AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಚ್ಚರಿ ಮೂಡಿಸಿದ ಸಮಂತಾ ನಡೆ; ವಿಚ್ಛೇದನವಾಗಿದ್ದು ಖಚಿತ ಎಂದ ಫ್ಯಾನ್ಸ್​

ಸಮಂತಾ ಇನ್​ಸ್ಟಾಗ್ರಾಮ್​ನಲ್ಲಿ ನಾನಾ ರೀತಿಯ ಸ್ಟೇಟಸ್​ಗಳನ್ನು ಹಾಕಿಕೊಳ್ಳುತ್ತಿದ್ದಾರೆ. ಆದರೆ, ಅವರು ಎಲ್ಲಿಯೂ ‘ಲವ್​ ಸ್ಟೋರಿ’ ಬಗ್ಗೆ ಉಲ್ಲೇಖ ಮಾಡಿ ಪೋಸ್ಟ್ ಮಾಡಿಲ್ಲ.

TV9 Web
| Edited By: |

Updated on:Sep 13, 2021 | 4:08 PM

Share

ನಟಿ ಸಮಂತಾ ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಅವರ ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದರೂ ಆ ಬಗ್ಗೆ ಅವರು ಮೌನ ವಹಿಸಿದ್ದಾರೆ. ನಾಗ ಚೈತನ್ಯ ಜತೆ ಸಮಂತಾ ವಿಚ್ಛೇದನ ಪಡೆದುಕೊಳ್ಳುತ್ತಿದ್ದಾರೆ ಎನ್ನುವ ವದಂತಿ ಅಭಿಮಾನಿಗಳಿಗೆ ಶಾಕ್​ ನೀಡಿದೆ. ಎಲ್ಲಿಯೂ ಈ ಬಗ್ಗೆ ಉತ್ತರ ನೀಡುವ ಗೋಜಿಗೆ ಸಮಂತಾ ಹೋಗಿಲ್ಲ. ಇದು ವದಂತಿ ಎಂದು ಕೆಲವರು ವಾದಿಸುತ್ತಾ ಬರುತ್ತಿದ್ದರೂ ಇದು ಪದೇಪದೇ ಸುಳ್ಳಾಗುತ್ತಿದೆ. ಸಮಂತಾ-ನಾಗ ಚೈತನ್ಯ ವಿಚ್ಛೇದನ ಪಡೆಯಲಿದ್ದಾರೆ ಎನ್ನುವುದಕ್ಕೆ ಸಾಕ್ಷ್ಯ ಒದಗಿಸುವ ಸಾಕಷ್ಟು ವಿಷಯಗಳು ಸಿಗುತ್ತಿವೆ. ಇದಕ್ಕೆ ಈಗ ಹೊಸದೊಂದು ಸೇರ್ಪಡೆ ಆಗಿದೆ.

ನಾಗ ಚೈತನ್ಯ ಹಾಗೂ ಸಾಯಿ ಪಲ್ಲವಿ ನಟನೆಯ ‘ಲವ್​ ಸ್ಟೋರಿ’ ಸಿನಿಮಾ ಟ್ರೇಲರ್​ ಇಂದು (ಸೆಪ್ಟೆಂಬರ್​ 13) ರಿಲೀಸ್​ ಆಗಿದೆ. ಇದಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅನೇಕ ಸೆಲೆಬ್ರಿಟಿಗಳು ಈ ಟ್ರೇಲರ್ ಪೋಸ್ಟ್​ ಮಾಡಿ, ಅದನ್ನು ವೀಕ್ಷಿಸುವಂತೆ ಅಭಿಮಾನಿಗಳ ಬಳಿ ಕೋರುತ್ತಿದ್ದಾರೆ. ಸಮಂತಾ ಕೂಡ ಈ ಬಗ್ಗೆ ಪೋಸ್ಟ್ ಮಾಡುತ್ತಾರೆ, ಈ ಮೂಲಕ ಎಲ್ಲಾ ವದಂತಿಗೆ ತೆರೆ ಎಳೆಯುತ್ತಾರೆ ಎಂದು ಅಭಿಮಾನಿಗಳು ಕಾದು ಕೂತಿದ್ದರು. ಆದರೆ, ಈ ನಿರೀಕ್ಷೆ ಸುಳ್ಳಾಗಿದೆ.

ಸಮಂತಾ ಇನ್​ಸ್ಟಾಗ್ರಾಮ್​ನಲ್ಲಿ ನಾನಾ ರೀತಿಯ ಸ್ಟೇಟಸ್​ಗಳನ್ನು ಹಾಕಿಕೊಳ್ಳುತ್ತಿದ್ದಾರೆ. ಆದರೆ, ಅವರು ಎಲ್ಲಿಯೂ ‘ಲವ್​ ಸ್ಟೋರಿ’ ಬಗ್ಗೆ ಉಲ್ಲೇಖ ಮಾಡಿ ಪೋಸ್ಟ್ ಮಾಡಿಲ್ಲ. ಇದು ಸಾಕಷ್ಟು ಅಚ್ಚರಿ ಮೂಡಿಸಿದೆ. ಅಲ್ಲದೆ, ಇದು ವಿಚ್ಛೇದನ ವದಂತಿಗೆ ಸಾಕ್ಷ್ಯ ಒದಗಿಸಿದಂತಾಗಿದೆ. ಈ ವಿಚಾರವನ್ನು ಅವರ ಅಭಿಮಾನಿಗಳು ಸಮರ್ಥಿಸಿಕೊಳ್ಳುತ್ತಿದ್ದಾರೆ. ‘ಗಂಡ ಎಂದ ಮಾತ್ರಕ್ಕೆ ಈ ಬಗ್ಗೆ ಪೋಸ್ಟ್​ ಮಾಡಲೇಬೇಕೆಂದೇನೂ ಇಲ್ಲ ಎಂದು ಸಮಂತಾ ಪರ ಕೆಲವರು ವಕಾಲತ್ತು ವಹಿಸಿಕೊಂಡು’ ಬಂದಿದ್ದಾರೆ. ಇನ್ನೂ ಕೆಲವರು, ‘ಸಮಂತಾ-ನಾಗಚೈತನ್ಯ ವಿಚ್ಛೇದನ ಖಚಿತ’ ಎನ್ನುತ್ತಿದ್ದಾರೆ. ಸದ್ಯ, ಈ ವಿಚಾರಕ್ಕೆ ಅವರ ಕಡೆಯಿಂದಲೇ ಉತ್ತರ ಸಿಗಬೇಕಿದೆ.

ಇತ್ತೀಚೆಗೆ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ಸಮಂತಾ ಅವರು ಅಕ್ಕಿನೇನಿ ಸರ್​​ನೇಮ್​ಅನ್ನು ತೆಗೆದು ಹಾಕಿದ್ದರು. ಇದಾದ ನಂತರದಲ್ಲಿ ಅವರ ಸಂಸಾರದ ವಿಚಾರ ಸಾಕಷ್ಟು ಚರ್ಚೆ ಆಗುತ್ತಿದೆ. ನಾಗಾರ್ಜುನ ಇಡೀ ಕುಟುಂಬದ ಜತೆ ಇತ್ತೀಚೆಗೆ ಬರ್ತ್​ಡೇ ಆಚರಿಸಿಕೊಂಡಿದ್ದಾರೆ. ಈ ಫೋಟೋಗಳು ಸೋಶಿಯಲ್​ಮೀಡಿಯಾದಲ್ಲಿ ವೈರಲ್​ ಆಗಿತ್ತು. ಆದರೆ, ಇಲ್ಲಿ ಸಮಂತಾ ಕಾಣಿಸಿರಲಿಲ್ಲ. ಈ ಬಗ್ಗೆಯೂ ಚರ್ಚೆಗಳು ನಡೆದಿದ್ದವು. ಆದರೆ, ಈ ಬಗ್ಗೆ ಯಾರಿಂದಲೂ ಸ್ಪಷ್ಟನೆ ಸಿಕ್ಕಿಲ್ಲ.

ಇದನ್ನೂ ಓದಿ: ಸಮಂತಾ ಡಿವೋರ್ಸ್​ ವದಂತಿ ಬೆನ್ನಲ್ಲೇ ನಾಗ ಚೈತನ್ಯ-ಸಾಯಿ ಪಲ್ಲವಿ ಲವ್​ ಸ್ಟೋರಿ ಮೇಲೆ ಕಣ್ಣಿಟ್ಟ ಸಿನಿಪ್ರಿಯರು

Published On - 3:57 pm, Mon, 13 September 21

Follow Us
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್