Salman Khan: ವಿಕ್ಕಿ- ಕತ್ರಿನಾ ಕಲ್ಯಾಣ; ಅತಿಥಿಗಳ ಪಟ್ಟಿಯಲ್ಲಿ ಹೆಸರಿಲ್ಲದಿದ್ದರೂ ಸಲ್ಮಾನ್ ಭಾಗಿಯಾಗಲಿದ್ದಾರಂತೆ!

Vicky Kaushal | Katrina Kaif: ಬಾಲಿವುಡ್​ನ ಪ್ರೇಮ ಪಕ್ಷಿಗಳೆಂದೇ ಹೇಳಲಾಗುವ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ದಾಂಪತ್ಯಕ್ಕೆ ಕಾಲಿಡಲಿದ್ಧಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕತ್ರಿನಾ ಮಾಜಿ ಗೆಳೆಯ ಸಲ್ಮಾನ್ ಖಾನ್ ಮದುವೆಯಲ್ಲಿ ಭಾಗವಹಿಸುತ್ತಾರೆಯೇ ಎಂಬ ಚರ್ಚೆ ಬಾಲಿವುಡ್ ಅಂಗಳದಲ್ಲಿ ಜೋರಾಗಿದೆ.

Salman Khan: ವಿಕ್ಕಿ- ಕತ್ರಿನಾ ಕಲ್ಯಾಣ; ಅತಿಥಿಗಳ ಪಟ್ಟಿಯಲ್ಲಿ ಹೆಸರಿಲ್ಲದಿದ್ದರೂ ಸಲ್ಮಾನ್ ಭಾಗಿಯಾಗಲಿದ್ದಾರಂತೆ!
ವಿಕ್ಕಿ ಕೌಶಲ್, ಕತ್ರಿನಾ ಕೈಫ್, ಸಲ್ಮಾನ್ ಖಾನ್
Follow us
TV9 Web
| Updated By: shivaprasad.hs

Updated on: Nov 14, 2021 | 9:47 AM

ಬಾಲಿವುಡ್​​ನಲ್ಲಿ ಮತ್ತೊಂದು ತಾರಾ ಜೋಡಿ ಹಸೆಮಣೆ ಏರಲು ಸಜ್ಜಾಗುತ್ತಿದೆ, ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ರಾಜಸ್ಥಾನದಲ್ಲಿ ಅದ್ದೂರಿಯಾಗಿ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಜೋರಾಗಿ ಕೇಳಿಬರುತ್ತಿದೆ. ಡಿಸೆಂಬರ್ ಮೊದಲ ಹಾಗೂ ಎರಡನೇ ವಾರದ ಅವಧಿಯಲ್ಲಿ ಮದುವೆ ನಡೆಯಲಿದೆ ಎನ್ನಲಾಗಿದ್ದು, ಇದಕ್ಕಾಗಿ ಸವಾಯಿ ಮಾಧೋಪುರದ ಬರ್ವಾರಾ ಕೋಟೆ ಸಜ್ಜಾಗಿದೆ. ಅಚ್ಚರಿಯ ವಿಷಯವೆಂದರೆ, ವಿಕ್ಕಿ ಹಾಗೂ ಕತ್ರಿನಾ ಕಲ್ಯಾಣ ಕೇವಲ ಆಪ್ತ ವರ್ಗ ಹಾಗೂ ಬಾಲಿವುಡ್ ತಾರೆಯರ ಸಮ್ಮುಖದಲ್ಲಿ ನಡೆಯಲಿದೆ. ಹಿಂದೂ ಹಾಗೂ ಇಸ್ಲಾಂ ಸಂಪ್ರದಾಯದಂತೆ ಐದು ದಿನಗಳ ಕಾಲ ಮದುವೆ ನಡೆಯಲಿದೆ ಎನ್ನಲಾಗಿದೆ. ಕೆಲವು ವರದಿಗಳ ಪ್ರಕಾರ ಸಲ್ಮಾನ್ ಖಾನ್ ಮದುವೆಯಲ್ಲಿ ಭಾಗವಹಿಸುವುದಿಲ್ಲ ಎನ್ನಲಾಗಿತ್ತು. ಕತ್ರಿನಾರ ಮಾಜಿ ಗೆಳೆಯನೆಂದೇ ಹೇಳಲಾಗುವ ಸಲ್ಮಾನ್ ಭಾಗುಯಾಗುವ ಬಗ್ಗೆ ಕುತೂಹಲ ಮೂಡಿತ್ತು. ಆದರೆ ಇದೀಗ ಮತ್ತೊಂದು ಅಚ್ಚರಿಯ ವಿಚಾರ ಹೊರಬಿದ್ದಿದೆ.

ವಿಕ್ಕಿ ಹಾಗೂ ಕತ್ರಿನಾ ಮದುವೆಗೆ ಬಾಲಿವುಡ್ ತಾರೆಯರಾದ ಕಬೀರ್ ಖಾನ್, ರೋಹಿತ್ ಶೆಟ್ಟಿ, ವರುಣ್ ಧವನ್, ನತಾಶಾ ದಲಾಲ್, ಕರಣ್ ಜೋಹರ್ ಮೊದಲಾದವರಿಗೆ ಈಗಾಗಲೇ ಆಹ್ವಾನ ಹೋಗಿದೆಯಂತೆ. ಕತ್ರಿನಾರ ಮಾಜಿ ಗೆಳೆಯ ರಣಬೀರ್​ಗೂ ಆಹ್ವಾನ ಹೋಗಿದ್ದು, ಆಲಿಯಾ ಭಟ್​ರೊಂದಿಗೆ ಅವರೂ ಮದುವೆಗೆ ಹಾಜರಿರಲಿದ್ದಾರೆ. ನಟ ಸಿದ್ಧಾರ್ಥ್ ಮಲ್ಹೋತ್ರಾರಿಗೂ ಆಹ್ವಾನ ಹೋಗಿದ್ದು, ಅವರ ಗೆಳತಿಯೆಂದು ಹೇಳಲಾಗುವ ಕಿಯಾರಾ ಅಡ್ವಾನಿಯೊಂದಿಗೆ ಭಾಗಿಯಾಗಲಿದ್ದಾರೆ.ಈಗಾಗಲೇ ಕುಟುಂಬದವರು ರಾಜಸ್ಥಾನ ತಲುಪಿದ್ದು, ತಯಾರಿ ನಡೆಸುತ್ತಿದ್ದಾರೆ. ದೀಪಾವಳಿಯ ಸಮಯದಲ್ಲಿ ಕತ್ರಿನಾ ಹಾಗೂ ವಿಕ್ಕಿ ಕೌಶಲ್ ಎಂಗೇಜ್​ಮೆಂಟ್ ಆಗಿದ್ದಾರೆ ಎನ್ನಲಾಗಿದೆ. ಆ ಸಮಯದಲ್ಲಿ ಕಬೀರ್ ಖಾನ್ ಉಪಸ್ಥಿತರಿದ್ದರು.

ನಟ ಸಲ್ಮಾನ್ ಖಾನ್ ಕತ್ರಿನಾಗೆ ಬಾಲಿವುಡ್​ನಲ್ಲಿ ಗುರು ಎಂದೇ ಹೇಳಬಹುದು. ಆದ್ದರಿಂದಲೇ ಸಲ್ಮಾಲ್​ರನ್ನು​ ಅತಿಥಿ ಎನ್ನುವುದಕ್ಕಿಂತ ಕುಟುಂಬದವರು ಎಂದೇ ಹೇಳಬಹುದು. ಕಾರಣ, ಕತ್ರಿನಾರ ನಟನೆಯ ಏಳುಬೀಳುಗಳಲ್ಲಿ ಜೊತೆಯಾಗಿ ನಿಂತು ಧೈರ್ಯ ತುಂಬಿದ್ದು, ಸಲ್ಮಾನ್ ಖಾನ್ ಹಾಗೂ ಅವರ ಕುಟುಂಬ. ಆದ್ದರಿಂದಲೇ ಸಲ್ಮಾನ್ ಮತ್ತು ಕುಟುಂಬ ತಮ್ಮದೇ ಕುಟುಂಬದ ಮದುವೆಯಂತೆ ತಯಾರಿಯಲ್ಲಿ ತೊಡಗಿದ್ದಾರೆ ಎಂದು ಬಾಲಿವುಡ್ ಲೈಫ್ ವರದಿ ಮಾಡಿದೆ. ಆದ್ದರಿಂದಲೇ ಸಲ್ಮಾನ್ ಅತಿಥಿಯಾಗಿ ಮದುವೆಯಲ್ಲಿ ಭಾಗವಹಿಸುವುದಕ್ಕಿಂತ ಕುಟುಂಬದ ಸದಸ್ಯರಾಗಿ ಕಲ್ಯಾಣದಲ್ಲಿ ಹಾಜರಿರಲಿದ್ದಾರಂತೆ!

ಇದನ್ನೂ ಓದಿ:

ಕತ್ರಿನಾ ಮದುವೆಯಾಗುತ್ತಿರುವ ಹೋಟೆಲ್​ನಲ್ಲಿ ಒಂದು ರಾತ್ರಿ ಕಳೆಯಲು ಐದು ಲಕ್ಷ ಪಾವತಿಸಬೇಕು

ಮದುವೆ ಬಳಿಕ ಹನಿಮೂನ್​ಗೆ ಹೋಗಲ್ಲ ಕತ್ರಿನಾ ಕೈಫ್​-ವಿಕ್ಕಿ ಕೌಶಲ್​; ಕಾರಣ ಏನು?

ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?