ಕಪಿಲ್ ಶರ್ಮಾ ಶೋಗೆ ನವಜೋತ್ ಸಿಂಗ್ ಸಿಧು ಮರಳಿದರೆ ನಾನು ಇರಲ್ಲ ಎಂದ ಅರ್ಚನಾ ಸಿಂಗ್
ನವಜೋತ್ ಸಿಂಗ್ ಸಿಧು ಅವರು ರಾಜಕೀಯದಲ್ಲಿ ಬ್ಯುಸಿ ಆದ ನಂತರ ಕಪಿಲ್ ಶರ್ಮಾ ಶೋ ತೊರೆದಿದ್ದರು. ಆ ಸ್ಥಾನವನ್ನು ಅರ್ಚನಾ ಸಿಂಗ್ ಅವರು ತುಂಬಿದ್ದರು. ಈಗ ನವಜೋತ್ ಅವರು ಮತ್ತೆ ಶೋಗೆ ಮರಳಲಿದ್ದಾರೆ ಎನ್ನುವ ಸುದ್ದಿ ಜೋರಾಗಿದೆ.
ನವಜೋತ್ ಸಿಂಗ್ ಸಿಧು ಅವರು ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಸ್ಥಾನಕ್ಕೆ ಮಂಗಳವಾರ (ಸೆ.28) ರಾಜೀನಾಮೆ ನೀಡಿದ್ದಾರೆ. ಇದು ಪಂಜಾಬ್ ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಈ ಬೆನ್ನಲ್ಲೇ ನವಜೋತ್ ಸಿಂಗ್ ಅವರು ಕಪಿಲ್ ಶರ್ಮಾ ಶೋಗೆ ಮರಳಲಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಒಂದೊಮ್ಮೆ ಅವರು ಅತಿಥಿ ಜಡ್ಜ್ ಆಗಿ ಮರಳಿದರೆ ತಾವು ಸ್ಥಾನ ಬಿಟ್ಟುಕೊಡೋಕೆ ರೆಡಿ ಎಂದು ನಟಿ ಅರ್ಚನಾ ಪುರಾಣ್ ಸಿಂಗ್ ಹೇಳಿದ್ದಾರೆ.
ನವಜೋತ್ ಸಿಂಗ್ ಸಿಧು ಅವರು ರಾಜಕೀಯದಲ್ಲಿ ಬ್ಯುಸಿ ಆದ ನಂತರ ಕಪಿಲ್ ಶರ್ಮಾ ಶೋ ತೊರೆದಿದ್ದರು. ಆ ಸ್ಥಾನವನ್ನು ಅರ್ಚನಾ ಸಿಂಗ್ ಅವರು ತುಂಬಿದ್ದರು. ಈಗ ನವಜೋತ್ ಅವರು ಮತ್ತೆ ಶೋಗೆ ಮರಳಲಿದ್ದಾರೆ ಎನ್ನುವ ಸುದ್ದಿ ಜೋರಾಗಿದೆ. ಈ ಬಗ್ಗೆ ಅರ್ಚನಾ ಕೂಡ ಪೋಸ್ಟ್ ಒಂದನ್ನು ಮಾಡಿದ್ದಾರೆ. ಅವರ ಬಗ್ಗೆ ಹರಿದಾಡುತ್ತಿರುವ ನಾನಾ ಮೀಮ್ಗಳು ಈ ಪೋಸ್ಟ್ನಲ್ಲಿವೆ.
ಈ ಬಗ್ಗೆ ಮಾತನಾಡಿರುವ ಅರ್ಚನಾ, ‘ಸಿಧು ಅವರು ಮತ್ತು ಶೋಗೆ ಮರಳುತ್ತಾರೆ ಎಂದರೆ ನಾನು ನನ್ನ ಸ್ಥಾನ ತೊರೆಯೋಕೆ ರೆಡಿ ಇದ್ದೇನೆ. ನನಗೆ ಮಾಡೋಕೆ ಸಾಕಷ್ಟು ಕೆಲಸಗಳು ಇವೆ. ನನಗೆ ಈ ಶೋಗಾಗಿ ಎರಡು ದಿನ ಮುಡಿಪಿಡಬೇಕು. ಇದರಿಂದಾಗಿ ಬೇರೆ ಕೆಲಸಗಳನ್ನು ಒಪ್ಪಿಕೊಳ್ಳೋಕೆ ಸಾಧ್ಯವಾಗುತ್ತಿಲ್ಲ. ಬೇರೆ ರಾಷ್ಟ್ರಗಳಲ್ಲಿ ಶೂಟಿಂಗ್ಗೆ ಅವಕಾಶ ಇತ್ತು. ಆದರೆ, ಅದು ಸಾಧ್ಯವಾಗುತ್ತಿಲ್ಲ. ಹೀಗಾಗಿ, ನವಜೋತ್ ಸಿಂಗ್ ಮರಳುತ್ತಾರೆ ಎಂದರೆ ನನಗೆ ಆ ಸ್ಥಾನ ತೊರೆಯೋಕೆ ಬೇಸರವಿಲ್ಲ’ ಎಂದಿದ್ದಾರೆ.
ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿದ ಒಂದು ದಿನದ ನಂತರ ನವಜೋತ್ ಸಿಂಗ್ ಸಿಧು ಅವರು ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ವಿಡಿಯೋ ಸಂದೇಶವನ್ನು ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಅವರು ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ಸಚಿವ ಸಂಪುಟದಲ್ಲಿ ಕಳಂಕಿತ ಮತ್ತು ಇತರ ವಿವಾದಾತ್ಮಕ ಶಾಸಕರನ್ನು ಸೇರಿಸಿರುವುದನ್ನು ಟೀಕಿಸಿದ್ದಾರೆ. ವಿಡಿಯೊ ಸಂದೇಶದಲ್ಲಿ, ಸಿಧು ಜನರ ಜೀವನವನ್ನು ಉತ್ತಮಗೊಳಿಸುವುದೊಂದೇ ತನ್ನ ಧರ್ಮ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬಾಲಿವುಡ್ ನಟರಾದ ಭೂಮಿ ಪಡ್ನೇಕರ್, ಕಪಿಲ್ ಶರ್ಮಾ ಕರ್ನಾಟಕದ ನೆರವಿಗೆ ಧಾವಿಸಿದ್ದಾರೆ