ವಿವಾದಾತ್ಮಕ ಫೋಟೋಶೂಟ್ ಮಾಡಿಸಿ ಬಂಧನಕ್ಕೆ ಒಳಗಾದ ಕಿರುತೆರೆ ನಟಿ
ಈ ದೋಣಿ ಸಮೀಪ ಚಪ್ಪಲಿ ಹಾಕಿಕೊಂಡು ಬರುವುದು ಅಥವಾ ಚಪ್ಪಲಿ ಹಾಕಿಕೊಂಡು ದೋಣಿ ಏರುವುದು ಎಲ್ಲರಿಗೂ ನಿಷಿದ್ಧ. ಆದಾಗ್ಯೂ ನಿಮಿಷಾ ಈ ದೋಣಿ ಬಳಿ ಚಪ್ಪಲಿ ಧರಿಸಿ ಹೋಗಿದ್ದಾರೆ. ಜತೆಗೆ ಚಪ್ಪಲಿ ಹಾಕಿಕೊಂಡೇ ದೋಣಿ ಏರಿದ್ದಾರೆ.
ನಟಿಯರಿಗೂ ಪೋಟೋಶೂಟ್ಗೂ ಎಲ್ಲಿಲ್ಲದ ನಂಟು. ಸಿನಿಮಾ ಜತೆಗೆ ಸಾಮಾಜಿಕ ಜಾಲತಾಣದಲ್ಲಿ ಖ್ಯಾತಿ ಹೆಚ್ಚಿಸಿಕೊಳ್ಳೋಕೆ ಫೋಟೋಶೂಟ್ ಮಾಡಿಸುತ್ತಾರೆ. ಈ ಮೂಲಕ ಸದಾ ಚಾಲ್ತಿಯಲ್ಲಿರಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರಿಗೆ ಇದೇ ಮುಳುವಾದ ಉದಾಹರಣೆ ಸಾಕಷ್ಟಿದೆ. ಫೋಟೋಶೂಟ್ನಿಂದ ಸಂಕಷ್ಟಕ್ಕೆ ಸಿಲುಕಿದ ಸಾಕಷ್ಟು ನಟಿಯರಿದ್ದಾರೆ. ಮಲಯಾಳಂನ ಜನಪ್ರಿಯ ಕಿರುತೆರೆ ನಟಿ ನಿಮಿಷಾ ಬಂಧನಕ್ಕೆ ಒಳಗಾಗಿದ್ದಾರೆ. ದೇವಸ್ಥಾನವೊಂದರ ಸಂಪ್ರದಾಯ ಮುರಿದ ಆರೋಪ ಈ ನಟಿಯ ವಿರುದ್ಧ ಕೇಳಿ ಬಂದಿದೆ.
ಕೇರಳದ ದೇವಸ್ಥಾನದವರು ಪಂಬಾ ನದಿಯಲ್ಲಿ ಹಾವಿನ ಆಕಾರದ ದೋಣಿ ನಿರ್ಮಾಣ ಮಾಡಿದ್ದರು. ಸಂಪ್ರದಾಯದ ಪ್ರಕಾರ ಮಹಿಳೆಯರು ಈ ದೋಣಿ ಏರುವಂತಿಲ್ಲ. ಅದರಲ್ಲೂ ಈ ದೋಣಿ ಸಮೀಪ ಚಪ್ಪಲಿ ಹಾಕಿಕೊಂಡು ಬರುವುದು ಅಥವಾ ಚಪ್ಪಲಿ ಹಾಕಿಕೊಂಡು ದೋಣಿ ಏರುವುದು ಎಲ್ಲರಿಗೂ ನಿಷಿದ್ಧ. ಆದಾಗ್ಯೂ ನಿಮಿಷಾ ಈ ದೋಣಿ ಬಳಿ ಚಪ್ಪಲಿ ಧರಿಸಿ ಹೋಗಿದ್ದಾರೆ. ಜತೆಗೆ ಚಪ್ಪಲಿ ಹಾಕಿಕೊಂಡೇ ದೋಣಿ ಏರಿದ್ದಾರೆ.
ಈ ಫೋಟೋಗಳನ್ನು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಯಾವುದೇ ಒಪ್ಪಿಗೆ ಇಲ್ಲದೆ ಅವರು ದೋಣಿ ಹೇಗೆ ಏರಿದರು? ದೋಣಿ ಏರುವಾಗ ಚಪ್ಪಲಿ ಹಾಕಿಕೊಂಡಿದ್ದೇಕೆ ಎಂದು ಅನೇಕರು ಪ್ರಶ್ನೆ ಮಾಡಿದ್ದರು. ಅಲ್ಲದೆ, ಈ ಬಗ್ಗೆ ಪ್ರಕರಣ ಕೂಡ ದಾಖಲಾಗಿತ್ತು. ಈಗ ನಟಿಯನ್ನು ಬಂಧಿಸಿ, ಜಾಮೀನಿನ ಮೇಲೆ ರಿಲೀಸ್ ಮಾಡಲಾಗಿದೆ.
ಈ ವಿಚಾರವಾಗಿ ನಿಮಿಷಾ ಮಾಧ್ಯಮಗಳ ಜತೆ ಮಾತನಾಡಿದ್ದಾರೆ. ‘ದೋಣಿ ಒಳಗೆ ಮಹಿಳೆಯರು ಹೋಗಬಾರದು, ಅಲ್ಲಿ ಚಪ್ಪಲಿ ಧರಿಸಬಾರದು ಎಂಬುದು ನನಗೆ ಗೊತ್ತಿರಲಿಲ್ಲ. ಹೀಗಾಗಿ, ಫೋಟೋ ಅಪ್ಲೋಡ್ ಮಾಡಿ ನಂತರ ಡಿಲೀಟ್ ಮಾಡಿದೆ. ಈ ಫೋಟೋ ಪೋಸ್ಟ್ ಮಾಡಿದ ನಂತರದಲ್ಲಿ ನನಗೆ ಬೆದರಿಕೆ ಹಾಗೂ ಅಶ್ಲೀಲ ನಿಂದನೆಗಳು ಬರುತ್ತಿವೆ. ನಿತ್ಯ ಹಲವು ಕರೆಗಳು ಬರುತ್ತಿವೆ. ಅವರೆಲ್ಲ ಯಾರು ಎಂಬುದೇ ನನಗೆ ಗೊತ್ತಿಲ್ಲ. ಇದು ಈಗ ನನ್ನ ಕುಟುಂಬವನ್ನೂ ಇಕ್ಕಟ್ಟಿಗೆ ಸಿಲುಕಿಸಿದೆ’ ಎಂದಿದ್ದಾರೆ.
ಇದನ್ನೂ ಓದಿ: ಅಚ್ಚರಿ ಮೂಡಿಸಿದ ಸಮಂತಾ ನಡೆ; ವಿಚ್ಛೇದನವಾಗಿದ್ದು ಖಚಿತ ಎಂದ ಫ್ಯಾನ್ಸ್