Rani Mukerji: ಒಟಿಟಿಗೆ ಬಂತು ರಾಣಿ ಮುಖರ್ಜಿ ನಟನೆಯ ಹೊಸ ಚಿತ್ರ; ಈ ಸಿನಿಮಾದಲ್ಲಿದೆ ವಿಶೇಷ ಕಹಾನಿ
Mrs Chatterjee Vs Norway: ಕಥೆ ಮತ್ತು ಪಾತ್ರದ ಆಯ್ಕೆಯಲ್ಲಿ ರಾಣಿ ಮುಖರ್ಜಿ ಅವರು ಸಾಕಷ್ಟು ಕಾಳಜಿ ವಹಿಸುತ್ತಾರೆ. ‘ಮಿಸಸ್ ಚಟರ್ಜಿ ವರ್ಸಸ್ ನಾರ್ವೇ’ ಸಿನಿಮಾದಲ್ಲಿ ಅವರ ಪಾತ್ರ ಇಂಟರೆಸ್ಟಿಂಗ್ ಆಗಿದೆ.
ನಟಿ ರಾಣಿ ಮುಖರ್ಜಿ (Rani Mukerji) ಅವರು ಈಗಲೂ ಡಿಮ್ಯಾಂಡ್ ಉಳಿಸಿಕೊಂಡಿದ್ದಾರೆ. ತಮ್ಮ ವಯಸ್ಸಿಗೆ ಒಪ್ಪುವಂತಹ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತ ಅವರು ಮುನ್ನುಗ್ಗುತ್ತಿದ್ದಾರೆ. ಈ ವರ್ಷ ಅವರು ನಟಿಸಿದ ‘ಮಿಸಸ್ ಚಟರ್ಜಿ ವರ್ಸಸ್ ನಾರ್ವೇ’ (Mrs Chatterjee Vs Norway) ಸಿನಿಮಾ ಬಿಡುಗಡೆಯಾಗಿ ಗಮನ ಸೆಳೆದಿತ್ತು. ಈಗ ಈ ಚಿತ್ರ ಒಟಿಟಿ ಅಂಗಳಕ್ಕೆ ಕಾಲಿಟ್ಟಿದೆ. ಮೊದಲ ಲಾಕ್ಡೌನ್ ಬಳಿಕ ಒಟಿಟಿ ಬಳಕೆ ಹೆಚ್ಚಾಯಿತು. ಹಾಗಾಗಿ ವೀಕ್ಷಕರಿಗೆ ಹೊಸ ಸಿನಿಮಾಗಳನ್ನು ತಲುಪಿಸುವಲ್ಲಿ ಎಲ್ಲ ಒಟಿಟಿ ಸಂಸ್ಥೆಗಳ ನಡುವೆ ಸಖತ್ ಪೈಪೋಟಿ ಇದೆ. ರಾಣಿ ಮುಖರ್ಜಿ ಅಭಿನಯದ ‘ಮಿಸಸ್ ಚಟರ್ಜಿ ವರ್ಸಸ್ ನಾರ್ವೇ’ ಸಿನಿಮಾದ ಒಟಿಟಿ ಪ್ರಸಾರ ಹಕ್ಕುಗಳನ್ನು ನೆಟ್ಫ್ಲಿಕ್ಸ್ (Netflix) ಖರೀದಿಸಿದೆ. ನಾರ್ವೇ ದೇಶದ ವ್ಯವಸ್ಥೆ ವಿರುದ್ಧ ಹೋರಾಡಿದ ಓರ್ವ ಭಾರತೀಯ ಮಹಿಳೆಯ ಕಥೆ ಈ ಸಿನಿಮಾದಲ್ಲಿದೆ ಎಂಬುದು ವಿಶೇಷ. ಆ ಕಾರಣಕ್ಕಾಗಿ ಪ್ರೇಕ್ಷಕರು ಒಟಿಟಿಯಲ್ಲಿ ಈ ಚಿತ್ರದ ಬಗ್ಗೆ ಆಸಕ್ತಿ ತೋರಿಸುತ್ತಿದ್ದಾರೆ.
‘ಮಿಸಸ್ ಚಟರ್ಜಿ ವರ್ಸಸ್ ನಾರ್ವೇ’ ಸಿನಿಮಾ ನಾರ್ವೇಯ ಚಿತ್ರಮಂದಿಗಳಲ್ಲಿ ತೆರೆಕಂಡು ಸೂಪರ್ ಹಿಟ್ ಆಯಿತು. ನಾರ್ವೇಯಲ್ಲಿ ಬಿಡುಗಡೆಯಾದ ಹಿಂದಿ ಸಿನಿಮಾಗಳ ಪೈಕಿ ವೀಕೆಂಡ್ನಲ್ಲಿ ಅತಿ ಕಲೆಕ್ಷನ್ ಮಾಡಿದ ಖ್ಯಾತಿ ಈ ಸಿನಿಮಾಗೆ ಸಲ್ಲುತ್ತದೆ. ಈ ಕುರಿತು ಚಿತ್ರತಂಡದವರು ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದ್ದರು. ರಾಣಿ ಮುಖರ್ಜಿ ಜೊತೆ ಅನಿರ್ಬನ್ ಭಟ್ಟಾಚಾರ್ಯ, ಜಿಮ್ ಸರ್ಬ್ ಮುಂತಾದವರು ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ಆಶಿಮಾ ಚಿಬ್ಬರ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ.
ಇದನ್ನೂ ಓದಿ: ವೇದಿಕೆ ಮೇಲೆ ರಾಣಿ ಮುಖರ್ಜಿಗೆ ಟೊಮ್ಯಾಟೋ ರೇಟ್ ಕೇಳಿದ ಮಹಿಳೆಯರು; ಉತ್ತರ ಹೇಳಲು ತಡವರಿಸಿದ ನಟಿ
ಕಥೆ ಮತ್ತು ಪಾತ್ರದ ಆಯ್ಕೆಯಲ್ಲಿ ರಾಣಿ ಮುಖರ್ಜಿ ಅವರು ಸಾಕಷ್ಟು ಕಾಳಜಿ ವಹಿಸುತ್ತಾರೆ. ‘ಮಿಸಸ್ ಚಟರ್ಜಿ ವರ್ಸಸ್ ನಾರ್ವೇ’ ಸಿನಿಮಾದಲ್ಲಿ ಅವರು ಎರಡು ಮಕ್ಕಳ ತಾಯಿಯಾಗಿ ನಟಿಸಿದ್ದಾರೆ. ನಾರ್ವೇಯಲ್ಲಿ ಮಕ್ಕಳನ್ನು ಕಳೆದುಕೊಂಡು ಕಷ್ಟಪಡುವ ಭಾರತೀಯ ಮಹಿಳೆಯಾಗಿ ಅವರು ಕಾಣಿಸಿಕೊಂಡಿದ್ದಾರೆ. ನೈಜ ಘಟನೆಗಳನ್ನು ಆಧರಿಸಿ ‘ಮಿಸಸ್ ಚಟರ್ಜಿ ವರ್ಸಸ್ ನಾರ್ವೇ’ ಸಿನಿಮಾ ತಯಾರಾಗಿದೆ. ಇದು ನಾರ್ವೇ ಸರ್ಕಾರ ಮತ್ತು ಅಲ್ಲಿನ ಪ್ರಜೆಗಳಿಗೂ ಸಂಬಂಧಿಸಿದ ಕಥೆ ಆದ್ದರಿಂದ ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ನೋಡಿದರು.
View this post on Instagram
ನಾರ್ವೇ ಬಾಕ್ಸ್ ಆಫೀಸ್ನಲ್ಲಿ ‘ಪಠಾಣ್’ ಚಿತ್ರಕ್ಕಿಂತಲೂ ಹೆಚ್ಚಿನ ಗಳಿಕೆಯನ್ನು ‘ಮಿಸಸ್ ಚಟರ್ಜಿ ವರ್ಸಸ್ ನಾರ್ವೇ’ ಸಿನಿಮಾ ಮಾಡಿತ್ತು ಎಂಬುದು ವಿಶೇಷ. ನಾರ್ವೆಯ ಚಿತ್ರಮಂದಿರಗಳಲ್ಲಿ ಮೊದಲ 3 ದಿನ ಉತ್ತಮ ಪ್ರದರ್ಶನ ಕಂಡ ಈ ಸಿನಿಮಾ ಅಂದಾಜು 58 ಲಕ್ಷ ರೂಪಾಯಿ ಗಳಿಸಿತ್ತು. ಈ ಹಿಂದೆ ಅಲ್ಲಿ ಪ್ರದರ್ಶನ ಕಂಡಿದ್ದ ‘ಪಠಾಣ್’, ‘ರಯೀಸ್’, ‘ಸುಲ್ತಾನ್’ ಸಿನಿಮಾಗಳನ್ನೂ ಮೀರಿಸಿ ‘ಮಿಸಸ್ ಚಟರ್ಜಿ ವರ್ಸಸ್ ನಾರ್ವೇ’ ಕಲೆಕ್ಷನ್ ಮಾಡಿದ್ದು ವಿಶೇಷ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.