ಕಿರುತೆರೆ ನಟಿಯ ಜತೆಗಿನ ಪ್ರೀತಿಯನ್ನು ಅಧಿಕೃತ ಮಾಡಿದ ಹೀರೋ; ಮೊದಲೇ ಗೊತ್ತಿತ್ತು ಎಂದ ಫ್ಯಾನ್ಸ್
ಆರ್ಯನ್ ಅವವರು ಇತ್ತೀಚೆಗೆ ಮ್ಯಾಚಿಂಗ್ ರಿಂಗ್ನ ಫೋಟೋವನ್ನು ಪೋಸ್ಟ್ ಮಾಡಿದ್ದರು. ಇದು ಶಬಾನಾ ಮತ್ತು ಆರ್ಯನ್ ನಡುವೆ ಪ್ರೀತಿ ಮೊಳೆತಿದೆ ಎನ್ನುವ ಸುದ್ದಿಗೆ ಪುಷ್ಠಿ ನೀಡಿತ್ತು.
ಚಿತ್ರರಂಗದಲ್ಲಿ ಒಟ್ಟಿಗೆ ಕೆಲಸ ಮಾಡುತ್ತಾ ಇರುವಾಗ ನಟ-ನಟಿಯರ ಮಧ್ಯೆ ಪ್ರೀತಿ ಮೊಳೆತು ಮದುವೆ ಆದ ಉದಾಹರಣೆ ಸಾಕಷ್ಟಿದೆ. ಯಶ್ ಮತ್ತು ರಾಧಿಕಾ ಪಂಡಿತ್ ಸೇರಿ ಸಾಕಷ್ಟು ಮಂದಿ ಒಂದೇ ಸಿನಿಮಾದಲ್ಲಿ ಕೆಲಸ ಮಾಡಿ ಮದುವೆ ಆಗಿದ್ದಾರೆ. ಈಗ ಈ ಸಾಲಿಗೆ ಹೊಸದೊಂದು ಸೇರ್ಪಡೆ ಆಗುತ್ತಿದೆ. ತಮಿಳು ಕಿರುತೆರೆ ನಟಿ ಶಬಾನಾ ಶಜಹಾನ್ ಜತೆ ಪ್ರೀತಿಯಲ್ಲಿರುವ ವಿಚಾರವನ್ನು ನಟ ಆರ್ಯನ್ ಅಧಿಕೃತ ಮಾಡಿದ್ದಾರೆ. ಈ ವಿಚಾರ ಅಭಿಮಾನಿಗಳಿಗೆ ಸಾಕಷ್ಟು ಕುತೂಹಲ ಮೂಡಿಸಿದೆ.
ಆರ್ಯನ್ ಅವರು ಇತ್ತೀಚೆಗೆ ಮ್ಯಾಚಿಂಗ್ ರಿಂಗ್ನ ಫೋಟೋವನ್ನು ಪೋಸ್ಟ್ ಮಾಡಿದ್ದರು. ಇದು ಶಬಾನಾ ಮತ್ತು ಆರ್ಯನ್ ನಡುವೆ ಪ್ರೀತಿ ಮೊಳೆತಿದೆ ಎನ್ನುವ ಸುದ್ದಿಗೆ ಪುಷ್ಠಿ ನೀಡಿತ್ತು. ಆದರೆ, ಇಬ್ಬರೂ ಈ ವಿಚಾರದಲ್ಲಿ ಮೌನ ವಹಿಸಿದ್ದರು. ಈಗ ಆರ್ಯನ್ ತಮ್ಮ ಸಂಬಂಧವನ್ನು ಅಧಿಕೃತ ಮಾಡಿದ್ದಾರೆ.
ಶಬಾನಾ ಜತೆ ನಿಂತಿರುವ ಫೋಟೋವನ್ನು ಆರ್ಯನ್ ಪೋಸ್ಟ್ ಮಾಡಿದ್ದಾರೆ. ಆ ಫೋಟೋಗೆ ‘ದೇವರು ನೀಡಿದ ಅತಿದೊಡ್ಡ ಗಿಫ್ಟ್’ ಎನ್ನುವ ಕ್ಯಾಪ್ಶನ್ ನೀಡಿದ್ದಾರೆ. ಈ ಮೂಲಕ ಎಲ್ಲಾ ವದಂತಿಗೆ ಬ್ರೇಕ್ ಕೊಟ್ಟು ತಮ್ಮ ಸಂಬಂಧವನ್ನು ಅಧಿಕೃತ ಮಾಡಿದ್ದಾರೆ. ಈ ಫೋಟೋದಲ್ಲಿ ಶಬಾನಾ ಬಿಳಿ ಬಣ್ಣದ ಡ್ರೆಸ್ನಲ್ಲಿ ಕಾಣಿಸಿಕೊಂಡರೆ, ಆರ್ಯನ್ ಕುರ್ತಾದಲ್ಲಿ ಮಿಂಚಿದ್ದಾರೆ.
View this post on Instagram
ಮದುವೆ ವಿಚಾರ ಅಧಿಕೃತ ಮಾಡಿದ ಬೆನ್ನಲ್ಲೇ ಸಾಕಷ್ಟು ವರದಿಗಳು ಈ ಬಗ್ಗೆ ಹರಿದಾಡಿವೆ. ಮೂಲಗಳ ಪ್ರಕಾರ ಇಬ್ಬರೂ ಶೀಘ್ರವೇ ಮದುವೆ ಆಗಲಿದ್ದಾರೆ ಎನ್ನಲಾಗಿದೆ. ಅದಕ್ಕಾಗಿಯೇ ಇಬ್ಬರೂ ತಮ್ಮ ಸಂಬಂಧವನ್ನು ಅಧಿಕೃತ ಮಾಡಿದ್ದಾರೆ ಎಂದು ಕೆಲ ವರದಿಗಳು ತಿಳಿಸಿವೆ.
View this post on Instagram
ಈ ವರ್ಷ ಮೇ ತಿಂಗಳಿಂದಲೇ ಇವರಿಬ್ಬರ ಪ್ರೀತಿ ವಿಚಾರದ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಮಹಿಳಾ ಅಭಿಮಾನಿಯೊಬ್ಬರು ಆರ್ಯನ್ಗೆ ಸೋಶಿಯಲ್ ಮೀಡಿಯಾ ಕಮೆಂಟ್ ಬಾಕ್ಸ್ನಲ್ಲಿ ಪ್ರಪೋಸ್ ಮಾಡಿದ್ದರು. ಈ ಕಮೆಂಟ್ಗೆ ಅವರು ಶಬಾನಾ ಅವರನ್ನು ಟ್ಯಾಗ್ ಮಾಡುವ ಮೂಲಕ ಸಾಕಷ್ಟು ಸುದ್ದಿಯಾಗಿದ್ದರು.
ಶಬಾನಾ 2016ರಲ್ಲಿ ಧಾರಾವಾಹಿ ಲೋಕಕ್ಕೆ ಕಾಲಿಟ್ಟರು. ಆರಂಭದಲ್ಲಿ ಮಲಯಾಳಂ ಧಾರಾವಾಹಿಯಲ್ಲಿ ನಟಿಸುತ್ತಿದ್ದ ಅವರು ನಂತರ ತಮಿಳು ಕಿರುತೆರೆ ಲೋಕಕ್ಕೆ ಕಾಲಿಟ್ಟರು. ಅವರು ನಟಿಸುತ್ತಿರುವ ಸೆಂಬರುಥಿ ಧಾರಾವಾಹಿ 1000 ಎಪಿಸೋಡ್ ಮುಗಿಸಿ ಮುನ್ನುಗ್ಗುತ್ತಿದೆ.
ಇದನ್ನೂ ಓದಿ: ವಿವಾದಾತ್ಮಕ ಫೋಟೋಶೂಟ್ ಮಾಡಿಸಿ ಬಂಧನಕ್ಕೆ ಒಳಗಾದ ಕಿರುತೆರೆ ನಟಿ
ಖ್ಯಾತ ಕಿರುತೆರೆ ನಟಿ ವಿರುದ್ಧ ಅಭಿಮಾನಿಯಿಂದಲೇ ಕಿರುಕುಳ ಆರೋಪ
Published On - 5:03 pm, Wed, 29 September 21