ಸಮಂತಾ ಡಿವೋರ್ಸ್​ ವದಂತಿ ಬೆನ್ನಲ್ಲೇ ನಾಗ ಚೈತನ್ಯ-ಸಾಯಿ ಪಲ್ಲವಿ ಲವ್​ ಸ್ಟೋರಿ ಮೇಲೆ ಕಣ್ಣಿಟ್ಟ ಸಿನಿಪ್ರಿಯರು

ನಾಗ ಚೈತನ್ಯ ಮತ್ತು ಸಾಯಿ ಪಲ್ಲವಿ ಜೋಡಿಯ ‘ಲವ್​ ಸ್ಟೋರಿ’ ಚಿತ್ರದ ಕೆಲಸಗಳೆಲ್ಲ ಮುಗಿದಿದ್ದು ರಿಲೀಸ್​ಗೆ ಸಿದ್ಧವಾಗಿದೆ. ಟ್ರೇಲರ್​ ಬಿಡುಗಡೆ ಮಾಡುವುದರ ಜೊತೆ ಸಿನಿಮಾದ ರಿಲೀಸ್​ ದಿನಾಂಕವನ್ನೂ ಚಿತ್ರತಂಡ ಪ್ರಕಟಿಸಿದೆ.

ಸಮಂತಾ ಡಿವೋರ್ಸ್​ ವದಂತಿ ಬೆನ್ನಲ್ಲೇ ನಾಗ ಚೈತನ್ಯ-ಸಾಯಿ ಪಲ್ಲವಿ ಲವ್​ ಸ್ಟೋರಿ ಮೇಲೆ ಕಣ್ಣಿಟ್ಟ ಸಿನಿಪ್ರಿಯರು
ಸಮಂತಾ ಅಕ್ಕಿನೇನಿ, ನಾಗ ಚೈತನ್ಯ, ಸಾಯಿ ಪಲ್ಲವಿ
Follow us
TV9 Web
| Updated By: ಮದನ್​ ಕುಮಾರ್​

Updated on: Sep 13, 2021 | 3:48 PM

ಸಮಂತಾ ಅಕ್ಕಿನೇನಿ ಮತ್ತು ನಾಗಚೈತನ್ಯ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ಮಾತು ಕೇಳಿಬರುತ್ತಿದೆ. ಈ ಬಗ್ಗೆ ಅವರ ಕುಟುಂಬದ ಯಾರೊಬ್ಬರೂ ಅಧಿಕೃತವಾಗಿ ಹೇಳಿಕೆ ನೀಡುತ್ತಿಲ್ಲ. ಈ ನಡುವೆ ನಾಗ ಚೈತನ್ಯ ಮತ್ತು ಸಾಯಿ ಪಲ್ಲವಿ ಲವ್​ ಸ್ಟೋರಿ ಗಮನ ಸೆಳೆಯುತ್ತಿದೆ. ಹಾಗಂತ ಇದು ಅವರ ರಿಯಲ್​ ಲೈಫ್​ನ ಲವ್​ ಸ್ಟೋರಿ ಅಲ್ಲ. ಬದಲಿಗೆ ಸಿನಿಮಾ ಸಮಾಚಾರ. ನಾಗ ಚೈತನ್ಯ ಹಾಗೂ ಸಾಯಿ ಪಲ್ಲವಿ ‘ಲವ್​ ಸ್ಟೋರಿ’ ಚಿತ್ರದಲ್ಲಿ ನಟಿಸಿದ್ದು, ಈಗ ಅದರ ಟ್ರೇಲರ್​ ಬಿಡುಗಡೆ ಆಗಿದೆ. ನಾಗ ಚೈತನ್ಯ-ಸಮಂತಾ ಡಿವೋರ್ಸ್​ ವದಂತಿಯನ್ನು ಪಕ್ಕಕ್ಕಿಟ್ಟು ಸಿನಿಪ್ರಿಯರೆಲ್ಲ ಈಗ ‘ಲವ್​ ಸ್ಟೋರಿ’ ಟ್ರೇಲರ್​ ನೋಡಿ ಎಂಜಾಯ್​ ಮಾಡುತ್ತಿದ್ದಾರೆ.

‘ಲವ್​ ಸ್ಟೋರಿ’ ಸಿನಿಮಾ ಅನೌನ್ಸ್​ ಅದಾಗಿನಿಂದಲೂ ಅದರ ಬಗ್ಗೆ ಅಭಿಮಾನಿಗಳು ನಿರೀಕ್ಷೆ ಬೆಳೆಸಿಕೊಂಡಿದ್ದಾರೆ. ಸಾಯಿ ಪಲ್ಲವಿ ಮತ್ತು ನಾಗ ಚೈತನ್ಯ ಜೋಡಿಯನ್ನು ತೆರೆಮೇಲೆ ನೋಡಲು ಎಲ್ಲರೂ ಕಾಯುತ್ತಿದ್ದಾರೆ. ಈಗ ಚಿತ್ರದ ಕೆಲಸಗಳೆಲ್ಲ ಮುಗಿದಿದ್ದು ರಿಲೀಸ್​ಗೆ ಸಿದ್ಧವಾಗಿದೆ. ಟ್ರೇಲರ್​ ಬಿಡುಗಡೆ ಮಾಡುವುದರ ಜೊತೆ ಸಿನಿಮಾದ ರಿಲೀಸ್​ ದಿನಾಂಕವನ್ನೂ ಚಿತ್ರತಂಡ ಪ್ರಕಟಿಸಿದೆ. ಸೆ.24ರಂದು ‘ಲವ್​ ಸ್ಟೋರಿ’ ಎಲ್ಲೆಡೆ ರಿಲೀಸ್​ ಆಗಲಿದೆ.

ಖ್ಯಾತ ನಿರ್ದೇಶಕ ಶೇಖರ್​ ಕಮ್ಮುಲ ಅವರು ‘ಲವ್​ ಸ್ಟೋರಿ’ಗೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಈ ಸಿನಿಮಾದಲ್ಲಿ ಸಾಯಿ ಪಲ್ಲವಿ ಡ್ಯಾನ್ಸರ್​ ಪಾತ್ರ ಮಾಡಿದ್ದಾರೆ. ಡ್ಯಾನ್ಸ್​ನಲ್ಲಿ ತಮ್ಮ ಸಾಮರ್ಥ್ಯ ಏನು ಎಂಬುದನ್ನು ಅವರು ಈಗಾಗಲೇ ಹಲವು ಸಿನಿಮಾಗಳಲ್ಲಿ ಸಾಬೀತುಪಡಿಸಿದ್ದಾರೆ. ಹಾಗಾದರೆ ‘ಲವ್​ ಸ್ಟೋರಿ’ಯಲ್ಲಿ ಹೊಸದೇನಿದೆ ಎಂಬುದನ್ನು ತಿಳಿದುಕೊಳ್ಳಲು ಅವರ ಅಭಿಮಾನಿಗಳು ಉತ್ಸುಕರಾಗಿದ್ದಾರೆ.

2019ರಲ್ಲಿ ‘ಮಜಿಲಿ’ ಸಿನಿಮಾ ಮೂಲಕ ಹಿಟ್​ ನೀಡಿದ್ದ ನಾಗ ಚೈತನ್ಯ ಅವರು ‘ಲವ್​ ಸ್ಟೋರಿ’ ಮೂಲಕ ಮತ್ತೆ ಗೆಲುವು ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ‘ಟ್ರೇಲರ್​ ಹಂಚಿಕೊಳ್ಳಲು ತುಂಬ ಖುಷಿ ಆಗುತ್ತಿದೆ. ನಿಮ್ಮೆಲ್ಲರನ್ನು ಮತ್ತೆ ಥಿಯೇಟರ್​ನಲ್ಲಿ ಭೇಟಿಯಾಗಲು ಕಾಯುತ್ತಿದ್ದೇನೆ’ ಎಂದು ನಾಗ ಚೈತನ್ಯ ಟ್ವೀಟ್​ ಮಾಡಿದ್ದಾರೆ. ಈ ಟ್ರೇಲರ್​ಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಗಂಡ ನಟಿಸಿರುವ ಇಂಥ ಬಹುನಿರೀಕ್ಷಿತ ಸಿನಿಮಾದ ಟ್ರೇಲರ್​ ರಿಲೀಸ್​ ಆದರೂ ಕೂಡ ಸಮಂತಾ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡದೇ ಮೌನ ವಹಿಸಿದ್ದಾರೆ. ಇದು ಅವರ ಡಿವೋರ್ಸ್ ವದಂತಿಗೆ ಇನ್ನಷ್ಟು ಪುಷ್ಠಿ ನೀಡಿದಂತಾಗಿದೆ.

ಇದನ್ನೂ ಓದಿ:

ರಾಮ್​ ಚರಣ್​ ಒಪ್ಪದಿದ್ದರೂ ಲಿಪ್​ ಲಾಕ್ ಮಾಡಿದ್ದ ಸಮಂತಾ? ‘ರಂಗಸ್ಥಲಂ’ ತೆರೆಹಿಂದೆ ಮುತ್ತಿನ ಪ್ರಹಸನ

ಮಗ-ಸೊಸೆಯ ಡಿವೋರ್ಸ್​ ತೀರ್ಮಾನಕ್ಕೆ ಹೇಗೆ ಸಹಾಯ ಮಾಡ್ತಿದ್ದಾರೆ ನಾಗಾರ್ಜುನ? ಟಾಲಿವುಡ್​ ಗಲ್ಲಿಯಲ್ಲಿ ಗುಸುಗುಸು

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ