Akshay Kumar: ‘ಸೆಲ್ಫೀ’ ಹೀನಾಯ ಸೋಲು; ‘ಎಲ್ಲ ತಪ್ಪು ನನ್ನದೇ’ ಎಂದು ಹೊಣೆ ಹೊತ್ತುಕೊಂಡ ಅಕ್ಷಯ್​ ಕುಮಾರ್​

Selfiee Movie Flop: ‘ಸೆಲ್ಫೀ’ ಸಿನಿಮಾ ಎರಡು ದಿನಕ್ಕೆ ಗಳಿಸಿದ್ದು ಕೇವಲ 6.35 ಕೋಟಿ ರೂಪಾಯಿ. ಅಕ್ಷಯ್​ ಕುಮಾರ್​ ಅವರಂತಹ ಸ್ಟಾರ್ ನಟನ ಚಿತ್ರ ಇಷ್ಟು ಕಡಿಮೆ ಕಲೆಕ್ಷನ್ ಮಾಡಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.

Akshay Kumar: ‘ಸೆಲ್ಫೀ’ ಹೀನಾಯ ಸೋಲು; ‘ಎಲ್ಲ ತಪ್ಪು ನನ್ನದೇ’ ಎಂದು ಹೊಣೆ ಹೊತ್ತುಕೊಂಡ ಅಕ್ಷಯ್​ ಕುಮಾರ್​
ಅಕ್ಷಯ್ ಕುಮಾರ್
Follow us
ಮದನ್​ ಕುಮಾರ್​
|

Updated on: Feb 26, 2023 | 3:10 PM

ನಟ ಅಕ್ಷಯ್​ ಕುಮಾರ್​ (Akshay Kumar) ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಹಾಗಿದ್ದರೂ ಕೂಡ ಅವರ ಸಿನಿಮಾಗಳು ಸೋಲುತ್ತಿವೆ. ಅಲ್ಲೊಂದು ಇಲ್ಲೊಂದು ಚಿತ್ರಗಳು ಸೋಲುವುದು ಸಹಜ. ಆದರೆ ಇತ್ತೀಚಿನ ವರ್ಷಗಳಲ್ಲಿ ಅಕ್ಷಯ್​ ಕುಮಾರ್​ ನಟಿಸಿದ ಎಲ್ಲ ಚಿತ್ರಗಳೂ (Akshay Kumar Movies) ನಿರೀಕ್ಷಿತ ಮಟ್ಟದ ಕಲೆಕ್ಷನ್​ ಮಾಡಲು ವಿಫಲವಾಗುತ್ತಿವೆ. ಫೆಬ್ರವರಿ 24ರಂದು ಬಿಡುಗಡೆಯಾದ ‘ಸೆಲ್ಫೀ’ ಸಿನಿಮಾ (Selfiee Movie) ಕೂಡ ಬಾಕ್ಸ್​ ಆಫೀಸ್​ನಲ್ಲಿ ಮಕಾಡೆ ಮಲಗಿದೆ. ಇದರಿಂದ ಅಕ್ಷಯ್​ ಕುಮಾರ್​ ಅವರ ಮಾರ್ಕೆಟ್​ ಕುಸಿಯುವ ಅಪಾಯ ಎದುರಾಗಿದೆ. ಸಿನಿಮಾಗಳು ಸೋತಾಗ ಇತರರ ಮೇಲೆ ಗೂಬೆ ಕೂರಿಸುವವರೇ ಹೆಚ್ಚು. ಆದರೆ ಅಕ್ಷಯ್​ ಕುಮಾರ್​ ಹಾಗೆ ಮಾಡಿಲ್ಲ. ಸಿನಿಮಾದ ಸೋಲಿಗೆ ತಾವೇ ಮುಖ್ಯ ಕಾರಣ ಎಂದು ಅವರು ಒಪ್ಪಿಕೊಂಡಿದ್ದಾರೆ.

‘ಸೆಲ್ಫೀ’ ಸಿನಿಮಾದಲ್ಲಿ ಅಕ್ಷಯ್​ ಕುಮಾರ್​ ಜೊತೆ ಇಮ್ರಾನ್​ ಹಷ್ಮಿ ನಟಿಸಿದ್ದಾರೆ. ಈ ಚಿತ್ರಕ್ಕೆ ರಾಜ್​ ಮೆಹ್ತಾ ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಸೋಲಿನ ಹೊಣೆಯನ್ನು ಯಾರಿಗೂ ನೀಡದೇ ಎಲ್ಲವನ್ನೂ ತಮ್ಮ ಮೇಲೆ ಹಾಕಿಕೊಂಡಿದ್ದಾರೆ ಅಕ್ಷಯ್​ ಕುಮಾರ್​. ‘ಆಜ್​ ತಕ್​’ಗೆ ನೀಡಿದ ಸಂದರ್ಶನದಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ. ಅವರ ಹೇಳಿಕೆಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಇದನ್ನೂ ಓದಿ
Image
Salman Khan: ಶ್ರೀಮಂತರ ಮದುವೆಯಲ್ಲಿ ಡ್ಯಾನ್ಸ್​ ಮಾಡಿದ ಅಕ್ಷಯ್​, ಸಲ್ಲು: ಇದಕ್ಕಾಗಿ ಪಡೆದ ಹಣ ಎಷ್ಟು?
Image
Lionel Messi Biopic: ‘ಲಿಯೋನೆಲ್‌ ಮೆಸ್ಸಿ ಬಯೋಪಿಕ್​ನಲ್ಲಿ ಅಕ್ಷಯ್​ ಕುಮಾರ್​ ನಟಿಸಬೇಕು’; ಮೀಮ್ಸ್​ ವೈರಲ್​
Image
Akshay Kumar: ಛತ್ರಪತಿ ಶಿವಾಜಿ ಪಾತ್ರ ಮಾಡಲು ಹೋಗಿ ಟ್ರೋಲ್​ ಆದ ಅಕ್ಷಯ್​ ಕುಮಾರ್​; ಇಲ್ಲಿದೆ ಕಾರಣ
Image
Akshay Kumar: ಸತತ ಸೋಲಿನ ಬಳಿಕ ಲೈಂಗಿಕ ಶಿಕ್ಷಣದ ಬಗ್ಗೆ ಸಿನಿಮಾ ಮಾಡಲು ಮುಂದಾದ ನಟ ಅಕ್ಷಯ್​ ಕುಮಾರ್​

ಇದನ್ನೂ ಓದಿ: ಶ್ರೀಮಂತರ ಮದುವೆಯಲ್ಲಿ ಡ್ಯಾನ್ಸ್​ ಮಾಡಿದ ಅಕ್ಷಯ್​, ಸಲ್ಲು: ಇದಕ್ಕಾಗಿ ಪಡೆದ ಹಣ ಎಷ್ಟು?

‘ನನ್ನ ಸಿನಿಮಾಗಳು ಸತತ ಸೋಲುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ನನ್ನ 16 ಚಿತ್ರಗಳು ಸತತವಾಗಿ ಸೋತಿದ್ದವು. ಅಷ್ಟೇ ಅಲ್ಲ, ಒಂದು ಕಾಲದಲ್ಲಿ ನನ್ನ 8 ಸಿನಿಮಾಗಳು ಒಳ್ಳೆಯ ಕಲೆಕ್ಷನ್​ ಮಾಡಲು ವಿಫಲವಾಗಿದ್ದವು. ನನ್ನದೇ ತಪ್ಪಿನಿಂದ ಇದೆಲ್ಲ ಆಗಿದೆ. ಪ್ರೇಕ್ಷಕರು ಬದಲಾಗಿದ್ದಾರೆ. ಅವರು ಬೇರೆ ಏನನ್ನೋ ಬಯಸುತ್ತಿದ್ದಾರೆ. ಅದಕ್ಕೆ ತಕ್ಕಂತೆ ನಾವು ಬದಲಾಗಬೇಕು’ ಎಂದು ಅಕ್ಷಯ್​ ಕುಮಾರ್​ ಹೇಳಿದ್ದಾರೆ.

ಇದನ್ನೂ ಓದಿ: Akshay Kumar: ಸತತ ಸೋಲಿನ ಬಳಿಕ ಲೈಂಗಿಕ ಶಿಕ್ಷಣದ ಬಗ್ಗೆ ಸಿನಿಮಾ ಮಾಡಲು ಮುಂದಾದ ನಟ ಅಕ್ಷಯ್​ ಕುಮಾರ್​

‘ಇದೊಂದು ದೊಡ್ಡ ಎಚ್ಚರಿಕೆ ಗಂಟೆ. ಬದಲಾಗಲು ನಾನು ಪ್ರಯತ್ನ ಮಾಡುತ್ತಿದ್ದೇನೆ. ಅಷ್ಟನ್ನು ಮಾತ್ರ ನಾನು ಮಾಡಲು ಸಾಧ್ಯ. ಸಿನಿಮಾ ಸೋತಾಗ ಪ್ರೇಕ್ಷಕರನ್ನಾಗಲಿ ಅಥವಾ ಇನ್ಯಾರನ್ನೂ ದೂಷಿಸಬೇಡಿ. ಇದು ಸಂಪೂರ್ಣ ನನ್ನದೇ ತಪ್ಪು. ನನ್ನ ಆಯ್ಕೆ ತಪ್ಪಾಗಿರಬಹುದು’ ಎಂದು ಅಕ್ಷಯ್​ ಕುಮಾರ್​ ಹೇಳಿದ್ದಾರೆ.

‘ಸೆಲ್ಫೀ’ ಸಿನಿಮಾ ಮೊದಲ ದಿನ (ಫೆ.24) ಗಳಿಸಿದ್ದು ಕೇವಲ 2.55 ಕೋಟಿ ರೂಪಾಯಿ. ಎರಡನೇ ದಿನವಾದ ಶನಿವಾರ ಆಗಿದ್ದು 3.80 ಕೋಟಿ ರೂಪಾಯಿ ಕಲೆಕ್ಷನ್​. ಎರಡೂ ದಿನ ಗಳಿಕೆ ಸೇರಿಸಿದರೆ ಆಗುವುದು ಬರೀ 6.35 ಕೋಟಿ ರೂಪಾಯಿ. ಭಾನುವಾರವೂ ನಿರೀಕ್ಷಿತ ಮಟ್ಟದ ಏರಿಕೆ ಕಾಣುತ್ತಿಲ್ಲ. ಇದರಿಂದಾಗಿ ನಿರ್ಮಾಪಕರಿಗೆ ಸಖತ್​ ನಷ್ಟ ಆಗಿದೆ. ಅಕ್ಷಯ್​ ಕುಮಾರ್​ ಅವರಂತಹ ಸ್ಟಾರ್ ನಟನ ಚಿತ್ರ ಇಷ್ಟು ಕಡಿಮೆ ಕಲೆಕ್ಷನ್ ಮಾಡಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ