36 ಸ್ಪರ್ಧಿಗಳ ಜತೆ ಬರುತ್ತಿದೆ ಸರಿಗಮಪ; ಅದ್ದೂರಿ ಪ್ರೋಮೋಗೆ ಪ್ರೇಕ್ಷಕರು ಫಿದಾ
ಈ ಬಾರಿ ಬರೋಬ್ಬರಿ 36 ಸ್ಪರ್ಧಿಗಳೊಂದಿಗೆ ‘ಸರಿಗಮಪ’ ಚಾಂಪಿಯನ್ಶಿಪ್ ಆರಂಭಗೊಳ್ಳುತ್ತಿದೆ. ಅಂದರೆ, ಈ ಬಾರಿಯ ಶೋ ಕೊಂಚ ದೀರ್ಘವಾಗಿರಲಿದೆ ಎಂಬುದಕ್ಕೆ ಈ ಶೋನ ಸ್ಪರ್ಧಿಗಳ ಸಂಖ್ಯೆಯೇ ಕಾರಣ. ಪ್ರ
‘ಸರಿಗಮಪ’ ಸಂಗೀತ ರಿಯಾಲಿಟಿ ಶೋಗೆ ದೊಡ್ಡ ಅಭಿಮಾನಿ ಬಳಗ ಇದೆ. ಸಾಕಷ್ಟು ಮಂದಿ ಈ ವೇದಿಕೆ ಮೂಲಕ ಗುರುತಿಸಿಕೊಂಡಿದ್ದಾರೆ. ಇನ್ನು, ಈ ಕಾರ್ಯಕ್ರಮವನ್ನು ನೆಚ್ಚಿಕೊಂಡ ವೀಕ್ಷಕರ ಸಂಖ್ಯೆ ದೊಡ್ಡದಿದೆ. ಈಗ ಈ ಕಾರ್ಯಕ್ರಮ ಜೀ ಕನ್ನಡದಲ್ಲಿ ಸೆಪ್ಟೆಂಬರ್ 18ರಿಂದ ಮತ್ತೆ ಪ್ರಸಾರವಾಗುತ್ತಿದೆ. ಈ ಬಗ್ಗೆ ಜೀ ಕನ್ನಡ ವಾಹಿನಿ ಪ್ರೋಮೋ ಹಂಚಿಕೊಂಡಿದೆ. ಈ ಸುದ್ದಿ ಕೇಳಿ ಸಂಗೀತ ಪ್ರಿಯರು ಖುಷಿಯಾಗಿದ್ದಾರೆ.
ಈ ಬಾರಿ ಬರೋಬ್ಬರಿ 36 ಸ್ಪರ್ಧಿಗಳೊಂದಿಗೆ ‘ಸರಿಗಮಪ’ ಚಾಂಪಿಯನ್ಶಿಪ್ ಆರಂಭಗೊಳ್ಳುತ್ತಿದೆ. ಅಂದರೆ, ಈ ಬಾರಿಯ ಶೋ ಕೊಂಚ ದೀರ್ಘವಾಗಿರಲಿದೆ ಎಂಬುದಕ್ಕೆ ಈ ಶೋನ ಸ್ಪರ್ಧಿಗಳ ಸಂಖ್ಯೆಯೇ ಕಾರಣ. ಪ್ರತಿ ವರ್ಷದಂತೆ ಈ ಬಾರಿಯೂ ನಾದಬ್ರಹ್ಮ ಹಂಸಲೇಖ ಅವರು ಈ ಶೋನ ಮಹಾಗುರು ಆಗಿ ಕಾಣಿಸಿಕೊಳ್ಳಲಿದ್ದಾರೆ. ವಿಜಯ್ ಪ್ರಕಾಶ್ ಹಾಗೂ ಅರ್ಜುನ್ ಜನ್ಯ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಖ್ಯಾತ ಆ್ಯಂಕರ್ ಅನುಶ್ರೀ ಈ ಶೋನ ನಿರೂಪಣೆ ಮಾಡಲಿದ್ದಾರೆ.
‘ಸ್ವರ ಸಂಸ್ಥಾನದಲ್ಲಿ 36 ಚಾಂಪಿಯನ್ ಗಾಯಕರ ಸಂಗೀತ ಸಮರ. ಶಾರದಾಂಬೆಯ ಅನುಗ್ರಹ , ಮಹಾಗುರು ಹಂಸಲೇಖ ಅವರ ಸಾರಥ್ಯ. ಅರ್ಜುನ್ ಜನ್ಯ ,ವಿಜಯ್ ಪ್ರಕಾಶ್ ತೀರ್ಪುಗಾರಿಕೆಯೊಂದಿಗೆ 6 ಶ್ರೇಷ್ಠ ಸಂಗೀತಗಾರರ ಮಾರ್ಗದರ್ಶನದಲ್ಲಿ ಶುರುವಾಗಲಿದೆ ಸರಿಗಮಪ ಚಾಂಪಿಯನ್ ಶಿಪ್’ ಎಂದು ಜೀ ಕನ್ನಡ ವಾಹಿನಿ ಪ್ರೋಮೋ ಹಂಚಿಕೊಂಡಿದೆ. ಈ ಪ್ರೋಮೋ ಅದ್ದೂರಿಯಾಗಿದೆ. ಈ ಪ್ರೋಮೋ ಸಾಕಷ್ಟು ಜನರ ಗಮನ ಸೆಳೆದಿದೆ. ಈ ಪ್ರೋಮೋದಲ್ಲಿ 36 ಸ್ಪರ್ಧಿಗಳೂ ಕಾಣಿಸಿಕೊಂಡಿದ್ದಾರೆ. ಅಂತಿಮವಾಗಿ ಒಬ್ಬರಿಗೆ ಸರಿಗಮಪ ಚಾಂಪಿಯನ್ಶಿಪ್ ಒಲಿಯಲಿದೆ.
View this post on Instagram
ಸರಿಗಮಪ ಆರಂಭವಾದರೆ ಸಂಗೀತ ಪ್ರಿಯರಿಗೆ ರಸದೌತಣ ಸಿಕ್ಕಂತಾಗಲಿದೆ. ಈಗಾಗಲೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 9 ಗಂಟೆಗೆ ಎದೆ ತುಂಬಿ ಹಾಡುವೆನು ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಈಗ ಶನಿವಾರ ಹಾಗೂ ಭಾನುವಾರ ಜೀಕನ್ನಡ ವಾಹಿನಿಯಲ್ಲಿ ರಾತ್ರಿ 7:30ರಿಂದ ಸರಿಗಮಪ ಬರಲಿದೆ. ಇದು ಸಂಗೀತ ಪ್ರಿಯರ ಖುಷಿ ಹೆಚ್ಚಿಸಿದೆ.
ಇದನ್ನೂ ಓದಿ: ಹಂಸಲೇಖ-ರವಿಚಂದ್ರನ್ ದೂರ ಆಗಿದ್ದು ಏಕೆ; ಕ್ರೇಜಿ ಸ್ಟಾರ್ ಕೊಟ್ರು ಉತ್ತರ
‘ಸರಿಗಮಪ’ ಸುಬ್ರಮಣಿ ಪತ್ನಿ ಸಾವಿನ ಕೇಸ್ಗೆ ಟ್ವಿಸ್ಟ್; ಕೊರೊನಾ ಅಲ್ಲ, ಆತ್ಮಹತ್ಯೆಯಿಂದ ನಿಧನ?
Published On - 11:03 pm, Mon, 13 September 21