Akshay Kumar: ಸಾಹಸ ದೃಶ್ಯದ ಶೂಟಿಂಗ್ ವೇಳೆ ಅಕ್ಷಯ್​ ಕುಮಾರ್​ಗೆ ಪೆಟ್ಟು; ಇಲ್ಲಿದೆ ಹೆಲ್ತ್​ ಅಪ್​ಡೇಟ್​

ವಿದೇಶದಲ್ಲಿ ಶೂಟಿಂಗ್​ ಆಗುತ್ತಿರುವುದರಿಂದ ಖರ್ಚು-ವೆಚ್ಚ ಜಾಸ್ತಿ ಆಗುತ್ತದೆ. ಹಾಗಾಗಿ ಚಿತ್ರೀಕರಣ ನಿಲ್ಲಬಾರದು ಎಂದು ಅಕ್ಷಯ್​ ಕುಮಾರ್​ ಕಾಳಜಿ ವಹಿಸಿದ್ದಾರೆ.

Akshay Kumar: ಸಾಹಸ ದೃಶ್ಯದ ಶೂಟಿಂಗ್ ವೇಳೆ ಅಕ್ಷಯ್​ ಕುಮಾರ್​ಗೆ ಪೆಟ್ಟು; ಇಲ್ಲಿದೆ ಹೆಲ್ತ್​ ಅಪ್​ಡೇಟ್​
ಅಕ್ಷಯ್ ಕುಮಾರ್
Follow us
ಮದನ್​ ಕುಮಾರ್​
|

Updated on:Mar 24, 2023 | 10:50 AM

ನಟ ಅಕ್ಷಯ್​ ಕುಮಾರ್​ (Akshay Kumar) ಅವರಿಗೆ ಈಗ 55 ವರ್ಷ ವಯಸ್ಸು. ಈ ಪ್ರಾಯದಲ್ಲೂ ಅವರು ಭರ್ಜರಿಯಾಗಿ ಫೈಟಿಂಗ್​ ಮಾಡುತ್ತಾರೆ. ಸಾಹಸ ಸನ್ನಿವೇಶಗಳ ಚಿತ್ರೀಕರಣದ ವೇಳೆ ಬಾಡಿ ಡಬಲ್​ ಬಳಸುವ ಬದಲು ತಾವೇ ಸ್ವತಃ ಫೈಟ್​ ಮಾಡುತ್ತಾರೆ. ಅವರ ಈ ಹುಮ್ಮಸ್ಸಿನಿಂದ ಕೆಲವೊಮ್ಮೆ ತೊಂದರೆ ಆದ ಉದಾಹರಣೆ ಕೂಡ ಇದೆ. ಈಗ ಮತ್ತೆ ಅಂಥ ಘಟನೆ ನಡೆದಿದೆ. ಸ್ಕಾಟ್​ಲ್ಯಾಂ​ಡ್​ನಲ್ಲಿ ಶೂಟಿಂಗ್​ ಮಾಡುತ್ತಿರುವಾಗ ಅಕ್ಷಯ್​ ಕುಮಾರ್​ ಅವರಿಗೆ ಪೆಟ್ಟಾಗಿದೆ. ಅವರ ಮೊಣಕಾಲಿಗೆ ಗಾಯ ಆಗಿದೆ. ‘ಬಡೇ ಮಿಯಾ ಚೋಟೆ ಮಿಯಾ’ (Bade Miyan Chote Miyan) ಸಿನಿಮಾದಲ್ಲಿ ಅಕ್ಷಯ್​ ಕುಮಾರ್​ ಮತ್ತು ಟೈಗರ್​ ಶ್ರಾಫ್​ ನಟಿಸುತ್ತಿದ್ದಾರೆ. ಇದರ ಚಿತ್ರೀಕರಣದ ವೇಳೆ ಅಕ್ಷಯ್​ ಕುಮಾರ್​ ಪೆಟ್ಟು (Injury) ಮಾಡಿಕೊಂಡಿದ್ದಾರೆ.

ಸಾಹಸ ಸನ್ನಿವೇಶಗಳ ಶೂಟಿಂಗ್​ ವೇಳೆ ಎಷ್ಟು ಎಚ್ಚರಿಕೆ ವಹಿಸಿದರೂ ಸಾಲದು. ಸಾಮಾನ್ಯವಾಗಿ ಅಕ್ಷಯ್​ ಕುಮಾರ್​ ಅವರು ತುಂಬ ಜಾಗರೂಕತೆ ವಹಿಸುತ್ತಾರೆ. ಆದರೂ ಕೂಡ ಕೆಲವೊಮ್ಮೆ ಅಚಾತುರ್ಯ ಸಂಭವಿಸುತ್ತದೆ. ‘ಬಡೆ ಮಿಯಾ ಚೋಟೆ ಮಿಯಾ’ ಸಿನಿಮಾಗೆ ಅಲಿ ಅಬ್ಬಾಸ್​ ಜಫರ್​ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಶೂಟಿಂಗ್​ ವೇಳೆ ಪೆಟ್ಟು ಮಾಡಿಕೊಂಡರೂ ಕೂಡ ಅಕ್ಷಯ್​ ಕುಮಾರ್​ ಅವರು ಚಿತ್ರೀಕರಣ ನಿಲ್ಲಿಸಿಲ್ಲ. ಕೆಲವೇ ನಿಮಿಷಗಳ ಕಾಲ ವಿಶ್ರಾಂತಿ ಪಡೆದ ನಂತರ ಅವರು ಶೂಟಿಂಗ್​ ಮುಂದುವರಿಸಿದ್ದಾರೆ.

ಇದನ್ನೂ ಓದಿ: ಅಕ್ಷಯ್​ ಕುಮಾರ್​ ಜತೆ ವಿದೇಶ ಸುತ್ತಿದ ಮೌನಿ ರಾಯ್​

ಇದನ್ನೂ ಓದಿ
Image
Salman Khan: ಶ್ರೀಮಂತರ ಮದುವೆಯಲ್ಲಿ ಡ್ಯಾನ್ಸ್​ ಮಾಡಿದ ಅಕ್ಷಯ್​, ಸಲ್ಲು: ಇದಕ್ಕಾಗಿ ಪಡೆದ ಹಣ ಎಷ್ಟು?
Image
Lionel Messi Biopic: ‘ಲಿಯೋನೆಲ್‌ ಮೆಸ್ಸಿ ಬಯೋಪಿಕ್​ನಲ್ಲಿ ಅಕ್ಷಯ್​ ಕುಮಾರ್​ ನಟಿಸಬೇಕು’; ಮೀಮ್ಸ್​ ವೈರಲ್​
Image
Akshay Kumar: ಛತ್ರಪತಿ ಶಿವಾಜಿ ಪಾತ್ರ ಮಾಡಲು ಹೋಗಿ ಟ್ರೋಲ್​ ಆದ ಅಕ್ಷಯ್​ ಕುಮಾರ್​; ಇಲ್ಲಿದೆ ಕಾರಣ
Image
Akshay Kumar: ಸತತ ಸೋಲಿನ ಬಳಿಕ ಲೈಂಗಿಕ ಶಿಕ್ಷಣದ ಬಗ್ಗೆ ಸಿನಿಮಾ ಮಾಡಲು ಮುಂದಾದ ನಟ ಅಕ್ಷಯ್​ ಕುಮಾರ್​

ಅಕ್ಷಯ್​ ಕುಮಾರ್​ ಅವರಿಗೆ ತೀವ್ರವಾಗಿ ಗಾಯವಾಗಿಲ್ಲ. ಸಣ್ಣದಾಗಿ ಪೆಟ್ಟಾದ್ದರಿಂದ ಮೊಣಗಾಲಿಕೆ ಪಟ್ಟಿ ಹಾಕಲಾಗಿದೆ. ಅದರ ನಡುವೆಯೂ ಅವರು ಚಿತ್ರೀಕರಣ ಮುಂದುವರಿಸಿದ್ದಾರೆ ಎಂದು ವರದಿ ಆಗಿದೆ. ವಿದೇಶದಲ್ಲಿ ಶೂಟಿಂಗ್​ ಆಗುತ್ತಿರುವುದರಿಂದ ಖರ್ಚು-ವೆಚ್ಚ ಜಾಸ್ತಿ ಆಗುತ್ತದೆ. ಹಾಗಾಗಿ ಚಿತ್ರೀಕರಣ ನಿಲ್ಲಬಾರದು ಎಂದು ಅಕ್ಷಯ್​ ಕುಮಾರ್​ ಕಾಳಜಿ ವಹಿಸಿದ್ದಾರೆ.

ಇದನ್ನೂ ಓದಿ: Akshay Kumar: ‘ಸೆಲ್ಫೀ’ ಹೀನಾಯ ಸೋಲು; ‘ಎಲ್ಲ ತಪ್ಪು ನನ್ನದೇ’ ಎಂದು ಹೊಣೆ ಹೊತ್ತುಕೊಂಡ ಅಕ್ಷಯ್​ ಕುಮಾರ್​

ಪೂಜಾ ಎಂಟರ್​ಟೇನ್ಮೆಂಟ್​ ಬ್ಯಾನರ್ ಮೂಲಕ ಜಾಕಿ ಬಗ್ನಾನಿ ಅವರು ‘ಬಡೆ ಮಿಯಾ ಚೋಟೆ ಮಿಯಾ’ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಇದು ‘ಫಾಸ್ಟ್​ ಆ್ಯಂಡ್​ ಫ್ಯೂರಿಯಸ್​’ ರೀತಿ ಮೂಡಿಬರಲಿದೆ ಎಂದು ಅವರು ಈ ಹಿಂದೆ ಹೇಳಿಕೆ ನೀಡಿದ್ದರು. ಅಂದರೆ ಇದರಲ್ಲಿ ಚೇಸಿಂಗ್​ ಮತ್ತು ಆ್ಯಕ್ಷನ್​ ದೃಶ್ಯಗಳು ಭರ್ಜರಿಯಾಗಿ ಇರಲಿವೆ ಎಂದರ್ಥ. ಆ ಕಾರಣದಿಂದ ಅಭಿಮಾನಿಗಳು ಈ ಸಿನಿಮಾ ಮೇಲೆ ಸಖತ್​ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಇದನ್ನೂ ಓದಿ: Selfiee Total Collection: ‘ಸೆಲ್ಫೀ’ ಚಿತ್ರ ಫ್ಲಾಪ್​: 8 ದಿನ ಪ್ರದರ್ಶನ ಕಂಡ ಅಕ್ಷಯ್​ ಕುಮಾರ್​ ಸಿನಿಮಾ ಗಳಿಸಿದ್ದೆಷ್ಟು?

ಅಕ್ಷಯ್​ ಕುಮಾರ್​ ಮತ್ತು ಟೈಗರ್​ ಶ್ರಾಫ್​ ಅವರು ಸಾಹಸಪ್ರಧಾನ ಸಿನಿಮಾಗಳಿಂದಲೇ ಫೇಮಸ್​ ಆದವರು. ಇವರಿಬ್ಬರನ್ನು ಒಂದೇ ಚಿತ್ರದಲ್ಲಿ ನೋಡುವುದು ಎಂದರೆ ಫ್ಯಾನ್ಸ್​ ಪಾಲಿಗೆ ಹಬ್ಬವೇ ಸರಿ. ಈ ವರ್ಷ ಡಿಸೆಂಬರ್​ನಲ್ಲಿ ‘ಬಡೆ ಮಿಯಾ ಚೋಟೆ ಮಿಯಾ’ ಚಿತ್ರ ಬಿಡುಗಡೆ ಆಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 10:50 am, Fri, 24 March 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ