AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೇದಿಕೆ ಮೇಲೆ ರಾಣಿ ಮುಖರ್ಜಿಗೆ ಟೊಮ್ಯಾಟೋ ರೇಟ್​ ಕೇಳಿದ ಮಹಿಳೆಯರು; ಉತ್ತರ ಹೇಳಲು ತಡವರಿಸಿದ ನಟಿ

ಟೊಮ್ಯಾಟೋ ದರ ಹೆಚ್ಚಾಗಿದೆ. ಕೆಲ ಕಡೆಗಳಲ್ಲಿ ಪ್ರತಿ ಕೆಜಿಗೆ 100 ರೂಪಾಯಿವರೆಗೂ ಮಾರಾಟ ಮಾಡಲಾಗುತ್ತಿದೆ. ಇದರಿಂದ ಸಾಮಾನ್ಯರು ಟೊಮ್ಯಾಟೋ ಖರಿದಿಸೋದು ಕಷ್ಟವಾಗಿದೆ.

ವೇದಿಕೆ ಮೇಲೆ ರಾಣಿ ಮುಖರ್ಜಿಗೆ ಟೊಮ್ಯಾಟೋ ರೇಟ್​ ಕೇಳಿದ ಮಹಿಳೆಯರು; ಉತ್ತರ ಹೇಳಲು ತಡವರಿಸಿದ ನಟಿ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Nov 13, 2021 | 8:05 PM

ಸ್ಟಾರ್​ ನಟ-ನಟಿಯರು ಐಷಾರಾಮಿ ಜೀವನ ನಡೆಸುತ್ತಿರುತ್ತಾರೆ. ಮನೆಯ ಕೆಲಸ ನೋಡಿಕೊಳ್ಳೋಕೆ ಸಾಕಷ್ಟು ಸಿಬ್ಬಂದಿ ಇರುತ್ತಾರೆ. ಇವರು ಹೇಳಿದ ಅಡುಗೆ ಸಿದ್ಧವಾಗುತ್ತದೆ. ತರಕಾರಿ, ದಿನಸಿ, ಹಣ್ಣುಗಳನ್ನು ಕೆಲಸದವರೇ ತರುತ್ತಾರೆ. ಈ ಕಾರಣಕ್ಕೆ ಅದರ ಬೆಲೆಯ ಬಗ್ಗೆ ಅವರಿಗೆ ಕಿಂಚಿತ್ತೂ ಮಾಹಿತಿ ಇರುವುದಿಲ್ಲ. ಈ ವಿಚಾರ ಮತ್ತೊಮ್ಮೆ ಸಾಬೀತಾಗಿದೆ. ನಟಿ ರಾಣಿ ಮುಖರ್ಜಿ ಬಳಿ ಟೊಮ್ಯಾಟೋ ರೇಟ್​ ಕೇಳಲಾಗಿದೆ. ಇದಕ್ಕೆ ಅವರು ಸರಿಯಾದ ಉತ್ತರ ನೀಡಿದರಾ? ಇಲ್ಲ, ಈ ಪ್ರಶ್ನೆಗೆ ಉತ್ತರಿಸೋಕೆ ಅವರು ತಡವರಿಸಿದರು. ಈ ವಿಡಿಯೋ ಈಗ ವೈರಲ್​ ಆಗಿದೆ.

ಟೊಮ್ಯಾಟೋ ದರ ಹೆಚ್ಚಾಗಿದೆ. ಕೆಲ ಕಡೆಗಳಲ್ಲಿ ಪ್ರತಿ ಕೆಜಿಗೆ 100 ರೂಪಾಯಿವರೆಗೂ ಮಾರಾಟ ಮಾಡಲಾಗುತ್ತಿದೆ. ಇದರಿಂದ ಸಾಮಾನ್ಯರು ಟೊಮ್ಯಾಟೋ ಖರೀದಿಸೋದು ಕಷ್ಟವಾಗಿದೆ. ಜನ ಸಾಮಾನ್ಯರ ಜೇಬಿಗೆ ಈ ತರಕಾರಿ ಭಾರವಾಗಿದೆ. ಹೀಗಾಗಿ, ಎಲ್ಲೆಲ್ಲೂ ಇದರದ್ದೇ ಚರ್ಚೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಟೊಮ್ಯಾಟೋ ಬೆಲೆಯನ್ನು ರಾಣಿ ಮುಖರ್ಜಿಗೆ ಕೇಳಲಾಗಿದೆ. ಅವರ ಉತ್ತರ ಹೇಗಿತ್ತು ಎಂಬುದನ್ನು ನೀವೇ ನೋಡಿ.

‘ಬಂಟಿ ಆರ್​ ಬಬ್ಲಿ 2’ ಸಿನಿಮಾ ತೆರೆಗೆ ಬರೋಕೆ ರೆಡಿ ಆಗಿದೆ. ಈ ಸಿನಿಮಾದ ಪ್ರಮೋಷನ್​ಗಾಗಿ ಸೈಫ್​ ಅಲಿ ಖಾನ್​, ಸಿದ್ದಾಂತ್​ ಚತುರ್ವೇದಿ, ರಾಣಿ ಮುಖರ್ಜಿ ‘ದಿ ಕಪಿಲ್​ ಶರ್ಮಾ ಶೋ’ಗೆ ಬಂದಿದ್ದರು. ಈ ಶೋನ ಪ್ರಮೋಷನ್​ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ‘ಈ ಸೆಟ್​ನಲ್ಲಿ ಸಾಕಷ್ಟು ಮಹಿಳೆಯರಿದ್ದಾರೆ. ಅವರೆಲ್ಲರೂ ನಿಮ್ಮ ಬಳಿ ಪ್ರಶ್ನೆ ಕೇಳಬೇಕು ಎಂದುಕೊಂಡಿದ್ದಾರೆ. ಟೊಮ್ಯಾಟೋ ಬೆಲೆ ಎಷ್ಟಿದೆ ಎಂಬುದು ನಿಮಗೆ ಮಾಹಿತಿ ಇದೆಯೇ’ ಎಂದು ಮಹಿಳೆಯರ ಪರವಾಗಿ ಪ್ರಶ್ನೆ ಕೇಳಿದ್ದಾರೆ ಕಪಿಲ್​ ಶರ್ಮಾ. ಇದಕ್ಕೆ ರಾಣಿ ಮುಖರ್ಜಿ ಇಲ್ಲ ಎನ್ನುವ ಉತ್ತರ ನೀಡಿದರು. ಇದಕ್ಕೆ ನಗುತ್ತಲೇ ಉತ್ತರ ನೀಡಿದ ಕಪಿಲ್​ ಶರ್ಮಾ, ‘ಇವರು ಇಷ್ಟು ದೊಡ್ಡ ಹೀರೋಯಿನ್​. ಟೊಮ್ಯಾಟೋಗೆ ಏಕೆ ಪ್ರಾಮುಖ್ಯತೆ ನೀಡುತ್ತಾರೆ’ ಎಂದರು.

‘ಬಂಟಿ ಔರ್​ ಬಬ್ಲಿ 2’ ಸಿನಿಮಾವನ್ನು ವರುಣ್​ ಶರ್ಮಾ ನಿರ್ದೇಶನ ಮಾಡಿದ್ದಾರೆ. ಸೈಫ್​ ಅಲಿ ಖಾನ್​, ರಾಣಿ ಮುಖರ್ಜಿ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ನವೆಂಬರ್​ 19ರಂದು ಸಿನಿಮಾ ತೆರೆಗೆ ಬರುತ್ತಿದೆ.

ಇದನ್ನೂ ಓದಿ: ಕಪಿಲ್​ ಶರ್ಮಾ ಶೋಗೆ ನವಜೋತ್​ ಸಿಂಗ್​ ಸಿಧು ಮರಳಿದರೆ ನಾನು ಇರಲ್ಲ ಎಂದ ಅರ್ಚನಾ ಸಿಂಗ್​

ಬೆಂಗಳೂರು ರಣಭೀಕರ ಮಳೆಗೆ ಮುಳುಗಿದ `ಬೆಳ್ಳುಳ್ಳಿ ಕಬಾಬ್’ ಹೋಟೆಲ್
ಬೆಂಗಳೂರು ರಣಭೀಕರ ಮಳೆಗೆ ಮುಳುಗಿದ `ಬೆಳ್ಳುಳ್ಳಿ ಕಬಾಬ್’ ಹೋಟೆಲ್
ಪಿಎಸ್​​ಐ ನಾಗರಾಜ್​​ ಪತ್ನಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​
ಪಿಎಸ್​​ಐ ನಾಗರಾಜ್​​ ಪತ್ನಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​
ಅಧಿಕಾರ ಮತ್ತು ಬದುಕು ಎರಡೂ ಶಾಶ್ವತವಲ್ಲ: ತನ್ವೀರ್ ಸೇಟ್, ಕಾಂಗ್ರೆಸ್ ಶಾಸಕ
ಅಧಿಕಾರ ಮತ್ತು ಬದುಕು ಎರಡೂ ಶಾಶ್ವತವಲ್ಲ: ತನ್ವೀರ್ ಸೇಟ್, ಕಾಂಗ್ರೆಸ್ ಶಾಸಕ
ಹಾಡಿನ ಮೂಲಕ ಚಿತ್ರರಂಗದ ಕರಾಳ ಮುಖ ಪರಿಚಯಿಸಿದ ದುನಿಯಾ ವಿಜಯ್
ಹಾಡಿನ ಮೂಲಕ ಚಿತ್ರರಂಗದ ಕರಾಳ ಮುಖ ಪರಿಚಯಿಸಿದ ದುನಿಯಾ ವಿಜಯ್
ಪತ್ನಿಯಿಂದ ಪತಿಗೆ ಟಾರ್ಚರ್ ಪ್ರಕರಣಗಳು ಇತ್ತೀಚಿಗೆ ಜಾಸ್ತಿಯಾಗುತ್ತಿವೆ
ಪತ್ನಿಯಿಂದ ಪತಿಗೆ ಟಾರ್ಚರ್ ಪ್ರಕರಣಗಳು ಇತ್ತೀಚಿಗೆ ಜಾಸ್ತಿಯಾಗುತ್ತಿವೆ
ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಭಾಗವಹಿಸಲು ಎಲ್ಲ ದೇಶಗಳಿಗೂ ಮೋದಿ ಆಹ್ವಾನ
ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಭಾಗವಹಿಸಲು ಎಲ್ಲ ದೇಶಗಳಿಗೂ ಮೋದಿ ಆಹ್ವಾನ
ಲೂಟ್ ಕೆ ಲಾವ್ ಬಾಟ್ ಕೆ ಖಾವ್ ಸರ್ಕಾರದ ದ್ಯೇಯವಾಗಿದೆ: ಪ್ರಲ್ಹಾದ್ ಜೋಶಿ
ಲೂಟ್ ಕೆ ಲಾವ್ ಬಾಟ್ ಕೆ ಖಾವ್ ಸರ್ಕಾರದ ದ್ಯೇಯವಾಗಿದೆ: ಪ್ರಲ್ಹಾದ್ ಜೋಶಿ
ಕಾವೇರಿ ಆರತಿಯಿಂದ ಕೆಆರ್​ಎಸ್ ಜಲಾಶಯಕ್ಕೆ ಅಪಾಯವಿಲ್ಲ: ಗಣಿಗ
ಕಾವೇರಿ ಆರತಿಯಿಂದ ಕೆಆರ್​ಎಸ್ ಜಲಾಶಯಕ್ಕೆ ಅಪಾಯವಿಲ್ಲ: ಗಣಿಗ
ಫೆಬ್ರುವರಿ ಮತ್ತು ಮಾರ್ಚ್ ಗೃಹಲಕ್ಷ್ಮಿ ಹಣ ಬಿಡುಗಡೆ ಆಗಿಲ್ಲ: ಸಚಿವೆ
ಫೆಬ್ರುವರಿ ಮತ್ತು ಮಾರ್ಚ್ ಗೃಹಲಕ್ಷ್ಮಿ ಹಣ ಬಿಡುಗಡೆ ಆಗಿಲ್ಲ: ಸಚಿವೆ
ಸಮಾವೇಶದಲ್ಲಿ ಸರ್ಕಾರದ ಎರಡು ವರ್ಷದ ಸಾಧನೆಗಳ ಪುಸ್ತಕ ಬಿಡುಗಡೆ
ಸಮಾವೇಶದಲ್ಲಿ ಸರ್ಕಾರದ ಎರಡು ವರ್ಷದ ಸಾಧನೆಗಳ ಪುಸ್ತಕ ಬಿಡುಗಡೆ