- Kannada News Photo gallery Kiara Advani lands in Hyderabad to attend the shooting of Ram Charan 15th movie RC15
Kiara Advani: ರಾಮ್ ಚರಣ್ ಜತೆಗಿನ ಸಿನಿಮಾ ಶೂಟಿಂಗ್ ಸಲುವಾಗಿ ಹೈದರಾಬಾದ್ಗೆ ಬಂದ ಕಿಯಾರಾ ಅಡ್ವಾಣಿ
RC 15 | Kiara Advani Photos: ‘ಆರ್ಸಿ 15’ ಸಿನಿಮಾದ ಚಿತ್ರೀಕರಣ ಹೈದರಾಬಾದ್ನಲ್ಲಿ ನಡೆಯುತ್ತಿದೆ. ಈ ಸಿನಿಮಾದಲ್ಲಿ ರಾಮ್ ಚರಣ್ಗೆ ಜೋಡಿಯಾಗಿ ಕಿಯಾರಾ ಅಡ್ವಾಣಿ ನಟಿಸುತ್ತಿದಾರೆ.
Updated on:Mar 19, 2023 | 5:33 PM

ಹಿಂದಿ ಚಿತ್ರರಂಗದ ಖ್ಯಾತ ನಟಿ ಕಿಯಾರಾ ಅಡ್ವಾಣಿ ಅವರು ಅನೇಕ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಬಾಲಿವುಡ್ ಮಾತ್ರವಲ್ಲದೇ ಅವರಿಗೆ ದಕ್ಷಿಣ ಭಾರತದಲ್ಲೂ ಸಖತ್ ಬೇಡಿಕೆ ಇದೆ.

ರಾಮ್ ಚರಣ್ ನಟನೆಯ 15ನೇ ಸಿನಿಮಾಗೆ ಕಿಯಾರಾ ಅಡ್ವಾಣಿ ನಾಯಕಿ ಆಗಿದ್ದಾರೆ. ಈ ಸಿನಿಮಾದ ಶೂಟಿಂಗ್ ಸಲುವಾಗಿ ಅವರು ಮುಂಬೈನಿಂದ ಹೈದರಾಬಾದ್ಗೆ ಬಂದಿದ್ದಾರೆ. ತಾತ್ಕಾಲಿಕವಾಗಿ ಈ ಚಿತ್ರವನ್ನು ‘ಆರ್ಸಿ 15’ ಎಂದು ಕರೆಯಲಾಗುತ್ತಿದೆ.

ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಕಿಯಾರಾ ಅಡ್ವಾಣಿ ಅವರ ಫೋಟೋಗಳನ್ನು ಪಾಪರಾಜಿಗಳು ಕ್ಲಿಕ್ಕಿಸಿದ್ದಾರೆ. ಈ ವೇಳೆ ಅವರು ಖುಷಿ ಖುಷಿಯಾಗಿ ಎಲ್ಲರ ಕಡೆ ನೋಡಿ ನಗು ಬೀರಿದ್ದಾರೆ.

ಈ ವರ್ಷ ಫೆಬ್ರವರಿ 7ರಂದು ಬಾಲಿವುಡ್ ನಟ ಸಿದ್ದಾರ್ಥ್ ಮಲ್ಹೋತ್ರ ಜೊತೆ ಕಿಯಾರಾ ಅಡ್ವಾಣಿ ಮದುವೆ ನೆರವೇರಿತು. ಆ ಬಳಿಕ ಅವರು ಹೆಚ್ಚು ಬಿಡುವು ತೆಗೆದುಕೊಳ್ಳದೇ ಸಿನಿಮಾ ಕೆಲಸಗಳಿಗೆ ಮರಳಿದ್ದಾರೆ.

ಕಿಯಾರಾ ಅಡ್ವಾಣಿ ಕೈಯಲ್ಲಿ ಹಲವು ಸಿನಿಮಾಗಳಿವೆ. ದಿನದಿನಕ್ಕೂ ಅವರ ಖ್ಯಾತಿ ಹೆಚ್ಚುತ್ತಿದೆ. ‘ಶೇರ್ಷಾ’, ‘ಕಬೀರ್ ಸಿಂಗ್’ ಮುಂತಾದ ಸಿನಿಮಾಗಳ ಮೂಲಕ ಅವರು ಭರ್ಜರಿ ಗೆಲುವು ಕಂಡಿದ್ದಾರೆ.
Published On - 5:33 pm, Sun, 19 March 23




