವಾಲಿಬಾಲ್​ ಆಡಿದ ನಟ ಅಕ್ಷಯ್​ ಕುಮಾರ್​; ವಿಡಿಯೋ ವೈರಲ್​

Akshay Kumar Viral Video: ಅಕ್ಷಯ್​ ಕುಮಾರ್​ ಅವರು ನಟಿಸುತ್ತಿರುವ ‘ಶಂಕರ’ ಸಿನಿಮಾದಲ್ಲಿ ನಾಯಕಿಯಾಗಿ ಅನನ್ಯಾ ಪಾಂಡೆ ಅಭಿನಯಿಸುತ್ತಿದ್ದಾರೆ. ಈ ಸಿನಿಮಾದ ಬಗ್ಗೆ ಅವರು ಹೆಚ್ಚಿನ ಮಾಹಿತಿ ಬಿಟ್ಟುಕೊಟ್ಟಿಲ್ಲ. ಸಾಕಷ್ಟು ಗೌಪ್ಯವಾಗಿಯೇ ಎಲ್ಲ ಕೆಲಸಗಳನ್ನು ಮುಗಿಸಲಾಗುತ್ತಿದೆ.

Akshay Kumar: ಸೋಲಿನ ನೋವು ಮರೆತು ಪೊಲೀಸರ ಜೊತೆ ವಾಲಿಬಾಲ್​ ಆಡಿದ ನಟ ಅಕ್ಷಯ್​ ಕುಮಾರ್​; ವಿಡಿಯೋ ವೈರಲ್​
ವಾಲಿಬಾಲ್​ ಆಡಿದ ನಟ ಅಕ್ಷಯ್​ ಕುಮಾರ್​
ಮದನ್​ ಕುಮಾರ್​
|

Updated on: May 27, 2023 | 5:11 PM

Share

ಬರೀ ಸಿನಿಮಾದಲ್ಲಿ ಮಾತ್ರವಲ್ಲದೇ ನಿಜ ಜೀವನದಲ್ಲೂ ಕೂಡ ಅಕ್ಷಯ್​ ಕುಮಾರ್​ (Akshay Kumar) ಅವರು ತುಂಬ ಆ್ಯಕ್ಟೀವ್​ ಆಗಿರುತ್ತಾರೆ. ಪ್ರತಿದಿನ ಅವರು ವ್ಯಾಯಾಮ ತಪ್ಪಿಸುವುದಿಲ್ಲ. ಕ್ರೀಡೆ ಬಗ್ಗೆಯೂ ಅವರಿಗೆ ಸಖತ್​ ಆಸಕ್ತಿ ಇದೆ. ಈಗ ಅವರು ಪೊಲೀಸರ ಜೊತೆ ವಾಲಿಬಾಲ್​ (Volleyball) ಆಡಿದ್ದಾರೆ. ಆ ಸಂದರ್ಭದ ವಿಡಿಯೋ ವೈರಲ್​ ಆಗಿದೆ. ಶೂಟಿಂಗ್​ ಸಲುವಾಗಿ ಡೆಹರಾಡೂನ್​ಗೆ ತೆರಳಿರುವ ಅಕ್ಷಯ್​ ಕುಮಾರ್​ ಅವರು ಬಿಡುವಿನ ವೇಳೆ ವಾಲಿಬಾಲ್​ ಆಡಿದ್ದಾರೆ. ಅವರ ಪಂದ್ಯವನ್ನು ನೋಡಲು ಸ್ಟೇಡಿಯಂನಲ್ಲಿ ಜನರು ನೆರೆದಿದ್ದರು. ಸದ್ಯ ವೈರಲ್​ ಆಗಿರುವ ವಿಡಿಯೋಗೆ (Akshay Kumar Viral Video) ಫ್ಯಾನ್ಸ್​ ಕಮೆಂಟ್​ ಮಾಡುತ್ತಿದ್ದಾರೆ. ಅಕ್ಷಯ್​ ಕುಮಾರ್​ ಅವರ ಆಸಕ್ತಿಗೆ ನೆಟ್ಟಿಗರು ಭೇಷ್​ ಎನ್ನುತ್ತಿದ್ದಾರೆ. ಸಾಲು ಸಾಲು ಸಿನಿಮಾಗಳ ಸೋಲಿನ ನೋವು ಮರೆತು ಅವರು ಮುನ್ನುಗ್ಗುತ್ತಿದ್ದಾರೆ.

ಕೆಲವೇ ದಿನಗಳ ಹಿಂದೆ ಅಕ್ಷಯ್​ ಕುಮಾರ್​ ಅವರು ಕೇದಾರನಾಥ್​ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಆಗಲೂ ಕೂಡ ವಿಡಿಯೋ ವೈರಲ್​ ಆಗಿತ್ತು. ಪ್ರಸ್ತುತ ಅಕ್ಷಯ್​ ಕುಮಾರ್​ ಅವರು ‘ಶಂಕರ’ ಸಿನಿಮಾದ ಶೂಟಿಂಗ್​ನಲ್ಲಿ ಬ್ಯುಸಿ ಆಗಿದ್ದಾರೆ. ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳನ್ನು ಒಪ್ಪಿಕೊಂಡು, ಅತಿ ವೇಗವಾಗಿ ಶೂಟಿಂಗ್ ಮುಗಿಸುವುದು ಅವರಿಗೆ ರೂಢಿ ಆಗಿದೆ. ಆದರೆ ಇದರಿಂದ ಅವರಿಗೆ ತೊಂದರೆ ಆಗಿದ್ದು ಕೂಡ ಉಂಟು. ಅವಸರದ ಕಾರಣಕ್ಕೆ ಗುಣಮಟ್ಟದ ಸಿನಿಮಾಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ ಎಂಬ ಟೀಕೆ ಇದೆ.

ಅಕ್ಷಯ್​ ಕುಮಾರ್​ ಅವರು ನಟಿಸುತ್ತಿರುವ ‘ಶಂಕರ’ ಸಿನಿಮಾದಲ್ಲಿ ನಾಯಕಿಯಾಗಿ ಅನನ್ಯಾ ಪಾಂಡೆ ಅಭಿನಯಿಸುತ್ತಿದ್ದಾರೆ. ಈ ಸಿನಿಮಾದ ಬಗ್ಗೆ ಅವರು ಹೆಚ್ಚಿನ ಮಾಹಿತಿ ಬಿಟ್ಟುಕೊಟ್ಟಿಲ್ಲ. ಸಾಕಷ್ಟು ಗೌಪ್ಯವಾಗಿಯೇ ಎಲ್ಲ ಕೆಲಸಗಳನ್ನು ಮುಗಿಸಲಾಗುತ್ತಿದೆ. ಇದಲ್ಲದೇ ಹಲವು ಚಿತ್ರಗಳು ಅವರ ಕೈಯಲ್ಲಿವೆ. ‘ಸೂರರೈ ಪೋಟ್ರು’ ಹಿಂದಿ ರಿಮೇಕ್​, ‘ಬಡೆಮಿಯಾ ಚೋಟೆ ಮಿಯಾ’, ‘ಓಹ್​ ಮೈ ಗಾಡ್​ 2’, ‘ವೇಡಾತ್​ ಮರಾಠೆ ವೀರ್​ ದೌಡಲೇ ಸಾಥ್​’, ‘ದ ಗ್ರೇಡ್​ ಇಂಡಿಯನ್​ ರೆಸ್ಕ್ಯೂ’ ಮುಂತಾದ ಸಿನಿಮಾಗಳು ಒಂದರಹಿಂದೊಂದು ಬಿಡುಗಡೆ ಆಗಲಿವೆ.

ಇದನ್ನೂ ಓದಿ: Akshay Kumar: ಸಾಹಸ ದೃಶ್ಯದ ಶೂಟಿಂಗ್ ವೇಳೆ ಅಕ್ಷಯ್​ ಕುಮಾರ್​ಗೆ ಪೆಟ್ಟು; ಇಲ್ಲಿದೆ ಹೆಲ್ತ್​ ಅಪ್​ಡೇಟ್​

2022ರ ವರ್ಷ ಅಕ್ಷಯ್​ ಕುಮಾರ್​ ಪಾಲಿಗೆ ನೀರಸವಾಗಿತ್ತು. ಅವರು ನಟಿಸಿದ ಯಾವ ಚಿತ್ರಗಳೂ ಗೆಲ್ಲಲಿಲ್ಲ. ಕೊನೇ ಪಕ್ಷ 2023ರಲ್ಲಾದರೂ ಅವರು ಗೆಲುವಿನ ಖಾತೆ ತೆರೆಯಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಅದು ಕೂಡ ಸಾಧ್ಯವಾಗಲಿಲ್ಲ. ಅವರು ನಟಿಸಿದ ‘ಸೆಲ್ಫೀ’ ಸಿನಿಮಾ ಫೆಬ್ರವರಿಯಲ್ಲಿ ತೆರೆಕಂಡು ಸೋತಿತು. ಮುಂಬರುವ ಚಿತ್ರಗಳ ಮೂಲಕವಾದರೂ ಅವರಿಗೆ ಯಶಸ್ಸು ಸಿಗಲಿ ಎಂದು ಫ್ಯಾನ್ಸ್ ಹಾರೈಸುತ್ತಿದ್ದಾರೆ.

​ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ